Site icon Vistara News

Bigg Boss Kannada | ಬಿಗ್‌ ಬಾಸ್‌ ವೇದಿಕೆಯಲ್ಲಿ ಕಿಚ್ಚ ಸುದೀಪ್‌ ಭಾವುಕ!

Bigg Boss Kannada

ಬೆಂಗಳೂರು : ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) ರೂಪೇಶ್‌ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ರಾಕೇಶ್‌ ಅಡಿಗ ರನ್ನರ್‌ ಅಪ್‌ ಆಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿ ವೀಕೆಂಡ್‌ನಲ್ಲಿ ಪ್ರೇಕ್ಷಕರು ಕಿಚ್ಚನ ಪಂಚಾಯಿತಿಗಾಗಿ ಹೆಚ್ಚು ಕಾಯುತ್ತಿದ್ದರು. ಇದೀಗ ಸ್ವತಃ ಕಿಚ್ಚ ಸುದೀಪ್ ಅವರ ತಮ್ಮ ಬಿಗ್ ಬಾಸ್ ಜರ್ನಿಯ ವಿಟಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನೋಡುತ್ತಿದ್ದಂತೆ ಭಾವುಕರಾಗಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿ ವಿಡಿಯೊ ಹಂಚಿಕೊಂಡಿದ್ದು ಅಭಿಯನ ಚಕ್ರವರ್ತಿ ಕಿಚ್ಚ ಸುದೀಪ್ ಭಾವುಕರಾಗಿದ್ದಾರೆ. ಬಿಗ್ ಬಾಸ್ ಜತೆಗಿನ ಬಾಂಧವ್ಯವನ್ನು ಹಂಚಿಕೊಂಡ ಸುದೀಪ್, ‘ಇದು ನನ್ನ ನೈಜ ಜೀವನ. ಬಿಗ್‌ಬಾಸ್ ಶೋನಲ್ಲಿ ಈ ಸ್ಥಾನ ನೀಡಿದ್ದಕೆ ಮೊದಲನೆಯದಾಗಿ ಧನ್ಯವಾದ. ಇಂತಹ ಅದ್ಬತ ವೇದಿಕೆ ಕೊಟ್ಟಿದ್ದಕ್ಕೆ ಧನ್ಯವಾದ. ಮೊದಲ ಬಾರಿಗೆ ನಾನು ಪಾತ್ರವಲ್ಲದ ಸುದೀಪ್ ಆಗಿರುವುದಕ್ಕೆ ಧನ್ಯವಾದ. ಒಂದು ಪಯಣ ಆರಂಭಿಸುವಾಗ ಚಿಕ್ಕ ಕನಸು ಇಟ್ಟುಕೊಂಡು ಹೊರಡುತ್ತೇವೆ. ಆದರೆ ಎತ್ತರಕ್ಕೆ ಬೆಳೆಯುತ್ತಿದ್ದಂತೆ ದಾರಿ ಸಣ್ಣದಾಗುತ್ತದೆ. ಆದರೆ ಎಲ್ಲೋ ಒಂದು ಕಡೆ ಬೆಳಗ್ಗೆ ಏಳುವಾಗ ಸಾಮಾನ್ಯ ಮನುಷ್ಯನಾಗಿ ಎದ್ದೇಳಬೇಕು ಎನ್ನುವ ಆಸೆಯಾಗುತ್ತದೆ. ಬಣ್ಣ ಹಚ್ಚದೇ ಮಾತನಾಡುವ ಜೀವನ. ನಾನು ನಾನಾಗಿಯೇ ಕಾಣಿಸಿಕೊಳ್ಳುವ ವೇದಿಕೆ. ಈ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ನಾನು ಯಾವತ್ತಿಗೂ ನಿಮ್ಮ ಪ್ರೀತಿ ಬಯಸಿಯೇ ಕಾಯುತ್ತೇನೆ’ ಎಂದು ಮಾತನಾಡಿದ್ದಾರೆ.

ಇದನ್ನೂ ಓದಿ | Bigg Boss Kannada | ಕಪ್‌ ಇಲ್ಲ ಅಂದ್ರೂ ಎಷ್ಟೋ ಹೃದಯ ಗೆದ್ದಿದ್ಯಾ ರಾಕಿ ಎಂದ ಪ್ರೇಕ್ಷಕರು!

ಅದರಲ್ಲೂ ವೀಕೆಂಡ್‌ನಲ್ಲಿ ಬಂದು ಸ್ಪರ್ಧಿಗಳ ಜತೆ ಮುಖಾಮುಖಿ ಆಗುವ, ಪ್ರತಿ ಸ್ಪರ್ಧಿಯ ಗುಣ ಅವಗುಣಗಳನ್ನು ತಿಳಿಸುವ, ಕೆಲವೊಂದು ಬಾರಿ ಕೋಪಗೊಳ್ಳುವ ಸುದೀಪ್ ಫಿನಾಲೆ ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ | Bigg Boss Kannada | ಕರಾವಳಿ ಕುವರ ರೂಪೇಶ್‌ ಶೆಟ್ಟಿ ಮುಡಿಗೆ ಬಿಗ್‌ಬಾಸ್‌ ಕಿರೀಟ

Exit mobile version