Site icon Vistara News

BBK Season 10: ಮನೆಯಲ್ಲಿ ಕಾರ್ತಿಕ್‌ ಕೂಗಾಟ; ಗಳಗಳನೆ ಅತ್ತ ಸಂಗೀತಾ!

Karthik Mahesh shouts at home cry by sangeetha

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಕ್ಯಾಪ್ಟನ್‌ ಕಾರ್ತಿಕ್‌ ಅವರು ಮನೆಯಲ್ಲಿ ಕೂಗಾಡಿದ್ದಾರೆ. ಮಾತ್ರವಲ್ಲ ಸಂಗೀತಾ ಅವರು ಗಳಗಳನೇ ಅತ್ತಿದ್ದಾರೆ. ಇದೆಲ್ಲ ಆಗಿದ್ದು ಮನೆಯಲ್ಲಿ ಊಟದ ವಿಚಾರಕ್ಕೆ . ಆದರೆ ಕಾರ್ತಿಕ್‌ ಬೈದಿದ್ದು ಮಾತ್ರ ಸ್ನೇಹಿತ್‌ಗೆ. ಆದರೆ ಅತ್ತಿದ್ದು ಸಂಗೀತಾ. ಸ್ನೇಹಿತ್‌ ಸ್ವಲ್ಪ ಜಾಸ್ತಿ ಅನ್ನ ಬಡಿಸಿಕೊಂಡರು. ಎಲ್ಲರಿಗೂ ಅನ್ನ ಸಾಲಲ್ಲ ಎಂದು ಗಮನಿಸಿದ ಕ್ಯಾಪ್ಟನ್ ಕಾರ್ತಿಕ್ ಕೂಗಾಡಿದರು.

ಅನ್ನ ಖಾಲಿನಾ? ಎಂದು ಕಾರ್ತಿಕ್‌ ಅವರು ಮನೆಯಲ್ಲಿ ಕೇಳಿದರು. ಸಿರಿ ಮಾತನಾಡಿ ʻʻಇಷ್ಟೇ ಇರೋದು ಈಗ.. ಯಾರ್ಯಾರು ಇದ್ದಾರೋ ಇನ್ನೂ ಇಷ್ಟರಲ್ಲೇ ತಿನ್ನಬೇಕುʼʼ ಎಂದರು. ಸ್ನೇಹಿತ್‌ ಸ್ವಲ್ಪ ಜಾಸ್ತಿ ಬಡಿಸಿಕೊಂಡರು. ಕಾರ್ತಿಕ್‌ಗೆ ಕೋಪ ನೆತ್ತಿಗೆ ಏರಿತು. ಕಾರ್ತಿಕ್ ಮಾತನಾಡಿ ʻʻಏನಿದು? ತಲೆಯಲ್ಲಿ ಇರಬೇಕು. ಏನಾದರೂ ಮಾಡಲಿ.. ಎಷ್ಟಾದರೂ ಟಾಸ್ಕ್ ಇರಲಿ.. ಎಲ್ಲರೂ ಊಟ ಮಾಡಬೇಕು ಅನ್ನೋದು ತಲೆಯಲ್ಲಿ ಇರಬೇಕು. ಎಲ್ಲಿ ಸಾಲುತ್ತೆ? ಯಾರಾದರೂ ಒಬ್ಬರು ಹೊಟ್ಟೆ ತುಂಬಿಸಿಕೊಳ್ಳಿ.. ನಾನು ಅಡುಗೆ ಮಾಡುವಾಗೆಲ್ಲಾ.. ಎಲ್ಲರಿಗೂ ಸಮಾನವಾಗಿ ಸಿಗಲಿ ಅಂತ ನನಗೆ ಕಮ್ಮಿ ಮಾಡಿಕೊಂಡು ಬಡಿಸುತ್ತೀನಲ್ವಾ.. ಇದು ನನಗೆ ಆಗಬೇಕುʼʼ ಎಂದು ಕೂಗಾಡಿದರು.

