ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK SEASON 10) ಟ್ರೋಫಿ ಕಾರ್ತಿಕ್ ಅವರ ಕೈಗೆ ಸೇರಿದೆ. ಕಾರ್ತಿಕ್ ಅವರು ಫಿನಾಲೆಗೆ ಮುಂಚೆ ಅವರ ಸಹೋದರಿಯ ವಿಡಿಯೊ ಕಾಲ್ ಸಾಕಷ್ಟು ಸುದ್ದಿಯಾಗಿತ್ತು. ಕಾರ್ತಿಕ್ ಅವರ ತಂಗಿ ವಿಡಿಯೊ ಕಾಲ್ ಮಾಡಿದ ಫೋಟೊ ವೈರಲ್ ಆಗಿತ್ತು. ಫೋಟೊ ಬ್ಯಾಗ್ರೌಂಡ್ ಕಂಡು ಅದೆಷ್ಟೋ ಮಂದಿ ಹಳ್ಳಿ ಮನೆ, ಬಡವರ ಮನೆ ಇದ್ದಂತೆ ಇದೆ. ಕಾರ್ತಿಕ್ ಸ್ವಂತ ಮನೆ ಮಾಡಬೇಕು ಎಂದು ಕಮೆಂಟ್ ಮಾಡಿದ್ದರು. ಈ ಬಗ್ಗೆ ಕಾರ್ತಿಕ್ ಸ್ಪಷ್ಟನೆ ಕೊಟ್ಟಿದ್ದಾರೆ.
ʻಈ ಒಂಬತ್ತು ವರ್ಷ ನನ್ನ ಜರ್ನಿ ಬಹಳ ಕಷ್ಟಕರವಾಗಿತ್ತು. ತಂಗಿಯ ಫೋಟೊವನ್ನು ಅನೇಕರು ಟ್ರೋಲ್ ಮಾಡಿದ್ದಾರೆ. ಊರಿನಲ್ಲಿ ಇರುವ ನನ್ನ ಮಾಮ ಅವರ ಮನೆ ಅದು, ಅದು ನನ್ನ ಮನೆ ಕೂಡ. ಬೆಂಗಳೂರಿನಲ್ಲಿ ನಾನು ಇರುವುದು ಬಾಡಿಗೆ ಮನೆಯಲ್ಲಿ ಸ್ವಂತ ಮನೆ ಅಲ್ಲ. ಬಿಗ್ ಬಾಸ್ ಮನೆಯಲ್ಲಿದ್ದ ಕಾರಣ ಮೂರು ತಿಂಗಳು ಬಾಡಿಗೆ ಕಟ್ಟಿಲ್ಲ. ಓನರ್ ಸುಮ್ಮನಿದ್ದಾರೆ’ ಎಂದು ಕಾರ್ತಿಕ್ ಮಹೇಶ್ ಹೇಳಿಕೊಂಡಿದ್ದಾರೆ.
ತಂಗಿ ವಿಡಿಯೊ ಕಾಲ್ ಮಾಡಿರುವ ಫೋಟೊ ಬಗ್ಗೆಯೂ ಟ್ರೋಲಿಗರು ಮನಬಂದಂತೆ ಮಾತನಾಡಿದ್ದರು.‘ಬಿಗ್ ಬಾಸ್’ ಮನೆಗೆ ಕಾರ್ತಿಕ್ ಹೋದ್ಮೇಲೆ, ಗರ್ಭಿಣಿ ಆಗಿರುವ ಕಾರ್ತಿಕ್ ಅವರತಣಗಿ ತೇಜಸ್ವಿನಿ ಹಾಗೂ ತಾಯಿ ಮೀನಾಕ್ಷಿ ಇಬ್ಬರೇ ಬೆಂಗಳೂರಿನ ಮನೆಯಲ್ಲಿದ್ದರು. ಹೆರಿಗೆ ಆದಮೇಲೆ ಬಾಣಂತಿ ಹಾಗೂ ಮಗುವಿನ ಆರೈಕೆ ಮಾಡಲು ಮೀನಾಕ್ಷಿ ಅವರಿಗೆ ಸಪೋರ್ಟ್ ಬೇಕಿತ್ತು. ಹೀಗಾಗಿ, ಮಗಳು ತೇಜಸ್ವಿನಿ ಹಾಗೂ ಮೊಮ್ಮಗುವನ್ನು ಮೀನಾಕ್ಷಿ ಅವರು ಊರಲ್ಲಿರುವ ತಮ್ಮ ತಾಯಿಯ ಮನೆಗೆ ಕರೆದುಕೊಂಡು ಹೋದರು. ಅಜ್ಜಿಯ ಮನೆಯಿಂದಲೇ ತೇಜಸ್ವಿನಿ ಕಾಲ್ ಮಾಡಿದ್ದರು.
ಇದನ್ನೂ ಓದಿ: BBK SEASON 10: ಮಾನಸ ಕಾಮಿಡಿಗೆ ಕನ್ನಡಿಗರು ಫಿದಾ; ಸೀಸನ್ 11ಕ್ಕೆ ʻತುಕಾಲಿ ಪತ್ನಿʼ ಬರಲಿ ಅಂದ್ರು ಫ್ಯಾನ್ಸ್!
FRIENDS❤️✨ FOREVER ❤️💫#VinayGowda𓃰 #BBK10 #BBKSeason10 #KarthikMahesh #BiggBoss pic.twitter.com/C9tOdh9jhh
— Uttam Gayakawad18 (@GayakawadPooja) January 31, 2024
ಇಷ್ಟು ಕಷ್ಟದ ಪರಿಸ್ಥಿತಿಯಲ್ಲಿ ಇದ್ದ ಕಾರ್ತಿಕ್ ಅವರಿಗೆ ಬಿಗ್ ಬಾಸ್ ಅವಜಕಾಶ ಬಂತು. ಕೊನೆಯ ಕ್ಷಣದಲ್ಲಿ ಈ ಅವಕಾಶವನ್ನು ಕಾರ್ತಿಕ್ ಒಪ್ಪಿಕೊಂಡರು. ಕಾರ್ತಿಕ್ ಅವರ ವಿಟಿ ಶೂಟ್ ಮಾಡಿದ್ದು ಅವರ ಮನೆಯಲ್ಲಲ್ಲ, ಓನರ್ ಮನೆಯಲ್ಲಿ ಎಂದೂ ಕಾರ್ತಿಕ್ ಹೇಳಿಕೊಂಡಿದ್ದಾರೆ.