ಬೆಂಗಳೂರು: ಬಿಗ್ ಬಾಸ್ (BBK SEASON 10) ಮನೆಯಲ್ಲಿ ಆಗಾಗ ಕೆಲವೊಂದು ಅದ್ಭುತಗಳು ನಡೆಯುತ್ತಲೇ ಇರುತ್ತವೆ. ಈಗಾಗಲೇ ಒಂಬತ್ತನೇ ವಾರಕ್ಕೆ ಬಿಗ್ ಬಾಸ್ ಸೀಸನ್ 10 ಕಾಲಿಟ್ಟಿದೆ. ʻಬಿಗ್ ಬಾಸ್ʼ ಸ್ಪರ್ಧೆಗಳಿಗೆ ಮನದಾಳದ ಮಾತನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟಿದ್ದರು. ಎಲ್ಲ ಸ್ಪರ್ಧಿಗಳು ತಮ್ಮ ಮಾತುಗಳನ್ನು ಹೇಳಿ ಕಣ್ಣೀರಿಟ್ಟಿದ್ದಾರೆ. ಹಾಗೇ ಸಂಗೀತಾ ಅವರು ಕೂಡ ತಾವು ಎನ್ನೆಲ್ಲ ಅನುಭವಿಸುತ್ತಿದ್ದೇನೆ, ಹಾಗೂ ಪೋಷಕರು ಬಿಗ್ ಬಾಸ್ ಮನೆಯೊಳಗಡೆ ಬರಬೇಡಿ ಎಂದು ಹೇಳಿ ಕಣ್ಣೀರಿಟ್ಟರು.
ಮೊದಲಿಗೆ ಸಂಗೀತಾ ಅವರು ತನ್ನ ಕುಟುಂಬಕ್ಕೆ ನನ್ನ ಕಣ್ಣಿನ ಸಮಸ್ಯೆ ಗೊತ್ತಾಯ್ತಾ? ಎಂದು ಕೇಳಿದರು. ಬಿಗ್ ಬಾಸ್ ಪ್ರತಕ್ರಿಯೆ ನೀಡಿ ʻʻನಿಮ್ಮ ಅತ್ತಿಗೆ ಸುಚಿತ್ರಾ ಅವರಿಗೆ ಎಲ್ಲ ವಿಷಯ ತಿಳಿದಿದೆʼʼ ಎಂದರು. ಬಳಿಕ ಸಂಗೀತಾ ಅವರು ಒಂದೊಂದೇ ವಿಚಾರಗಳನ್ನು ಬಿಗ್ ಬಾಸ್ ಮುಂದೆ ತೆರೆದಿಟ್ಟರು. “ಶಾಲೆಯಲ್ಲಿ ನನ್ನನ್ನು ಯಾವಾಗಲೂ ಕಾರ್ನರ್ ಮಾಡುತ್ತಿದ್ದರು. ಅದಕ್ಕೆ ಕಾರಣ ನಾನು ಹೀಗೆ ಇರೋದು. ಇಲ್ಲಿಯೂ ಅದೇ ನಡೆಯುತ್ತಿದೆ. ಆಗಲೂ ಎದುರಿಸಿದ್ದೆ, ಈಗಲೂ ಎದುರಿಸುವೆ. ನನ್ನ ಕಣ್ಣನ್ನೇ ಕಿತ್ತುಕೊಂಡು ಹೋಗಲು ಬಂದವರು ಇವರು, ಇವರನ್ನು ನಾನು ಹೇಗೆ ಸುಮ್ಮನೆ ಬಿಡೋದು? ನಾನು ನನಗೋಸ್ಕರ ಫೈಟ್ ಮಾಡ್ತೀನಿ. ಇವರೆಲ್ಲರೂ ನನಗೆ ಯಾವುದೇ ಬೋರ್ಡ್ ಕೊಡಲಿ, ಎಷ್ಟೇ ನಾಮಿನೇಶನ್ ಬರಲಿ, ಎಷ್ಟೇ ದ್ವೇಷ ಮಾಡಲಿ , ನಾನು ನನಗೋಸ್ಕರ ಒಬ್ಬಳೇ ನಿಂತುಕೊಂಡು ಆಡುತ್ತೇನೆ” ಎಂದರು.
