Site icon Vistara News

BBK SEASON 10: ಚಪ್ಪಲಿ ಎಸೆದೆ ಕಾರ್ತಿಕ್‌; ನನಗೆ ಮರ್ಯಾದೆ ಇಲ್ವಾ? ಆಚೆ ಹೋಗ್ಬೇಕು ಎಂದ ವಿನಯ್‌!

Karthik threw the sandal to vinay Ugly Fight

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) 9ನೇ ವಾರ ಕಾರ್ತಿಕ್‌ ಹಾಗೂ ವಿನಯ್‌ ನಡುವಿನ ಜಿದ್ದಾಜಿದ್ದಿ ತಾರಕಕ್ಕೇರಿದೆ. ಗುರುವಾರ (ಡಿ.7) ಪ್ರಸಾರವಾದ ಸಂಚಿಕೆಯಲ್ಲಿ ಕಾರ್ತಿಕ್‌-ವಿನಯ್‌ ನಡುವಿನ ಜಗಳ ಬೇರೆಯದ್ದೇ ಹಂತ ತಲುಪಿದೆ. ಸಿಟ್ಟಿನಿಂದ ಕಾರ್ತಿಕ್‌ ಚಪ್ಪಲಿಯನ್ನು ನೆಲಕ್ಕೆ ಜೋರಾಗಿ ಬೀಸಿದರು. ಆಗ ಚಪ್ಪಲಿ ಬೌನ್ಸ್‌ ಆಗಿ ವಿನಯ್‌ಗೆ ತಾಕಿತು. ಇದಾದ ಬಳಿಕ ದೊಡ್ಡ ಜಗಳವೇ ನಡೆದಿದ್ದು, ಕಾರ್ತಿಕ್​ ಅವರನ್ನು ಹೊಡೆಯಲು ವಿನಯ್ ಪದೇ-ಪದೇ ಏರಿ ಹೋದ ಘಟನೆ ನಡೆದಿದೆ. ಮಾತ್ರವಲ್ಲ ವಿನಯ್‌ ಅವರು ಬಿಗ್‌ ಬಾಸ್‌ ಮನೆಯ ಕದ ತಟ್ಟಿ, ಬ್ಯಾಗ್‌ ಒದ್ದಿದ್ದಾರೆ. ವಿನಯ್‌ ಅವರನ್ನು ಸುಧಾರಿಸಲು ಸ್ಪರ್ಧಿಗಳು ಪರದಾಡುವಂತಾಯ್ತು.

ಈ ವಾರದ ಟಾಸ್ಕ್‌ ಏನು?

ಬಿಗ್‌ಬಾಸ್‌ ಮನೆಯಲ್ಲಿ ರಕ್ಕಸ-ಗಂಧರ್ವರ ಎರಡು ಟೀಂ ಆಗಿದೆ. ಇಬ್ಬರ ಗುಂಪಿನ ಜಿದ್ದಾಜಿದ್ದು ಕ್ಷಣಕ್ಷಣಕ್ಕೂ ಏರುತ್ತಲೇ ಇದೆ. ವಾರದಿಂದ ಗಳಿಗೆಗೊಂದು ತಿರುವು ಪಡೆದುಕೊಂಡು ಬೆಳೆಯುತ್ತಲೇ ಇದೆ. ಮೊದಲು ಕಾರ್ತಿಕ್ ತಂಡ ರಾಕ್ಷಸರಾಗಿದ್ದರು. ವಿನಯ್‌ ಗಂಧರ್ವರಾಗಿದ್ದರು. ಆ ಬಳಿಕ ರೋಲ್ ರಿವರ್ಸ್ ಆಯ್ತು. ವಿನಯ್ ಟೀಂ ರಾಕ್ಷಸರಾಗುತ್ತಿದ್ದಂತೆಯೇ ಕಾರ್ತಿಕ್ ಮುಖಕ್ಕೆ ವಿನಯ್ ಜೋರಾಗಿ ನೀರು ಎರಚಿದರು. ಕಾರ್ತಿಕ್‌ ತಂಡ ಮಾಡಿರುವ ಅಗ್ರೆಸಿವ್‌ ಆಟವನ್ನು ವಿನಯ್‌ ಅವರ ನಿನ್ನೆಯ ಸಂಚಿಕೆಯಲ್ಲಿ ಸೇಡು ತೀರಿಸಿಕೊಂಡರು. ಆ ಬಳಿ ಸಂಗೀತಾ ಮಾಡಿರುವ ಸ್ಟ್ರಾಟೆಜಿಯಿಂದಾಗಿ ರಾಕ್ಷಸರ ಗುಂಪಿಗೆ ತಲೆ ನೋವಾಗಿ ಪರಿಣಮಿಸಿತು.

