Site icon Vistara News

BBK SEASON 10: ವೈಮನಸ್ಸಿಗೆ ಅಂತ್ಯ ಹಾಡಿದ ಕಾರ್ತಿಕ್‌-ಸಂಗೀತಾ! ಈ ಸ್ನೇಹ ಚಿರಕಾಲ ಹೀಗೇ ಇರಲಿ ಅಂದ್ರು ಫ್ಯಾನ್ಸ್‌!

Karthik-Sangeetha war end friendship be like this forever Fans React

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಆರಂಭದಲ್ಲಿ ಕಾರ್ತಿಕ್‌ ಹಾಗೂ ಸಂಗೀತಾ ಮಧ್ಯೆ ಒಳ್ಳೆಯ ಬಾಂಡಿಂಗ್ ಇತ್ತು. ಬರಬರುತ್ತ ಅವರ ಮಧ್ಯೆ ದೇಷ ಬೆಳೆದು ಒಬ್ಬರಿಗೊಬ್ಬರು ನಾಮಿನೇಟ್‌ ಮಾಡುಕೊಳ್ಳುತ್ತಲೇ ಇದ್ದರು. ಲೂಡೋ ಟಾಸ್ಕ್‌ನಲ್ಲಿ ಸಂಗೀತಾ ಅವರನ್ನು ಕಾರ್ತಿಕ್‌ , ತನಿಷಾ ಸೇಫ್‌ ಮಾಡಿಲ್ವೋ ಅಲ್ಲಿಂದ ಇಬ್ಬರ ಮಧ್ಯೆ ದ್ವೇಷದ ಬೆಂಕಿ ಹೆಚ್ಚಿತ್ತು. ಆದರೀಗ ಇಬ್ಬರ ಮಧ್ಯೆ ಮತ್ತೆ ಸ್ನೇಹ ಚಿಗುರಿದೆ. ಇಬ್ಬರೂ ಪರಸ್ಪರ ಉಡುಗೊರೆಯನ್ನೂ ಕೊಟ್ಟುಕೊಂಡಿದ್ದಾರೆ.

ಕಳೆದ ಸಂಚಿಕೆಯಲ್ಲಿ (ಜ.24) ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದ್ದರು. ʻʻನೀವು ಬೇಸರದಲ್ಲಿದ್ದಾಗ, ನಿಮ್ಮ ಭಾವನೆಗೆ ಬೆಲೆಕೊಟ್ಟು, ನಿಮ್ಮ ಕಣ್ಣೀರು ಒರೆಸುವ ಕೈಯಾಗಿ, ಮಾನಸಿಕವಾಗಿ ಕುಗ್ಗಿದ್ದಾಗ ಸ್ಫೂರ್ತಿದಾಯಕ ಮಾತುಗಳನ್ನಾಡಿ, ನಿಮ್ಮನ್ನು ಉತ್ತೇಜಿಸಿ, ನಿಮ್ಮ ಹೃದಯದಲ್ಲಿ ಎಂದೂ ಮರೆಯಲಾಗದ ಸ್ಥಾನವನ್ನು ಪಡೆದಿರಬಹುದು. ವಿಶೇಷ ಸ್ಥಾನ ಪಡೆದವರು ಯಾರುʼʼಎಂಬುದನ್ನು ಹೇಳಿಕೊಳ್ಳಿʼʼ ಎಂದು ಸೂಚಿಸಿದ್ದರು. ಆಗ ಸಂಗೀತಾ ಅವರು ಕಾರ್ತಿಕ್‌ ಹೆಸರನ್ನು ಹೇಳಿದರು. ವಿಶೇಷ ಜಾಗ ಪಡೆದಿರುವವರಿಗೆ ಪ್ರೀತಿಯಿಂದ ಪತ್ರ ಬರೆದು ವೈಯಕ್ತಿಕ ವಸ್ತುಗಳ ಪೈಕಿ ಒಂದನ್ನು ಉಡುಗೊರೆಯಾಗಿ ನೀಡಬೇಕಿತ್ತು.

ಕಾರ್ತಿಕ್‌ ಬರೆದಿದ್ದೇನು?

