Site icon Vistara News

BBK Season 10: ಕಂಟೆಸ್ಟಂಟ್‌ಗಳನ್ನು ರುಬ್ಬಿದ ಲಾರ್ಡ್ ಪ್ರಥಮ್; ಅಸಮರ್ಥರದ್ದೇ ಮೇಲುಗೈ!

Lord Pratham

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ನಾಲ್ಕನೇ ದಿನ ಬಿಗ್‌ ಬಾಸ್‌ ಸೀಸನ್‌ 4ರ ವಿಜೇತ ಪ್ರಥಮ್‌ ಎಂಟ್ರಿ ಕೊಟಿದ್ದು ಸ್ಪರ್ಧಿಗಳನ್ನು ಬೆಂಡೆಂತ್ತಿದ್ದಾರೆ. ಮೊದಲಿಗೆ ಸ್ಪರ್ಧಿಗಳಲ್ಲಿ ಭಯವನ್ನು ಹುಟ್ಟು ಹಾಕಿತ್ತು. ಬಳಿಕ ಬಿಗ್‌ ಬಾಸ್‌ ಪ್ರಥಮ್‌ ಅತಿಥಿಯಾಗಿ ಬಂದು ವೀಕ್ಷಕರ ಧ್ವನಿಯಾಗಿ ಅಭಿಪ್ರಾಯಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದಕ್ಕೆ ಧನ್ಯವಾದ ತಿಳಿಸಿದ್ದಾರೆ. ವೀಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಪ್ರಥಮ್‌ ಬಂದ ಕಾರಣ ಬಗ್ಗೆ ಕ್ಲಾರಿಟಿ ಸಿಕ್ಕಿತು.

ತುಕಾಲಿ ಸಂತೋಷ್‌ಗೆ ವಾರ್ನಿಂಗ್‌

ಪ್ರಥಮ್‌ ಬರುತ್ತಲೇ ʻʻನಾನು ನಿಮ್ಮ ಜತೆ ಬಿಗ್ ಬಾಸ್ ಆಟ ಆಡೋಕೆ ಬಂದಿಲ್ಲ. ಟಾಸ್ಕ್ ಮಾಡಿಸೋಕೆ ಬಂದಿದ್ದೇನೆʼʼ ಎಂದು ತುಕಾಲಿ ಸಂತೋಷ್‌ಗೆ ವಾರ್ನಿಂಗ್‌ ಕೊಟ್ಟರು. ಅಷ್ಟೇ ಅಲ್ಲದೇ ತುಕಾಲಿ ಸಂತೋಷ್‌ಗೆ ʻʻಯಾವುದು ತಮಾಷೆ? ಯಾವುದು ಸೀರಿಯೆಸ್‌ ಎನ್ನುವುದೇ ಗೊತ್ತಾಗುತ್ತಿಲ್ಲ. ಒಂದು ಸಲ ಸೀರಿಯೆಸ್‌ ಆಗಿ ಎಲಿಮಿನೇಟ್‌ ಆದರೆ ಆಗ ಬಾಯ್‌ ಬಡ್ಕೋತ್ತೀರಾʼʼ ಎಂದು ಪ್ರಥಮ್‌ ಹೇಳಿದರು. ‘’ಸಾರಿ ಪ್ರಥಮ್ ಸರ್. ತಿದ್ದಿಕೊಳ್ತೀನಿ’’ ಎಂದರು ತುಕಾಲಿ ಸಂತೋಷ್‌.

ಇಶಾನಿಯನ್ನು ಹೊಗಳಿದ ಪ್ರಥಮ್‌

ಬರು ಬರುತ್ತಲೇ ಪ್ರತಾಪ್‌ ಅವರು ಇಶಾನಿ ಅವರ ಆಟದ ಕುರಿತಾಗಿ ಮೆಚ್ಚುಗೆ ಸೂಚಿಸಿದರು. ಅಷ್ಟೇ ಅಲ್ಲದೇ ಮನೆಯಿಂದ ಹೊರಗೆ ಹೋಗುವಾಗಲೂ ಇಶಾನಿ ಅವರಲ್ಲಿ ನನ್ನನ್ನು ನಾನು ಕಾಣುತ್ತಿದ್ದೇನೆ ಎಂದು ಹೇಳಿದರು.

