ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಬಿಗ್ ಬಾಸ್ (BBK Season 10: ) ಸ್ಪರ್ಧಿಗಳಿಗೆ ಮನಸ್ಸನ್ನು ಹಗುರ ಮಾಡಿಕೊಳ್ಳಲು ಬಿಗ್ ಬಾಸ್ ಅವಕಾಶ ನೀಡಿದರು. ಸ್ಪರ್ಧಿಗಳೆಲ್ಲರೂ ಕ್ಯಾಂಪ್ ಫೈರ್ ಸುತ್ತ ಕುಳಿತುಕೊಂಡು ತಮ್ಮ ಒಂದು ನೋವನ್ನು ಹಾಳೆಯಲ್ಲಿ ಬರೆಯಬೇಕು. ಆ ವಿಷಯದ ಬಗ್ಗೆ ಕಪ್ಪು ಚೌಕಟ್ಟಿನಲ್ಲಿ ನಿಂತು ಮಾತನಾಡಬೇಕು. ಯಾರಿಗಾದರೂ ಕ್ಷಮೆಯಾಚಿಸಿ ಮನಸ್ಸನ್ನು ಹಗುರಗೊಳಿಸವಂತೆ ಹೇಳಿದ್ದರು. ಈ ವೇಳೆ ಹಲವು ಸ್ಪರ್ಧಿಗಳು ತಮ್ಮ ನೋವನ್ನು ಹಂಚಿಕೊಂಡರು. ಕಾರ್ತಿಕ್ ಮಹೇಶ್ ಕೂಡ ತಮ್ಮ ಬ್ರೇಕಪ್ ಕುರಿತಾಗಿ ಹೇಳಿಕೊಂಡರು.
ಸಂಗೀತಾ ಹಾಗೂ ಕಾರ್ತಿಕ್ ಇಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಎಂದು ಹಲವರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಆದರೆ ಕಾರ್ತಿಕ್ ಅವರಿಗೆ ಬ್ರೇಕಪ್ ಕೂಡ ಆಗಿದೆಯಂತೆ. ಹೀಗಂತ ಕಾರ್ತಿಕ್ ಅವರೇ ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಹೇಳಿಕೊಂಡಿದ್ದಾರೆ. ʻʻ2021 ನನ್ನ ಬದುಕನ್ನು ಬದಲಿಸಿದ ವರ್ಷ. ನಾನು ಪ್ರೀತಿಸಿದ್ದ ಹುಡುಗಿ ನನ್ನಿಂದ ದೂರ ಆದಳು. ನಾವಿಬ್ಬರೂ 8 ವರ್ಷದಿಂದ ಪ್ರೀತಿ ಮಾಡುತ್ತಿದ್ದೆವು. ಅವರ ಕಡೆಯಿಂದ ತಪ್ಪಾಗಿರುತ್ತೆ, ನನ್ನ ಕಡೆಯಿಂದ ಕೂಡ. ನನ್ನ ಕಡೆಯಿಂದ ಮುಖ್ಯವಾಗಿ ತಪ್ಪಾಗಿದ್ದು, ನಾನು ಅವಳಿಗೆ ಹೊಡೆದಿದ್ದೆ. ಎಷ್ಟೋ ಬಾರಿ ಸಾರಿ ಹೇಳಿದ್ದೆ. ಇದಕ್ಕೆ ಈ ಹಿಂದೆಯೂ ಅವಳಿಗೆ ಕ್ಷಮೆ ಕೇಳಿದ್ದೆ, ಈಗಲೂ ಕ್ಷಮೆ ಕೇಳ್ತೀನಿ” ಎಂದರು.
ಆದರೆ ಯಾರು ಆ ಹುಡುಗಿ ಎಂಬುದು ರಿವೀಲ್ ಮಾಡಿಲ್ಲ. ʻʻಅಪ್ಪನಿಗೆ ಹುಷಾರಿಲ್ಲದಿದ್ದಾಗ ಆಸ್ಪತ್ರೆಯಿಂದ ಅವರನ್ನು ಹುಷಾರಾಗಿ ಕರೆದುಕೊಂಡು ಬರುತ್ತೀನಿ ಎಂದು ಅಮ್ಮನಿಗೆ ಹೇಳಿದ್ದೆ. ಆದರೆ ಅಪ್ಪ ಆರೋಗ್ಯವಾಗಿ ಮನೆಗೆ ಬರಲಿಲ್ಲ. ʼʼಎಂದು ಕಣ್ಣೀರಿಟ್ಟರು.
