Site icon Vistara News

BBK Season 10: ಮಕ್ಕಳ ವಯಸ್ಸಿನವರೊಂದಿಗೆ ನಾನ್ಯಾಕೆ ತರ್ಕ ಮಾಡ್ಲಿ? ಪ್ರತಾಪ್‌ ಬಗ್ಗೆ ಜಗ್ಗೇಶ್‌ ಹೇಳಿದ್ದೇನು?

jaggesh drone pratap

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಪ್ರತಾಪ್‌ ಅತ್ಯಂತ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ವಾರ ಟೀಂ ಕ್ಯಾಪ್ಟನ್‌ ಕೂಡ ಆಗಿದ್ದಾರೆ. ಕೆಲವರು ಪ್ರತಾಪ್‌ ವಿರುದ್ಧವೂ ತಿರುಗಿ ಬಿದ್ದಾಗಿದೆ. ಇದ್ಯಾವುದಕ್ಕೂ ಅಂಜದೇ ಪ್ರತಾಪ್‌ ಮುನ್ನುಗ್ಗುತ್ತಿದ್ದಾರೆ. ಆದರೆ ಈಗ ಸುದ್ದಿಯಲ್ಲಿರುವುದು ನವರಸ ನಾಯಕ ಜಗ್ಗೇಶ್‌. ಡ್ರೋನ್​ ​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಆಗ ಜಗ್ಗೇಶ್‌ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಡ್ರೋನ್ ʻಭಯಂಕರ ಡೋಂಗಿʼ ಎಂದು ಬರೆದುಕೊಂಡಿದ್ದರು. ಇದೀಗ ಜಗ್ಗೇಶ್‌ ಅವರ ಟ್ವೀಟ್‌ ಸ್ಕ್ರೀನ್‌ ಶಾಟ್‌ ವೈರಲ್‌ ಆಗುತ್ತಿದೆ.

ನಟ ಜಗ್ಗೇಶ್​ ಅವರು ಡ್ರೋನ್​ ಪ್ರತಾಪ್​ ತಮಗೆ ಹೇಗೆ ಮೋಸ ಮಾಡಿದ್ದರು ಎನ್ನುವುದನ್ನು ಹೇಳಿಕೊಂಡಿದ್ದರು. ʻʻಈ ಮನುಷ್ಯ ಎಲ್ಲರ ಡೋಂಗಿ ಮಾಡಿ ನಂಬಿಸಿ ಬದುಕಲು ಯತ್ನಿಸುತ್ತಾನೆ. ಅವನ ಪ್ಲ್ಯಾನ್‌ ಬೇರೆಯೇ ಇರುತ್ತೆ. ನಾನು ಕಂಡ ಅತ್ಯಂತ ಎಜುಕೇಟ್‌ ಫ್ರಾಡ್‌ʼʼ ಎಂದು ಕಳೆದ ವರ್ಷ ಜಗ್ಗೇಶ್‌ ಹಂಚಿಕೊಂಡಿದ್ದರು. ಆದರೀಗ ಜಗ್ಗೇಶ್​ ಅವರು ಬರೆದಿದ್ದ ಮಾತುಗಳನ್ನೇ ಈಗ ಮತ್ತೊಮ್ಮೆ ಬರೆದಂತೆ ಸೃಷ್ಟಿಸಿ, ಟ್ರೋಲಿಗರು ಶೇರ್​ ಮಾಡುತ್ತಿದ್ದಾರೆ. ಇದರಿಂದ ಜಗ್ಗೇಶ್​ ಬೇಸರ ವ್ಯಕ್ತಪಡಿಸಿದ್ದು, ಈ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಪ್ರತಾಪ್​ ಹೆಸರು ಬಳಸದೇ ಪೋಸ್ಟ್​ ಶೇರ್​ ಮಾಡಿದ್ದಾರೆ.