ಸ್ನೇಕ್‌ ಶ್ಯಾಮ್‌ಗೆ ಎನರ್ಜಿ ಬೇಕು ಎಂದ ಪ್ರಥಮ್‌

ಸ್ನೇಕ್‌ ಶ್ಯಾಮ್‌ ಸದ್ಯ ಅಸಮರ್ಥರ ಗುಂಪಿಗೆ ಸೇರಿದ್ದಾರೆ. ಬರುತ್ತಲೇ ಸ್ನೇಕ್‌ ಶ್ಯಾಮ್‌ ಅವರಿಗೆ ಪ್ರಥಮ್‌ ʻʻನಿಮ್ಮಿಂದ ಎನರ್ಜಿ ಮಿಸ್ ಆಗುತ್ತಿದೆ. ಆ ಎನರ್ಜಿ ಬೇಕು’ಎಂದರು. ಅದಕ್ಕೆ ಸ್ನೇಕ್‌ ಶ್ಯಾಮ್‌ ’ಪ್ರಾಣಿಗಳನ್ನ ಬಿಟ್ಟು ಬಂದಿದ್ದೀನಿ. ಸ್ವಲ್ಪ ಎರಡು ದಿನ ಬೇಕು, ಸರಿ ಹೋಗ್ತೀನಿʼʼಎಂದರು. ಪ್ರಥಮ್‌ ಈ ಬಗ್ಗೆ ʻʻಇದನ್ನು ಬರುವ ಮುಂಚೆಯೇ ಯೋಚಿಸಬೇಕಿತ್ತು. ಬಂದ ಮೇಲೆ ಆಟವಾಡಬೇಕು. ಇಲ್ಲ ಅಂದರೆ ಬನ್ನಿ ನನ್ನ ಜತೆ ಹೊರಟುಬಿಡೋಣʼʼ ಎಂದರು.

ಇದನ್ನೂ ಓದಿ: BBK Season 10: ʻನಿನ್ನ ಡ್ರೋನ್ ರೆಕ್ಕೆ ಪುಕ್ಕ ಕಿತ್ತಾಕ್ತೀನಿ ಇರುʼ ಪ್ರತಾಪ್‌ಗೆ ವಾರ್ನಿಂಗ್‌ ಕೊಟ್ಟ ವಿನಯ್‌!

ಸಿರಿ, ಗೌರಿಶ್‌ಗೂ ಟಿಪ್ಸ್‌

ಸಿರಿ ಅವರಿಗೆ ʻʻಸಿರಿ ಅವರು ಸ್ಮಾಲ್‌ ಸ್ಕ್ರೀನ್‌ನಲ್ಲಿ ಸೂಪರ್‌ ಸ್ಟಾರ್‌. ಅಂದಮೇಲೆ ಹಿರೋಯಿನ್‌ ಆಗೇ ಇರಬೇಕಲ್ವಾ? ಬಿಗ್‌ ಬಾಸ್‌ ಮನೆಯಲ್ಲಿ ಏಕೆ ಸಣ್ಣ ಪಾತ್ರ ಮಾಡುತ್ತಿದ್ದೀರಾ? ಎಂದು ಕೇಳಿದ್ದಾರೆ. ಗೌರೀಶ್‌ ಅಕ್ಕಿ ಅವರಿಗೆ ʻʻನೀವು ಪತ್ರಿಕೋದ್ಯಮ ಮಾಡಿದವರು. ನೀವು ಧ್ವನಿಯಾಗಿದ್ದೀರಾ. ಎಲ್ಲಾದರೂ ನೀವು ಹಾಕಿಕೊಂಡ ಮೈಕ್‌ ಸರಿ ಇಲ್ಲ ಅಂದರೆ, ಬಿಗ್‌ ಬಾಸ್‌ ಅವರು ಮೈಕ್‌ ಸರಿಪಡಿಸಿಕೊಳ್ಳಿ ಎನ್ನುತ್ತಾರೆ. ಆದರೆ ನಿಮಗೆ ಈಗ ಬಿಗ್‌ ಬಾಸ್‌ ಹೇಳಲ್ಲ. ಏಕೆ ಗೊತ್ತ? ನಿಮ್ಮ ಧ್ವನಿಯೇ ಇಲ್ಲʼʼ ಎಂದರು. 

ಸುಮ್ಮನೆ ಕೂರೋದಲ್ಲ!

ವರ್ತುರ್‌ ಸಂತೋಷ್‌ಗೂ ಪ್ರಥಮ್‌ ʻಸುಮ್ಮನೆ ಕೂರೋದಲ್ಲ. ಹೆಸರಿಗೂ ವ್ಯಕ್ತಿತ್ವಕ್ಕೂ ಸಂಬಂಧವೇ ಇಲ್ಲʼ ಎಂದರು. ಅಷ್ಟೇ ಅಲ್ಲದೇ ಪ್ರತಾಪ್‌ ವಿಚಾರದಲ್ಲೂ ತೇಜೋವಧೆ ಮಾಡುವುದು ಸರಿಯಲ್ಲ ಅಂದಿದ್ದಾರೆ.

