Site icon Vistara News

BBK SEASON 10: ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು; ಈ ವಾರ ನೋ ಎಲಿಮಿನೇಶನ್‌! ಸ್ನೇಹಿತ್- ಮೈಕಲ್‌ ಸೇಫ್‌!

Kichcha Sudeep Save Snehith Gowda And Michel From Eliminations

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಎಂಟನೇ ವಾರ ಇದೇ ಮೊದಲ ಬಾರಿಗೆ ಸುದೀಪ್‌ ಅವರು ವಿಶೇಷ ಅಧಿಕಾರವನ್ನು ಬಳಸಿಕೊಂಡು ಮೈಕಲ್‌ ಹಾಗೂ ಸ್ನೇಹಿತ್‌ ಅವರನ್ನು ಸೇವ್‌ ಮಾಡಿದ್ದಾರೆ. ಶನಿವಾರ ವರ್ತೂರು ಸಂತೋಷ್, ನಮ್ರತಾ, ಡ್ರೋನ್ ಪ್ರತಾಪ್ ಅವರುಗಳು ಸೇಫ್ ಆಗಿದ್ದರು. ಭಾನುವಾರಕ್ಕೆ ವಿನಯ್, ಸಂಗೀತಾ, ತನಿಷಾ, ಮೈಖಲ್ ಹಾಗೂ ಸ್ನೇಹಿತ್ ಉಳಿದುಕೊಂಡಿದ್ದರು. ಭಾನುವಾರ ಎಪಿಸೋಡ್ ಆರಂಭವಾದಾಗ ವಿನಯ್ ಮೊದಲಿಗೆ ಸೇಫ್ ಆದರು ಅವರ ಬಳಿಕ ಸಂಗೀತಾ ಸೇಫ್ ಆದರು. ತನಿಷಾ ಸಹ ಸೇಫ್ ಆಗಿ ಅಂತಿಮವಾಗಿ ಮೈಕಲ್ ಹಾಗೂ ಸ್ನೇಹಿತ್ ಅವರುಗಳು ಕೊನೆಯದಾಗಿ ಉಳಿದರು. ಸುದೀಪ್ ತೆಗೆದುಕೊಂಡ ಒಂದು ನಿರ್ಧಾರ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತು. ಆ ನಿರ್ಧಾರದಿಂದ ಎಲಿಮಿನೇಶನ್ ನಡೆಯಲಿಲ್ಲ.

ಈ ವಾರ ಮನೆಯೊಳಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಂದಿದ್ದಾರೆ. ಮೊದಲ ವಾರ ಎಂಬ ಕಾರಣಕ್ಕೆ ಅವರು ನಾಮಿನೇಟ್ ಆಗಿರಲಿಲ್ಲ. ಹಾಗಾಗಿ, ಅವರಿಬ್ಬರು ಈ ವಾರ ಸೇಫ್. ಆದರೆ 50ಕ್ಕೂ ಹೆಚ್ಚು ದಿನ ಆಟ ಆಡಿಕೊಂಡು ಬಂದ ಸ್ನೇಹಿತ್ ಮತ್ತು ಮೈಕಲ್‌ ಅವರಲ್ಲಿ ಒಬ್ಬರು ಇದೇ ವಾರ ಮನೆಯಿಂದ ಆಚೆ ಹೋಗಬೇಕು ಎಂಬುದು ಸುದೀಪ್‌ಗೆ ಅಷ್ಟು ಸರಿ ಎನಿಸಲಿಲ್ಲ.

ಸುದೀಪ್‌ ಈ ಬಗ್ಗೆ ಮಾತನಾಡಿ ʻʻನಮಗೆ ಇರುವ ಒಂದು ಅಧಿಕಾರವನ್ನು ಉಪಯೋಗಿಸಿ, ಫಸ್ಟ್ ಟೈಮ್ ನಾನು ನಿಮ್ಮಿಬ್ಬರನ್ನು ಮನೆಯಿಂದ ಆಚೆ ಕಳಿಸಲ್ಲ. ಈ ತರಹ ಪವರ್‌ವನ್ನು ಉಪಯೋಗಿಸುವುದಕ್ಕೆ ನನಗೆ ಅದು ನೈತಿಕವಾಗಿ ಸರಿ ಎನ್ನಿಸ್ತಾ ಇರಲಿಲ್ಲ. ಆದರೆ ಇವತ್ತು ನಾನು ಅದನ್ನು ಬಳಸಿದ್ದೇನೆ. ನಿಮ್ಮಿಬ್ಬರಲ್ಲಿ ಒಬ್ಬರು ಮನೆಗೆ ಹೋಗಬೇಕಿತ್ತು. ಆದರೆ ಅವರು ಯಾರು ಅಂತ ನಾನು ಹೇಳಲ್ಲ. ನಿಮ್ಮ ಜಾಗದಲ್ಲಿ ಯಾರೇ ಇದ್ದರೂ ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ಇದು ಈ ಕ್ಷಣಕ್ಕೆ ತೆಗೆದುಕೊಂಡ ನಿರ್ಧಾರ” ಎಂದು ‘ಕಿಚ್ಚ’ ಸುದೀಪ್ ಹೇಳಿದರು.

ಇದನ್ನೂ ಓದಿ: BBK SEASON 10: ಮೈಕಲ್‌ ಉಳಿಸಲು ಎಲಿಮಿನೇಶನ್‌ ಕ್ಯಾನ್ಸಲ್‌ ಮಾಡಿದ್ರಾ ಕಿಚ್ಚ?

ಆದರೆ ಸುದೀಪ್‌ ಅವರು ಮುಂದಿನ ವಾರಕ್ಕೆ ಮೈಕಲ್‌ಹಾಗೂ ಸ್ನೇಹಿತ್‌ ಅವರನ್ನು ನಾಮಿನೇಶನ್‌ ಪಟ್ಟಿಗೆ ಸೇರಿಸಿದರು. ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗಿರುವ ಸ್ನೇಹಿತ್​ಗೆ ಸಹ ಸಂಪೂರ್ಣ ಅಧಿಕಾರ ಸಿಗಬಹುದೇ ಇಲ್ಲವೇ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಸುದೀಪ್. ಕಿಚ್ಚನ ಕಾರಣದಿಂದ ಸೇಫ್ ಆದ ಸ್ನೇಹಿತ್ ಕಣ್ಣೀರು ಹಾಕಿ ಧನ್ಯವಾದ ಹೇಳಿದರೆ, ಮೈಕಲ್, ಮುಂದಿನ ವಾರ ಇನ್ನೂ ಚೆನ್ನಾಗಿ ಆಡುವ ಭರವಸೆ ನೀಡಿದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version