Site icon Vistara News

BBK SEASON 10: ಕ್ಯಾಪ್ಟನ್ ಟಾಸ್ಕ್ ಯಾರಿಗೂ ಭಿಕ್ಷೆ ಇಲ್ಲ; ಸಂಗೀತಾಗೆ ತಿರುಗೇಟು ಕೊಟ್ಟ ಕಿಚ್ಚ!

Kichcha Sudeep taking class about Captaincy Task

ಬೆಂಗಳೂರು: ಬಿಗ್‌ ಬಾಸ್‌ (BBK SEASON 10) ಮನೆಯಲ್ಲಿ ಕ್ಯಾಪ್ಟನ್‌ ಇಲ್ಲದ ಕಾರಣ ಮನೆಯ ಸದಸ್ಯರು ಹೆಚ್ಚಾಗಿ ರೂಲ್ಸ್‌ ಬ್ರೇಕ್‌ ಮಾಡುತ್ತಿದ್ದಾರೆ. ಡಿ.16ರ ಶನಿವಾರದ ಸಂಚಿಕೆಯಲ್ಲಿ ಸಿರಿ ಅವರಿಗೆ ಸುದೀಪ್‌ ಅವರು ವಿಶೇಷ ಅಧಿಕಾರವನ್ನು ನೀಡಿದರು. ರೂಲ್ಸ್‌ ಫಾಲೋ ಯಾರೇ ಮಾಡದೇ ಇದ್ದರೂ ಶಿಕ್ಷೆ ವಿಧಿಸಬಹುದು ಎಂದು ಹೇಳಿದರು. ಇದೀಗ ಭಾನುವಾರದ ಸಂಚಿಕೆಯಲ್ಲಿ ಮತ್ತೆ ಸುದೀಪ್‌ ಅವರು ಕ್ಯಾಪ್ಟನ್‌ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಂಗೀತಾ ಅವರಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ ಕಿಚ್ಚ,

ಕ್ಯಾಪ್ಟನ್ಸಿ ಎಷ್ಟು ಮುಖ್ಯ ಎಂದು ಸುದೀಪ್ ಅವರು, ಪ್ರಶ್ನೆ ಮಾಡಿದಾಗ ತುಕಾಲಿ ಸ್ಟಾರ್ ಅವರು, “ಮನೆಗೆ ಯಜಮಾನ ಬೇಕೇ ಬೇಕು, ಇಲ್ಲ ಅಂದರೆ ನಿಯಮಗಳು ಉಲ್ಲಂಘನೆ ಆಗುತ್ತವೆ. ಏನು ಮಾಡಬೇಕು ಅಂತ ಗೊತ್ತಾಗೋದಿಲ್ಲ” ಎಂದು ಹೇಳಿದ್ದಾರೆ. “ಕ್ಯಾಪ್ಟನ್ಸಿ ಟಾಸ್ಕ್‌ ಅಥವಾ ಕ್ಯಾಪ್ಟನ್‌ನ್ನು ಯಾಕೆ ನಿಮಗೆ ಗೌರವಿಸೋಕೆ ಬರೋದಿಲ್ಲ” ಎಂದು ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ. ನಮ್ರತಾ ಗೌಡ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ ವಿಚಾರವಾಗಿ ಮಾತನಾಡಿ ʻʻಇಲ್ಲಿ ಎಲ್ಲರೂ ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ. ಹಾಗಾಗಿ ಕ್ಯಾಪ್ಟನ್ಸಿ ಟಾಸ್ಕ್‌ ಬೇಕು. ಟಾಸ್ಕ್‌ನಲ್ಲಿ ಹುಡುಗಿಯರು ಚೆನ್ನಾಗಿ ಆಡಿದ್ರೂ ಕೂಡ ಅವರಿಗೆ ಆದ್ಯತೆ ಕೊಡಲ್ಲ. ಮಹಿಳೆಯನ್ನು ಸೀರಿಯಸ್ ಆಗಿ ಕೂಡ ತಗೊಳೋದಿಲ್ಲ”ಎಂದರು.

