Site icon Vistara News

BBK SEASON 10: ಈ ವೀಕೆಂಡ್ ಪಂಚಾಯ್ತಿಗೆ ಸುದೀಪ್‌ ಬರಲ್ಲ?

Kichcha Sudeep bigg boss 10

ಬೆಂಗಳೂರು: ಶನಿವಾರ ಬಂತು ಅಂದರೆ (BBK SEASON 10) ಸಾಕು ಕಿಚ್ಚ ಸುದೀಪ್‌ ಅವರನ್ನು ವೀಕೆಂಡ್‌ ಪಂಚಾಯಿತಿಯಲ್ಲಿ ನೋಡಲು ತುದಿಗಾಲಲ್ಲಿ ಕಾಯುತ್ತಿರುತ್ತಾರೆ ವೀಕ್ಷಕರು. ಈ ವಾರ ಮನೆಯಲ್ಲಿ ಕೂಡ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಈ ವಾರ ಮನೆಯಲ್ಲಿ ಸಾಕಷ್ಟು ಗಲಾಟೆ-ಜಗಳಗಳು ನಡೆದಿವೆ. ಹಲವರು ಹಲವು ತಪ್ಪುಗಳನ್ನು ಮಾಡಿದ್ದಾರೆ. ಸ್ಪರ್ಧಿಗಳಿಗೆ ಕಿಚ್ಚ ಹೇಗೆ ಕ್ಲಾಸ್‌ ತೆಗೋತಾರೆ ಎಂದು ವೀಕ್ಷಕರು ಕಾಯೋದು ಜಾಸ್ತಿ. ಆದರೆ ಮೂಲಗಳ ಪ್ರಕಾರ ಈ ವಾರ ಸುದೀಪ್‌ ಅವರು ವೀಕೆಂಡ್‌ಗೆ ಗೈರಾಗಿರಲಿದ್ದಾರೆ ಎನ್ನಲಾಗುತ್ತಿದೆ.

ಪ್ರತಿ ಶನಿವಾರ ಹಾಗೂ ಭಾನುವಾರ ಸುದೀಪ್ ಬಂದು ಆ ವಾರದ ಸ್ಪರ್ಧಿಗಳು ಮಾಡಿದ ತಪ್ಪು-ಒಪ್ಪುಗಳ ಬಗ್ಗೆ ಮಾತನಾಡುತ್ತಾರೆ. ಕಿಚ್ಚನ ಚಪ್ಪಾಳೆ ಯಾರಿಗೆ ಎಂದೂ ವೀಕ್ಷಕರು ಕಾಯುತ್ತಿರುತ್ತಾರೆ. ಶನಿವಾರ ಚೆನ್ನಾಗಿ ಕ್ಲಾಸ್‌ ತೆಗೆದುಕೊಂಡು, ಭಾನುವಾರ ಸುದೀಪ್‌ ಅವರು ಸ್ಪರ್ಧಿಗಳನ್ನು ನಕ್ಕು ನಲಿಸಿ ಹೊರಟು ಬಿಡುತ್ತಾರೆ. ಹಾಗೇ ಭಾನುವಾರ ನಾಮಿನೇಟ್‌ ಆದ ಸ್ಪರ್ಧಿಯ ಬಗ್ಗೆ ಮಾಹಿತಿ ಕೊಡುತ್ತಾರೆ. ಆದರೆ ಈ ವಾರ ಇವೆಲ್ಲ ಮಿಸ್‌ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಡಿಸೆಂಬರ್ 23ರಂದು ಕಿಚ್ಚು ಸುದೀಪ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಕೆಸಿಸಿ ಕಪ್‌ ಸೀಸನ್‌ 4 ಪ್ರಾರಂಭವಾಗುತ್ತಿದೆ. ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಚಿತ್ರರಂಗ ಹಾಗೂ ಕ್ರಿಕೆಟ್ ಲೋಕದ ಹಲವು ತಾರೆಗಳು ಆಗಮಿಸಲಿದ್ದಾರೆ. ಹಾಗಾಗಿ ಶುಕ್ರವಾರದಿಂದಲೇ ಸುದೀಪ್ ಬಹಳ ಬ್ಯುಸಿಯಾಗಿರಲಿದ್ದಾರೆ ಎನ್ನಲಾಗುತ್ತಿದ್ದು, ಬಿಗ್​ಬಾಸ್ ಶೂಟಿಂಗ್​ಗೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೇರೆ ವೇದಿಕೆಗಳಲ್ಲಿ ನಿರೂಪಕರು ಗೈರಾಗಿದ್ದರೂ ಬೇರೆಯವರನ್ನು ತಂದು ಕಾರ್ಯಕ್ರಮ ನಡೆಸಿಕೊಟ್ಟಿದ್ದಿದೆ. ಆದರೆ ಕನ್ನಡದ ಬಿಗ್‌ ಬಾಸ್‌ ವೇದಿಕೆಯಲ್ಲಿ ಈವರೆಗೆ ಆಗಿಲ್ಲ.

