Site icon Vistara News

BBK SEASON 10: ʻಉತ್ತಮʼ ಕಾರ್ತಿಕ್‌; ಜೈಲು ಸೇರಿ ಇನ್ನೊಂದು ಬಾಕಿ ಇದೆ ಎಂದು ಟಾರ್ಗೆಟ್‌ ತಿಳಿಸಿದ ಮೈಕಲ್‌!

karthik mahesh uttama michael ajay Kalape

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಬಿಗ್‌ ಬಾಸ್‌ ಮುಗಿಯುವ ಹಂತದಲ್ಲಿದೆ. ಅದಕ್ಕೂ ಮುಂಚೆ ಇದೇ ಮೊದಲ ಬಾರಿಗೆ ಮೈಕಲ್‌ ಅವರು ʻಕಳಪೆʼ ಪಟ್ಟ ಪಡೆದು ಜೈಲಿಗೆ ಸೇರಿದ್ದಾರೆ. ಹಾಗೇ ಕಾರ್ತಿಕ್‌ ಅಂತೂ ಹದಿಮೂರನೇ ವಾರಕ್ಕೆ ʻಉತ್ತಮʼ ಪಟ್ಟವನ್ನು ಪಡೆದಿದ್ದಾರೆ. ಈ ಬಾರಿ ಟಾಸ್ಕ್‌ಅನ್ನು ಚೆನ್ನಾಗಿ ನಿಭಾಯಿಸಿ ಹಣ ಗಳಿಕೆ ಮಾಡುವಲ್ಲಿ ಕಾರ್ತಿಕ್‌ ಗೆದ್ದಿದ್ದರು. ಈ ಕಾರಣದಿಂದಾಗಿ ನಮ್ರತಾ, ವಿನಯ್, ಸಂಗೀತಾ, ತನಿಷಾ, ತುಕಾಲಿ ಸಂತು ಹಾಗೂ ಮೈಕಲ್ ಅವರು ಕಾರ್ತಿಕ್‌ ಅವರಿಗೆ ʻಉತ್ತಮʼ ಕೊಟ್ಟರು. ʻಉತ್ತಮʼ ಪಟ್ಟಕ್ಕೆ ತುಕಾಲಿ ಸಂತುಗೆ ಕಾರ್ತಿಕ್ ವೋಟ್ ಮಾಡಿದರು.

ಈ ವಾರ ಮೈಕಲ್‌ ಅವರು ಅಷ್ಟಾಗಿ ನಿರೀಕ್ಷಿಸಿದ ಮಟ್ಟಕ್ಕೆ ಪರ್ಫಾಮೆನ್ಸ್ ಇರಲಿಲ್ಲ ಎಂಬುದು ಹಲವರ ಅಭಿಪ್ರಾಯ. ಮೈಕಲ್‌ಗೆ ತನಿಷಾ, ಸಂಗೀತಾ, ತುಕಾಲಿ ಸಂತು, ವರ್ತೂರು ಸಂತೋಷ್, ಸಂಗೀತಾ ‘ಕಳಪೆ’ ಪಟ್ಟ ನೀಡಿದರು. ವರ್ತೂರು ಸಂತೋಷ್ ಅವರನ್ನು ಕಾರ್ತಿಕ್, ನಮ್ರತಾ, ಮೈಕಲ್ ‘ಕಳಪೆ’ ಎಂದರು. ಇದಾದ ಬಳಿಕ ಕಾರ್ತಿಕ್‌ ಅವರು ಮನೆಯವರಿಗೆ ಉತ್ತಮ ನೀಡಿದ್ದಕ್ಕೆ ಧನ್ಯವಾದ ಸೂಚಿಸಿದರು.

ಇದನ್ನೂ ಓದಿ: BBK SEASON 10: ಯಾರಾಗ್ತಾರೆ ಈ ವಾರದ ಕಳಪೆ ಸ್ಪರ್ಧಿ? ಜೈಲಿಗೆ ಹೋಗ್ತಾರಾ ಮೈಕಲ್‌, ವರ್ತೂರ್‌?

ʻʻಕಿಚ್ಚನ ಚಪ್ಪಾಳೆ ಪಡೆಯಲಿ 9 ವಾರ ಬೇಕಾಯ್ತು, ಉತ್ತಮ ಪಡೆಯಲು 13ವಾರ ಬೇಕಾಯ್ತು. ಎಲ್ಲರಿಗೂ ಧನ್ಯವಾದಗಳು. ಈ ಮೆಡಲ್‌ನ ಕಳೆದ ತಿಂಗಳು ಹುಟ್ಟಿರುವ ನನ್ನ ಅಳಿಯನಿಗೆ ಡೆಡಿಕೇಟ್‌ ಮಾಡುತ್ತೇನೆʼʼಎಂದರು. ಅದೇ ರೀತಿ ಮೈಕಲ್‌ ಕೂಡ ಮಾತನಾಡಿ ʻʻಕಿಚ್ಚನ ಚಪ್ಪಾಳೆ ಆಯ್ತು. ಎರಡು ಬಾರಿ ಕ್ಯಾಪ್ಟನ್ ಆಗಿದ್ಧೀನಿ. ಹೊರಗಡೆ ಹೋಗಿ ಬಂದಿದ್ದೂ ಆಯ್ತು. ಉತ್ತಮ ಸಿಕ್ಕಿದೆ. ಉಳಿದಿರೋದು ಕಳಪೆ. ಈಗ ಅದೂ ಸಿಕ್ತು. ಇದಕ್ಕೂ ಮೇಲೆ ಒಂದು ಇದೆ. ಅದು ಯಾವಾಗ ಬರುತ್ತೆ ನೋಡೋಣ’’ ಎಂದು ಕಳಪೆ ಪಟ್ಟ ಪಡೆದ ಮೈಕಲ್ ಹೇಳಿದರು. ಈ ವಾರ ಐವರು ನಾಮಿನೇಟ್ ಆಗಿದ್ದು, ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಪ್ರತಾಪ್ ಅವರು ಅನಾರೋಗ್ಯ ಕಾರಣದಿಂದ ಮನೆಯಲ್ಲಿ ಎಲ್ಲಿಯೂ ಕಂಡು ಬಂದಿಲ್ಲ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version