ಸಂಗೀತಾ ಹೊಸ ಸ್ಟ್ರಾಟೆಜಿ!

‘’ನಾವು ಬೇಡಿಕೆಯನ್ನು ಪೂರೈಸಬೇಕೇ ಹೊರತು, ಶಿಕ್ಷೆ ತಗೊಳ್ಳಬೇಕು ಅಂತ ಎಲ್ಲೂ ಬರೆದಿಲ್ಲ. ಸ್ಮಾರ್ಟ್‌ ಆಗಿ ಆಡೋಣ’’ ಎಂದು ಸಂಗೀತಾ ತಂಡಕ್ಕೆ ಹೇಳಿದರು. ಕಾರ್ತಿಕ್ ಸಹ.. ರಾಕ್ಷಸರ ಬೇಡಿಕೆಗಳಿಗೆ ಇಲ್ಲ ಎನ್ನದೆ.. ನಿಧಾನವಾಗಿ ಹೇಳಿದ್ದನ್ನ ಮಾಡುತ್ತಿದ್ದರು.

ಟಾಸ್ಕ್‌ ಆರಂಭವಾಗುತ್ತಿದ್ದಂತೆ ವಿನಯ್‌ ಅವರು ಕಾರ್ತಿಕ್‌ ಅವರಿಗೆ ʻಗುಲಾಮʼಎಂತಲೇ ಕೆಣಕುತ್ತಿದ್ದರು. ಆರಂಭದಲ್ಲಿ ಕಾರ್ತಿಕ್‌ಗೆ ಕಷ್ಟದ ಕೆಲಸಗಳನ್ನು ವಿನಯ್ ಮಾಡಿಸಿದರು. ಇದರಿಂದ ಕಾರ್ತಿಕ್‌ ಕೂಡ ಸೋತು ಸುಣ್ಣಾದರು. ಆದರೆ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ವಿನಯ್, ʻʻನಿನ್ನೆ ನೀನು ಏನಂದೆ, ಏನೋ ಅಂದೆ ಎನ್ನುತ್ತಾʼʼ ಕಾರ್ತಿಕ್ ಮೇಲೆ ಏರಿ ಹೋದರು. ಅದೇ ಸಮಯಕ್ಕೆ ಪವಿ ಚಪಾತಿ ಕಲಿಸಿರುವ ಹಿಟ್ಟು ತಂದರು, ಅದನ್ನು ತೆಗೆದುಕೊಂಡು ಜೋರಾಗಿ ಕಾರ್ತಿಕ್ ಮುಖಕ್ಕೆ ವಿನಯ್ ಎಸೆದರು. ವಿನಯ್​ ಹಿಟ್ಟನ್ನು ಕಾರ್ತಿಕ್ ಬಾಯಿಗೆ ತುರುಕಿದರು. ಆಗಲೂ ಕಾರ್ತಿಕ್​ ಹೆಚ್ಚೇನೂ ಪ್ರತಿಕ್ರಿಯಿಸಿರಲಿಲ್ಲ. ಇಷ್ಟಕ್ಕೆ ಬಿಡದ ವಿನಯ್‌ ಅವರು ಕಾರ್ತಿಕ್‌ ಅವರನ್ನು ಜೋರಾಗಿ ತಳ್ಳಿದರು. ಇದರಿಂದ ಕೋಪಿತರಾದ ಕಾರ್ತಿಕ್‌ ಸಿಟ್ಟಿನಿಂದ ತಮ್ಮ ಚಪ್ಪಲಿ ತೆಗೆದು ನೆಲಕ್ಕೆ ಬಿಸಾಡಿದರು. ಆಗ ಚಪ್ಪಲಿ ಬೌನ್ಸ್‌ ಆಗಿ ವಿನಯ್‌ಗೆ ತಾಕಿತು. ಅಲ್ಲಿಂದ ಶುರುವಾಯ್ತು ವಿನಯ್‌ ಅವರ ಅಬ್ಬರ.