ಚಿತ್ರರಂಗದ ಗಣ್ಯರ ಕ್ರಿಕೆಟ್‌ ಪಂದ್ಯಾಟ ಸರಣಿ ಕೆಸಿಸಿ ಕಪ್‌ ಸೀಸನ್‌ 4ರ (KCC 4- Kannada Chalanachitra Cup) ಪಂದ್ಯಾವಳಿಗಳು ಡಿಸೆಂಬರ್ 23,24, 25 ರಂದು ನಡೆಯಲಿದೆ. ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಅವರು ಟೂರ್ನಿಯ ವಿಶೇಷತೆಗಳನ್ನು ಪ್ರಕಟಿಸಿದ್ದರು. 

ಇದನ್ನೂ ಓದಿ: BBK SEASON 10: ಹಾಕಿದ್ದ ಬೀಗ ತೆರೆದು ಕ್ಯಾಪ್ಟನ್ ಕೋಣೆಯೊಳಗೆ ಬಲಗಾಲಿಟ್ಟ ನಮ್ರತಾ!

ಮೂರು ದಿನಗಳ ಕಾಲ ನಡೆಯುವ ಈ ಟೂರ್ನಿಗೆ 23ರ ಸಂಜೆ ಅದ್ಧೂರಿ ಚಾಲನೆ ಸಿಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ. ಕಿಚ್ಚ ಸುದೀಪ್, ಶಿವಣ್ಣ. ಡಾಲಿ ಧನಂಜಯ್, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್​ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ಪಂದ್ಯವಾವಳಿಗೆ ಸಪರೇಟ್ ಟಿಕೆಟ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೂಡ ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ.

ಈ ಬಾರಿಯ ಕೆಸಿಸಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರೂ ಭಾಗಿಗಳಾಗಲಿದ್ದಾರೆ. ಎಸ್ ಭದ್ರಿನಾಥ್, ಸುರೇಶ್ ರೈನಾ, ದಿಲ್ಶಾನ್, ಮುರಳಿ ವಿಜಯ್, ರಾಬಿನ್ ಉತ್ತಪ್ಪ. ಗಿಫ್ಸ್ ಆಡಲಿದ್ದಾರೆ. ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೆಸಿಸಿಯಲ್ಲಿ ಭಾಗಿಯಾಗಲಿದ್ದಾರೆ. ಮೊದಲ ಬಾರಿಗೆ ಕೆಸಿಸಿಯಲ್ಲಿ ತಮಿಳಿನ ವಿಕ್ರಾಂತ್ ಹಾಗೂ ತೆಲುಗಿನ ಪ್ರಿನ್ಸ್ ಭಾಗಿಯಾಗುತ್ತಿದ್ದಾರೆ.

ಕೆಸಿಸಿಯ ಹಿಂದಿನ ಟೂರ್ನಿಗಳಲ್ಲಿ ವೀರೇಂದ್ರ ಸೆಹ್ವಾಗ್, ಲ್ಯಾನ್ಸ್ ಕ್ಲೂಸೆನರ್, ಹರ್ಷಲ್ ಗಿಬ್ಸ್ , ತಿಲಕರತ್ನೆ ದಿಲ್ಶನ್‌, ಆಡಮ್ ಗಿಲ್‌ಕ್ರಿಸ್ಟ್, ಓವೈಸ್ ಶಾ, ಕ್ರಿಸ್ ಗೇಲ್ ಮುಂತಾದವರು ಆಡಿದ್ದಾರೆ. ಹಿಂದಿನ ಎರಡೂ ಸೀಸನ್‌ಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿವೆ. ಕಳೆದ ಸೀಸನ್‌ ಅಲ್ಲಿ ‘ಡಾರ್ಲಿಂಗ್’ ಕೃಷ್ಣ ನಾಯಕತ್ವದ ‘ಗಂಗಾ ವಾರಿಯರ್ಸ್’ ತಂಡ ಚಾಂಪಿಯನ್ ಆಗಿತ್ತು

Exit mobile version