ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ (BBK Season 10) ನಾಲ್ಕನೇ ವಾರ ಇಡೀ ಮನೆ ರಣರಂಗವಾಗಿದೆ. ಹಳ್ಳಿ ಬದುಕಿನಲ್ಲಿ ಟಾಸ್ಕ್ ಶುರುವಾಗಿದೆ, ಒಲೆಯೊಳಗಿನ ಬೆಂಕಿ ಕಿಡಿ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿದೆ. ಕುಚಿಕು ಫ್ರೆಂಡ್ಸ್ ತರ ಇದ್ದ ಕಾರ್ತಿಕ್ ಹಾಗೂ ವಿನಯ್ ನಡುವೆ ಅಸಭ್ಯ ಮಾತುಗಳು ಕೇಳಿ ಬಂದಿವೆ. ಈ ವೇಳೆ ಕಾರ್ತಿಕ್ ಮಹೇಶ್ ಅಸಭ್ಯ ಭಾಷೆ ಬಳಸಿದ್ದಾರೆ ಎಂದು ವಿನಯ್ ಗೌಡ ಗಂಭೀರವಾಗಿ ಆರೋಪಿಸಿದ್ದಾರೆ. ಕಾರ್ತಿಕ್ ಮಹೇಶ್, ‘’ಅಮ್ಮ, ಅಕ್ಕ ಅಂತ ಮಾತಾಡೋ ಮಗನೇ ಅಲ್ಲ ನಾನು. ಮಾತಾಡಿದ್ರೆ ಕಾಲಿಗೆ ಬೀಳ್ತೀನಿ’’ ಎಂದು ಸವಾಲು ಹಾಕಿದ್ದಾರೆ.
ಬಿಗ್‌ಬಾಸ್, ಮನೆಯೊಳಗಿನ ಸ್ಪರ್ಧಿಗಳಿಗೆ ಒಂದು ವಿಶಿಷ್ಟವಾದ ಟಾಸ್ಕ್ ಕೊಟ್ಟಿದ್ದರು. ಸದಸ್ಯರೆಲ್ಲರೂ ಎರಡು ಕುಟುಂಬಗಳಾಗಿ ವಿಭಾಗಗೊಂಡು ಹಳ್ಳಿ ಜೀವನವನ್ನು ನಡೆಸಬೇಕು. ಸಂಗೀತಾ ಮತ್ತು ವಿನಯ್ ಒಬ್ಬರೂ ಒಂದೊಂದು ಕುಟುಂಬದ ಮುಖ್ಯಸ್ಥರಾಗಬೇಕು ಎಂದು ಹೇಳಿದ್ದರು. ಅದರ ಪ್ರಕಾರವೇ ಟಾಸ್ಕ್ ಆರಂಭಗೊಂಡಿತ್ತು. ಪ್ರಾರಂಭದಲ್ಲಿ ಹಳ್ಳಿ ಸೊಗಡಿನ ಡೈಲಾಗ್ಸ್, ಪರಸ್ಪರ ಕಾಲೆಳೆದುಕೊಳ್ಳುವ ಖುಷಿಯೊಂದಿಗೇ ಟಾಸ್ಕ್ ಆರಂಭಗೊಂಡಿತ್ತು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿರುವಂತೆ ತೋರುತ್ತಿತ್ತು. ಆದರೆ ಯಾವಾಗ ಹಳ್ಳಿ ಬದುಕಿನಲ್ಲಿ ಟಾಸ್ಕ್ ಶುರುವಾಗಿದೆಯೋ, ಒಲೆಯೊಳಗಿನ ಬೆಂಕಿ ಕಿಡಿ ಎರಡೂ ಕುಟುಂಬಗಳ ನಡುವೆಯೂ ಹಬ್ಬಿಕೊಂಡಿತ್ತು.
ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್‌ನಲ್ಲಿ, ‘ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು’ ಎಂಬ ನಿಯಮವೇ ಈ ಚಕಮಕಿಗೆ ಕಾರಣಯ್ತು. ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿತ್ತು. ವಿನಯ್ ಮತ್ತು ಕಾರ್ತಿಕ್ ನಡುವಿನ ಜಿದ್ದಾಜಿದ್ದಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿತ್ತು.
ಮುಖ್ಯಸ್ಥರು ಅಥವಾ ಉಸ್ತುವಾರಿ ನಿರ್ವಹಿಸುವವರು ಮಣ್ಣಿನ ಮುದ್ದೆಗಳನ್ನ ಪಾಸ್ ಮಾಡುವ ಹಾಗಿರಲಿಲ್ಲ. ಮೊದಲು ಸಂಗೀತಾ ಒಂದು ಮಣ್ಣಿನ ಮುದ್ದೆಯನ್ನ ಪಾಸ್ ಮಾಡಿದರು. ಆನಂತರ ವಿನಯ್ ಮಣ್ಣಿನ ಮುದ್ದೆಯನ್ನ ಅವರ ಕೈಯಿಂದಲೇ ಹಿಡಿದು ಪಾಸ್ ಮಾಡಿದರು. ಈ ವೇಳೆ ಎಲ್ಲರೂ ರೊಚ್ಚಿಗೆದ್ದರು.
