Site icon Vistara News

BBK SEASON 10: ಈ ವಾರದ ʻಉತ್ತಮʼ ಸಂಗೀತಾ; ʻಕಳಪೆʼ ಪಟ್ಟ ಪಡೆದು ಜೈಲು ಸೇರಿದ ಪ್ರತಾಪ್!

kalape Drone Prathap Uttama Sangeetha

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) 16ನೇ ವಾರಕ್ಕೆ ಕಾಲಿಡುವ ಸಮಯ ಬಂದಾಗಿದೆ. ಜ.19ರ ಸಂಚಿಕೆಯಲ್ಲಿ ಕಟ್ಟ ಕಡೆಯ ‘ಉತ್ತಮ’ ಪಟ್ಟ ಸಂಗೀತಾ ಶೃಂಗೇರಿ ಪಾಲಾಗಿದೆ. ಹಾಗೇ ಕೊನೆಯ ʻಕಳಪೆʼ ಪಟ್ಟವನ್ನ ಪಡೆದು ಜೈಲಿಗೆ ಹೋಗಿದ್ದಾರೆ ಡ್ರೋನ್ ಪ್ರತಾಪ್. ಸಂಗೀತಾ ಅವರು ಈ ಬಗ್ಗೆ ಮನೆಯ ಸದಸ್ಯರ ಮುಂದೆ ಮಾತನಾಡಿ ʻʻಕೆಲವರಿಗೆ ಹಲವು ಬಾರಿ ʻಉತ್ತಮʼ ಸಿಕ್ಕಿದೆ. ನನಗೆ ಒಂದು ಬಾರಿಯೂ ಸಿಕ್ಕಲ್ಲ ಅಂದುಕೊಂಡಿದ್ದೆ. ಈಗ ಸಿಕ್ಕಿದೆ. ಎಲ್ಲರಿಗೂ ಧನ್ಯವಾದಗಳುʼʼಎಂದು ಹೇಳಿದರು.

ಡ್ರೋನ್‌ ಪ್ರತಾಪ್‌ ಮೊದಲಿಗೆ ಶುರು ಮಾಡಿ, ಸಂಗೀತಾ ಅವರಿಗೆ ʻಉತ್ತಮʼ ಕೊಟ್ಟರು. ತುಕಾಲಿ ಸಂತು ಪ್ರಕಾರ ಕಾರ್ತಿಕ್‌ ಉತ್ತಮ. ಸಂಗೀತಾ ಪ್ರಕಾರ ನಮ್ರತಾ ಉತ್ತಮ. ವರ್ತೂರು ಸಂತೋಷ್ ಪ್ರಕಾರ ವಿನಯ್ ಉತ್ತಮ.ಕಾರ್ತಿಕ್ ಪ್ರಕಾರ ತುಕಾಲಿ ಸಂತು ಉತ್ತಮ. ಡ್ರೋನ್ ಪ್ರತಾಪ್ ಪ್ರಕಾರ ವಿನಯ್‌ ಕಳಪೆ. ಸಂಗೀತಾ ಮತ್ತು ನಮ್ರತಾ ಪ್ರಕಾರ ವರ್ತೂರು ಸಂತೋಷ್ ಕಳಪೆ. ತುಕಾಲಿ ಸಂತು, ವಿನಯ್, ವರ್ತೂರು ಸಂತೋಷ್ ಹಾಗೂ ಕಾರ್ತಿಕ್‌ ಅವರು ಡ್ರೋನ್‌ಗೆ ಕಳಪೆ ನೀಡಿದರು.

ಇದನ್ನೂ ಓದಿ: BBK SEASON 10: ʻಬಿಗ್‌ ಬಾಸ್‌ʼ ಮನೆಯಿಂದ ನಮ್ರತಾ ಗೌಡ ಔಟ್‌?

ಸಂಗೀತಾ ಅವರಿಗೆ ಕೊನೆಗೂ ಉತ್ತಮ ಪಟ್ಟ ಸಿಕ್ಕಿದೆ. ಈ ಬಗ್ಗೆ ಸಂಗೀತಾ ಮಾತನಾಡಿ ʻಕೊನೆಯ ವಾರದ ಕಳಪೆ ಡ್ರೋನ್ ಪ್ರತಾಪ್. ಉತ್ತಮ ನಾನೇ. ಈ ಪ್ರಕ್ರಿಯೆ ನನಗೆ ಇಷ್ಟವಾಗುತ್ತಿಲ್ಲ. ಎಲ್ಲರೂ ಉತ್ತಮವಾಗಿ ಆಡಿದ್ದಾರೆ. ಮೊದಲ ಉತ್ತಮ ನನಗೆ ಈ ಮನೆಯಲ್ಲಿ ಕೊನೆಯದಾಗಿ ಕೊನೆಯ ವಾರದಲ್ಲಿ ನಾನು ಕ್ಯಾಪ್ಟನ್ ಆಗಿದ್ದಾಗ ಸಿಗುತ್ತಿದೆ. ನನಗೆ ತುಂಬಾ ಖುಷಿಯಾಗುತ್ತಿದೆʼʼಎಂದರು.

ಇನ್ನು ಪ್ರತಾಪ್‌ ಕೂಡ ಈ ಬಗ್ಗೆ ಮಾತನಾಡಿ ʻʻನನಗೆ ಕಳಪೆ ಕೊಟ್ಟಿರಿ ಎಂದು ಬೇಸರವಿಲ್ಲ. ಇದನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ. ಸಂಗೀತಾ ಅವರು ನನ್ನ ಪಕ್ಕ ಇಷ್ಟು ದಿನ ನಿಂತಿದ್ದಾರೆ. ಖುಷಿಯಾಗಿದೆ. ನನಗೆ ಇಲ್ಲಿ ಒಬ್ಬ ಅಕ್ಕ ಸಿಕ್ಕರು. ಅವರಿಗೆ ಒಳ್ಳೆಯದಾಗಲಿ. ಇಲ್ಲಿ ಯಾರೂ ಕಳಪೆ ಅಲ್ಲ ಅಂತ ಸಂಗೀತಾ ಹೇಳಿದ್ದು ಯಾವಾಗಲೂ ಮನಸ್ಸಿನಲ್ಲಿ ಇರುತ್ತೆʼʼಎಂದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version