ʻಆನೆʼಯ ಅಬ್ಬರ ಜೋರು!

‘’ನನಗೆ ಇಲ್ಲಿರೋಕೆ ಇಷ್ಟವಿಲ್ಲ. ಅವನತ್ರ ಚಪ್ಪಲಿಯಲ್ಲಿ ಹೊಡೆಸಿಕೊಳ್ಳಬೇಕಾ ನಾನು? ಹೆಂಗೆ ಹೊಡೆದ ಅವನು?’’ ಎಂದು ವಿನಯ್ ಕಿರುಚಾಡುತ್ತಿದ್ದರು. ʻಅದು ರೀಬೌಂಡ್‌ ಆಗಿ ಬಂತು’’ ಎಂದು ಮೈಕಲ್ ಸತ್ಯ ಹೇಳಿದರು. ‘’ರೀಬೌಂಡ್ ಆಗಿ ಹೊಡೆಯಲಾ ನಾನು ಅವನಿಗೆ?’’ ಎಂದು ಕಿರುಚಿದರು ವಿನಯ್. ಇದೇ ಸಮಯದಲ್ಲಿ ಮೈಕ್, ಬಟ್ಟೆ ಕಿತ್ತು ಎಸೆದರು ವಿನಯ್.

‘’ಅವನು ಥರ್ಡ್‌ ಕ್ಲಾಸ್‌ ನನ್ಮಗ. ಅವನ ಹತ್ತಿರ ಚಪ್ಪಲಿಯಲ್ಲಿ ಹೊಡೆಸಿಕೊಂಡು ನಾನು ಈ ಮನೆಯಲ್ಲಿ ಇರಬೇಕಾ? ನನಗೆ ಮರ್ಯಾದೆ ಇಲ್ವಾ? ಅಂದಿದ್ದೆಲ್ಲಾ ಅನಿಸಿಕೊಂಡು ಹೀರೊ ಅವನು. ನಾವು ಅನಿಸಿಕೊಂಡು ವಿಲನ್‌ಗಳಿಲ್ಲಿ. ನಮಗೂ ಮಾನ ಮರ್ಯಾದೆ ತಾಳ್ಮೆ ತುಂಬಾ ಇದೆ’’ ಎಂದು ವಿನಯ್ ಸೂಟ್‌ ಕೇಸ್‌ ಒದ್ದರು.

ಇದನ್ನೂ ಓದಿ: BBK SEASON 10: ಬಿಗ್ ಬಾಸ್‌ ಮನೆಯಿಂದ ಹೊರ ಬಂದ್ರಾ ಡ್ರೋನ್ ಪ್ರತಾಪ್, ಸಂಗೀತಾ?

