Site icon Vistara News

BBK Season 10: ಕ್ಯಾಪ್ಟನ್‌ ಆದ ಮೈಕಲ್‌; ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ!

michael ajay became a captain

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಐದನೇ ವಾರ ಮೈಕಲ್‌ ಕ್ಯಾಪ್ಟನ್‌ ಆಗಿ ಹೊರ ಹೊಮ್ಮಿದ್ದಾರೆ. ಈ ಬಾರಿ ಕ್ಯಾಪ್ಟನ್ಸಿ ಆಯ್ಕೆಯಲ್ಲಿ ಕೊಂಚ ಬದಲಾವಣೆ ಇತ್ತು. ನೇರವಾಗಿ ಆಡದೇ ಮೈಕಲ್‌ ಹಾಗೂ ಭಾಗ್ಯಶ್ರೀ ಪರವಾಗಿ ಸ್ಪರ್ಧಿಗಳು ಆಡಬೇಕಿತ್ತು. ಹೀಗಾಗಿ ಭಾಗ್ಯಶ್ರೀ ಪರವಾಗಿ ಸಂಗೀತಾ, ನಮ್ರತಾ, ವಿನಯ್‌ ಆಡಿದರೆ, ಮೈಕಲ್‌ ಪರವಾಗಿ ತನಿಷಾ, ಸ್ನೇಹಿತ್‌, ಕಾರ್ತಿಕ್‌ ಆಟ ಆಡಿದರು. ಆದೆ ಸಂಗೀತಾ ಅವರಿಗೆ ಟಾಸ್ಕ್‌ ನಿಭಾಯಸಲು ಆಗದೇ ಇದ್ದ ಕಾರಣ ಮೈಕಲ್‌ ಪರ ಆಡಿದವರು ವಿನ್‌ ಆದರು. ಹೀಗಾಗಿ ಮೈಕಲ್‌ ಈ ವಾರ ಮನೆಯ ಕ್ಯಾಪ್ಟನ್‌ ಆದರು. ಈ ವೇಳೆ ಸಂಗೀತಾ ಬಿಕ್ಕಿ ಬಿಕ್ಕಿ ಅತ್ತರು.

ಈ ವಾರದ ಚಟುವಟಿಕೆಯಲ್ಲಿ ಗಂಧದ ಗುಡಿ ಗೆದ್ದಿದ್ದು, ಕ್ಯಾಪ್ಟನ್ಸಿ ಹಾಗೂ ಲುಕ್ಷರಿ ಬಜೆಟ್‌ ಅಧಿಕಾರ ಪಡೆದುಕೊಂಡಿತು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೈಕಲ್‌ ಅವರು ಪ್ರತಿ ಬಾರಿ ವಿನ್‌ ಆದಾಗ ಒಬ್ಬೊಬ್ಬರನ್ನೇ ಔಟ್‌ ಮಾಡಬೇಕಿತ್ತು. ಕಾರ್ತಿಕ್, ಡ್ರೋನ್ ಪ್ರತಾಪ್, ಸಂಗೀತಾ, ತನಿಷಾ ಮತ್ತು ವರ್ತೂರು ಸಂತೋಷ್ ಅವರನ್ನ ಹೊರಗಿಟ್ಟರು. ಕೊನೆಗೆ ಉಳಿದಿದ್ದು ಭಾಗ್ಯಶ್ರೀ ಮಾತ್ರ. ಹೀಗಾಗಿ ಇಬ್ಬರ ನಡುವೆ ಪೈಪೋಟಿ ಇತ್ತು. ಆದರೆ ಬಿಗ್‌ ಬಾಸ್‌ ಕೊನೆಯಲ್ಲಿ ಇವರಿಬ್ಬರ ಪರ ಮೂವರು ಆಡಬೇಕು ಎಂದು ಘೋಷಿಸಿದರು. ಅದರಂತೆ ಭಾಗ್ಯಶ್ರೀ ಪರವಾಗಿ ಸಂಗೀತಾ, ನಮ್ರತಾ, ವಿನಯ್‌ ಆಡಿದರೆ, ಮೈಕಲ್‌ ಪರವಾಗಿ ತನಿಷಾ, ಸ್ನೇಹಿತ್‌, ಕಾರ್ತಿಕ್‌ ಆಟ ಆಡಿದರು.

ಸ್ಪರ್ಧಿಗಳ ಪೊಲಿಟಿಕ್ಸ್‌!

