ಬೆಂಗಳೂರು: ರೋಚಕ ವಾರದ ಸಾರಾಂಶ ತಿಳಿಯುವ ಸಮಯ ಬಂದಾಗಿದೆ. ಈ ವಾರ (BBK Season 10) ತುಕಾಲಿ ಸಂತು, ಭಾಗ್ಯಶ್ರೀ, ಗೌರೀಶ್ ಅಕ್ಕಿ, ಕಾರ್ತಿಕ್ ಮಹೇಶ್, ಸಂಗೀತಾ ಹಾಗೂ ತನಿಷಾ ನಾಮಿನೇಟ್ ಆಗಿದ್ದಾರೆ. ಈ ವಾರ ಮನೆಯಿಂದ ಯಾರು ಹೊರ ಬರಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಆದರೆ ಗೌರೀಶ್ ಅಕ್ಕಿ ಅವರ ಪತ್ನಿ ಮಾಲತಿ ಅವರು “ಮುಂದಿನ ಪೋಸ್ಟ್ ಗೌರೀಶ್ ಸೆಲ್ಫಿ ಜತೆʼʼ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ನೆಟ್ಟಿಗರು ಈ ವಾರ ಗೌರೀಶ್ ಅವರು ಔಟ್ ಆಗುವುದು ಕನ್‌ಫರ್ಮ್ ಎಂದು ಹೇಳುತ್ತಿದ್ದಾರೆ.
ಮಾಲತಿ ಗೌರೀಶ್ ಪೋಸ್ಟ್ ಏನು?
ʻʻಫೈನಲಿ.. ಹದಿಮೂರು ದಿನ .. ಲೈಫ್ ನಲ್ಲಿ 24 ಗಂಟೆಗಳು ಟೆನ್ಶನ್‌ನಲ್ಲಿ ಕೊಟ್ಟ ದಿನಗಳು.. ಇದೇ ಟೆನ್ಶನ್ ನಲ್ಲಿ TV ಮುಂದೆ ಚಾಪೆ ಹಾಕಿ 6 ದಿನ ಅಲ್ಲೇ ಮಲಗಿದ್ದೇನೆ. ಮನೆಯಲ್ಲಿ ಸ್ವಿಗ್ಗಿ ಬಿಟ್ಟರೆ ಪಕ್ಕದ ಮನೆಯ ಗಿರಿಜಾ ಆಗಾಗ ತಂದು ಕೊಡುತ್ತಿದ್ದ ಊಟ. ಈ ಟೆನ್ಷನ್ ಆಟದ ಸೋಲು ಗೆಲುವಿಗಾಗಿ ಅಲ್ಲ. ಎಲ್ಲೋ ದೂರ ಬಿಟ್ಟು ಹೋಗಿದ್ದಾರೆ ಅನ್ನೋ ಮಿಸ್ಸಿಂಗ್ ಮಿಸ್ಸಿಂಗ್ ಫೀಲಿಂಗೂ ಅಲ್ಲ. ಅದೇನೋ ತಿಳಿಯದ ಸಂಕಟ.. ಊಹೆಗೂ ನಿಲುಕದ ಅಸಮಾಧಾನ.. ಇವತ್ತಿಗೆ ಕೊನೆಯಾಗಲಿ ಅನ್ನೋದೊಂದೇ ಆಸೆ.. ಎಲ್ಲರೂ ಪ್ರೀತಿಯಿಂದ ಓಟು ಹಾಕಿದ್ದೀರಿ ಮನೆಯಲ್ಲಿ ಇರಲಿ ಅಂತ.. ಆ ಪ್ರೀತಿಗೆ ಸದಾ ಋಣಿ.. ಈಗ ಮನಸ್ಥಿತಿ ಬದಲಾಗಿದೆ.. ಮನೆಗೆ ಬರಲಿ ಅನ್ನಿಸುತ್ತಿದೆ.. ಅಲ್ಲಿ ಅವರಿಗೆ..ಇಲ್ಲಿ ನನಗೆ.. ನಿಮ್ಮ ಓಟು ವ್ಯರ್ಥವಾಯಿತೆಂದು ಭಾವಿಸಬೇಡಿ. ಅದು ನಿಮ್ಮ ಪ್ರೀತಿ .. ಮುಂದಿನ ಪೋಸ್ಟ್ ಗೌರೀಶ್‌ನ ಸೆಲ್ಫಿ ಜೊತೆʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: BBK Season 10: ಅಪ್ಪ ಅಮ್ಮನಿಗೆ ಈ ಶೋ ನೋಡ್ಬೇಡಿ ಎಂದು ಹೇಳಿದ್ದೆ; ಗೌರೀಶ್ ಅಕ್ಕಿ!
ಇದಕ್ಕೂ ಮುಂಚೆ ಕೂಡ ಗೌರೀಶ್ ಅವರು ತುಕಾಲಿ ಸಂತೋಷ್, ವರ್ತೂರ್ ಸಂತೋಷ್ ಜತೆ ಎರಡು ವಾರ ಆಟ ಆಡಿದ್ದರೆ ಸಾಕು ಎಂತಲೂ ಮಾತನಾಡಿದ್ದರು. ಅಷ್ಟೇ ಅಲ್ಲದೇ ಕಳೆದ ಸಂಚಿಕೆಯಲ್ಲಿ ನನಗೆ ಎಳ್ಳಷ್ಟೂ ಬಿಗ್ ಬಾಸ್‌ಗೆ ಬರಲು ಆಸಕ್ತಿ ಇರಲಿಲ್ಲ. ನನ್ನ ಹೆಂಡತಿ ಹೇಳಿದ್ದಕ್ಕೆ ಬಂದೆʼʼ ಎಂದೂ ಹೇಳಿದ್ದರು.