ಕಾರ್ತಿಕ್​ ಮೇಲೆ ಸಿಟ್ಟಾದ ವಿನಯ್​ ಹೊಡೆಯಲು ಹೋದರು, ಆದರೆ ಸ್ನೇಹಿತ್, ನಮ್ರತಾ ಇನ್ನೂ ಹಲವರು ಅವರನ್ನು ತಡೆದರು. ಆಗ ಸಂಗೀತಾ ಎಂಟ್ರಿ ಕೊಟ್ಟರು. ಸಂಗೀತಾ ಆ ಕೂಡಲೇ ʻʻಯಾರೊಬ್ಬರು ಕ್ಯಾಮೆರಾ ಮುಂದೆ ಬರಬೇಡಿʼʼಎಂದು ವಿನಯ್‌, ಕಾರ್ತಿಕ್‌ ಜಗಳ ತಪ್ಪಿಸದೇ ಇದ್ದರು. ಇದು ನಮ್ರತಾ ಕೋಪಕ್ಕೆ ಕಾರಣವಾಯ್ತು. ನಮ್ರತಾ ಸಿಟ್ಟಿಗೆದ್ದು ‘’ನೀವು (ಸಂಗೀತಾ) ಪ್ರೊವೋಕ್ ಮಾಡ್ತಿದ್ದೀರಾ. ನಾವು ಜಗಳ ನಿಲ್ಲಿಸೋಕೆ ಪ್ರಯತ್ನ ಪಡುತ್ತಿದ್ದೇವೆ. ಇವಳು ಬಂದು ಹೊಡೆಯಲಿ ಎನ್ನುವ ಹಾಗೆ ಮಾಡ್ತಿದ್ದಾಳೆ. ನಿನಗೆ ಮನುಷ್ಯತ್ವ ಇದ್ದರೆ ಸ್ಟಾಪ್ ಮಾಡ್ತೀಯಾ. ಫ್ರೆಂಡ್‌ನ ಉಳಿಸಿಕೊಳ್ತೀಯಾ. ಕ್ಯಾಮರಾಗಾಗಿ ಫ್ರೆಂಡ್‌ನ ಹೊಡೆಸಲ್ಲ’’ ಎಂದು ನಮ್ರತಾ ಕೂಗಾಡಿದರು. ಅತ್ತ ವಿನಯ್ ಸೀದಾ ಮನೆಯೊಳಗೆ ಹೋದರು.

ಕೆಂಡವಾದ ನಮ್ರತಾ

ಇದಾದ ಬಳಿಕ ನಮ್ರತಾ ಕೂಡ ಉಳಿಸ ಸಂಗೀತಾ ಅವರ ಟೀಂ ಸದ್ಸಯರಿಗೆ ಧಮ್ಕಿ ಹಾಕಿದ್ದಾರೆ. ‘’ಅವಳು (ಸಂಗೀತಾ) ಯಾವ ಸೀಮೆ ರಾಣಿ? ಅವಳನ್ನ ಯಾರು ರಾಣಿ ಮಾಡಿರೋದು? ಅವಿನಾಶ್‌ ನಿಮಗೆ ತಲೆಯಲ್ಲಿ ಬುದ್ಧಿ ಇಲ್ವಾ? ಇಂಡಿವಿಷ್ಯುವಲ್‌ ಗೇಮ್ ಆಡೋಕೆ ತಾನೇ ಬಂದಿರೋದು. ಅವಳು ಯಾವಳು ನಿಮಗೆ ಹೇಳೋದಕ್ಕೆ?’’ ಎಂದು ನಮ್ರತಾ ಕಿರುಚಿದರು.