ವಿನಯ್ ಈ ವೇಳೆ ಕಾರ್ತಿಕ್‌ಗೆ ʻʻಗಂಡಸು ತರಹ ಆಡು.. ಬಳೆಗಳನ್ನ ಹಾಕಿಕೊಂಡು ಹೆಂಗಸು ತರಹ ಆಡೋದಲ್ಲ. ದೊಡ್ಡ ಗಂಡಸು ನನ್ಮಗನೇ.ʼʼ ಎಂದರು. ಸಂಗೀತಾ ಆಗ ವಿನಯ್‌ಗೆ ʻʻಬಳೆ ಹಾಕೊಂಡ್ಬಿಟ್ಟರೆ ಎಂದರೆ ಏನರ್ಥ? ಭಾರೀ ಮಾತಾಡ್ತಾನೆʼʼ ಎಂದರು. ಕಾರ್ತಿಕ್ ಏಕಾಏಕಿ ರೊಚ್ಚಿಗೆದ್ದು ವಿನಯ್‌ಗೆ ʻʻಏನೂ ಬಂದಿಲ್ಲ. ತಡೆದಿದ್ದೀನಿ ನಾನು. ಗಂಡ್ಸಾ ಅಂತ ಹೇಳ್ತಿರೋದು ನೀನು.. ಬಳೆ ಹಾಕೊಂಡಿರೋದು ನೀನು.. ಮಧ್ಯದಲ್ಲಿ ಕೈ ಹಾಕಿ ಎತ್ತಿಕೊಳ್ಳುವಾಗ ಗಂಡಸುತನವನ್ನ ನೋಡಿದ್ವಲ್ಲ..ʼʼ ಎಂದರು ವಿನಯ್ ಆಗ ʻʻಅಮ್ಮ, ಅಕ್ಕ ಅಂತ ಮಾಡುವವರು ಅಲ್ಲ ನಾವುʼʼ ಎಂದರು. ಆಗ ಕಾರ್ತಿಕ್ ರೊಚ್ಚಿಗೆದ್ದು, ʻʻತಾಕತ್ತು ಇದ್ದರೆ ರೆಕಾರ್ಡ್ ನೋಡಿಕೊಳ್ಳಿ.. ನನ್ನ ಬಾಯಿಂದ ಆ ಮಾತು ಬಂದಿದ್ದರೆ ನಿನ್ನ ಕಾಲಿಗೆ ಬೀಳೋಕೆ ರೆಡಿ ಇದ್ದೀನಿ ನಾನು. ಅಮ್ಮ, ಅಕ್ಕ ಅಂತ ಮಾತಾಡೋ ಮಗನೇ ಅಲ್ಲ ನಾನು. ನಾನು ಹಾಗೆ ಅಂದಿದ್ದೀನಾ ಅಂತ ರೆಕಾರ್ಡ್ ತೆಗೆಸಿ ನೋಡುʼʼ ಎಂದು ಕಿರುಚಾಡಿದ್ದಾರೆ.
ಇದನ್ನೂ ಓದಿ: BBK Season 10: ಗಂಡಸುತನದ ಬಗ್ಗೆ ಅಸಭ್ಯ ಮಾತು, ರಣರಂಗವಾಯ್ತು ಮನೆ
ಕ್ಯಾಮೆರಾ ಮುಂದೆ ಕಾರ್ತಿಕ್ ಹೇಳಿದ್ದೇನು?
‘’ಒಂದು ತಪ್ಪು ಅಪವಾದ ನನ್ನ ಮೇಲೆ ಬಂದಿದೆ. ಅಮ್ಮ, ಅಕ್ಕ ಅಂತೆಲ್ಲಾ ನಾನು ಮಾತಾಡಿದ್ದೀನಿ ಎಂದು ಹೇಳಿದ್ದಾರೆ. ಪ್ಲೀಸ್ ಚೆಕ್ ಮಾಡಿ.. ನಾನು ನನ್ನ ಬಾಯಿಂದ ಅಂತಹ ಒಂದು ಶಬ್ದವೂ ಬಂದಿಲ್ಲ. ಅಕಸ್ಮಾತ್ ಬಂದಿದ್ದರೆ ನಾನು ಈ ಕ್ಷಣವೇ ಅವನ ಕಾಲಿಗೆ ಬಿದ್ದು ಕ್ಷಮೆ ಕೇಳೋಕೆ ರೆಡಿ. ಇದು ಸರಿಯಲ್ಲ ‘ಬಿಗ್ ಬಾಸ್’’ ಎಂದು ಕ್ಯಾಮರಾ ಬಳಿ ಕಾರ್ತಿಕ್ ಮಹೇಶ್ ಕೇಳಿಕೊಂಡರು.
ಕಾರ್ತಿಕ್ ಹೇಳಿದ ಮಾತನ್ನು ಇಟ್ಟುಕೊಂಡು ನಮ್ರತಾ ಜತೆ ಮಾತನಾಡಿದರು ವಿನಯ್. ‘ನಾನು ಗೆಳೆಯ ಅಂತ ನೋಡಿದೆ. ಆದರೆ, ಅವನು ಆ ರೀತಿ ನಡೆದುಕೊಳ್ಳುತ್ತಿಲ್ಲ. ಕಾಲಿಗೆ ಬೀಳ್ತೀನಿ ಎಂದು ಹೇಳ್ತಾನೆ. ಅವನಿಗೆ ಭಾಗ್ಯಶ್ರೀಗೆ ಏನು ವ್ಯತ್ಯಾಸ’ ಎಂದರು ವಿನಯ್. ಇನ್ನು ನಮ್ರತಾ ಕೂಡ ಕೆಟ್ಟದ್ದಾಗಿ ಕಾರ್ತಿಕ್ ಸನ್ನೆ ಮಾಡಿರುವುದು ನೋಡಿದೆ ಎಂದರು.
ಬಿಗ್‌ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.