ಮೊದಲು ಕಾರ್ತಿಕ್‌ ಅವರು ಸಂಗೀತಾ ಅವರಿಗೆ ಪತ್ರ ಬರೆದು ʻʻನಮ್ಮಿಬ್ಬರ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. ಇದರಿಂದ ಜಗಳ ಆಗಿದೆ. ನನ್ನಿಂದ ಇನಿಗೆ ತುಂಬ ನೋವಾಗಿದೆ. ನಾವಿಬ್ಬರು ಕಳೆದ ಒಂದಿಷ್ಟು ನೆನಪುಗಳು ನನ್ನ ಮನಸ್ಸಿನಲ್ಲಿ ಉಳಿದಿದೆ. ಪ್ರೀತಿ ಇದ್ದ ಕಡೆ ಜಗಳ ಇರುತ್ತೆ. ಕ್ಷಮೆ ಕೇಳಿದ್ಮೇಲೆ ಸಾಧಿಸಿದ್ದು ನನ್ನ ತಪ್ಪು. ಈ ಸ್ನೇಹವನ್ನ ಉಳಿಸಿಕೊಳ್ಳಲು ನಾನು ಮತ್ತೊಮ್ಮೆ ಸೋಲಲು ಸಿದ್ಧನಿದ್ದೇನೆ. ನಿನ್ನಿಂದ ನಾನು ಬಯಸೋದು ಒಳ್ಳೆಯ ಮಾತು, ನಿನ್ನ ಮುಖದಲ್ಲಿ ನಗು. ಅಷ್ಟು ಸಾಕು. ಕ್ಷಮಿಸಿವುದು ಬಿಡುವುದು ನಿಮಗೆ ಬಿಟ್ಟಿದ್ದುʼʼಎಂದು ಬರೆದಿದ್ದರು.

ಇದನ್ನೂ ಓದಿ: BBK SEASON 10: ಹೆದರೋ ಕಾಲ ಹೋಯ್ತು; ʻವಿನಯ್‌ʼ ಏಟಿಗೆ ತಿರುಗೇಟು ಕೊಟ್ಟ ಪ್ರತಾಪ್!⁠⁠

ಸಂಗೀತಾ ಹೇಳಿದ್ದೇನು?

ಹಾಗೇ ಸಂಗೀತಾ ಅವರು ಕಾರ್ತಿಕ್‌ ಅವರಿಗೆ ಪತ್ರ ಬರೆದು ʻʻನಾನಿಲ್ಲಿ ಬಂದಾಗ 6 ಜನ ಒಟ್ಟಿಗೆ ಬಂದ್ವಿ. ಅದರಲ್ಲಿ 4 ಜನ ಇಲ್ಲಿ ಇದ್ದೇವೆ.ನಾವು ಜಗಳ ಆಡಿದಷ್ಟು ಹತ್ತಿರವಾಗುತ್ತಾ ಬಂದ್ವಿ. ಈಗಲೂ ನಾನು ನಿಮ್ಮನ್ನ ಹೇಟ್ ಮಾಡ್ತೀನಿ. ಆದರೆ, ನಾನು ಇಲ್ಲಿ ಕಳೆದ ಪ್ರತಿ ಕ್ಷಣ ಆ ಜಗಳ ಆಗುವವರೆಗೂ ದಿ ಮೋಸ್ಟ್ ಮೆಮೊರಬಲ್. ನಾನು ಜೈಲಿಗೆ ಹೋದಾಗ ನನ್ನ ಜತೆ ಇಡೀ ಹೊತ್ತು ಇದ್ರಿ. ನೀವು ಜೈಲಿಗೆ ಹೋದಾಗ ನಾನು ಅದನ್ನ ಮಾಡೋಕೆ ಆಗಲಿಲ್ಲ ಎಂಬ ಕೊರಗು ನನಗೆ ಇತ್ತು.ನಾನು, ನೀವು ತನಿಷಾ ಕಳೆದಿರುವ ಕ್ಷಣಗಳಿಗೆ ನಾನು ಗ್ರೇಟ್‌ಫುಲ್‌. ಒಮ್ಮೆ ಜಗಳ ಆದಾಗ ನನಗೆ ಆ ಲಿಪ್‌ಸ್ಟಿಕ್‌ನ ಕೊಟ್ರಿ. ಅದೇ ನಿಮಗೆ ಉಡುಗೊರೆಯಾಗಿ ಕೊಡ್ತೀನಿ. ಅದರ ಜತೆಗೆ ಈ ಜಾಕೆಟ್‌. ನಾನು ಕುಗ್ಗಿದ್ದಾಗ ನೀವು ಸಪೋರ್ಟ್‌ ಮಾಡಿದ್ರಿ. ನೀವಲ್ಲದೆ ನಾನಿವತ್ತು ಯಾರ ಹೆಸರನ್ನಾದರೂ ತಗೊಂಡಿದ್ದರೆ ನನಗೆ ನಾನು ನ್ಯಾಯ ಮಾಡುತ್ತಿರಲಿಲ್ಲ. ಈ ಪತ್ರವನ್ನ ನಾನು ಇನ್ಯಾರಿಗೇ ಬರೆದಿದ್ದರೂ, ಪಶ್ಚಾತ್ತಾಪ ಪಡುತ್ತಿದ್ದೆʼʼಎಂದು ಹೇಳಿಕೊಂಡಿದ್ದಾರೆ.

