Site icon Vistara News

BBK SEASON 10: ಮೈಕಲ್‌ ನಾಟ್​​ ಔಟ್‌ ; ʻಬಿಗ್‌ ಬಾಸ್‌ʼ ಯೂಟರ್ನ್​​!

Michael ajay Bigg Boss

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಹನ್ನರಡನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮೈಕಲ್‌ ಹಾಗೂ ಅವಿನಾಶ್‌ ಶೆಟ್ಟಿ ಔಟ್‌ ಆಗಿದ್ದಾರೆ. ಆದರೀಗ ಅಸಲಿಯತ್ತು ಬೇರೇನೆ ಇದೆ ಎನ್ನಲಾಗಿದೆ. ಮೈಕಲ್‌ ಅವರು ಹೊರ ಹೋದಂತೆ ತೋರಿಸಲಾಗಿದೆ. ಆದರೆ, ಅವರು ಮರಳಿ ದೊಡ್ಮನೆಗೆ ಬಂದಿದ್ದಾರಂತೆ. ಇಂದಿನ ಎಪಿಸೋಡ್​ನಲ್ಲಿ ಮೈಕಲ್ ಮರಳಿ ಬರುವುದನ್ನು ತೋರಿಸಲಾಗುತ್ತದೆ ಎನ್ನಲಾಗುತ್ತಿದೆ.

ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಪಡೆದಿದ್ದ ಅವಿನಾಶ್ ಶೆಟ್ಟಿ ಮತ್ತು ಮೈಕಲ್‌ ಅಜಯ್‌ ದೊಡ್ಮನೆಯಿಂದ ಹೊರಬಂದಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಬಿಗ್​ಬಾಸ್​ ಕನ್ನಡದ 10ನೇ ಆವೃತ್ತಿಯು (BBK SEASON 10) 77 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಮುನ್ನುಗುತ್ತಿದೆ. ಈ ವಾರ ಸುದೀಪ್ (Sudeep) ಅನುಪಸ್ಥಿತಿಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಅವಿನಾಶ್ ಶೆಟ್ಟಿ (Avinash Shetty) ಮತ್ತು ಮೈಕಲ್‌ ಅಜಯ್‌ (Michael Ajay) ಹೊರಕ್ಕೆ ಬಂದಿದ್ದಾರೆ. ಈ ವಾರ ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್, ‘ಡ್ರೋನ್’ ಪ್ರತಾಪ್, ಮೈಕಲ್ ಅಜಯ್, ಅವಿನಾಶ್ ಶೆಟ್ಟಿ ಮತ್ತು ಸಿರಿ ಅವರು ನಾಮಿನೇಟ್ ಆಗಿದ್ದರು. ಅಂತಿಮವಾಗಿ ಇವರಲ್ಲಿ ಎಲ್ಲರೂ ಸೇಫ್ ಆಗಿ ಮೈಕಲ್ ಅಜಯ್, ಅವಿನಾಶ್ ಶೆಟ್ಟಿ ಮಾತ್ರ ಉಳಿದುಕೊಂಡರು. ಅವರಿಬ್ಬರಲ್ಲಿ ಒಬ್ಬರು ಸೇಫ್ ಆಗಬಹುದೆಂಬ ಎಂಬ ನಿರೀಕ್ಷೆ ಇತ್ತು. ಆದರೆ ಇಬ್ಬರೂ ಹೊರಹೋಗಿದ್ದಾರೆ.

ಹೇಗಿತ್ತು ಎಲಿಮಿನೇಷನ್‌?

ಬಿಗ್‌ಬಾಸ್‌ ಮನೆಯೊಳಗೆ ಎರಡು ಕಾರುಗಳು ಬಂದಿತ್ತು. ಆ ಕಾರಿನೊಳಗೆ ಅವಿನಾಶ್ ಮತ್ತು ಮೈಕಲ್ ಹೋಗಿದ್ದರು . ಈ ಎರಡು ಕಾರುಗಳಲ್ಲಿ ಒಂದು ಕಾರು ತಡವಾಗಿ ಬರುತ್ತದೆ. ಬಂದ ಕಾರಿನಲ್ಲಿರುವವರು ಸೇಫ್ ಎನ್ನಲಾಗಿತ್ತು. ಆದರೆ, ಕಾರುಗಳು ಕೆಲಹೊತ್ತು ಮನೆಯ ಗಾರ್ಡನ್ ಏರಿಯಾದಲ್ಲಿ ರೌಂಡ್ ಹಾಕಿ, ಹೊರಗೆ ಹೋಗಿದ್ದರಿಂದ ಇಬ್ಬರೂ ಎಲಿಮಿನೇಟ್‌ ಆಗಿದ್ದಾರೆ.

