Site icon Vistara News

Kannada Serials TRP: ʻಬಿಗ್‌ ಬಾಸ್‌ʼಗೆ ಭರ್ಜರಿ ಟಿಆರ್‌ಪಿ; ರೇಸ್‌ನಲ್ಲಿ ʻಭಾಗ್ಯಲಕ್ಷ್ಮೀʼ ಮಿಂಚು!

Kannada Serials

ಬೆಂಗಳೂರು: ಈ ವಾರ ಕಲರ್ಸ್‌ ಕನ್ನಡದ (Kannada Serials TRP) ಭಾಗ್ಯಲಕ್ಷ್ಮೀ ಧಾರಾವಾಹಿ ಟಿಆರ್‌ಪಿಯಲ್ಲಿ ಭಾರಿ ಏರಿಕೆ ಕಂಡಿದೆ. ಭಾಗ್ಯ ಈಗ ತಾಂಡವ್‌ ಮನೆಯಿಂದ ಹೊರ ಹೋದ ಬಳಿಕ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಪ್ರತಿ ಸಂಚಿಕೆಯಲ್ಲಿ ಕುತೂಹಲ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಕೂಡ ಬಿಗ್‌ ಬಾಸ್‌ ಬಗ್ಗೆಯೇ ಹೆಚ್ಚು ಚರ್ಚೆಗಳು ಆಗುತ್ತಿವೆ. ಹಲವು ಸ್ಪರ್ಧಿಗಳು ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಸಂಗೀತಾ,ಡ್ರೋನ್‌ ಪ್ರತಾಪ್‌ ಕಣ್ಣಿನ ವಿಚಾರವಾಗಿ, ಬಿಗ್‌ ಬಾಸ್‌ ನೋಡುವರ ಸಂಖ್ಯೆ ಹೆಚ್ಚಾಗಿದೆ.

ಬಿಗ್‌ ಬಾಸ್‌ ಶನಿವಾರದ ಎಪಿಸೋಡ್​ನಲ್ಲಿ 9.4 ಟಿವಿಆರ್ ಸಿಕ್ಕಿದೆ. ಭಾನುವಾರದ ಎಪಿಸೋಡ್​ಗೆ 9 ಟಿವಿಆರ್ ಸಿಕ್ಕಿದೆ. ಸೋಮವಾರದಿಂದ ಶುಕ್ರವಾರದವರೆಗೆ ಈ ಶೋ 7.2 ಟಿಆರ್​ಪಿ ಪಡೆದಿದೆ.

ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರುವಾಗಿ ಇಂದಿಗೆ ಎರಡು ವರ್ಷಗಳು ಸಂದಿದೆ. ಉಮಾಶ್ರೀ, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಬಾರಿ ಈ ಧಾರಾವಾಹಿಯ ಟಿಆರ್​ಪಿ ಎರಡಂಕಿಯಲ್ಲಿದೆ. ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

ಇದನ್ನೂ ಓದಿ: Kannada Serials TRP: ಏರುತ್ತಲೇ ಇದೆ ʻಬಿಗ್‌ ಬಾಸ್‌ʼ ಟಿಆರ್‌ಪಿ; ʻಸೀತಾ ರಾಮʼ ಪರಿಸ್ಥಿತಿ ಅಧೋಗತಿ!

ಭಾಗ್ಯಲಕ್ಷ್ಮೀ

ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿ ಟಿಆರ್‌ಪಿಯಲ್ಲಿ ಭಾರಿ ಏರಿಕೆ ಕಂಡಿದೆ. ಭಾಗ್ಯ ಈಗ ತಾಂಡವ್‌ ಮನೆಯಿಂದ ಹೊರ ಹೋದ ಬಳಿಕ ಜವಾಬ್ದಾರಿ ಹೆಚ್ಚಾಗಿದೆ. ಹೀಗಾಗಿ ಪ್ರತಿ ಸಂಚಿಕೆಯಲ್ಲಿ ಕುತೂಹಲ ಹೆಚ್ಚಾಗಿದೆ. ಈ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿದೆ. ಸುಷ್ಮಾ ರಾವ್, ಸುದರ್ಶನ್​, ಸುಷ್ಮಾ ನಾಣಯ್ಯ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವೀಕ್ಷಕರಿಗೆ ಈ ಧಾರಾವಾಹಿಯ ಕಥೆ ಇಷ್ಟ ಆಗಿದೆ.