ನಿಮ್ಮ ಲೈಫ್‌ನಲ್ಲಿ ನಾನು ಶನಿ ಆಗಿದ್ದೀನಿ

ಇದೆಲ್ಲ ಆಗುವ ಮುಂಚೆ ಪಂಚಿಂಗ್‌ ಟಾಸ್ಕ್‌ನಲ್ಲಿ ಸಂಗೀತಾ ಹಾಗೂ ಕಾರ್ತಿಕ್‌ ಕೂಗಾಡಿದ್ದರು. ʻʻಈ ಮನೆಯಲ್ಲಿ ಫ್ರೆಂಡ್‌ಶಿಪ್‌ ಕ್ರಿಯೇಟ್ ಆಯ್ತು. ಅದರಲ್ಲಿ ನಾಮಿನೇಟ್ ಮಾಡಬೇಡಿ, ಸೇಫ್ ಮಾಡಿ ಅಂತ ನಾನು ಯಾವತ್ತೂ ಹೇಳಲಿಲ್ಲ. ಆದರೆ, ನಂಬಿಕೆ ಸಹಜ. ಲೂಡೋ ಟಾಸ್ಕ್ ಬಂದಾಗ ಅವಕಾಶ ಸಿಕ್ಕರೂ, ಸೇವ್ ಮಾಡಲಿಲ್ಲ. ಸೇಫ್ ಮಾಡಬೇಕು ಎಂಬ ಆಲೋಚನೆಯೂ ಬರಲಿಲ್ಲ. ನನ್ನ ಹೆಸರು ಬರಲೇ ಇಲ್ಲ ಅಂತ ವರ್ತೂರು ಸಂತೋಷ್ ಕೂಡ ಹೇಳಿದ್ದರು. ಆ ಕಾರಣಕ್ಕೆ ನಾನು ಸಿಟ್ಟಾಗಿದ್ದೆ. ಮತ್ತೊಂದು ಬಾರಿ ಫ್ರೆಂಡ್‌ಶಿಪ್ ಮಾಡಿದ್ರೆ, ಟ್ರಸ್ಟ್ ಬ್ರೇಕ್ ಮಾಡ್ತೀರಾ ಎಂಬ ಭಯ. ನಿಮ್ಮ ಲೈಫ್‌ನಲ್ಲಿ ನಾನು ಶನಿ ಆಗಿದ್ದೀನಿ. ಆಗ್ತೀನಿ. ಆಗಬೇಕು’’ ಎಂದಿದ್ದರು ಸಂಗೀತಾ.

ಇದನ್ನೂ ಓದಿ: BBK SEASON 10: ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ `ಬಿಗ್‌ಬಾಸ್‌’ ಸ್ಪರ್ಧಿಗಳು!

ಕಾರ್ತಿಕ್ ಇಲ್ಲ ಅಂದ್ರೆ ಸಂಗೀತಾ ಸೊನ್ನೆ

ಕಾರ್ತಿಕ್‌ ಕೂಡ ಸಂಗೀತಾ ಅವರಿಗೆ ʻʻಈ ಮುಸುಡಿಗೆ ಎರಡು ಗ್ಲೌಸ್ ಬೇಕಾಗಿಲ್ಲ. ಒಂದೇ ಸಾಕುಮೊದಲ ದಿನದಿಂದ ಫ್ರೆಂಡ್‌ಶಿಪ್‌ ಅಂತ ನಾಟಕ ಆಡಿಕೊಂಡು ಬಂದು, ಎಕ್ಸ್‌ಪೆಕ್ಟೇಷನ್ ಇಟ್ಟುಕೊಂಡು, ಅದಕ್ಕೆ ಫ್ರೆಂಡ್‌ಶಿಪ್‌ ಎಂಬ ಮುಖವಾಡ ಹಾಕಿಕೊಂಡು ಈ ಮನೆಯಲ್ಲಿ ಬದುಕ್ತಾ ಇರೋದು ಸಂಗೀತಾ. ನಾನು ಫ್ರೆಂಡ್‌ಶಿಪ್‌ನ ಬಳಸಿಕೊಂಡೆ ಅಂತಾರೆ. ನಾನಿಲ್ಲಿ ಫ್ರೆಂಡ್‌ಶಿಪ್‌ನ ಬಳಸಿ ಗೆಲ್ಲಿಸೋಕೆ ಬಂದಿಲ್ಲ. ಗೆಲ್ಲೋಕೆ ಬಂದಿದ್ದೀನಿ. ನಾನು ಕಪ್ ತಗೊಂಡು ಹೋಗೋಕೆ ಬಂದಿರೋದು. ಕಾರ್ತಿಕ್ ಇಲ್ಲ ಅಂದ್ರೆ ಸಂಗೀತಾ ಸೊನ್ನೆ’’ಎಂದು ತಿರುಗೇಟು ಕೊಟ್ಟಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version