Site icon Vistara News

Karthik Mahesh: ಈ ಬಾರಿಯ ʻಬಿಗ್‌ ಬಾಸ್‌ʼ ಸೀಸನ್‌ ʻವಿನ್ನರ್‌ʼ ಕಾರ್ತಿಕ್‌; ಸುಳಿವು ಬಿಟ್ಟು ಕೊಟ್ರಾ ಸುದೀಪ್‌?

Karthik Mahesh bigg boss Season 10 winner Sudeep left a hint

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ಫಿನಾಲೆ ಜ.27ರಂದು ನಡೆದಿದೆ. ಇಂದು ಕೂಡ ಕಾರ್ಯಕ್ರಮ ಮುಂದುವರಿಯಲಿದೆ. ಆರು ಸ್ಪರ್ಧಿಗಳಲ್ಲಿ ತುಕಾಲಿ ಸಂತೋಷ್‌ ಮನೆಯಿಂದ ಹೊರ ಬಂದಿದ್ದಾರೆ. ಇದಕ್ಕೂ ಮುನ್ನ ಶನಿವಾರದ ಸಂಚಿಕೆಯಲ್ಲಿ ಸುದೀಪ್‌ ಅವರು ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದುನ್ನು ಸುಳಿವು ನೀಡಿದ್ದಾರೆ. ಸಂಚಿಕೆ ಮುಗಿದ ಬಳಿಕ ಈ ಬಾರಿ ಕಾರ್ತಿಕ್‌ ವಿನ್ನರ್‌ (karthik mahesh) ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಈಗಾಗಲೇ ವಿನಯ್ ಗೌಡ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಸಂಗೀತಾ ಶೃಂಗೇರಿ ರನ್ನರ್‌ ಅಪ್‌ ಆದರೆ, ಟ್ರೋಫಿಯನ್ನು ಕಾರ್ತಿಕ್ ಅವರೇ ಗೆಲ್ಲುತ್ತಾರೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ಅವರ ಒಂದು ಕೈಯಲ್ಲಿ ಕಾರ್ತಿಕ್ ಕೈ ಇರುತ್ತದೆ. ಮತ್ತೊಂದು ಕೈಯಲ್ಲಿ ಸಂಗೀತಾ ಶೃಂಗೇರಿ ಕೈ ಇರುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ. ಶನಿವಾರದ ಸಂಚಿಕೆಯಲ್ಲಿ ಕಾರ್ತಿಕ್‌ ಅವರು ಭಾವುಕರಾದರು. ಜನರ ಪ್ರೀತಿಯನ್ನು ನಾನು ಸಿನಿಮಾ ಮೂಲಕ ವ್ಯಕ್ತಪಡಿಸುತ್ತೇನೆ ಎಂದರು. ಆಗ ಕಿಚ್ಚ ಸುದೀಪ್‌ ಅವರ ಮಾತು ಸಖತ್‌ ಕ್ರೇಜ್‌ ಹುಟ್ಟುಹಾಕಿದೆ.

ಇದನ್ನೂ ಓದಿ: BBK SEASON 10: ʻಬಿಗ್‌ಬಾಸ್‌ʼ ಮನೆಯಲ್ಲಿ ಕಾರ್ತಿಕ್‌ ರಾಜಕೀಯ; ಬಕೆಟ್ ಹಿಡಿತಿದಾರೆ ಅಂದ್ರು ಸಂಗೀತಾ!

ʻʻಕಾರ್ತಿಕ್ ಅವರೇ ಅಳಬೇಡಿ, ಕೂಲ್ ಆಗಿಯೇ ಇದ್ದು ಬಿಡಿ. ಹೊರಗಡೆ ಬಂದ ಮೇಲೆ ಜನರು ನಿಮಗೆ ತೋರಿದ ಪ್ರೀತಿಯನ್ನ ಸ್ವೀಕರಿಸಿ, ಹಾಗೇನೆ ಎಂಜಾಯ್ ಮಾಡಿ, ಪಾರ್ಟಿ ಮಾಡಿ” ಎಂದು ಹೇಳಿದ್ದಾರೆ. ಈ ಮಾತು ಅವರ ಅಭಿಮಾನಿಗಳಿಗೆ ಕಾರ್ತಿಕ್ ಟ್ರೋಫಿ ಗೆಲ್ಲುತ್ತಾರೆ ಎಂಬ ಭರವಸೆ ಮೂಡಿಸಿದೆ. ವೋಟಿಂಗ್‌ನಲ್ಲಿ ಯಾರು ಹೆಚ್ಚು ಮತ ಪಡೆದಿದ್ದಾರೆ ಎಂಬುದು ಭಾನುವಾರ ಸುದೀಪ್ ಬಹಿರಂಗ ಮಾಡಲಿದ್ದಾರೆ.

ಟಾಸ್ಕ್‌ಗಳಲ್ಲಿ ಕಾರ್ತಿಕ್‌ ಮಹೇಶ್ ಉತ್ತಮ ಪ್ರದರ್ಶನ ಕೊಟ್ಟಿದ್ದಾರೆ. ಅವಕಾಶ ಸಿಕ್ಕಾಗೆಲ್ಲಾ ಟಾಸ್ಕ್‌ಗಳಲ್ಲಿ ಕಾರ್ತಿಕ್‌ ಚೆನ್ನಾಗಿ ಪರ್ಫಾಮ್ ಮಾಡಿದ್ದಾರೆ. ಹಾಡು, ಡ್ಯಾನ್ಸ್ ಹಾಗೂ ಸ್ಕಿಟ್‌ಗಳ ಮೂಲಕ ಕಾರ್ತಿಕ್‌ ವೀಕ್ಷಕರಿಗೆ ಮನರಂಜನೆ ಕೊಟ್ಟಿದ್ದಾರೆ. ‘ಬಿಗ್ ಬಾಸ್‌’ ವೇದಿಕೆಯನ್ನ ಕಾರ್ತಿಕ್‌ ಉತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ತಮ್ಮ ಅಭಿಮಾನಿ ಬಳಗವನ್ನ ಹೆಚ್ಚಿಸಿಕೊಂಡಿದ್ದಾರೆ.

Exit mobile version