ಕಿಚ್ಚ ಕೂಡ ಈ ಮಾತಿಗೆ “ಕ್ಯಾಪ್ಟನ್ ಟಾಸ್ಕ್ ಯಾರಿಗೂ ಭಿಕ್ಷೆ ಇಲ್ಲ. ಕ್ಯಾಪ್ಟನ್ ಆದವನು ಪ್ರಯತ್ನಪಟ್ಟು ಸಂಪಾದನೆ ಮಾಡಿದ ಸ್ಥಾನವದು. ಸಾಮರ್ಥ್ಯ ಇದ್ದೇ ಅವರು ಕ್ಯಾಪ್ಟನ್ ಆಗಿರುತ್ತಾರೆ. ಅದಕ್ಕೆ ಗೌರವ ಕೊಡಿ. ನೀವು ಕ್ಯಾಪ್ಟನ್ ಆಗಿಲ್ಲ ಅಂದರೆ ಅದು ನಿಮ್ಮ ಸಾಮರ್ಥ್ಯದ ವಿಷಯ” ಎಂದು ಕಿಚ್ಚ ಸುದೀಪ್ ಅವರು ಹೇಳಿದರು.

ಇದನ್ನೂ ಓದಿ: BBK Season 10: ಬಿಗ್ ಬಾಸ್ ಮನೆಯಿಂದ‌ ಮೂರೇ ವಾರಕ್ಕೆ ಹೊರ ಬಂದ ಪವಿ ಪೂವಪ್ಪ!

ಭಿಕ್ಷೆ ತಗೊಂಡ್ ಕ್ಯಾಪ್ಟನ್ ಆಗಿದ್ದೀಯಾ ಎಂದಿದ್ದ ಸಂಗೀತಾ

ಈ ಮುಂಚೆ ಸ್ನೇಹಿತ್‌ ಅವರು ಮನೆಯ ಕ್ಯಾಪ್ಟನ್‌ ಆಗಿದ್ದರು. ಕಾಲ್ಪನಿಕ ಲೋಕದಲ್ಲಿ ಸಂಗೀತಾ ತಂಡ ರಾಕ್ಷಸರಾಗಿದ್ದರೆ, ವರ್ತೂರು ಸಂತೋಷ್ ತಂಡ ಗಂಧರ್ವರಾದರು. ಕ್ಯಾಪ್ಟನ್ ಸ್ನೇಹಿತ್ ಈ ಲೋಕದ ಒಡೆಯ. ವಾರದ ಉಸ್ತುವಾರಿಯನ್ನು ಸ್ನೇಹಿತ್‌ ವಹಿಸಿದ್ದರು. ಟಾಸ್ಕ್ ಮುಗಿಯುವವರೆಗೂ, ತಮ್ಮ ತಮ್ಮ ಪಾತ್ರಗಳಲ್ಲಿಯೇ ಇದ್ದು, ತಮ್ಮ ಗುಂಪಿನ ನಿಯಮ ಪಾಲಿಸುವ ತಂಡ ಗೆದ್ದ ಹಾಗೆ. ಈ ವಾರ ತಂಡ ಮಾಡುವ ಆಯ್ಕೆಯನ್ನು ಬಿಗ್ ಬಾಸ್ ಸ್ನೇಹಿತ್​​ಗೆ ನೀಡಿದ್ದರು. ವಿನಯ್, ನಮ್ರತಾ ಹಾಗೂ ಮೈಕಲ್​ನ ಒಂದೇ ತಂಡದಲ್ಲಿ ಇಟ್ಟರು. ಇದು ಇಂಬ್ಯಾಲೆನ್ಸ್ ಆಗುತ್ತದೆ ಎಂದು ಸಂಗೀತಾ ಹೇಳಿದರೂ ಆ ಮಾತನ್ನು ಸ್ನೇಹಿತ್ ಕೇಳಲೇ ಇಲ್ಲ.‘ನನಗೆ ಅಧಿಕಾರ ಇದೆ’ ಎಂದು ಹಕ್ಕು ಚಲಾಯಿಸಿದರು. ಈ ಮಧ್ಯೆ ಸಂಗೀತಾ ಹಾಗೂ ಸ್ನೇಹಿತ್‌ ನಡುವೆ ಮಾತಿನ ಚಕಮಕಿ ನಡೆದೇ ಹೋಯ್ತು. ‘’ಭಿಕ್ಷೆ ತಗೊಂಡ್ ಕ್ಯಾಪ್ಟನ್ ಆಗಿದ್ದೀಯಾ’’ ಎಂದು ಸ್ನೇಹಿತ್‌ಗೆ ಸಂಗೀತಾ ಕೂಗಿದರೆ. ಸಂಗೀತಾಗೆ ‘’ಹೋಗೇ’’ ಎಂದಿದ್ದರು ಸ್ನೇಹಿತ್. ಪ್ರತಿಯಾಗಿ ಸಂಗೀತಾ ಕೂಡ ‘’ಹೋಗೋಲೋ’’ ಎಂದಿದ್ದರು

