Site icon Vistara News

BBK SEASON 10: ‘ಬಕೆಟ್‌’ ಎಂದ ಸಂಗೀತಾ; ತಲೆಗೆ ಸುತ್ತಿಗೆಯಿಂದ ಹೊಡೆದ ಕಾರ್ತಿಕ್‌!

Karthik challenge To sangeetha bigg boss Kannada Seson 10

ಬೆಂಗಳೂರು: ಬಿಗ್‌ಬಾಸ್ ಸೀಸನ್‌ 10 (BBK SEASON 10) ದಿನದಿಂದ ದಿನಕ್ಕೆ ಕಷ್ಟದ ದಾರಿಯಲ್ಲಿ ಸಾಗುತ್ತಿದೆ. ಮನೆಯೊಳಗಿನ ಸ್ಪರ್ಧಿಗಳಿಗೆ ಪ್ರತಿ ವಾರವೂ ಹೊಸ ಹೊಸ ಚಾಲೆಂಜ್‌ಗಳು ಎದುರಾಗುತ್ತಿವೆ. ಇಂದಿದ್ದ ಹಾಗೆ ನಾಳೆ ಇಲ್ಲ. ಈ ಮನೆಯೊಳಗೆ ಯಾರೂ ಸ್ನೇಹಿತರೂ ಅಲ್ಲ, ಯಾರೂ ಶತ್ರುಗಳೂ ಅಲ್ಲ ಎಂಬುದು ಸತ್ಯವಾಗುತ್ತಿದೆ.
ಅದನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡುವಂಥ ಚಟುವಟಿಕೆಯನ್ನು ಕಿಚ್ಚ ‘ಸೂಪರ್‍ ಸಂಡೆ ವಿತ್ ಸುದೀಪ್‌’ ಎಪಿಸೋಡಿನಲ್ಲಿ ಮಾಡಿಸಿದ್ದಾರೆ. ಆ ಚಟುವಟಿಕೆಯ ಝಲಕ್‌ ಜಿಯೋ ಸಿನಿಮಾದಲ್ಲಿ ಬಿಡುಗಡೆಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ಒಂದು ಬೆರ್ಚಪ್ಪನನ್ನು ನಿಲ್ಲಿಸಲಾಗಿದೆ. ಅದರ ಮೇಲೆ ಒಂದು ಮಡಿಕೆ ಇದೆ. ಅದರ ಮೇಲೆ ಸದಸ್ಯರು ಒಬ್ಬರ ಫೋಟೊ ಹಾಕಿ, ಯಾವ ವಿಚಾರಕ್ಕೆ ಅವರ ಮೇಲೆ ಕೋಪ ಇದೆ ಎಂಬುದನ್ನು ಹೇಳಿ ಆಮೇಲೆ ಆ ಮಡಿಕೆಯನ್ನು ಒಡೆಯಬೇಕು.

ಈ ಚಟುವಟಿಕೆ ಮನೆಯೊಳಗಿನ ಸಮತೋಲವನ್ನು ಒಮ್ಮೆ ಕದಡುವುದಂತೂ ಖಚಿತ. ಎಲ್ಲರೂ ಊಹಿಸುವಂತೆ ವಿನಯ್‌, ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಸಂಗೀತಾ ಕೂಡ ವಿನಯ್ ಫೋಟೊ ಇಟ್ಟು ಮಡಿಕೆ ಒಡೆದಿದ್ದಾರೆ. ಆದರೆ ಈ ನಡುವೆ ಇನ್ನೊಂದು ಶಾಕಿಂಗ್ ಆಯ್ಕೆ ನಡೆದಿದೆ. ಅದು ಕಾರ್ತಿಕ್ ಅವರದ್ದು. ಕಾರ್ತಿಕ್ ಮಡಿಕೆಯ ಮೇಲಿಟ್ಟಿದ್ದು ಸಂಗೀತಾ ಫೋಟೊವನ್ನು!

ಸದಾಕಾಲ ನನ್ನ ಫ್ರೆಂಡ್‌ ಎಂದೇ ಹೇಳಿಕೊಂಡು ಬಂದಿದ್ದ ಕಾರ್ತಿಕ್, ಹಲವು ಸಂದರ್ಭಗಳಲ್ಲಿ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದರು ಕೂಡ. ಆದರೆ ಹಿಂದಿನ ವಾರದದಲ್ಲಿ ಪ್ರತಾಪ್ ಜತೆ ಮಾತನಾಡುತ್ತ, ‘ಕಾರ್ತಿಕ್‌ ಬಕೆಟ್ ಹಿಡಿತಿದಾರೆ ಅನಿಸ್ತಿಲ್ವಾ?’ ಎಂದು ಸಂಗೀತಾ ಹೇಳಿದ್ದು ಅವರಿಗೆ ನೋವನ್ನುಂಟು ಮಾಡಿದೆ. ಹಾಗೆಯೇ ‘ಕಾರ್ತಿಕ್ ಅವರಿಂದ ಸಂಗೀತಾರನ್ನು ಮೈನಸ್ ಮಾಡಿದ್ರೆ ಜೀರೊ ಬರುತ್ತದೆ’ ಎಂದಿರುವುದೂ ಅವರಿಗೆ ಅಸಮಧಾನವನ್ನುಂಟು ಮಾಡಿದೆ.

ಇದನ್ನೂ ಓದಿ: BBK SEASON 10: ಸಿರಿಗೆ ಸಿಕ್ಕಿತು ವಿಶೇಷ ಅಧಿಕಾರ; ಮನೆಮಂದಿಗೆ ಗ್ರಹಚಾರ ಬಿಡಿಸಿದ ಕಿಚ್ಚ!

ಇದೆಲ್ಲ ಕಾರಣ ಕೊಟ್ಟು ಸಂಗೀತಾ ಫೋಟೊ ಇಟ್ಟು ಮಡಿಕೆ ಒಡೆದಿರುವ ಕಾರ್ತಿಕ್, ‘ನನ್ನಿಂದ ಸಂಗೀತಾರನ್ನು ಮೈನಸ್ ಮಾಡಿದ್ದೇನೆ. ನಾನು ಜಿರೊ ಅನ್ನುವುದನ್ನು ಪ್ರೂವ್ ಮಾಡಲಿ’ ಎಂದು ಸವಾಲು ಬೇರೆ ಹಾಕಿದ್ದಾರೆ.
ಇದು ಮುಂದಿನ ವಾರದ ಟಾಸ್ಕ್‌ಗಳು ಇನ್ನಷ್ಟು ಟಫ್‌ ಆಗುವುದರ ಸೂಚನೆಯಂತೂ ಹೌದು. ಮನೆಯ ಸಮತೋಲಗಳು ಏರುಪೇರಾದಾಗ ಏನಾಗುತ್ತದೆ? ಯಾರು ಮುನ್ನಲೆಗೆ ಬರುತ್ತಾರೆ? ಯಾರು ಹಿನ್ನೆಲೆಗೆ ಸರಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version