ನಟ ಜಗ್ಗೇಶ್‌ ಪೋಸ್ಟ್‌ನಲ್ಲಿ ʻʻಮಿತ್ರರೆ ನನ್ನ ಇನ್‌ಸ್ಟಾಗ್ರಾಮ್‌ ಹಿಂದಿನ ಮುಖಪುಟ ಫೋಟೊಶೂಟ್‌ ಬಳಸಿ ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಾನು ನೆಗೆಟಿವ್‌ ಹಾಕಿದಂತೆ ಮಾಡಿದ್ದಾರೆ. ಕ್ಷಣಿಕ ಖುಷಿ ಅವರಿಗೆ ಸಿಗಬಹುದು ನೆನಪಿ.ಡಿ ಸಿಕ್ಕಿಬಿದ್ದರೆ ನಿಮ್ಮ ಜನ್ಮ ಸಾಕು ಎನ್ನುವಂತೆ ಮಾಡುತ್ತದೆ ಇಂದಿನ ಕಾನೂನು! ಸ್ನೇಹಿತರೆ ನನ್ನ ಬದುಕಲ್ಲಿ ನಾನು ಯಾರನ್ನು ನೋಯಿಸುವಂತ ಗುಣವಿಲ್ಲ! ನನ್ನ ದ್ವೇಷಿಸುವವರನ್ನು ಗೌರವಿಸುವೆ. ಒಂದು ವೇಳೆ ಇಷ್ಟವಾಗದಿದ್ದರೆ ಅವರಿಂದ ದೂರ ಉಳಿಯುವೆ! ನನಗೀಗ 61 ನಾನ್ಯಾಕೆ ನನ್ನ ಮಕ್ಕಳ ವಯಸ್ಸಿನವರೊಂದಿಗೆ ತರ್ಕ ಮಾಡುವೆ! ನನ್ನ ಮೇಲೆ ನಂಬಿಕೆಯಿರಲಿ. ಅಂತ ಪೋಸ್ಟ್‌ಗಳು ಬಂದರೆ ಶೇರ್‌ ಮಾಡಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: BBK Season 10: ಮಗನಿಗೆ ಬುದ್ಧಿ ಹೇಳಿ ಎಂದ ನಮ್ರತಾ; ರೊಮ್ಯಾನ್ಸ್‌ ನೋಡಿದ್ರೆ ತಾಯಿ ಎಂಜಾಯ್‌ ಮಾಡ್ತಾರಂತೆ!

ಜಗ್ಗೇಶ್‌ ಪೋಸ್ಟ್‌

ಇದಕ್ಕೆ ಅವರ ಫ್ಯಾನ್ಸ್​ ಪ್ರತಿಕ್ರಿಯಿಸಿದ್ದಾರೆ. ʻʻನಾ ಕಂಡ ಒಳ್ಳೆ ಕಲಾವಿದ. ಡ್ರೋನ್ ಪ್ರತಾಪ್ ಅವರು ನಿಮಗೆ ಮಾಡಿದ್ದು ತಪ್ಪು ನಾನು ಖಂಡಿಸುತ್ತೇನೆ. ಒಬ್ಬ ಒಳ್ಳೆಯದ್ದನ್ನು ಮಾಡಿದವರಿಗೆ ಡ್ರೋನ್​ ಪ್ರತಾಪ್‌​ ಕೆಟ್ಟದಾಗಿ ನಡೆದುಕೊಂಡಿದ್ದಾರೆʼʼಎಂದು ಕಮೆಂಟ್‌ ಮಾಡಿದ್ದಾರೆ.

ʻʻನಿಮ್ಮ ಬಗ್ಗೆ ಮತ್ತು ನಿಮ್ಮ ಮಾತಿನ ನಡವಳಿಕೆಗೆ ನಮಗೆ ನಂಬಿಕೆ ಇದೆ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ಆ ದೇವರಿದ್ದಾನೆ. ನೀವು ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸ ಮುಂದುವರಿಸಿʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

Exit mobile version