ಸ್ನೇಹಿತ್‌ ಹಾಗೂ ಸಂಗೀತಾ ನಡುವೆ ಇಲ್ಲಿಂದ ಜಗಳ ತಾರಕಕ್ಕೆ ಏರುತ್ತಲೇ ಹೋಯ್ತು. ʻʻನೀನೇ ಕ್ಯಾಪ್ಟನ್ ಆಗಿಲ್ಲ. ನನ್ನ ಏನು ಕ್ಯಾಪ್ಟನ್ ಮಾಡ್ತೀಯಾ? ಹೋಗೇಲೇ..ʼʼಎಂದಿದ್ದರು ಸಂಗೀತಾ. ʻʻನನ್ನ ಶಕ್ತಿ ಮೇಲೆ ನಾನು ಕ್ಯಾಪ್ಟನ್ ಆಗಿರೋದು. ನೀವಲ್ಲ ನನ್ನನ್ನ ಕ್ಯಾಪ್ಟನ್ ಮಾಡಿರೋದು. ನೀನೇ ಕ್ಯಾಪ್ಟನ್ ಆಗಿಲ್ಲ. ನನ್ನ ಏನು ಕ್ಯಾಪ್ಟನ್ ಮಾಡ್ತೀಯಾ? ಹೋಗೇಲೇʼʼ ಎಂದಿದ್ದರು ಸ್ನೇಹಿತ್‌. ಇದಕ್ಕೆ ಪ್ರತಿಯಾಗಿ ʻʻಹೋಗೊಲೋʼʼ ಎಂದಿದ್ದರು ಸಂಗಿತಾ. ಅಷ್ಟಕ್ಕೆ ಸಂಗೀತಾ ಮುಗಿಸಿಲ್ಲ. ʻʻನೀನು ಹೇಗೆ ಕ್ಯಾಪ್ಟನ್ ಆಗಿದ್ಯಾ ಅಂತಲೂ ಎಲ್ಲರಿಗೂ ಗೊತ್ತು. ಭಿಕ್ಷೆ ಅದು…ನೀನು ಯಾರಿಗೆ ಚೇಲಾ ಅಂತ ಎಲ್ಲರಿಗೂ ಗೊತ್ತು ಇಲ್ಲಿʼʼ ಎಂದಿದ್ದರು. ಸ್ನೇಹಿತ್‌ ಈ ಮಾತಿಗೆ ʻʻನೀನು ಏನಾದರೂ ಅಂದುಕೋ. ನೀನು ನಿನ್ನ ಶಕ್ತಿಯಿಂದ ಏನು ಗೆದ್ದಿದ್ದೀಯಾ? ಏನೂ ಗೆದ್ದಿಲ್ಲ!” ಎಂದಿದ್ದರು. ಹೀಗಾಗಿ ಈ ಕ್ಯಾಪ್ಟನ್‌ ಭಿಕ್ಷೆ ಎನ್ನುವ ಪದಕ್ಕೆ ಪರೋಕ್ಷವಾಗಿ ಸಂಗೀತಾಗೆ ತಿರುಗೇಟು ಕೊಟ್ಟಿದ್ದಾರೆ ಸುದೀಪ್‌. ಮುಂದಿನ ವಾರ ಕ್ಯಾಪ್ಟನ್ ಆಗುತ್ತಾರೆ ಎಂದು ಸಿಹಿ ಸುದ್ದಿಯನ್ನೂ ಕೊಟ್ಟರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version