ಇದನ್ನೂ ಓದಿ: BBK Season 10: ಹೊಸ ಟಾಸ್ಕ್‌ಗಳಿಗೆ ಪ್ರೇಕ್ಷಕರು ಖುಷ್; ಕಾರ್ತಿಕ್-ವಿನಯ್ ಕುಚಿಕು ಫ್ರೆಂಡ್ಸ್!
ಕಾರ್ತಿಕ್ ಹಾಗೂ ಸಂಗೀತಾ ನಡುವೆ ಬಿರುಕು
ಮೂರನೇ ವಾರ ಕ್ಯಾಪ್ಟನ್ ಟಾಸ್ಕ್‌ನಿಂದಾಗಿ ಸ್ನೇಹಿತರಾದ ಕಾರ್ತಿಕ್ ಹಾಗೂ ಸಂಗೀತಾ ನಡುವೆ ಬಿರುಕು ಉಂಟಾಗಿದೆ.ಮನೆಯವರೆಲ್ಲರೂ ಸೇರಿಕೊಂಡು ನಮ್ರತಾ ಹಾಗೂ ತನಿಷಾ ಅವರನ್ನು ಆಯ್ಕೆ ಮಾಡಿಕೊಂಡಾಗ ಸಂಗೀತಾ ಅವರು ಅಪ್‌ಸೆಟ್ ಆಗಿದ್ದರು. ಮೆನಯಲ್ಲಿ ಎರಡು ತಂಡ ರಚನೆ ಆಗಬೇಕಿತ್ತು. ಹೀಗಾಗಿ ಕಾರ್ತಿಕ್ ಅವರು ತನಿಷಾ ತಂಡವನ್ನು ಸೇರದೇ ನಮ್ರತಾ ತಂಡಕ್ಕೆ ಸೇರಿದರು. ತನಿಷಾ ಜತೆ ಆಟ ಆಡಿದ್ದೀನಿ. ಈಗ ನಮ್ರತಾ ಗೌಡ ಟೀಂನಲ್ಲಿ ಆಟ ಆಡ್ತೀನಿ ಎಂದು ತನ್ನ ನಿರ್ಧಾರದ ಹಿಂದಿನ ಕಾರಣವನ್ನು ಕಾರ್ತಿಕ್ ನೀಡಿದ್ದರು. ಇದಾದ ಬಳಿಕ ಸಂಗೀತಾ ಅವರು ಅಡುಗೆ ಮಾಡುವಾಗ ಅವರಿಗೆ ಹೊಟ್ಟೆ ಉರಿಸವಂತೆ ನಮ್ರತಾ ಅವರ ಕೈ ಹಿಡಿದು ಕ್ಯೂಟ್ ಆಗಿ ಕಾರ್ತಿಕ್ ಡ್ಯಾನ್ಸ್ ಮಾಡಿದ್ದಾರೆ.
ಬಿಗ್‌ಬಾಸ್ ಮನೆಯ ಬೆಸ್ಟ್ ಜೋಡಿ ಅಂತಲೇ ಗುರ್ತಿಸಿಕೊಂಡಿದ್ದ, ಸದಾ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತ, ಒಬ್ಬರ ಸಲಹೆಯನ್ನು ಇನ್ನೊಬ್ಬರು ಕೇಳುತ್ತ ಬಂದಿದ್ದ ಕಾರ್ತಿಕ್ ಮತ್ತು ಸಂಗೀತಾ ಈ ಕಾರಣಕ್ಕಾಗಿಯೇ ಹಲವು ಸಲ ಉಳಿದವರ ಕೆಂಗಣ್ಣಿಗೆ ಗುರಿಯಾಗಿದ್ದಿದೆ. ಆದರೆ ಅವರ ಸಂಬಂಧದ ಮೇಲೆ ಈಗ ಯಾರದೋ ಕಣ್ಣು ಬಿದ್ದಂತಿದೆ. ಯಾವಾಗಲೂ ಹ್ಯಾಪಿಯಾಗಿರುತ್ತಿದ್ದ ಕಾರ್ತಿಕ್ ಮತ್ತು ಸಂಗೀತ ಬೇರೆಯಾಗಿದ್ದಾರೆಯೇ? ಅವರ ನಡುವೆ ಒಡಕು ಮೂಡಿದೆಯೇ? ಪರಸ್ಪರ ಹಳೆಯದನ್ನು ಮರೆತು ಒಂದಾಗುತ್ತಾರಾ? ಅಥವಾ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದುಕೊಂಡೇ ಹೋಗುತ್ತದಾ?ಎಂಬುದು ನೋಡಬೇಕಿದೆ.
ಬಿಗ್‌ಬಾಸ್ ಕನ್ನಡ ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.