ಗೌರೀಶ್ ಅಕ್ಕಿ ಯಾರು?
ಕೊಪ್ಪಳ ಜಿಲ್ಲೆಯ ಮುಧೋಳ ಮೂಲದ ಗೌರೀಶ್ ಅಕ್ಕಿ ಮೊದಲು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಬಳಿಕ ಮಾಧ್ಯಮ ಲೋಕಕ್ಕೆ ಎಂಟ್ರಿಕೊಟ್ಟರು. ವರ್ಷಗಳ ಕಾಲ ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ ಗೌರೀಶ್ ಅಕ್ಕಿ ಆನಂತರ ಡೈರೆಕ್ಟರ್ ಕ್ಯಾಪ್ ತೊಟ್ಟರು. 2016ರಲ್ಲಿ ತೆರೆಗೆ ಬಂದ ‘ಸಿನಿಮಾ ಮೈ ಡಾರ್ಲಿಂಗ್’ ಚಿತ್ರವನ್ನು ಗೌರೀಶ್ ಅಕ್ಕಿ ನಿರ್ದೇಶಿಸಿದರು. ‘ಕೆಂಗುಲಾಬಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ‘ಚಾರ್ಮಿನಾರ್’, ‘ಲೂಸಿಯಾ’, ‘ಸಿಪಾಯಿ’, ‘3000’ ಮುಂತಾದ ಚಿತ್ರಗಳಲ್ಲಿ ಗೌರೀಶ್ ಅಕ್ಕಿ ಕಾಣಿಸಿಕೊಂಡಿದ್ದಾರೆ. ಈಗ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಆಲ್ಮಾ ಮೀಡಿಯಾ ಸ್ಕೂಲ್ ನಡೆಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮ್ಮದೇ ಯೂಟ್ಯೂಬ್ ವಾಹಿನಿ ಮೂಲಕ ವಿಶೇಷ ವಿಡಿಯೊಗಳನ್ನ ಗೌರೀಶ್ ಅಕ್ಕಿ ತಯಾರಿಸುತ್ತಿದ್ದಾರೆ.
ಬಿಗ್‌ಬಾಸ್ ಅರ್ಥ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಬಂದಿದ್ದಾರೆ ಗೌರೀಶ ಅಕ್ಕಿ. ‘ಪಬ್ಲಿಕ್ ಲೈಫ್ ಮತ್ತು ಪರ್ಸನಲ್ ಲೈಫ್‌ಗಳ ನಡುವಿನ ಗೆರೆ ಬ್ಲರ್ ಆಗುವುದು ಬಿಗ್‌ಬಾಸ್ ಮನೆಯಲ್ಲಿ. ನನ್ನೊಳಗೆ ನಿಜವಾಗಲೂ ಹೇಗಿದ್ದೇನೋ ಅದು ಬಿಗ್‌ಬಾಸ್ ಮನೆಯಲ್ಲಿ ಹೊರಗೆ ಬರುತ್ತದೆ. ನನ್ನನ್ನು ನಾನು ಅರ್ಥಮಾಡಿಕೊಳ್ಳಲಿಕ್ಕೆ ಮತ್ತು ಜನರನ್ನು ಅರ್ಥಮಾಡಿಕೊಳ್ಳಲಿಕ್ಕೆ ಬಿಗ್‌ಬಾಸ್ ಮನೆಗಿಂತ ಒಳ್ಳೆಯ ವೇದಿಕೆ ಯಾವುದಿದೆ?’ ಎಂದು ಗೌರೀಶ ಅಕ್ಕಿ, ಪ್ರಶ್ನಿಸುವ ಮೂಲಕ ಪ್ರಬಲ ಸ್ಪರ್ಧಿ ಎಂದು ಸಾರಿದ್ದಾರೆ. ‘ಒಂದು ತಿಂಗಳು ಮನೆಯೊಳಗಿದ್ದು ಬಿಗ್‌ಬಾಸ್ ಶೋ ದ ಎಸೆನ್ಸ್ ಅರ್ಥ ಮಾಡಿಕೊಳ್ಳಬೇಕು’ ಎನ್ನುವ ಆಸೆಯನ್ನು ಹೊತ್ತುಬಂದಿರುವ ಗೌರಿಶ ಅಕ್ಕಿ ಅವರಿಗೆ ಜನರು 82% ವೋಟ್ ಮಾಡಿದ್ದಾರೆ.
ಮೊದಲ ವಾರ ನಾಮಿನೇಶನ್ ಪ್ರಕ್ರಿಯೆಯಲ್ಲಿ ಆ ತೋಪಿನ ಶಬ್ದ, ಬಣ್ಣ ಚೆಲ್ಲುವ ವೇಗ ಇತರೆ ಸ್ಪರ್ಧಿಗಳಲ್ಲಿ ಭಯ ಮೂಡಿಸಿತ್ತು. ನಾಮಿನೇಟ್ ಆದ ಸ್ಪರ್ಧಿಗಳು, ಬಣ್ಣದ ಹೊಡೆತ ನೇರವಾಗಿ ಎದೆಗೆ ತಗುಲಿ ನೋವು ಅನುಭವಿಸಿದ್ದರು.