ಮೈಕಲ್‌ ಹಾಗೂ ಭಾಗ್ಯಶ್ರೀ ಅವರು ತಮ್ಮ ಪರ ಆಡಬೇಕು ಎಂದಾಗ ಕೆಲವು ಸ್ಪರ್ದೀಗಳು ಬೇಡಿಕೆಯನ್ನೂ ಇಟ್ಟರು. ಅದರಲ್ಲಿ ವಿನಯ್‌ ತಾವು ಕಾರ್ತಿಕ್‌ ಜತೆ ಆಡಲ್ಲ. ಕಾರ್ತಿಕ್‌ ಎದುರಾಳಿ ಆಗಿ ಆಡುತ್ತೇನೆ ಎಂದರೆ, ಡೈರೆಕ್ಟ್ ನಾಮಿನೇಷನ್‌ ವೇಳೆ ತಮ್ಮ ಹೆಸರನ್ನ ತೆಗೆದುಕೊಳ್ಳುವಂತಿಲ್ಲ ಎಂದು ವಿನಯ್ ಕಂಡೀಷನ್ ಹಾಕಿದರು. ನಮ್ರತಾ ಕೂಡ ನಿಮ್ಮಿಂದ ಬೆನಿಫಿಟ್‌ ಏನಿದೆ? ಎಂದು ಕೇಳಿದಾಗ ಭಾಗ್ಯಶ್ರೀ ಅವರು ನಾಮಿನೇಟ್‌ ಮಾಡಲ್ಲ ಎಂದರು. ಭಾಗ್ಯಶ್ರೀ ಆಯ್ಕೆಯಂತೆ ಸಂಗೀತಾ, ನಮ್ರತಾ, ವಿನಯ್‌ ಆಡಿದರು. ಇತ್ತ ಮೈಕಲ್‌ ಸರದಿಯಲ್ಲಿ ಸ್ನೇಹಿತ್‌ ಅವರು ನಮ್ರತಾ, ವಿನಯ್‌ ಹಾಗೂ ನನ್ನನ್ನು ಆಯ್ಕೆ ಮಾಡು ಎಂದಿದ್ದರು. ಕೊನೆಗೆ ಮೈಕಲ್ ಪರವಾಗಿ ಆಡಿದ್ದು ಕಾರ್ತಿಕ್, ತನಿಷಾ ಮತ್ತು ಸ್ನೇಹಿತ್.

ಇದನ್ನೂ ಓದಿ: BBK Season 10: ಮೈಕಲ್‌, ಇಶಾನಿ ನಡೆಗೆ ಪ್ರೇಕ್ಷಕರು ಬೇಸರ; ಪ್ರೇಯಸಿಗೋಸ್ಕರ ತನಗೆ ತಾನೇ ಮೋಸ!

ಟಾಸ್ಕ್‌ ಏನು?

ಮರದ ತುಂಡುಗಳನ್ನು ಹೆಲ್ಮೆಟ್‌ಗೆ ಹಾಕಿರುವ ಚೆಂಡುಗಳಿಂದ ಬೀಳಿಸಬೇಕಿತ್ತು. ರಿಲೇ ಮಾದರಿಯಲ್ಲಿ ಮೂರು ಸ್ಪರ್ಧಿಗಳು ಆಡಬೇಕಿತ್ತು. ಭಾಗ್ಯಶ್ರೀ ಅವರ ಕಡೆಯಿಂದ ಮೊದಲಿಗೆ ಸಂಗೀತಾ ಆಡಿದರು. ಮೊದಲ ಹಂತವನ್ನ ಸಂಗೀತಾ ಪೂರ್ಣಗೊಳಿಸಲೇ ಇಲ್ಲ. ಇತ್ತ ಸ್ನೇಹಿತ್, ಕಾರ್ತಿಕ್ ಮತ್ತು ತನಿಷಾ ಆಟವಾಡಿ ಮೈಕಲ್‌ನ ಗೆಲ್ಲಿಸಿದರು. ಬಳಿಕ ಮೈಕಲ್‌ ಮನೆಯ ಕ್ಯಾಪ್ಟನ್‌ ಆದರು.

ಕಣ್ಣೀರಿಟ್ಟ ಸಂಗೀತಾ

ಎಲ್ಲರೂ ಇಟ್ಟ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಅವರು ಗಳಗಳನೆ ಅತ್ತಿದ್ದಾರೆ. ಮನೆ ಮಂದಿಯೆಲ್ಲರೂ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ʻʻಶೇಮ್‌, ಶೇಮ್‌, ನನಗೆ ಸ್ಪಲ್ಪವೂ ಮಾಡೋಕೆ ಆಗಿಲ್ಲʼʼಎಂದು ಬಿಕ್ಕಿ ಬಿಕ್ಕಿ ಅತ್ತರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version