Site icon Vistara News

BBK SEASON 10: ಕ್ಯಾಪ್ಟನ್‌ ಆದ ಕಾರ್ತಿಕ್‌; ಕುಣಿದು ಕುಪ್ಪಳಿಸಿದ ಸಂಗೀತಾ!

Karthik mahesh as the captain Sangithaa who danced

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಆರನೇ ವಾರ ಕಾರ್ತಿಕ್‌ ಅವರು ಮನೆಯ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದರು. ಕಾರ್ತಿಕ್ ಮಹೇಶ್‌ ಪ್ರತಿ ವಾರ ನಾಮಿನೇಟ್ ಆಗಿದ್ದರು. ಈ ವಾರಾಂತ್ಯದ ಎಲಿಮಿನೇಷನ್‌ನಲ್ಲಿ ಕಾರ್ತಿಕ್ ಮಹೇಶ್ ಸೇಫ್‌ ಆದರೆ ಮುಂದಿನ ವಾರದ ನಾಮಿನೇಷನ್‌ನಲ್ಲಿ ಕ್ಯಾಪ್ಟನ್ ಕಾರ್ತಿಕ್ ಮಹೇಶ್ ಸೇಫ್ ಆಗಲಿದ್ದಾರೆ. ಕಾರ್ತಿಕ್ ಕ್ಯಾಪ್ಟನ್ ಅಗಿದ್ದಕ್ಕೆ ಸಂಗೀತಾ ಖುಷಿಯಿಂದ ಕುಣಿದಾಡಿದ್ದಾರೆ. ತನಿಷಾ ಕುಪ್ಪಂಡ ಕೂಡ ಸಂತಸ ಹೊರಹಾಕಿದ್ದಾರೆ.

ಕ್ಯಾಪ್ಟನ್ಸಿ ಜಟಾಪಟಿ

ವೀಕೆಂಡ್ ಬಂತು ಅಂದ್ರೆ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿ ಬಿಗ್‌ಬಾಸ್‌ ಮನೆಯಲ್ಲಿ ಏರಲು ಶುರುವಾಗುತ್ತದೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರು ಭಾಗವಹಿಸಬೇಕು? ಯಾರು ಯಾರನ್ನು ಸಪೋರ್ಟ್‌ ಮಾಡಬೇಕು? ಲೆಕ್ಕಾಚಾರ ಹೇಗಿರಬೇಕು ಇವೆಲ್ಲ ಚರ್ಚೆಗಳಲ್ಲಿಯೇ ಸ್ಫರ್ಧಿಗಳು ತಲ್ಲೀನರಾಗುತ್ತಿದ್ದರು. ಆದರೆ ಈ ಸಲ ಕ್ಯಾಪ್ಟನ್ಸಿ ಟಾಸ್ಕ್‌ಗೆ ಬಿಗ್‌ಬಾಸ್ ಒಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದರು. ಕ್ಯಾಪ್ಟನ್ಸಿ ಟಾಸ್ಕ್‌ ಯಾವ ಐದು ಸ್ಪರ್ಧಿಗಳು ಆಡಬೇಕು ಎಂದು ನೀವೇ ನಿರ್ಧರಿಸಿಕೊಳ್ಳಿ ಎಂದು ಹೇಳಿದ್ದಾರೆ! ನಮ್ರತಾ, ಸಿರಿ, ಕಾರ್ತಿಕ್, ಪ್ರತಾಪ್, ವರ್ತೂರು ಈ ಐವರು ಕ್ಯಾಪ್ಟನ್ಸಿ ಆಡಬೇಕು ಎಂದು ಮನೆಯ ಸದಸ್ಯರು ವೋಟಿಂಗ್ ಮೂಲಕ ಆರಿಸಿದ್ದಾರೆ. ಆದರೆ ತುಕಾಲಿ ಸಂತೋಷ್ ಅವರಿಗೆ ಈ ವೋಟಿಂಗ್‌ ಬಗ್ಗೆ ಆಕ್ಷೇಪವಿತ್ತು. ‘ಕರೆಕ್ಟಾಗಿ ವೋಟಿಂಗ್ ಆಗಿಲ್ಲ. ನಾವೂ ಭಾಗವಹಿಸಬೇಕು ಎಂದು ನಮಗೆ ಇರುತ್ತದೆ’ ಎಂದು ಅವರು ತಗಾದೆ ತೆಗೆದರು. ವಿನಯ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿ, ‘ನೀವು ಆಡಿರುವುದು ಒಂದೇ ಟಾಸ್ಕ್‌’ ಎಂದು ಚುಚ್ಚಿದ್ದಾರೆ. ತುಕಾಲಿ ಅವರು ಇದರಿಂದ ಸಿಟ್ಟಿಗೆದ್ದು, ‘ಒಂದೇ ಟಾಸ್ಕ್‌ನಲ್ಲಿ ನನ್ನ ನಾನು ಪ್ರೂವ್ ಮಾಡಿಕೊಂಡಿದ್ದೀನಿ’ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಮಾತಿನ ಜಟಾಪಟಿಯೂ ನಡೆದಿದೆ. ಬಳಿಕ ತುಕಾಲಿ ಅವರು ಕಣಕ್ಕೆ ಇಳಿದರು.

