Site icon Vistara News

BBK SEASON 10: ಸಿರಿಗೆ ಸಿಕ್ಕಿತು ವಿಶೇಷ ಅಧಿಕಾರ; ಮನೆಮಂದಿಗೆ ಗ್ರಹಚಾರ ಬಿಡಿಸಿದ ಕಿಚ್ಚ!

siri Bigg boss

ಬೆಂಗಳೂರು: ಕಳೆದ ವಾರದ ಸಂಚಿಕೆಯಲ್ಲಿ (BBK SEASON 10) ಗಂಧರ್ವರು – ರಾಕ್ಷಸರು ಟಾಸ್ಕ್ ಆದ ಬಳಿಕ ಸ್ಪರ್ಧಿಗಳ ನಡವಳಿಕೆಗೆ ಗರಂ ಆಗ್ತಾರೆ ಮತ್ತು ಅವರೆಲ್ಲರನ್ನೂ ಸುದೀಪ್ ಬೆಂಡೆತ್ತುತ್ತಾರೆ ಅಂತ ಇಡೀ ಕರ್ನಾಟಕ ಕಾಯುತ್ತಿತ್ತು. ಆದರೆ ಆಗಿದ್ದೇ ಬೇರೆ. ಕಿಚ್ಚ ಯಾಕೆ ಕ್ಲಾಸ್‌ ತೆಗೆದುಕೊಂಡಿಲ್ಲ ಎಂದು ವೀಕ್ಷಕರು ತಲೆಗೆ ಹುಳ ಬಿಟ್ಟುಕೊಂಡಿದ್ದರು. ಈ ಬಗ್ಗೆ ಕಿಚ್ಚ ವೀಕೆಂಡ್‌ ಪಂಚಾಯಿತಿಯಲ್ಲಿ ಮಾತನಾಡಿ ʻʻನಾವು ಯಾಕೆ ಉಗೀಲಿಲ್ಲ ಅಂದ್ರೆ ‘ಬಿಗ್ ಬಾಸ್‌’ ಮನೆ ಅಂದ್ಮೇಲೆ ಅವೆಲ್ಲಾ ಇರುತ್ತೆ. ಟಾಸ್ಕ್‌ನಲ್ಲಿ ಇರುತ್ತೆ’’ ಎಂದಿದ್ದಾರೆ. ಕಿಚ್ಚ ಸುದೀಪ್‌. ಈ ರೀತಿ ಸ್ವಾತಂತ್ರ್ಯ ನೀಡಿದ್ದರೂ ಸಹ ಸ್ಪರ್ಧಿಗಳಿಂದ ಅಶಿಸ್ತಿನ ಪ್ರದರ್ಶನ ಆಗುತ್ತಲೇ ಇದೆ. ಈ ವೀಕೆಂಡ್‌ನಲ್ಲಿ ಸುದೀಪ್‌ ಅವರು ವೇದಿಕೆ ಬಂದಿದ್ದರೂ ಪ್ರತಾಪ್‌, ವಿನಯ್‌ ಅವರು ವಾಶ್‌ರೂಮ್‌ನಲ್ಲೇ ಇದ್ದರು. ಇದು ಸುದೀಪ್‌ ಅವರ ಕೋಪಕ್ಕೂ ಕಾರಣವಾಗಿತ್ತು.