ಇಷ್ಟೆಲ್ಲ ಆದ ಬಳಿಕ ವಿನಯ್‌ ತಮ್ಮ ರೂಮ್‌ಗೆ ಹೋಗಿ ಅಬ್ಬರಿಸುತ್ತಲೇ ಇದ್ದರು. ಇದರ ಮಧ್ಯೆ ತುಕಾಲಿ ಅವರು ವರ್ತೂರ್‌ ಹಾಗೂ ಪ್ರತಾಪ್‌ ಅವರಿಗೆ ವಿನಯ್‌ ಅವರು ಮನೆಯಿಂದ ಆಚೆ ಹೋಗುತ್ತಿದ್ದಾರೆ ಎಂದು ತಮಾಷೆ ಕೂಡ ಮಾಡಿದ್ದರು, ಜತೆಗೆ ನಮ್ರತಾ ಹಾಗೂ ಕಾರ್ತಿಕ್‌ ನಡುವೆ ಮಾತಿನ ಚಕಮಕಿಯೂ ನಡಯಿತು. ಕಾರ್ತಿಕ್‌ ಅವರು ನಮ್ರತಾ ಅವರಿಗೆ ಇಮಿಟೇಟ್‌ ಕೂಡ ಮಾಡಿದರು.

ʻʻನನ್ನನ್ನ ಇಮಿಟೇಟ್‌ ಮಾಡೋಕೆ ರೈಟ್ಸ್ ಇಲ್ಲ. ಮುಚ್ಕೊಂಡ್ ಹೋಗ್ತಾ ಇರಬೇಕುʼʼಎಂದು ನಮ್ರತಾ ಅವರು ಕಾರ್ತಿಕ್‌ಗೆ ವಾರ್ನ್‌ ಮಾಡಿದರು. ಕಾರ್ತಿಕ್ ಕೂಡ ʻʻಗುಲಾಮರ ಗುಂಪು. ಹೋಗ್ತಿಯಲ್ವಾ ಇನ್ನೊಂದು ಎರಡು ವಾರದಲ್ಲಿ ಆಗ ನೋಡಿಕೋ ಹೋಗುʼʼಎಂದು ಕೂಗಿದರು. ಆಗ ನಮ್ರತಾ ಪ್ರತಿಕ್ರಿಯಿಸಿ ʻʻನಾನು ಯಾವಾಗ ಬೇಕಾದರೂ ಹೋಗ್ತೀನಿ. ನನ್ನನ್ನ ಕಳುಹಿಸಿದಾಗ ಹೋಗ್ತೀನಿ. ನೀನು ಯಾವನೂ ಅಲ್ಲ ಕಳಿಸೋಕೆ?ʼʼಎಂದು ಗರಂ ಆದರು.

ಇದನ್ನೂ ಓದಿ: BBK SEASON 10: ಅವಿನಾಶ್‌ ಈಗ ಮಾವುತನಾ ಮೇಕೆಯಾ? ಏನಯ್ಯ ನಿನ್ನ ಕಥೆ ಹೀಗಾಗೋಯ್ತು!

ಒಡಯ ಸ್ನೇಹಿತ್ ಆಟವನ್ನು ರದ್ದು ಮಾಡಲು ಯತ್ನಿಸಿದರಾದರೂ, ಬಿಗ್​ಬಾಸ್ ಅದಕ್ಕೆ ಅವಕಾಶ ಕೊಡದೆ, ಹಿಂಸಾತ್ಮಕವಾದ ಆ ಟಾಸ್ಕ್​ ಮತ್ತೆ ಮುಂದುವರಿಸುವಂತೆ ಹೇಳಿದರು. ಇಂದು ಕೊನೆಯ ಟಾಸ್ಕ್‌ ನಡೆಯಲಿದೆ. ಯಾರೇ ಗೆದ್ದರು, ಬಿಗ್​ಬಾಸ್ ಮನೆಯ ಬಹುತೇಕ ಸದಸ್ಯರು ಸೋತತಂತೆಯೇ ಲೆಕ್ಕ ಎನ್ನುತ್ತಿದ್ದಾರೆ ಪ್ರೇಕ್ಷಕರು. ಅಷ್ಟರ ಮಟ್ಟಿಗೆ ನೋಡುಗರಿಗೆ ಈ ವಾರ ಬಿಗ್‌ ಬಾಸ್‌ ಎಪಿಸೋಡ್‌ಗಳು ಕಿರಿ ಕಿರಿ ಉಂಟು ಮಾಡಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version