ಇದನ್ನೂ ಓದಿ: BBK SEASON 10: ಡಬಲ್‌ ಎಲಿಮಿನೇಷನ್‌; ಬಿಗ್‌ಬಾಸ್‌ ಮನೆಯಿಂದ ಹೊರಬಂದ ಅವಿನಾಶ್, ಮೈಕಲ್‌

ಬಿಗ್​ಬಾಸ್ ಶೋ 50 ದಿನ ಪೂರೈಸಿದ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಂಗಳೂರಿನ ಅವಿನಾಶ್ ಶೆಟ್ಟಿ ಪ್ರವೇಶ ಪಡೆದಿದ್ದರು. ಎಂಟ್ರಿ ಕೊಟ್ಟಾಗಲೇ ಆನೆ ವಿನಯ್‌ಗೆ ಮಾವುತನಾಗಿ ಆತನನ್ನು ಪಳಗಿಸುತ್ತೇನೆ ಎಂದು ಅವಿನಾಶ್ ಡೈಲಾಗ್ ಹೊಡೆದಿದ್ದರು. ಅದು ಸಿಕ್ಕಾಪಟ್ಟೆ ಕ್ರೇಜ್​ ಹುಟ್ಟುಹಾಕಿತ್ತು. ಆದರೆ, ಮತ್ತೆ ಮೂರೇ ವಾರದಲ್ಲಿ ಬಿಗ್ ಬಾಸ್ ಮನೆ ಆಟದಿಂದ ಅವಿನಾಶ್​ ಹೊರಕ್ಕೆ ಬಂದಿದ್ದಾರೆ.

ಮತ್ತೊಂದೆಡೆ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಮೈಕಲ್‌ ಕೂಡ ಈ ವಾರ ಎಲಿಮಿನೇಟ್ ಆಗಿದ್ದಾರೆ. ವಿನಯ್‌ ಜತೆ ಆತ್ಮೀಯವಾಗಿದ್ದವರಲ್ಲಿ ಮೈಕಲ್‌ ಕೂಡ ಒಬ್ಬರು. ಸ್ನೇಹಿತ್‌ ಗೌಡ ಬಿಗ್‌ ಬಾಸ್‌ ಮನೆಯಿಂದ ಹೊರಹೋದ ಬೆನ್ನಲ್ಲೇ ಇದೀಗ ಮೈಕಲ್‌ ಕೂಡ ಹೋಗಿರುವುದು ವಿನಯ್‌ ತಂಡಕ್ಕೆ ಶಾಕ್‌ ನೀಡಿದೆ.

ಟ್ವಿಸ್ಟ್‌ ಬೇರೆಯೇ ಇದೆ!

ಇಂದಿನ ಎಪಿಸೋಡ್​ನಲ್ಲಿ ಮೈಕಲ್ ಮರಳಿ ಬರೋದನ್ನು ತೋರಿಸಲಾಗುತ್ತದೆ ಎನ್ನಲಾಗುತ್ತಿದೆ. ಲೈವ್​ನಲ್ಲಿ ಸಿರಿ ಆಡಿದ ಮಾತು ಗಮನ ಸೆಳೆದಿದೆ. ಪಾತ್ರೆ ತೊಳೆಯುವುದು ಯಾರು ಎನ್ನುವ ವಿಚಾರವನ್ನು ಅವರು ಮಾತನಾಡುತ್ತಿದ್ದರು. ಈ ವೇಳೆ ಸಿರಿ ಅವರು ಮೈಕಲ್ ಹೆಸರನ್ನು ತೆಗೆದುಕೊಂಡಿದ್ದಾರೆ. ಇದು ಕೂಡ ಮೈಕಲ್ ದೊಡ್ಮನೆಗೆ ಮರಳಿದ್ದಾರೆ ಎನ್ನುವುದಕ್ಕೆ ಸಿಕ್ಕಿರುವ ಸಾಕ್ಷಿ ಎನ್ನಲಾಗುತ್ತಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version