ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ (BBK Season 10) ಪತ್ರಕರ್ತ ಗೌರೀಶ್ ಅಕ್ಕಿಯವರು ಪತ್ನಿ ಮಾಲತಿ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ಬೃಂದಾವನ ಧಾರಾವಾಹಿ ತಂಡ ಬಂದು ಹೋದ ಬಳಿಕ ನಿಮ್ಮ ಕುಟುಂಬ ಮನೆಯವರ ನೆನಪು ಆಗಲಿರಬೇಕು. ಮನೆಯವರ ಜತೆಗಿನ ಸವಿನನೆನಪುಗಳು ಮರುಕಳಿಸಿರಬಹುದು. ಏನಾದರು ಹೇಳಲು ಬಯಸಿದರೆ, ಈ ಕ್ಷಣ ನಿಮ್ಮದು ಎಂದು ಬಿಗ್ ಬಾಸ್ ಹೇಳಿದರು. ಈ ವೇಳೆ ಗೌರೀಶ್ ಅವರು ಭಾವುಕರಾದರು. ಅಷ್ಟೇ ಅಲ್ಲದೇ ʼʼಬಿಗ್ ಬಾಸ್ ಮನೆಗೆ ಬರುವಾಗ ಅಪ್ಪ ಅಮ್ಮನಿಗೆ ಈ ಶೋ ನೋಡ್ಬೇಡಿ ಎಂದು ಹೇಳಿದ್ದೆʼʼ ಎಂದು ಹೇಳಿಕೊಂಡಿದ್ದಾರೆ.
ಗೌರೀಶ್ ಅಕ್ಕಿ ಮಾತನಾಡಿ ಹಲವು ವಿಚಾರ ಹಂಚಿಕೊಂಡಿದ್ದಾರೆ. “ನನಗೆ ಎಳ್ಳಷ್ಟು ಆಸಕ್ತಿ ಇರಲಿಲ್ಲ. ನನ್ನ ಹೆಂಡತಿ ಹೇಳಿದ್ದು. ನನ್ನ ಕರಿಯರ್ ಬೇರೆನೆ ಇದೆ. ಅಪ್ಪ ಅಮ್ಮನಿಗೆ ಏನ್ ಹೇಳಿದ್ದೀನಿ ಅಂದ್ರೆ ಆಶ್ಚರ್ಯ ಆಗುತ್ತೆ. ಅಪ್ಪ ಅಮ್ಮನಿಗೆ ಈ ಶೋ ನೋಡ್ಬೇಡಿ ಎಂದು ಹೇಳಿದ್ದೆ. ತಮ್ಮ ರಾಜೇಶ್ ಹೇಳಿದ ಹೋಗ್ಬೇಡ ಎಂದು. ಅಲ್ಲಿ ನೀನು ಏನೋ ಹೇಳಿದ್ರೆ ಇಲ್ಲಿ ನಮಗೂ ಬೇಸರ ಆಗುತ್ತೆ ಎಂದಿದ್ದ. ನಮ್ಮದು ಲವ್ ಮ್ಯಾರೇಜ್ . ಮಾಲತಿಗೆ ಯಾವಾಗಲೂ ನಾನು ಹೇಳುವುದು ಬಿಟ್ಟು ಹೋಗ್ಬೇಡ ಎಂದು. ನಂಗೆ ನಿನ್ನ ಬಿಟ್ಟು ಇರುವುದಕ್ಕೆ ಆಗಲ್ಲʼʼ ಎಂದಿದ್ದಾರೆ.
ಮಾಲತಿ ಗೌರೀಶ್ ಪೋಸ್ಟ್ ವೈರಲ್
ಗೌರೀಶ್ ಸ್ವಭಾವ ಹೀಗೆ ಅಂತ ತಿಳಿದೇ ಚಾನಲ್‌ನವರು ಕಾರ್ಯಕ್ರಮಕ್ಕೆ ಅವರನ್ನು ಕರೆದಿದ್ದು.. ಹೋಗುವ ಮೊದಲು ಚಾನಲ್‌ನವರಿಗೆ ನೂರು ಬಾರಿ ಕೇಳಿದ್ದಾರೆ.. ನಾನು ಹೇಗೆ ಸೂಟ್ ಆಗ್ತೇನೆ ಅಂತ.. ಬನ್ನಿ ಸರ್ ನೀವು ಬಂದ್ರೆ ನಮಗೆ ಸಂತೋಷ ಅಂತ ಪ್ರೀತಿಯಿಂದ ಕರೆದಿದ್ದಕ್ಕೆ ಹೋಗಿದ್ದು.
