Site icon Vistara News

BBK SEASON 10: ಸ್ಪರ್ಧಿಗಳ ಉತ್ಸಾಹ ಹೆಚ್ಚಿಸೋಕೆ ಕಿಚ್ಚ ತಂದ್ರು ʻಬಿಗ್ ಬಾಸ್ ಕನ್ನಡʼ ಸೀಸನ್ 10ರ ಟ್ರೋಫಿ!

Kichcha Sudeep Revealed Bigg Boss Kannada Season 10 Trophy

ಬೆಂಗಳೂರು: ಬಿಗ್‌ ಬಾಸ್‌ (BBK SEASON 10) ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ನಮ್ರತಾ ಮನೆಯಿಂದ ಆಚೆ ಹೋಗಿದ್ದಾರೆ. ಈ ಸೀಸನ್​ನ ಕೊನೆಯ ‘ಸೂಪರ್ ಸಂಡೇ ವಿತ್ ಸುದೀಪ’ ಕಾರ್ಯಕ್ರಮದಲ್ಲಿ ಸುದೀಪ್ (Sudeep) ಅವರು ಟ್ರೋಫಿ ಅನಾವರಣ ಮಾಡಿದ್ದಾರೆ. ಟ್ರೋಫಿ ನೋಡಿ ಸ್ಪರ್ಧಿಗಳು ಸಖತ್ ಖುಷಿಪಟ್ಟಿದ್ದಾರೆ. ಇದೀಗ ಹೊರಗೆ ಹೋದ ಸ್ಪರ್ಧಿಗಳು ಸೇರಿದಂತೆ ವೀಕ್ಷಕರು ಕೂಡ ಸಂಗೀತಾ ಈ ಬಾರಿ ಕಪ್‌ ಗೆಲ್ಲುತ್ತಾರೆ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ‘ವಿಜಯೀಭವ ಸಂಗೀತಾ ಶೃಂಗೇರಿ’ ಹ್ಯಾಷ್‌ಟ್ಯಾಗ್‌. ಬರೋಬ್ಬರಿ 7 ಲಕ್ಷ ಬಾರಿ ಈ ಹೆಸರು ಟ್ವೀಟ್ ಆಗಿದೆ.

‘VIJAYIBHAVA SANGEETHA SRINGERI’ ಟ್ವೀಟ್‌ ಜನವರಿ 21ರಿಂದಲೇ ಟ್ರೆಂಡ್ ಶುರುವಾಗಿತ್ತು. ಕಳೆದ ಸೀಸನ್ ವಿನ್ನರ್ ರೂಪೇಶ್ ಶೆಟ್ಟಿಗೆ 4+ ಲಕ್ಷ ಟ್ವೀಟ್ ಪಡೆದು ಮೊದಲಿದ್ದರು. ಇದೀಗ ಸಂಗೀತಾ ಅವರೇ ಹೆಚ್ಚು ಟ್ರೆಂಡ್‌ ಆದಂತಾಗಿದೆ. ಸಂಗೀತಾ ಶೃಂಗೇರಿ ಅವರು ಈಗಾಗಲೇ ಬಿಗ್ ಬಾಸ್ ಫಿನಾಲೆ ಟಿಕೆಟ್ ಪಡೆದು ಫಿನಾಲೆ ವೀಕ್ ತಲುಪಿದ್ದಾರೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಟಾಪ್ ಐದರ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ವಾರದ ಮಧ್ಯದಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ.

ಇದನ್ನೂ ಓದಿ: BBK SEASON 10: ಫಿನಾಲೆ ತಲುಪಿರುವ ಸ್ಪರ್ಧಿಗಳಿಗೆ ʻಕಿರಿಕ್ ಕೀರ್ತಿʼ, ʻಜಾಹ್ನವಿʼಯಿಂದ ಪ್ರಶ್ನೆಗಳ ಸುರಿಮಳೆ!

ಫಿನಾಲೆ ತಲುಪಿರುವ ಸ್ಪರ್ಧಿಗಳಿಗೆ ʻಕಿರಿಕ್ ಕೀರ್ತಿʼ, ʻಜಾಹ್ನವಿʼಯಿಂದ ಪ್ರಶ್ನೆಗಳ ಸುರಿಮಳೆ!

ಹಿಂದಿನ ವಾರಾಂತ್ಯದಲ್ಲಿ ನಮ್ರತಾ ಅವರು (BBK SEASON 10) ಮನೆಯಿಂದ ಹೊರ ಬಂದಿದ್ದಾರೆ. ಇದೀಗ ʻಬಿಗ್‌ಬಾಸ್ʼ ಮನೆ ಇನ್ನಷ್ಟು ಖಾಲಿಯಾಗಿದೆ. ಆದರೆ ಇರುವ ಆರು ಜನ ಸದಸ್ಯರ ನಡುವಿನ ತುರುಸಿನ ಸ್ಪರ್ಧೆಗೆ ಕಿಡಿ ಮತ್ತಷ್ಟು ಜೋರಾಗಿ ಉರಿಯುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ಈ ಸೀಸನ್‌ ಕೊನೆಯ ವಾರ ಹೇಗಿರುತ್ತದೆ? ಈ ಪ್ರಶ್ನೆ ಅಸಂಖ್ಯಾತ ಪ್ರೇಕ್ಷಕರ ಮನದಲ್ಲಿ ಕುತೂಹಲ ಹುಟ್ಟಿಸಿದೆ. ಆ ಕುತೂಹಲ ತಣಿಸುವಂಥ ಸುಳಿವೊಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ.

ಈ ವಾರದ ಆರಂಭ ಹರಿತವಾದ ಪ್ರಶ್ನೋತ್ತರಗಳಿಂದ ಆರಂಭವಾಗಿದೆ. ಆ ಪ್ರಶ್ನೋತ್ತರ ಕಲಾಪವನ್ನು ನಡೆಸಿಕೊಡಲು ಬಿಗ್‌ಬಾಸ್ ಹಿಂದಿನ ಸ್ಪರ್ಧಿಯಾದ ʻಕಿರಿಕ್ ಕೀರ್ತಿʼ ಮತ್ತು ʻಜಾಹ್ನವಿ ಬಿಗ್‌ಬಾಸ್ʼ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಎದುರಿಗೆ ಮನೆಯ ಆರೂ ಸದಸ್ಯರು ಸಾಲಾಗಿ ಕೂತಿದ್ದಾರೆ. ಕಿರಿಕ್ ಕೀರ್ತಿ ಮತ್ತು ಜಾಹ್ನವಿ ಒಂದೊಂದಾಗಿ ಪ್ರಶ್ನೆಗಳ ಬಾಣವನ್ನು ಒಬ್ಬೊಬ್ಬ ಸ್ಪರ್ಧಿಯ ಮೇಲೂ ಗುರಿಯಿಟ್ಟು ಎಸೆಯುತ್ತಿದ್ದ ಹಾಗೆ ಅವರ ಮುಖದ ಬಣ್ಣ ಭಾವ ಬದಲಾಗುತ್ತಿದೆ.

Exit mobile version