ಬೆಂಗಳೂರು: ಬಿಗ್ ಬಾಸ್ ಸೀಸನ್10 (BBK SEASON 10), ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಬಿಗ್‌ಬಾಸ್ ಮನೆಯಲ್ಲಿ ಪ್ರಾರಂಭವಾದ ʻಹಿರಿಯ ಪ್ರಾಥಮಿಕʼ ಶಾಲೆ ಜೋರಾಗಿ ನಡೆಯುತ್ತಿದೆ. ಇರುವುದು ಎಂಟೇ ವಿದ್ಯಾರ್ಥಿಗಳಾದರೂ ಪರಮ ತುಂಟತನ ತೋರುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ನಮ್ರತಾ ಅವರು ನಾಟಕ ಹಾಗೂ ಡ್ಯಾನ್ಸ್ ಕಲಿಸುವ ಟೀಚರ್ ಆದರೆ , ಸಿರಿ ಅವರು ಕಲೆ ಮತ್ತು ಕರಕುಶಲ, ತುಕಾಲಿ ಅವರು ಆಂಗ್ಲ ಭಾಷೆ, ಸಂಗೀತಾ ಅವರು ಅಧ್ಯಾತ್ಮ ಮತ್ತು ಧ್ಯಾನ ಟೀಚರ್ ಆಗಿದ್ದರು. ಇಷ್ಟೂ ಶಿಕ್ಷಕಿಯರಲ್ಲಿ ಸಂಗೀತಾ ಅವರ ಪಾಠ ಪ್ರಮುಖ ಹೈಲೈಟ್ ಆಗಿತ್ತು. ಸರಳವಾಗಿ ಮನಸ್ಥಿತಿಯನ್ನು ಹೇಗೆ ಶುದ್ಧಿ ಮಾಡುವುದು? ಹಾಗೂ ಸ್ನೇಹದ ಜತೆ ಹೀಗೂ ಖುಷಿಯನ್ನೂ ಹಂಚಿಕೊಳ್ಳಬಹುದು ಎಂಬ ಪಾಠವನ್ನು ಮಾಡಿ, ವೀಕ್ಷಕರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಮನಸ್ಥಿತಿಯನ್ನು ಹೇಗೆ ಶುದ್ಧಿ ಮಾಡುವುದು?
ಸಂಗೀತಾ ಅವರು ಪ್ರೀತಿ, ನೆಗೆಟಿವಿಟಿ ಹೀಗೆ ಹಲವಾರು ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಕೆಲವೊಂದು ಸಂದರ್ಭಗಳಲ್ಲಿ ನಮಗೆ ನೆಗೆಟಿವ್ ಆಲೋಚನೆಗಳು ಬರುತ್ತವೆ. ಸಿಟ್ಟು, ಜಲಸಿ, ಕೋಪ, ಬೇಸರ, ದ್ವೇಷ, ಇವೆಲ್ಲವೂ ಇರುತ್ತವೆ. ಇದನ್ನು ಹೋಗಲಾಡಿದುವುದು ಹೇಗೆ ನೋಡೋಣ ಎಂದು ಸಂಗೀತಾ ಒಂದು ಪ್ರಯೋಗವನ್ನು ಮಾಡಿದರು.
ಒಂದು ಗ್ಲಾಸ್‌ನಲ್ಲಿ ನೀರಿನ ಜತೆ ಮಣ್ಣನ್ನು ಹಾಕಿದರು. ವರ್ತೂರ್ ಈ ಪ್ರಯೋಗದಲ್ಲಿ ಭಾಗಿಯಾಗಿದ್ದರು. ಆಗ ವಿನಯ್ ಅವರು ʻಗಲೀಜು ನೀರು ಕಾಣಿಸುತ್ತಿದೆʼ ಎಂದರು. ಸಂಗೀತಾ ಅವರು ಕೂಡ ʻಇದನ್ನು ನೀವು ಕುಡಿಯಲು ಆಗುವುದಿಲ್ಲ ಅಲ್ಲವೇʼ? ಎಂದ ಮಕ್ಕಳಿಗೆ ಕೇಳಿದರು. ಇದಾದ ಬಳಿಕ ಸಂಗೀತಾ ವಾಸ್ತವಕ್ಕೆ ಬಂದು. ಈ ಗಲೀಜು ನೀರನ್ನು, ಅಂದರೆ ʻಈ ನೆಗೆಟಿವಿಟಿಯನ್ನು ಹೇಗೆ ಸರಿ ಮಾಡಿಕೊಳ್ಳುವುದುʼ? ಎಂದು ಪ್ರಶ್ನೆ ಇಟ್ಟರು. ವರ್ತೂರ್ ಕೂಡ ಆಗ ಸ್ವಲ್ಪ ಹೊತ್ತು ನೀರನ್ನು ಹಾಗೇ ಬಿಟ್ಟರೆ ಸರಿ ಹೋಗತ್ತೆʼ ಅಂದರು. ಸಂಗೀತಾ ಕೂಡ ಆಗ, ʻಮತ್ತೆ ಇದನ್ನು ಕಲುಕಿದಾಗ ಅದೇ ಗಲೀಜು ತುಂಬಿದ ನೀರೇ ಕಾಣುತ್ತೆʼ ಎಂದರು. ʻಹಾಗೇ ಮತ್ತೆ ಮತ್ತೆ ಸಿಟ್ಟು ,ಕೋಪ ಎಲ್ಲವೂ ವಾಪಸ್ ಬರುತ್ತದೆ. ಇದಕ್ಕೆ ಪರಿಹಾರ ಏನು ಅಂದರೆ, ಈ ಜಗ್ಗಿಗೆ ಶುದ್ಧವಾದ ನೀರನ್ನು ಅದರ ಮೇಲೆ ಹಾಕಿದಾಗ ಗಲೀಜು ನೀರು ಚೆಲ್ಲಿ ಹೋಯ್ತು. ಒಳ್ಳೆಯ ನೀರು ಗ್ಲಾಸ್‌ನಲ್ಲಿ ಉಳಿಯಿತು. ಹೀಗೆ ಇನ್ನಷ್ಟು ಪಾಸಿಟಿವ್ ಆಲೋಚನೆಗಳನ್ನು ಹಾಕುತ್ತ ಹೋದರೆ ಆ ಗಲೀಜು ಇನ್ನಷ್ಟು ಕ್ಲೀನ್ ಆಗುತ್ತಲೇ ಹೋಗುತ್ತದೆʼ ಎಂದು ಪ್ರಯೋಗದ ಮೂಲಕ ಮನಸ್ಥಿತಿ ಶುದ್ಧಿ ಬಗ್ಗೆ ಸಂಗೀತಾ ಪಾಠ ಮಾಡಿದರು.
ಈ ಬಗ್ಗೆ ಸ್ಪರ್ಧಿಗಳು ಕೂಡ ಸಂತೋಷ ಹೊರ ಹಾಕಿದರು. ಪ್ರೇಕ್ಷಕರು ಕೂಡ ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ʻʻನೇರ ನುಡಿ ಸಂಗೀತಾ ಅವರನ್ನು ಅರ್ಥ ಮಾಡಿಕೊಳ್ಳಲು ಕೆಲವು ಜನರಿಗೆ ಮಾತ್ರ ಸಾಧ್ಯʼʼಎಂದು ಕಮೆಂಟ್ ಮಾಡಿದ್ದಾರೆ. ಈ ವಾರದ ಕಿಚ್ಚನ ಚಪ್ಪಾಳೆ ಸಂಗೀತಾ ಅವರಿಗೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: BBK SEASON 10: ಅವಿನಾಶ್ ಮೊಟ್ಟೆ ಉತ್ತರಕ್ಕೆ ಬಿದ್ದು ಬಿದ್ದು ನಕ್ಕ ತುಕಾಲಿ-ವರ್ತೂರ್!
ಇಷ್ಟೇ ಅಲ್ಲ ಸ್ಪರ್ಧಿಗಳ ಮಧ್ಯೆ ಇರುವ ಮನಸ್ತಾಪವನ್ನು ಸಂಗೀತಾ ಅವರು ಸರಿ ಮಾಡಲು ನಿಂತರು. ʻಇನ್ನು ಮುಂದೆ ಎಷ್ಟೇ ಕೋಪವಿದ್ದರೂ ನಾವು ಸರಿ ಮಾಡಿಕೊಂಡು, ಖುಷಿಯಿಂದ ಇರೋಣʼ ಎಂದು ಸ್ಪರ್ಧಿಗಳನ್ನು ಖುಷಿಯಾಗಿ ಇರಿಸಿದರು. ವಿನಯ್ ಅವರಿಗೆ ಸ್ಟಾರ್ ಕೂಡ ಕೊಟ್ಟರು ಸಂಗೀತಾ.
ಕಳೆದ ಸಂಚಿಕೆಯಲ್ಲಿ ತನಿಷಾ ಟೀಚರ್ ಅವರಿಂದ ವ್ಯಕ್ತಿತ್ವ ವಿಕಸನದ ಪಾಠ ಕಲಿತ ವಿದ್ಯಾರ್ಥಿಗಳು, ಮೈಕಲ್ ಮೇಷ್ಟ್ರ ಜೊತೆಗೆ ‘ರೋಮಾಂಚನವೀ ಕನ್ನಡ’ ಎಂದು ರಾಗವಾಗಿ ಹಾಡಿದ್ದರು ಕೂಡ. ಪ್ರತಾಪ್ ಸರ್‍ರಿಂದ ಗಣೀತ ಕಲಿತು ಚುರುಕಾಗಿರುವ ಹುಡುಗರಿಗೆ ಈವತ್ತು ನಮ್ರತಾ ಮ್ಯಾಮ್ ಡಾನ್ಸ್ ಹೇಳಿಕೊಟ್ಟಿದ್ದಾರೆ.
ಬಿಗ್‌ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