‘’ಈ ವಾರ ಹೀಗೆ ಇರಲೇಬಾರದು. ಆದರೆ, ನಿಮ್ಮೆಲ್ಲರಿಗೂ ಖುಷಿ ಕೊಡಲು ಹೋದ ನಮಗೆ ನೀವು ಕೊಟ್ಟಿರುವ ಉಡುಗೊರೆ ಇದು’’ ಎಂದು ಸ್ಪರ್ಧಿಗಳ ಅಶಿಸ್ತು ಬಗ್ಗೆ ಕಿಚ್ಚ ಸುದೀಪ್‌ ತಮ್ಮ ಬೇಸರ ಹೊರಹಾಕಿದರು. ರಿಯಾಲಿಟಿ ಶೋ ಎಂದರೆ ನಿಮಗೆಲ್ಲಾ ತಮಾಷೆಯಾಗಿದೆಯಾ? ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಬ್ರೇಕ್ ಮಾಡುವುದು ಎಂದರೆ ನಿಮ್ಮ ಅರ್ಥವೇನು? ಎಂದು ಮೈಕಲ್‌ನ ತರಾಟೆಗೆ ತೆಗೆದುಕೊಂಡರು. ಪದೇ ಪದೇ ಮೈಕ್ ವಿಚಾರಕ್ಕೆ ರೂಲ್ಸ್ ತಪ್ಪುತ್ತಿರುವ ತುಕಾಲಿ ಸಂತೋಷ್‌ಗೂ ಬೈದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಿರಿ ಒಬ್ಬರೇ ಎಲ್ಲಾ ರೂಲ್ಸ್ ಅನ್ನು ಫಾಲೋ ಮಾಡುವುದು ಎಂದು ಸ್ಪರ್ಧಿಗಳೇ ಒಪ್ಪಿಕೊಂಡಿದ್ದಾರೆ.

ಸಿರಿಗೆ ವಿಶೇಷ ಅಧಿಕಾರ ಕೊಟ್ಟ ಸುದೀಪ್‌

ಕ್ಯಾಪ್ಟನ್ ಇದ್ದಾಗ ಬೆಲೆ ಕೊಡಲಿಲ್ಲ. ಕ್ಯಾಪ್ಟನ್ ಇಲ್ಲದಿರುವಾಗಲೂ ನಿಯಮಗಳು ಫಾಲೋ ಆಗ್ತಿಲ್ಲ ಎಂಬ ಕಾರಣಕ್ಕೆ ಕಿಚ್ಚ ಸುದೀಪ್‌ ಕೋಪಗೊಂಡರು. ‘ಬಿಗ್ ಬಾಸ್‌’ ಮನೆಯಲ್ಲಿ ರೂಲ್ಸ್ ಸರಿಯಾಗಿ ಫಾಲೋ ಆಗದ ಕಾರಣ, ‘’ಯಾರು ಪಕ್ಕಾ ರೂಲ್ಸ್ ಫಾಲೋ ಮಾಡ್ತಾರೆ?’’ಎಂದು ಕಿಚ್ಚ ಸುದೀಪ್ ಕೇಳಿದರು. ಅದಕ್ಕೆ, ಬಹುತೇಕ ಮಂದಿ ಸಿರಿ ಹೆಸರು ಹೇಳಿದರು. ಹೀಗಾಗಿ, ‘’ನಿಯಮಗಳನ್ನ ಎಲ್ಲರೂ ಫಾಲೋ ಮಾಡುವ ಹಾಗೆ ನೋಡಿಕೊಳ್ಳಿ. ಈ ಅಧಿಕಾರವನ್ನ ನಾನು ನಿಮಗೆ ಕೊಡ್ತಾ ಇದ್ದೇನೆ. ಯಾರಿಗೆ ಏನೇ ಶಿಕ್ಷೆ ಕೊಡಬೇಕಾದರೂ ಕೊಡಬಹುದು’’ ಎಂದು ಸಿರಿಗೆ ಕಿಚ್ಚ ಸುದೀಪ್‌ ವಿಶೇಷ ಅಧಿಕಾರ ನೀಡಿದರು.

ಇದನ್ನೂ ಓದಿ; BBK SEASON 10: ತುಕಾಲಿಗೆ ಕಿಚ್ಚನ ಚಪ್ಪಾಳೆ; ನಾಮಿನೇಶ್‌ನಿಂದ ಸೇಫ್‌ ಆಗಿದ್ಯಾರು?

ಸಿರಿ ಏನಾದ್ರೂ ಫೈನಲ್‌ಗೆ ಬಂದು ಬಿಟ್ರೆ?

ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಕೆಲವು ಸ್ಪರ್ಧಿಗಳು ತಾಳ್ಮೆಯನ್ನು ಮೀರಿ, ಅಗ್ರೆಸಿವ್‌ ಆಗಿ ಆಟ ಆಡಿದರೆ, ಸಿರಿ ಅವರು ಮಾತ್ರ ಯಾವುದೇ ವಿವಾದದಲ್ಲಿ ಸಿಲುಕದೇ ಆಟ ಆಡುತ್ತಿದ್ದಾರೆ. 10 ವಾರಗಳು ಉರುಳಿದರೂ ಸಿರಿ ಇನ್ನೂ ‘ಬಿಗ್ ಬಾಸ್‌’ ಮನೆಯಲ್ಲಿ ಗಟ್ಟಿಯಾಗಿ ಇದ್ದಾರೆ. ಹೀಗೇ ಇದ್ದರೆ, ಸಿರಿ ಫೈನಲ್‌ವರೆಗೂ ಬಂದುಬಿಡ್ತಾರಾ? ಎಂದು ನಮ್ರತಾ ಹಾಗೂ ತುಕಾಲಿ ಮಾತನಾಡಿಕೊಂಡಿದ್ದರು.

ಈ ವಾರ ಬಿಗ್‌ ಬಾಸ್‌ನಲ್ಲಿ ಆರು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಜತೆಗೆ ಸಿರಿ ಅವರೂ ನಾಮಿನೇಟ್‌ ಆಗಿದ್ದಾರೆ. ತುಕಾಲಿ ಹಾಗೂ ನಮ್ರತಾ ಮಾತನಾಡಿ, ತುಕಾಲಿ ಅವರು ನಮ್ರತಾಗೆ ಈ ವಾರ ಯಾರು ಹೋಗ್ತಾರೆ? ಎಂದು ಕೇಳಿದ್ದರು. ನಮ್ರತಾ ಅವರು ಸಿರಿ, ಮೈಕಲ್, ಪವಿ ಪೂವಪ್ಪ ಈ ಮೂರು ಜನರಲ್ಲಿ ಒಬ್ಬರು ಎಂದಿದ್ದರು. ತುಕಾಲಿ ಮಾತನಾಡಿ ʻʻಮತ್ತೆ ನಿಮ್ಮ ಟೀಮ್‌ಗೆ ಬಂತಾ.? ಕೊನೆಯಲ್ಲಿ ಯಾರು ಉಳಿಯುತ್ತಾರೆ?ʼʼಎಂದು ಕೇಳಿದ್ದರು. ನಮ್ರತಾ ಇದಕ್ಕೆ ʻʻಎಲ್ಲಾ ಹೋಗಿಬಿಡುತ್ತಾರೆ. ನಮ್ಮ ಟೀಮ್‌ನಿಂದಾನೇ ಜಾಸ್ತಿ ಹೋಗಿರೋದು ಇಲ್ಲಿಯವರೆಗೂ. ನಿಮ್ಮ ಪ್ರಕಾರ ಯಾರು ಹೋಗಬಹುದು?ʼʼಎಂದಿದ್ದಾರೆ. ನನ್ನ ಪ್ರಕಾರ ಸಿರಿ ಎಂದರು ತುಕಾಲಿ. ʻನಾನು ಹಾಗೆ ಅಂದುಕೊಂಡು, ಅಂದುಕೊಂಡೇ 3 ವಾರದಿಂದ ಅವರು ಹೋಗ್ತಾ ಇಲ್ಲʼʼ ಎಂದಿದ್ದರು ನಮ್ರತಾ. ಫೈನಲ್‌ಗೆ ಬಂದು ಬಿಡ್ತಾರಾ ಅವರು?ಎಂದರು ತುಕಾಲಿ. ʻಹೀಗೆ ಆಡಿ ಆಡಿ ಬರಬಹುದುʼ ಎಂದಿದ್ದರು ನಮ್ರತಾ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version