ಅವಕಾಶ ಸಿಕ್ಕರೆ ಬರಬೇಡಿ
ಸಂಗೀತಾ ಅವರು ಪೋಷಕರಿಗೆ ಈ ಮೂಲಕ ಇಲ್ಲಿ ಅವಕಾಶ ಸಿಕ್ಕರೆ ಬರಬೇಡಿ ಎಂದೂ ಅಂದರು. ʻʻಇಲ್ಲಿಗೆ ನೀವು ಬಂದರೆ ಯಾರು ಕೂಡ ನಿಮ್ಮ ಮಗಳು, ಅಥವಾ ಸಂಗೀತಾ ಚೆನ್ನಾಗಿ ಆಡುತ್ತಿದ್ದಾಳೆ ಎಂದು ಯಾರೂ ಹೇಳುವುದಿಲ್ಲ. ಶಾಲೆಯಲ್ಲಿ ಟೀಚರ್ಸ್, ಪೇರೆಂಟ್ಸ್ ಮೀಟಿಂಗ್ ಇದ್ದಾಗ ಟೀಚರ್ಸ್ ನನ್ನ ಬಗ್ಗೆ ಕಂಪ್ಲೇಂಟ್ ಮಾಡುತ್ತಾರೆ, ಪೇರೆಂಟ್ಸ್ ಬರ್ತಾರೆ ಎಂದು ಭಯ ಪಡುತ್ತಿದ್ದೆ. ಅದೇ ರೀತಿ ಇಲ್ಲಿಯೂ ಕೂಡ ಭಯ ಆಗ್ತಿದೆ. ನೀವು ಇಲ್ಲಿಗೆ ಬರಬೇಡಿ, ನಾನು ಗೆದ್ದುಕೊಂಡು ಹೊರಗಡೆ ಬರ್ತೀನಿʼʼ ಎಂದು ಕಣ್ಣೀರಿಟ್ಟರು.
ಇದನ್ನೂ ಓದಿ: BBK SEASON 10: ನಂಗೆ ಒಂದು ಮುತ್ತು ಕೊಡಲ್ವ? ತನಿಷಾಗೆ ಹೊಸ ಬೇಡಿಕೆ ಇಟ್ಟ ವಿನಯ್!
ಹೊಸ ತಮ್ಮ ಸಿಕ್ಕಿದ
ಮೊದಲಿಂದಲೂ ಸಂಗೀತಾ ಅವರು ಡ್ರೋನ್ ಪ್ರತಾಪ್ ಎಂದರೆ ಅಚ್ಚು ಮೆಚ್ಚಾಗಿತ್ತು. ಆ ಬಳಿಕ ಇಬ್ಬರ ಮಧ್ಯೆ ಮನಸ್ತಾಪ ಉಂಟಾಯಿತು. ಯಾವಾಗ ಕಣ್ಣಿಗೆ ಸಮಸ್ಯೆಯಾಯ್ತೋ ಅಲ್ಲಿಂದ ಮತ್ತೆ ಇಬ್ಬರು ಕ್ಲೋಸ್ ಆದರು. ʻʻಇತ್ತೀಚೆಗೆ ನನಗೆ ಹೊಸ ತಮ್ಮ ಸಿಕ್ಕಿದ್ದಾನೆ, ಅವನೇ ಡ್ರೋನ್ ಪ್ರತಾಪ್. ನನಗೆ ಯಾವಾಗಲೂ ತಮ್ಮ ಇರಬೇಕು ಎಂದು ಆಸೆ ಇತ್ತು. ಈಗ ಪ್ರತಾಪ್ ಸಿಕ್ಕಿರುವುದು ಖುಷಿ ಆಗಿದೆ. ಅಣ್ಣನನ್ನು ತಮ್ಮನಲ್ಲಿ ನೋಡ್ತಿದೀನಿ. ನನಗೆ ಅವನೆಂದರೆ ತುಂಬ ಇಷ್ಟ” ಎಂದು ಸಂಗೀತಾ ಅವರು ಹೇಳಿದ್ದಾರೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