Site icon Vistara News

BBK Season 10: ಡ್ರೋನ್‌ ಪ್ರತಾಪ್‌ಗೆ ಕ್ರಿಮಿನಲ್​ ಬುದ್ಧಿ ಇಲ್ಲ ಎಂದ ಕಿಚ್ಚ; ವಿಲನ್‌ ಆದ ವಿನಯ್‌!

Drone Pratap Vinay Gowda in bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ ನಾಲ್ಕನೇ ವಾರ (BBK Season 10) ಕಿಚ್ಚ ಪಂಚಾಯಿತಿಯಲ್ಲಿ ವಿನಯ್‌ ಅವರಿಗೆ ಬೆವರು ಇಳಿಸದರೆ ಡ್ರೋನ್‌ ಬಗ್ಗ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಮೊದಲ ವಾರಗಳಿಂದಲೂ ಡ್ರೋನ್‌ ಅವರನ್ನು ಸ್ಪರ್ಧಿಗಳು ಟಾರ್ಗೆಟ್‌, ತೇಜೋವಧೆ ಮಾಡಿ,ಕಣ್ಣಿರು ಬರುವಂತೆ ಮಾಡಿರುವುದು ಗೊತ್ತೇ ಇದೆ. ಇದಾದ ಬಳಿಕ ಕಿಚ್ಚ ಕೂಡ ಸ್ಪರ್ಧಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದರು. ಆದರೆ ಈ ವಾರ ಡ್ರೋನ್‌ ಹೀರೊ ಆದರೆ ವಿನಯ್‌ ವಿಲನ್‌ ಆಗಿದ್ದಾರೆ. ಅಷ್ಟೇ ಅಲ್ಲದೇ ಕಿಚ್ಚ ಕೂಡ ವೇದಿಕೆಯಲ್ಲಿ ಡ್ರೋನ್‌ ಅವರು ಈ ವಾರ ಮಾಡಿದ್ದು ಉತ್ತಮ ತಂತ್ರಗಾರಿಕೆಯೇ ಹೊರತು ಕ್ರಿಮಿನಲ್​ ಬುದ್ಧಿ ಅಲ್ಲ ಎಂದು ಹೇಳಿದ್ದಾರೆ.

ಡ್ರೋನ್‌ ಹೀರೊ, ವಿನಯ್‌ ವಿಲನ್‌

ಕಳೆದ ವಾರ ನಾಮಿನೇಶನ್‌ ಪ್ರಕ್ರಿಯೆಲ್ಲಿ ಹಲವು ಹಂತಗಳಲ್ಲಿ ನಡೆಯಿತು. ಮೊದಲ ಹಂತ ಈ ವಾರ ನಾಮಿನೇಶನ್‌ ಮಾಡುವ ಅಧಿಕಾರ ಎಲ್ಲರಿಗೂ ಇರುವುದಿಲ್ಲ ಎಂದು ಬಿಗ್‌ ಬಾಸ್‌ ಹೇಳಿದರು. ಇದರ ಅನುಸಾರ ಮನೆಯಲ್ಲಿ ಇರುವ ಬಲೂನ್‌ಗಳ ಪೈಕಿ ನಾಮಿನೇಶನ್‌ ಪಾಸ್‌ ಆಗಿತ್ತು. ಮೊದಲ ಬಸರ್‌ ಆದ ಕೂಡಲೇ ಕ್ಯಾಪ್ಟನ್‌ ನೀತು ಹೊರತುಪಡಿಸಿ ಮನೆಯ ಎಲ್ಲ ಸದಸ್ಯರು ಬಲೂನ್‌ಗಳನ್ನು ಒಡೆದು ನಾಮಿನೇಶನ್‌ ಪಾಸ್‌ಗಳನ್ನು ಹುಡುಕಬೇಕು. ಪಾಸ್‌ ಸಿಕ್ಕಾಗ ಬೇರೆಯವರು ಕಸಿದುಕೊಳ್ಳದಂತೆ ಜೋಪಾನ ಇಟ್ಟುಕೊಂಡು ನಂತರ ಮತ್ತೆ ಉಳಿದ ಪಾಸ್‌ಗಳನ್ನು ಹುಡಕಬೇಕು. ಎರಡನೇ ಬಸರ್‌ ಆದಾಗ ಮೊದಲ ಹಂತ ಮುಕ್ತಾಯಗೊಳ್ಳುತ್ತಿತ್ತು. ಈ ಹಂತದಲ್ಲಿ ಡ್ರೋನ್‌ ಪ್ರತಾಪ್‌ ನಾಲ್ಕು ಪಾಸ್‌ಗಳನ್ನು ಗೆದ್ದರು. ಪ್ರತಾಪ್‌ ತಾನೆಷ್ಟು ಚಾಲಾಕಿ ಎಂಬುದುನ್ನು ಸಾಬೀತು ಪಡಿಸಿದರು. ಅಷ್ಟೇ ಅಲ್ಲ ಮನೆಮಂದಿ ಕೂಡ ಮನೆ ತುಂಬೆಲ್ಲ ಇದ್ದ ಬಲೂನ್‌ಗಳನ್ನು ಸ್ಪರ್ಧಿಗಳು ಮುಗಿಬಿದ್ದು ಒಡೆದರು. ಆದರೆ ಪಾಸ್‌ ಪಡೆಯುವಲ್ಲಿ ಬಹುತೇಕರು ಸೋತರು. ಇನ್ನ ಕೆಲವರು ಬಲೂನ್‌ಗಳನ್ನು ಒಡೆಯುವುದೇ ಬಿಟ್ಟರು. ಇನ್ನೂ ಒಂದಿಷ್ಟು ಜನ ಬಲೂನ್‌ನಿಂದ ಪಾಸ್ ಆಚೆ ಬಿದ್ದರೂ, ಅದನ್ನು ನೋಡದೇ ಮೈಮರೆತರು. ಆದರೆ ಪ್ರತಾಪ್‌ ಬಿಟ್ಟು ಇನ್ಯಾರಿಗೂ ಸಿಕ್ಕಿರಲಿಲ್ಲ. ಇದಾದ ಬಳಿಕ ತನ್ನ ತಂತ್ರಗಾರಿಕೆ ಬಳಸಿ ನಾಕ್ಲು ಪಾಸ್‌ಗಳನ್ನು ಹೊಂದಿದ್ದ ಡ್ರೋನ್‌, ಮಹಿಳೆಯರಿಗೆ ನಾಮಿನೇಟ್‌ ಮಾಡುವ ಅಧಿಕಾರ ಕೊಟ್ಟರು.

