ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK SEASON 10) 9ನೇ ವಾರ ಕಾರ್ತಿಕ್ ಅವರಿಗೆ ʻಕಳಪೆʼ ಪಟ್ಟ ಸಿಕ್ಕು ಜೈಲು ಸೇರಿದರೆ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ಉತ್ತಮ ಆಟಗಾರರಾಗಿ ಹೊರಹೊಮ್ಮಿದ್ದಾರೆ. ವಿಶೇಷ ಎಂದರೆ ಈ ವಾರ ವರ್ತೂರ್ ಸಂತೋಷ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇದೀಗ ಕಾರ್ತಿಕ್ ಮನೆಯ ಕಳಪೆಯಾಗಿದ್ದು ಸ್ಪರ್ಧಿಗಳ ನಿರ್ಧಾರ ಸರಿಯಲ್ಲ ಎಂದು ವೀಕ್ಷಕರು ಸೋಷಿಯಲ್ ಮೀಡಿಯಾ ಮೂಲಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ʻಚೇರ್ ಆಫ್ ಥಾರ್ನ್ಸ್’ ಆಟದಲ್ಲಿ ಹೆಚ್ಚು ಟಾರ್ಗೆಟ್‌ಗೆ ಒಳಗಾಗಿ ಕಡೆಯವರೆಗೂ ಕೂತ ಕಾರಣಕ್ಕೆ ಪವಿ ಪೂವಪ್ಪ ಅವರಿಗೆ ನಮ್ರತಾ, ಸ್ನೇಹಿತ್, ತುಕಾಲಿ ಸಂತು, ವರ್ತೂರು ಸಂತೋಷ್ ಅವರು ‘ಉತ್ತಮ’ ನೀಡಿದರು. ಅವಿನಾಶ್ ಶೆಟ್ಟಿ ಅವರು ಎರಡು ಪಾತ್ರಗಳಲ್ಲಿ ಮನೆಯನ್ನು ರಂಜಿಸಿದ ಕಾರಣಕ್ಕೆ ಸಿರಿ, ಕಾರ್ತಿಕ್, ಮೈಕಲ್, ವಿನಯ್ ‘ಉತ್ತಮ’ ಕೊಟ್ಟರು. ಸಂಗೀತಾ ಗಾಯಗೊಂಡು ಹೊರಗೆ ಹೋಗಿದ್ದ ಕಾರಣ ಎಲ್ಲರ ಗುರಿ ಕಾರ್ತಿಕ್ ಆದರು ಎಂಬುದಂತೂ ಸತ್ಯ.
ಪವಿ ಪೂವಪ್ಪ ಪ್ರಕಾರ ಮೈಕಲ್ ಉತ್ತಮ, ಅವಿನಾಶ್ ಶೆಟ್ಟಿ ಪ್ರಕಾರ ಸಿರಿ ಉತ್ತಮ, ತನಿಷಾ ಪ್ರಕಾರ ವರ್ತೂರು ಸಂತೋಷ್ ಬೆಸ್ಟ್ ಪರ್ಫಾಮೆನ್ಸ್ ನೀಡಿದರು. ವಿನಯ್ ಅವರಂತೂ, ‘ಈ ವಾರ ಖಂಡಿತವಾಗಿಯೂ ನೀನು ಕಳಪೆ ಪಟ್ಟಕ್ಕೆ ಅರ್ಹ’ ಎಂದು ನೇರವಾಗಿ ಹೇಳಿಯೇ ಕಳಪೆ ಪಟ್ಟ ನೀಡಿದ್ದಾರೆ. ಅದನ್ನು ಕಾರ್ತಿಕ್ ಕೈಮುಗಿದು ನಗುನಗುತ್ತಲೇ ಸ್ವೀಕರಿಸಿದ್ದಾರೆ ಸಹ.
ಸಿರಿ, ಕಾರ್ತಿಕ್, ತನಿಷಾ.. ಸ್ನೇಹಿತ್‌ರನ್ನ ‘ಕಳಪೆ’ ಎಂದರು, ಸಿರಿ, ಕಾರ್ತಿಕ್, ತನಿಷಾ.. ಸ್ನೇಹಿತ್‌ರನ್ನ ‘ಕಳಪೆ’ ಎಂದರು
ತುಕಾಲಿ ಸಂತು, ಅವಿನಾಶ್ ಶೆಟ್ಟಿ ಪ್ರಕಾರ ತನಿಷಾ ಕಳಪೆ. ಜೈಲು ಉಡುಗೆ ತೊಟ್ಟ ಕಾರ್ತಿಕ್, ‘ಕೃಷ್ಣ ಜನ್ಮಸ್ಥಾನಕ್ಕೆ ಹೋಗ್ತಿದೀನಪ್ಪಾ’ ಎಂದು ಹೇಳಿ ಜೈಲಿಗೆ ಸೇರಿದರು.
ಇದನ್ನೂ ಓದಿ: BBK SEASON 10: ನೀನು ʻಕಳಪೆʼ ಪಟ್ಟಕ್ಕೆ ಅರ್ಹ ಎಂದ ವಿನಯ್; ಜೈಲು ಸೇರಿದ ಕಾರ್ತಿಕ್!
ಈ ವಾರ ಸ್ನೇಹಿತ್ ಅವರಿಗೆ ಬಿಗ್ ಬಾಸ್ ದುಪಟ್ಟು ಅಧಿಕಾರವನ್ನು ನೀಡಿದ್ದರು, ನಾಮಿನೇಟ್ ಮಾಡುವ ಹಾಗೂ ಮನೆಯ ಕ್ಯಾಪ್ಟನ್ಸಿ ಟಾಸ್ಕ್ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವ, ಹೀಗೆ ಹಲವು ಜವಾಬ್ದಾರಿಯನ್ನು ನೀಡಿದ್ದರು. ಮೊದಲಿಗೆ ಸಂಗೀತಾ ಹಾಗೂ ಕಾರ್ತಿಕ್ರನ್ನು ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಆಚೆ ಇಟ್ಟರು, ಬಳಿಕ ತಮ್ಮದೇ ಗೆಳೆಯರಾದ ವಿನಯ್ ಹಾಗೂ ನಮ್ರತಾರನ್ನು ತೆಗೆದರು. ಇದು ನಮ್ರತಾಗೆ ತೀವ್ರ ಬೇಸರ ಮೂಡಿಸಿತು. ಬಳಿಕ ತನಿಷಾ, ಡ್ರೋಪ್ ಪ್ರತಾಪ್, ತುಕಾಲಿ ಸಂತು, ಪವಿ ಅವರುಗಳನ್ನು ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಹೊರತೆಗೆದರು. ಸಿರಿ, ಅವಿನಾಶ್, ಮೈಖಲ್, ವರ್ತೂರು ಸಂತೋಷ್ ನಡುವೆ ಟಾಸ್ಕ್ ನಡೆಯಿತು. ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ಜಯಭೇರಿಯಾಗಿ ಕ್ಯಾಪ್ಟನ್ ಆದರು.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