ಇದನ್ನೂ ಓದಿ: BBK Season 10: ಮತ್ತೆ ಹೆಚ್ಚಿದೆ ಬಿಗ್‌ ಬಾಸ್‌ ಟಿಆರ್‌ಪಿ; ಹಳೆಯ ರೆಕಾರ್ಡ್ ಎಲ್ಲ ಪುಡಿ ಪುಡಿ!

ಕ್ಯಾಪ್ಟನ್ ಆಗಲು ಕ್ಯಾಪ್ಟನ್‌ ರೇಸ್‌ನಲ್ಲಿ ಡ್ರೋನ್ ಪ್ರತಾಪ್, ನಮ್ರತಾ, ಕಾರ್ತಿಕ್ ಮಹೇಶ್, ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್‌ ಇದ್ದರು. ಐದೂ ಮಂದಿಗೆ ಬುದ್ಧಿ ಉಪಯೋಗಿಸಿ ಆಡುವ ಚಟುವಟಿಕೆಯನ್ನ ‘ಬಿಗ್ ಬಾಸ್’ ನೀಡಿದ್ದರು. ಒಂದೇ ಆಕಾರ ಮರದ ತುಂಡುಗಳು ಒಂದೇ ಕಡೆ ಬರುವಂತೆ ಜೋಡಿಸಬೇಕಿತ್ತು. ಇದರಲ್ಲಿ ವೇಗವಾಗಿ ಮುಗಿಸಿ ಕ್ಯಾಪ್ಟನ್ ಆದವರು ಕಾರ್ತಿಕ್ ಮಹೇಶ್. ಡ್ರೋನ್ ಪ್ರತಾಪ್‌, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತು ಇನ್ನೇನು ಕಂಪ್ಲೀಟ್‌ ಆಗುವ ಹಂತದಲ್ಲಿದ್ದರು.

ಕುಣಿದು ಕುಪ್ಪಳಿಸಿದ ಸಂಗೀತಾ

ಕಾರ್ತಿಕ್‌ ವಿನ್‌ ಆಗುತ್ತಿದ್ದಂತೆ ಸಂಗೀತಾ ಸಂತಸದಿಂದ ಕುಣಿದಿದ್ದಾರೆ. ತನಿಷಾ ಕೂಡ ಸಂತಸ ಹೊರ ಹಾಕಿದರು. ಮಾತ್ರವಲ್ಲ ಕ್ಯಾಪ್ಟನ್‌ ರೂಮ್‌ಗೆ ಕಳುಹಿಸಿದ್ದಾರೆ ಸಂಗೀತಾ. ಕಾರ್ತಿಕ್ ಮಹೇಶ್ ಅವರ ಲಕ್ಕಿ ನಂಬರ್‌ ಏಳು. ಹುಟ್ಟಿದ ದಿನ ಏಳು. ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟ ದಿನ ಏಳು. ಈಗ ಏಳನೇ ವಾರಕ್ಕೆ ಕಾರ್ತಿಕ್ ಮಹೇಶ್ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ಆದ ಕಾರ್ತಿಕ್ ಮಹೇಶ್‌ಗೆ ಫ್ಯಾಮಿಲಿ ಫೋಟೊ ಸಿಕ್ಕಿತು. ನಮ್ರತಾ ಕೂಡ ಇದರಲ್ಲಿ ಮಿಸ್‌ ಆಗಿದ್ದಕ್ಕೆ ಅತ್ತರು. ಅಸಹ್ಯವಾಗುತ್ತಿದೆ. ಜನ ತುಂಬಾ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಎಂದು ನಮ್ರತಾ ಕಣ್ಣೀರಿಟ್ಟರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version