ಇದನ್ನೂ ಓದಿ: BBK Season 10: ಬಳೆ ತಂಟೆಗೆ ಹೋದ್ರೆ…ಮಾತಲ್ಲಿ ನಿಗಾ ಇರಲಿ ವಿನಯ್‌; ವಾರ್ನಿಂಗ್‌ ಕೊಟ್ಟ ಕಿಚ್ಚ!

ಹೀಗಾಗಿ ಮಹಿಳೆಯರು ಮುಂದೆ ಬರಲಿ ಎಂಬುದು ಅವರ ಆಶಯ ಆಗಿತ್ತು. ಪ್ರತಾಪ್​ ಅವರ ಈ ಗುಣವನ್ನು ಸುದೀಪ್​ ಮೆಚ್ಚಿಕೊಂಡಿದ್ದಾರೆ. ಈ ರೀತಿ ಮಾಡಿದ್ದಕ್ಕಾಗಿ ಡ್ರೋನ್​ ಪ್ರತಾಪ್​ ಅವರನ್ನು ಹೀರೊ ಎಂದು ಸುದೀಪ್​ ಕರೆದಿದ್ದಾರೆ.

ಕ್ರಿಮಿನಲ್​ ಬುದ್ಧಿ ಅಲ್ಲ

ಬಳೆಯ ವಿಚಾರಕ್ಕೆ ಕಿಚ್ಚ ಅವರು ವಿನಯ್‌ ಅವರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಪ್ರತಾಪ್‌ ಬಗ್ಗೆ ವಿನಯ್‌ ಕೂಡ ಒಂದು ಗಂಭೀರ ಆರೋಪ ಮಾಡಿದ್ದರು. ಯಾರು ಏನಾದರೂ ಹಾಕಲಿ.. ಒಬ್ಬನದ್ದು ಮಾತ್ರ ಒಂದೇ ರಿಯಾಕ್ಷನ್‌, ಹೆಂಗ್‌ ನೋಡ್ತಾನೆ ಅಂದ್ರೆ.. ತುಂಬಾ ಕೆಟ್ಟದಾಗಿ ನೋಡ್ತಾನೆʼʼ ಎಂದು ಸನ್ನೆ ಮೂಲಕ ಮಹಿಳೆಯರನ್ನು ಡ್ರೋನ್‌ ಕೆಟ್ಟದ್ದಾಗಿ ನೋಡ್ತಾರೆ ಎಂದು ತುಕಾಲಿ ಸಂತು, ಸ್ನೇಹಿತ್ ಗೌಡ, ಇಶಾನಿ ಹಾಗೂ ನಮ್ರತಾ ಮುಂದೆ ಪ್ರಸ್ತಾವನೆ ಮಾಡಿದ್ದರು. ಆದರೆ ಈ ವೀಕೆಂಡ್‌ನಲ್ಲಿ ಆಗಿದ್ದೇ ಬೇರೆ. ಸ್ವತಂ ಕಿಚ್ಚ ಸುದೀಪ್‌ ಅವರೇ ವಿನಯ್‌ ಅವರಿಗೆ ಮಹಿಳೆಯರಿಗೆ ಗೌರವ ನೀಡಿ ಮಾತನಾಡಿ ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: BBK Season 10: ಕಳಪೆ ಪಟ್ಟ ಸಂಗೀತಾಗೆ; ಹಳ್ಳಿಮನೆ ಯಜಮಾನ್ತಿ ಜೈಲಿನೊಳಗೆ!

ಧೈರ್ಯವಾಗಿ ಆಟ ಆಡಿದ ಸಂಗೀತಾ ಶೃಂಗೇರಿ ಅವರನ್ನು ಸುದೀಪ್​ ಪ್ರಶಂಸಿಸಿದ್ದಾರೆ. ಅಷ್ಟೇ ಅಲ್ಲದೇ ಟಾಸ್ಕ್‌ ವಿಚಾರವಾಗಿ ಡ್ರೋನ್‌ ಪ್ರತಾಪ್‌ ಅವರನ್ನು ಕಿಚ್ಚ ಹಾಡಿ ಹೊಗಳಿದ್ದಾರೆ. ಪ್ರತಾಪ್‌ ಅವರು ಈ ರೀತಿ ಮಾಡಿದ್ದು ಉತ್ತಮ ತಂತ್ರಗಾರಿಕೆಯೇ ಹೊರತು ಕ್ರಿಮಿನಲ್​ ಬುದ್ಧಿ ಅಲ್ಲ ಎಂದು ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಸ್ಪಷ್ಟವಾಗಿ ಹೇಳಿದರು.

ಬಿಗ್​ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

Exit mobile version