ಗಟ್ಟಿಮೇಳ

ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿದ್ದಾರೆ. ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ.  ಗಟ್ಟಿಮೇಳ’ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಮೂರನೇ ಸ್ಥಾನದಲ್ಲಿದೆ.

ಅಮೃತಧಾರೆ-ಸತ್ಯ

ಅಮೃತಧಾರೆ ಎರಡು ಅಥವಾ ಮೂರನೇ ಸ್ಥಾನದಲ್ಲೇ ಇರುತ್ತಿತ್ತು. ಇದೀಗ ನಾಲ್ಕನೇ ಸ್ಥಾನಕ್ಕೆ ತಲುಪಿದೆ. ಕೇಡಿ ಕಿರಣ್‌ ರಣತಂತ್ರದೆದುರು, ಭೂಮಿ ಮೇಲಿರೋ ಗೌತಮ್‌ ನಂಬಿಕೆಗೆ ಗೆಲುವು ಸಿಗುತ್ತಾ ಎನ್ನುವ ಬಗ್ಗೆ ಕಥೆ ಆಗುತ್ತಿದೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಮೊದಲಾದವರು ನಟಿಸಿರುವ ‘ಅಮೃತಧಾರೆ’ ಧಾರಾವಾಹಿ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ‘ಸತ್ಯ’ ಧಾರಾವಾಹಿಗೂ ಒಂದೇ ರೀತಿಯ ಟಿಆರ್​ಪಿ ಸಿಕ್ಕಿದ್ದು. ಈ ಧಾರಾವಾಹಿಯೂ ನಾಲ್ಕನೇ ಸ್ಥಾನದಲ್ಲಿದೆ. ಎರಡೂ ಧಾರಾವಾಹಿಗಳುಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿವೆ.

ಇದನ್ನೂ ಓದಿ: Kannada Serials TRP: ಬಿಗ್‌ ಬಾಸ್‌ ಇಂಪ್ಯಾಕ್ಟ್‌; ‘ಸೀತಾ ರಾಮ’ ಧಾರಾವಾಹಿ ಟಿಆರ್‌ಪಿ ಇಳಿಕೆ!

‘ಶ್ರೀರಸ್ತು ಶುಭಮಸ್ತುʼ

ಸುಧಾರಾಣಿ ಅವರು ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ಸೊಸೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ತುಳಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಧವ ಹಾಗೂ ತುಳಸಿ ಮಧ್ಯೆ ಮಕ್ಕಳು ಅಡ್ಡಲಾಗಿ ನಿಂತರೂ ಈ ಜೋಡಿ ಮಾತ್ರ ಮನೆಯವರಿಗಾಗಿ ಸದಾ ದುಡಿಯುತ್ತಿರುತ್ತದೆ. ಅಭಿಯ ಪ್ರೀತಿಯನ್ನು ಒಂದು ಮಾಡಲು ತುಳಸಿ ಹೆಜ್ಜೆ ಹಾಕಿದ್ದಾಳೆ. ತುಳಸಿ ಕೊಟ್ಟ ಮಾತಿಗೆ ಶಾರ್ವರಿ ಅಡ್ಡಿಯಾಗ್ತಾಳ? ಎನ್ನುವುದು ಕಾದು ನೋಡಬೇಕಿದೆ. ಜೀ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿ ತಗ್ಗುತ್ತಲೇ ಇದೆ .‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿಯಲ್ಲಿ ಇಳಿಕೆ ಆಗಿದೆ. ಬಿಗ್ ಬಾಸ್ ಹಾಗೂ ಸೀತಾ ರಾಮ ಧಾರಾವಾಹಿಯ ಪ್ರಸಾರದ ಸಮಯ ಒಂದೇ ಆಗಿದೆ. ಸೀತಾ – ರಾಮರ ನಡುವಿನ ಮೌನವನ್ನು ಮುರಿಯೋಕೆ ಮುಂದಾಗಿದ್ದಾನೆ ಅಶೋಕ. ಸೀತಾ ರಾಮ ಜೀ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Exit mobile version