ಇದನ್ನೂ ಓದಿ: BBK Season 10: ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ,ಇಶಾನಿಯ ʻಸಂಗೀತʼ ಸಂಜೆ!
ಎಲ್ರೂ ಕಾಲ್ ಮಾಡಿ ಮೆಸೆಜ್ ಮಾಡಿ ಗೌರೀಶ್ ಇನ್ನೂ ಆಕ್ಟೀವ್ ಆಗ್ಬೇಕು ಅಂತಿದ್ದಾರೆ.. But for me he doing great.. ನಾನು ಅವರಿಂದ expect ಮಾಡಿದ್ದನ್ನೇ ಅವರು ಮಾಡ್ತಿದ್ದಾರೆ.. ಅಲ್ಲಿರೋದು 28ರಿಂದ 38 ಆಸುಪಾಸಿನವರು.. ಬಹುಶಃ ಹೆಚ್ಚು ಕಡಿಮೆ ನನ್ನ ವಯಸ್ಸಿನವರು.. ಯಾವುದೋ ವಿಷಯಕ್ಕೆ ಯಾರ್ಯಾರೋ ಕಿತ್ತಾಡುವಾಗ ಸುಖಾಸುಮ್ಮನೆ ಗೌರೀಶ್ ತಮ್ಮ ಅಭಿಪ್ರಾಯ ಹೇಳಿದ್ರೆ , ನಾಳೆ ಕಿತ್ತಾಡ್ಕೊಂಡಿರೋರು ಒಂದಾಗ್ತಾರೆ..sorry macha , its OK bro ಅಂದ್ಕೊಂಡು.. ಮಧ್ಯೆ ಮಾತಾಡಿದವರು ಹಾಳಾಗೋದು.. ಇದು lifeನಲ್ಲಿ ಪ್ರತಿಕ್ಷಣ ನಡೆಯುವ ಡ್ರಾಮಾ ..ಅಲ್ಲಿ ಹೇಗಿರಬೇಕು ಅನ್ನೋದು ಗೌರೀಶ್‌ಗೆ ಗೊತ್ತು.. ಇನ್ನು ಆಟದ ವಿಷಯ ಬಂದಾಗ ಅವರಿಗೆ ಸಿಕ್ಕ ಎರಡು ಟಾಸ್ಕ್ ಆಡಿದ್ದಾರೆ.. ಮನೆಗೆ ಬಂದ 4 ಲಕ್ಷುರಿ ಬಜೆಟ್‌ನಲ್ಲಿ ಪೀನಟ್ ಬಟರ್ ಇವರೇ ತಂದಿದ್ದು.. ಅವರ ವಯಸ್ಸಿಗೆ ಫಿಸಿಕಲ್ ಫಿಟ್ ನೆಸ್‌ಗೆ ಎಷ್ಟು ಸಾಧ್ಯವೋ ಅಷ್ಟು ಆಡಿದ್ದಾರೆ.. ಸಾಕು..ಆಟ ಮಜವಾಗಿ ಇರಬೇಕು.. ಕಷ್ಟದಾಯಕವಾಗಿ ಅಲ್ಲ.
ಕರ್ನಾಟಕದ ನಂಬರ್ ಒನ್ ಶೋ ಆದ್ರೂ ಬಿಗ್ ಬಾಸ್ ಒಂದು ಕಾರ್ಯಕ್ರಮ ಮಾತ್ರ.. ಒಂದು ಕಾರ್ಯಕ್ರಮಕ್ಕಾಗಿ ವ್ಯಕ್ತಿಯ ವ್ಯಕ್ತಿತ್ವ ಬದಲಾಗೋದಿಲ್ಲ ಅಲ್ವ? ಅಲ್ಲಿನ ಆ ಮನೆಗೆ ಇವರು ಸೂಟಾಗದೇ ಇದ್ರೆ ಖುಷಿಯಿಂದ ಬರಲಿ ಅವರಾಗೇ ಇರುವ ಅವರಿಗೆ ನಮ್ಮ ಮನೆಯಲ್ಲಿ ಮನಸ್ಸಿನಲ್ಲಿ ಅದೇ ಪ್ರೀತಿಯಿದೆʼʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.