Site icon Vistara News

BBK SEASON 10: ನೀವಿಲ್ಲದೆ ಈ ಸೀಸನ್‌ ಅಪೂರ್ಣ ಎಂದ ಸುದೀಪ್‌; ವಿನಯ್‌, ಸಂಗೀತಾಗೆ ʻಕಿಚ್ಚನ ಚಪ್ಪಾಳೆʼ!

Kiccha Sudeep Gave Kichchana Chappale To Vinay And Sangeetha

ಬೆಂಗಳೂರು: ಜ.20ರಂದು ಬಿಗ್‌ ಬಾಸ್‌ (BBK SEASON 10) ಕೊನೆಯ ಪಂಚಾಯ್ತಿ ಆಗಿದೆ. ವೀಕ್ಷಕರು ಕುತೂಹಲದಿಂದ ಕಾದಿದ್ದು ʻಕಿಚ್ಚನ ಕೊನೆಯ ಚಪ್ಪಾಳೆʼ ಯಾರಿಗೆ ಎಂದು. ಅದರಂತೆ ಈ ಬಾರಿ ʻಕಿಚ್ಚನ ಚಪ್ಪಾಳೆʼ ಒಬ್ಬರಿಗಲ್ಲ, ಇಬ್ಬರಿಗೆ ಸಿಕ್ಕಿದೆ. ವಿನಯ್ ಗೌಡ, ಸಂಗೀತಾ ಶೃಂಗೇರಿ ಅವರಿಗೆ ‘ಕಿಚ್ಚನ ಚಪ್ಪಾಳೆ’ ಸಿಕ್ಕಿದೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ಕಿಚ್ಚ ಸುದೀಪ್ ಅವರು ಒಂದೇ ವಾರ ಇಬ್ಬರು ವ್ಯಕ್ತಿಗಳಿಗೆ ಚಪ್ಪಾಳೆ ನೀಡಿದ್ದಾರೆ. ಮಾತ್ರವಲ್ಲ ಈ ಸೀಸನ್‌ನಲ್ಲಿ ವಿನಯ್, ಸಂಗೀತಾ ಇಲ್ಲ ಅಂದರೆ ಸಂಪೂರ್ಣ ಎಂದು ಅನ್ನಿಸುವುದಿಲ್ಲʼಎಂದರು ಕಿಚ್ಚ.

ಈ ಹಿಂದೆಯೇ ವಿನಯ್ ಗೌಡ ಅವರು ಮೈಕಲ್ ಬಳಿ ಮಾತನಾಡುವಾಗ “ನಾವು ಮಾಡೋದು ಯಾರಿಗೂ ಕಾಣೋದಿಲ್ಲ, ಉತ್ತಮವೂ ಸಿಗಲ್ಲ, ಕಿಚ್ಚನ ಚಪ್ಪಾಳೆಯೂ ಸಿಗೋದಿಲ್ಲ” ಎಂದು ಹೇಳಿದ್ದರು.

ವೇದಿಕೆಯಲ್ಲಿ ಸುದೀಪ್‌ ಮಾತನಾಡಿ ʻʻಇಷ್ಟು ವಾರಗಳಲ್ಲಿ ಹಲವಾರು ವಿಷಯಗಳನ್ನು ಹಂಚಿಕೊಂಡೆ. ಕೆಲವೊಮ್ಮೆ ಕಿಚ್ಚನ ಚಪ್ಪಾಳೆ ನಾನು ಕೊಟ್ಟಿಲ್ಲ. ಕೊಡುವ ಮನಸ್ಸು ಮಾಡಿರಲಿಲ್ಲ. ಈ ಜರ್ನಿಯಲ್ಲಿ ಹಲವರು ಬೈಸಿಕೊಂಡಿದ್ದಾರೆ, ತಪ್ಪು ಮಾಡಿದ್ದಾರೆ, ಅತ್ತಿದ್ದಾರೆ, ನಕ್ಕಿದ್ದಾರೆ. ಮನೆಯಿಂದ ಈ ಸೀಸನ್‌ ಬೆಲೆ ಎಷ್ಟು? ಇವರು ಇಲ್ಲ ಅಂದ್ರೆ ಈ ಸೀಸನ್ ಬೆಲೆ ಎಷ್ಟು? ಯಾರು ಇದ್ದರೂ, ಇಲ್ಲದಿದ್ರೂ ಸೀಸನ್ ನಡೆಯತ್ತೆ. ಆದರೆ ಈ ಸೀಸನ್‌ನಲ್ಲಿ ವಿನಯ್, ಸಂಗೀತಾ ಇಲ್ಲ ಅಂದ್ರೆ ಸಂಪೂರ್ಣ ಅಂತ ಅನಿಸೋದಿಲ್ಲ. ಈ ಜರ್ನಿಯಲ್ಲಿ ಇಬ್ಬರಿಗೆ ಚಪ್ಪಾಳೆ ಕೊಡಲು ಇಷ್ಟಪಡ್ತಿದೀನಿʼʼಎಂದರು.

ಇದನ್ನೂ ಓದಿ; BBK SEASON 10: ಮಾಜಿ ಸ್ಪರ್ಧಿಗಳ ನಡೆಗೆ ಸುದೀಪ್‌ ಗರಂ; ಇಶಾನಿ, ರಕ್ಷಕ್‌ಗೆ ಮಾತಿನಲ್ಲೇ ಚಾಟಿ ಬೀಸಿದ ಕಿಚ್ಚ!

ಇನ್ನು ವಿನಯ್‌ ಗೌಡ ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ʻʻಎಷ್ಟೇ ಕಷ್ಟ ಬಂದರೂ ಚಪ್ಪಾಳೆ ತಗೋಬೇಕು ಅಂತ ಮೊದಲ ವಾರ ಅಂದುಕೊಂಡಿದ್ದೆ. ನಾನು ಸಾಕಷ್ಟು ತಪ್ಪು ಮಾಡಿದ್ದೇನೆ. ನೀವು ನನ್ನನ್ನು ತಿದ್ದಿದ್ದೀರಿ. ಚಪ್ಪಾಳೆ ಬರೋದೆ ಇಲ್ಲ ಎಂದು ಅಂದುಕೊಂಡಿದ್ದೆ. ಇದೀಗ ಈ ಸೀಸನ್‌ ಗೆದ್ದಷ್ಟೇ ಖುಷಿಯಾಗುತ್ತಿದೆʼʼ ಎಂದರು.

ಸಂಗೀತಾ ಕೂಡ ಮಾತನಾಡಿ ʻʻಕಿಚ್ಚನ ಚಪ್ಪಾಳೆ ಅನೌನ್ಸ್‌ ಮಾಡಿದಾಗ, ನನಗೆ ಸಿಗಬಹುದಾ ಎಂದುಕೊಂಡೆ. ಉತ್ತಮವೇ ಸಿಗೋದಿಲ್ಲ, ಅಂಥದರಲ್ಲಿ ಪ್ರತಿ ಸಲ ನನಗೆ ಯಾಕೆ ಚಪ್ಪಾಳೆ ಸಿಗತ್ತೆ ಎಂದು ಯೋಚನೆ ಮಾಡುತ್ತಿದ್ದೆ, ಅಮ್ಮನ ಫೋಟೊ ನೋಡಿ ದಿನಾ ಇದರ ಬಗ್ಗೆ ಹೇಳುತ್ತಿದ್ದೆ. ಈಗ ನನಗೆ ತುಂಬ ಖುಷಿಯಾಗುತ್ತಿದೆ. ವಿನಯ್‌ ಅವರಿಗೂ ಸಿಕ್ಕಿದ್ದು ಖುಷಿ ಇದೆʼʼಎಂದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version