ಮೈಕಲ್‌ ಬನ್ನಿ ನಾಗರಭಾವಿಗೆ!

ಪ್ರಥಮ್‌ ಅವರು ಮೈಕಲ್‌ಗೆ ʻʻನಿಮ್ಮ ಕನ್ನಡ ಇಷ್ಟವಾಯಿತು. ಆದರೆ ಇಲ್ಲೇನು ಜಿಮ್‌ ಮಾಡಕ್ಕಾ ಬಂದಿದ್ದು? ಇಲ್ಲಿ ಕೆಲವು ಅಷ್ಟೇ ಪರಿಕರಗಳು ಇವೆ. ಬನ್ನಿ ನಾಗರಭಾವಿಗೆ ಜಿಮ್‌ ಮಾಡೋರಂತೆ. ಆಟ ಕರೆಕ್ಟ್ ಆಗಿ ಆಡಿ, ಎಲ್ಲರ ಜತೆಗೆ ಚೆನ್ನಾಗಿ ಬೆರೀರಿʼʼಎಂದರು.

ಅಷ್ಟೇ ಅಲ್ಲದೇ ಆಗಾಗ ಸಂಗೀತಾ ಅವರ ಜತೆ ಸೇವೆ ಮಾಡಿಸಿಕೊಂಡು ಕಾರ್ತಿಕ್‌ ಅವರಿಗೆ ಹೊಟ್ಟೆಕಿಚ್ಚು ಬರುವ ಹಾಗೆಯೂ ನಡೆದುಕೊಂಡರು. ಕ್ಯಾಪ್ಟನ್‌ ಸ್ನೇಹಿತ್‌ ಅವರಿಗೂ ಪ್ರಥಮ್‌ ಬಿಟ್ಟಿರಲಿಲ್ಲ. ʻʻನೀವು ಸೇಫ್ ಗೇಮ್ ಆಡ್ತಿದ್ದೀರಾ ಅಂತ ಅನಿಸುತ್ತಿಲ್ವಾ? ಡಿಪ್ಲೊಮ್ಯಾಟಿಕ್ ಆಗಿದ್ದೀರಾ. ಇನ್ನೊಸೆಂಟ್ ಆಗಿ ಆಕ್ಟ್ ಮಾಡ್ತಿದ್ದೀರಾʼʼಎಂದು ಹಲವು ಪ್ರಶ್ನಗೆಳನ್ನೂ ಕೇಳಿದರು.

ಇದನ್ನೂ ಓದಿ: BBK Season 10: ಇಶಾನಿ- ಮೈಕೆಲ್‌ ನಡುವೆ ಸಮ್‌ಥಿಂಗ್‌; ನಥಿಂಗ್‌ ಅಂತಿದ್ದಾರೆ ಸಂಗೀತಾ-ಕಾರ್ತಿಕ್‌!

ಒಟ್ಟಾರೆ ಪ್ರಥಮ್‌ ಅತಿಥಿಯಾಗಿ ಬಂದು ವೀಕ್ಷಕರ ಧ್ವನಿಯಾಗಿ ಅಭಿಪ್ರಾಯಗಳನ್ನು ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದಕ್ಕೆ ಪ್ರೇಕ್ಷಕರು ಕೂಡ ಸಂತಸ ಹೊರ ಹಾಕಿದ್ದಾರೆ. ಬಿಗ್​ಬಾಸ್ ಮನೆಗೆ ಬಂದ ದಿನದಿಂದಲೂ ಅಸಮರ್ಥರು, ಸಮರ್ಥರ ಸೇವೆ ಮಾಡುತ್ತಿದ್ದಾರೆ. ಪ್ರಥಮ್‌ ಟಾಸ್ಕ್‌ ಕೂಡ ಆಡಿಸಿದ್ದಾರೆ. ಸಮರ್ಥರಿಗೆ ಒಂದೂ ಚಾನ್ಸ್‌ ಬಿಟ್ಟುಕೊಡದೇ ಅಸಮರ್ಥರು ಸಮರ್ಥರ ವಿರುದ್ಧ ಭರ್ಜರಿ ಜಯ ಗಳಿಸಿ, ಬಿಗ್​ಬಾಸ್ ಕಡೆಯಿಂದ ಬಂಫರ್ ಉಡುಗೊರೆ ಪಡೆದಿದ್ದಾರೆ. ಭರ್ಜರಿ ಭೋಜವನ್ನೂ ಸ್ವೀಕರಿಸಿದರು.

Exit mobile version