ಸ್ನೇಹಿತ್‌ ಕೂಡ ʻʻಕಾರ್ತಿಕ್ ಬನ್ನಿ.. ನಾನು ಅರ್ಧ ಕೊಡ್ತೀನಿʼʼ ಎಂದರು. ಕಾರ್ತಿಕ್‌ ಮತ್ತೆ ಕೂಗಾಡಿ ʻʻಸ್ನೇಹಿತ್ ಹಾಕಿಕೊಳ್ಳುವ ಮುನ್ನ ಯೋಚನೆ ಮಾಡಬೇಕಿತ್ತು . ಮನೆಯಲ್ಲಿರುವ ಎಲ್ಲರಿಗೂ ಊಟ ಸರಿಹೋಗಬೇಕು ಅಂತ ಯೋಚನೆ ಮಾಡಿಬಿಟ್ಟು ಹಾಕೋಬೇಕು. ನಾನು ಯಾರಿಗಾದರೂ ಹೆಚ್ಚು, ಕಮ್ಮಿ ಬಡಿಸಿದ್ದೀನಾ? ಇಲ್ಲ ತಾನೇ? ಎಂದರು.

ಇದನ್ನೂ ಓದಿ: BBK Season 10: ಬೇಗ ಮಗು ಮಾಡ್ಕೊ ತುಕಾಲಿ ಅಂದಿದ್ಯಾಕೆ ಬ್ರಹ್ಮಾಂಡ ಗುರೂಜಿ? ಕಾರ್ತಿಕ್‌ಗೆ 2 ಮದುವೆ ಯೋಗ!

ಅತ್ತ ಸಂಗೀತಾ ಅವರು ತನಗೇ ಕಾರ್ತಿಕ್‌ ಹೇಳುತ್ತಿದ್ದಾರೆ ಎಂದು ಭಾವಿಸಿ ʻʻʻನನಗೆ ಹೊಟ್ಟೆ ಹಸಿದಿತ್ತು. ನಾನಿನ್ನೂ ಊಟ ಬಾಯಿಗೆ ಹಾಕಿರಲಿಲ್ಲ. ಯಾರಾದರೂ ಅನ್ನದ ಬಗ್ಗೆ ಹಾಗೆ ಮಾತನಾಡುತ್ತಾರಾ? ನನಗೇನೂ ಬೇಡ. ನನಗೆ ಇಲ್ಲಿ ಬಂದಿದ್ದೇ ಸಾಕಾಗಿದೆ. ಊಟಕ್ಕೋಸ್ಕರ ಇಷ್ಟು ಮಾತಾಡ್ತೀವಿ ಅಂದರೆ ನಾವು ದುಡಿಯೋದೇ ತಿನ್ನೋಕೆ. ತಿನ್ನಲು ಈಗ ಮನಸ್ಸಿಲ್ಲ. ತಟ್ಟೆಗೆ ಹಾಕೊಂಡಿರುವಾಗ ಜಾಸ್ತಿ ಹಾಕೊಂಡಿದ್ದೀರಾ ಅಂದರೆ ಬೇಜಾರಾಗಲ್ವಾ? ಇಲ್ಲಿ ಎಷ್ಟು ದಿನ ಇರ್ತೀನೋ.. ಅಷ್ಟು ದಿನ ಬರೀ ಹಣ್ಣು ತಿಂದು ಇರುತ್ತೇನೆ. ತಿನ್ನುವಾಗ ಅವರು ಯಾಕೆ ಹೇಳಬೇಕು?’’ ಎಂದು ಹೇಳಿ ಸಂಗೀತಾ ಗಳಗಳನೆ ಅತ್ತುಬಿಟ್ಟರು. ನಮ್ರತಾ ಎಷ್ಟೇ ಸಮಾಧಾನ ಮಾಡಿದರೂ ಸುಮ್ಮನಾಗಿಲ್ಲ. ಅತ್ತ ಕಾರ್ತಿಕ್‌ ಕೂಡ ಅವರು ಮನಸ್ಸಿಗೆ ತಗೊಂಡರೆ ನಾನೇನೂ ಮಾಡೋಕೆ ಆಗಲ್ಲʼʼಎಂದು ಮನೆಮಂದಿ ಮುಂದೆ ಅಂದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ


Exit mobile version