ಬೆಂಗಳೂರು: ಈ ವಾರ ಒಟ್ಟು ಎಂಟು ಮಂದಿ (BBK SEASON 10) ನಾಮಿನೇಟ್ ಆಗಿದ್ದರು. ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ಮೈಕಲ್ ಅಜಯ್, ವಿನಯ್ ಗೌಡ, ನಮ್ರತಾ ಗೌಡ, ತನಿಷಾ ಕುಪ್ಪಂಡ, ಸ್ನೇಹಿತ್ ಗೌಡ ನಾಮಿನೇಟ್ ಆಗಿದ್ದರು. ಮೊದಲೇ ವರ್ತೂರ್ ಸೇವ್ ಎಂದು ಗೊತ್ತಾದ ಕೂಡಲೇ ಸ್ನೇಹಿತ್ ಮನೆಯಿಂದ ಹೊರಗೆ ಹೋಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಆದರೆ ಈಗ ಮೂಲಗಳ ಪ್ರಕಾರ ಸುದೀಪ್ ಅವರು ಇದೇ ಮೊದಲ ಬಾರಿಗೆ ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮೈಕಲ್ ಅರನ್ನು ಬಚಾವ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸ್ನೇಹಿತ್ ಬಚಾವ್ ಆಗಿದ್ದರಿಂದ ಮೈಕಲ್ ಮನೆಯಿಂದ ಆಚೆ ಬರುವುದು ಅನಿವಾರ್ಯವಾಗಿತ್ತು. ಈ ಸಮಯದಲ್ಲಿ ಸುದೀಪ್ ತಮ್ಮ. ವಿಶೇಷ ಅಧಿಕಾರ ಬಳಸಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಸ್ನೇಹಿತ್ ಅವರು ಈ ವಾರ ಎಲಿಮಿನೇಶನ್‌ನಿಂದ ಪಾರಾಗಿದ್ದು, ಮೈಕಲ್ ಅವರು ಹೊರಗೆ ಹೋಗಲಿದ್ದರಂತೆ. ಆದರೆ ಸುದೀಪ್ ಅವರೇ ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ಮೈಕಲ್ ಅವರನ್ನು ಸೇವ್ ಮಾಡಿದ್ದಾರೆ ಎನ್ನಲಾಗಿದೆ.
ಮೈಕಲ್ ಅವರ ಕನ್ನಡ ಹಾಗೂ ಅವರ ಬದ್ಧತೆಯಿಂದಲೇ ಸುದೀಪ್ ಈ ಅಧಿಕಾರ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಈ ವಾರ ಮೈಕಲ್ ಅದ್ಭುತವಾಗಿ ಕನ್ನಡವನ್ನು ಓದಿದ್ದಾರೆ. ಆದಷ್ಟು ಕನ್ನಡವನ್ನೇ ಅವರು ಬಳಸುತ್ತಾರೆ.
ಇದನ್ನೂ ಓದಿ: BBK SEASON 10: ಪ್ರತಾಪ್ ಟೀಂ ಬಂದಿದ್ದಕ್ಕೆ ʻಕಿಚ್ಚನ ಚಪ್ಪಾಳೆʼ ಸಿಕ್ಕಿದೆ ಎಂದ ನಮ್ರತಾ!
ಮೈಕಲ್ ಅಚ್ಚ ಕನ್ನಡಕ್ಕೆ ಕಿಚ್ಚನ ಚಪ್ಪಾಳೆ
ಬಿಗ್ ಬಾಸ್ ಸೀಸನ್ 10ರಲ್ಲಿ (BBK SEASON 10) ಮೈಕಲ್ ಪ್ರಬಲ ಸ್ಪರ್ಧಿ ಎಂದರೆ ತಪ್ಪಿಲ್ಲ. ಕ್ಯಾಪ್ಟನ್ ಕೂಡ ಆಗಿದ್ದ ಮೈಕಲ್, ಕಳೆದ ವಾರ ಇಶಾನಿ ವಿಚಾರವಾಗಿ ತಂಡಕ್ಕೆ ಮೋಸ ಮಾಡಿದರ ಬಗ್ಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಹಾಗೆಯೇ ಮೈಕಲ್‌ಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಅವರು ಕನ್ನಡಿಗನಾದರೂ ಅವರು ಹುಟ್ಟಿ ಬೆಳೆದಿದ್ದು ನೈಜೀರಿಯಾದಲ್ಲಿ. ಇಂಗ್ಲೀಷ್ ಪಡದ ಮಾತನಾಡುತ್ತಿರುವ ಮಧ್ಯೆ , ಮೈಕಲ್ ಕನ್ನಡ ಕಲಿಕೆಗೆ ಸುದೀಪ್ ಫಿದಾ ಆಗಿ ಚಪ್ಪಾಳೆ ಕೂಡ ಕೊಟ್ಟಿದ್ದರು.
‘ನನಗೆ ಅವಕಾಶ ಕೊಟ್ಟರೆ ನಿಮಗೆಲ್ಲರಿಗೂ ಒಂದು ಡಿಫರೆಂಟ್ ಕನ್ನಡ ಸಿಗುತ್ತದೆ’ ಎಂದು ಮೊದಲು ಬಿಗ್ ಬಾಸ್‌ಗೆ ಬಂದಾಗ ಮೈಕಲ್ ಅವರು ಹೇಳಿದ್ದರು. ಇಶಾನಿ ಹೊರಗೆ ಹೋದ ಬಳಿಕ ಮೈಕೆಲ್ ಹೆಚ್ಚು ಚುರುಕಾಗಿದ್ದಾರೆ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: http://vistaranews.com/tag/assembly-election-2023