Site icon Vistara News

BBK Season 10: ವರ್ತೂರ್ ಸಂತೋಷ್ ಬಾಯಲ್ಲೇ ಅವರ ಮದುವೆ ಕತೆ ಕೇಳಿ!

Varthur Santhosh marriage

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK Season 10) ಹಲವು ವಿಚಾರಗಳಿಂದ ಚರ್ಚೆಗೆ ಕಾರಣವಾಗುತ್ತಿದೆ. ಸ್ಪರ್ಧಿಗಳ ವರ್ತನೆ, ಜಗಳ, ಸ್ನೇಹ ಎಲ್ಲವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವೈಯಕ್ತಿಕ ಕಾರಣದಿಂದ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗುವುದಾಗಿ ಹಠ ಹಿಡಿದಿದ್ದ ಕೃಷಿಕ ವರ್ತೂರು ಸಂತೋಷ್ (Varthur Santhosh)ಕೆಲವು ದಿನಗಳ ಹಿಂದೆ ಮದುವೆಯ ವಿಚಾರಕ್ಕೂ ಸುದ್ದಿಯಲ್ಲಿದ್ದರು. ಹುಲಿ ಉಗುರು ಹೊಂದಿರುವ ಆರೋಪ ಬಂತು. ಅವರನ್ನು ಬಂಧಿಸಲಾಯಿತು. ಆ ಬಳಿಕ ಅವರು ದೊಡ್ಮನೆಗೆ ಮರಳಿದ್ದರು. ಸಂತೋಷ್ ಮದುವೆ ಆಗಿದ್ದ ವಿಚಾರ ಇದೀಗ ಮತ್ತೆ ಮನೆಯಲ್ಲಿ ಮುನ್ನೆಲೆಗೆ ಬಂದಿದೆ. ಸ್ವತಃ ವರ್ತೂರ್‌ ಅವರೇ ಈ ಬಗ್ಗೆ ಮಾತನಾಡಿದ್ದಾರೆ.

ಜಿಯೋ ಸಿನಿಮಾ ಹಂಚಿಕೊಂಡ ಪ್ರೋಮೊದಲ್ಲಿ ವರ್ತೂರ್‌ ಸಂತೋಷ್‌ ಮಾತನಾಡಿ ʻʻಒಳಗಡೆ ಏನು ಇದೆ ಎನ್ನುವುದು ನಾನು ಈಗ ಹೇಳ್ತಾ ಇದ್ದೀನಿ. ನನ್ನ ದೊಡ್ಡಪ್ಪಂಗೆ ಮುಂಚೆ ಹೇಳಿದ್ದೆ. ನೀನು ಹೋಗಿ ಇಂತಹವರಿಗೆ ತಾಳಿ ಕಟ್ಟು ಎಂದರೆ ಕಟ್ಟುತ್ತೇನೆ ಎಂದು. ನಾನು ಮಾತು ಕೊಟ್ಟು ಒಪ್ಪಿಕೊಂಡೆ. ಹಾಗೇ ಆಗ್ತಾ ಆಗ್ತಾ ನನ್ನ ಅಮ್ಮನನ್ನು ಕಡೆಗಣಿಸಲು ಆರಂಭಿಸಿದರು. ನಾನು ಸಂಪಾದನೆ ಮಾಡಿರುವ ಜನ, ಅವರೆಲ್ಲರನ್ನು ತೊರೆದು ಅವರ ಹಿಂದೆ ಹೋಗಬೇಕು ಎಂದರೆ ಸಾಧ್ಯವಿಲ್ಲ. ಹೋಗ್ತೀನಿ ಅವರ ಮನೆ ಹತ್ರ. ನನ್ನ ಮಾತಿನ ಪ್ರಕಾರ ಬಂದರೆ, ನೀನು ರಾಣಿನೇ ಇವತ್ತಿಗುನೂ. ಬಾ ಅಂತ ಕರೀತಿನಿ. ಫಸ್ಟ್‌ ಗೇಟ್‌ನಿಂದ ಆಚೆಗೆ ಹೋಗು ಅಂತಾರೆ ನನ್ನ. ಅವತ್ತು ಮಾತು ಕೊಟ್ಟು ಬಂದಿದ್ದೀನಿ. ಇವತ್ತು ಆ ಮಾತಿಗೆ ನಿಂತಿದ್ದೀನಿʼʼಎಂದರು.

ಇದನ್ನೂ ಓದಿ: BBK SEASON 10: ಪ್ರತಾಪ್‌ಗೆ ಸೋಲು; ಕರ್ಮ ಅಂದ್ರೆ ಇದೇನಾ? ಎಂದ ಸಂಗೀತಾ; ಕಾರ್ತಿಕ್‌ಗೆ ಕ್ಯಾಪ್ಟನ್ಸಿ!

ಬಿಗ್‌ ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಮಧ್ಯೆ ಸ್ನೇಹ, ಆತ್ಮೀಯತೆ ಇದೆ. ಹೀಗಾಗಿ ಇಬ್ಬರ ಮಧ್ಯೆ ಗೆಳತನಕ್ಕಿಂತ ವಿಶೇಷವಾದುದು ಏನೋ ಇದೆ ಎಂದು ಇತರ ಸ್ಪರ್ಧಿಗಳು ರೇಗಿಸಿದ್ದರು. ಜತೆಗೆ ವೀಕ್ಷಕರಿಗೂ ಅದೇ ರೀತಿಯ ಅನುಮಾನವೂ ಮೂಡಿತ್ತು. ಮಾತ್ರವಲ್ಲ ಇತ್ತೀಚಿನ ವೀಕೆಂಡ್‌ ಸಂಚಿಕೆಯಲ್ಲಿ ಸುದೀಪ್‌ ಕೂಡ ವರ್ತೂರು ಅವರನ್ನು ಈ ವಿಚಾರವಾಗಿ ರೇಗಿಸಿದ್ದರು. ಇದೆಲ್ಲದರ ಮಧ್ಯೆ ವರ್ತೂರು ಅವರದ್ದು ಎನ್ನಲಾದ ಮದುವೆ ಫೋಟೊಗಳು ವೈರಲ್‌ ಆದವು. ಈಗಾಗಲೇ ಮದುವೆಯಾಗಿರುವ ವರ್ತೂರು ಸಂತೋಷ್ ಅವರಿಗೆ ಹೆಣ್ಣು ಮಗುವಿದೆ ಎನ್ನುವ ವಿಚಾರವೇ ಚರ್ಚೆಯಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version