Site icon Vistara News

BBK SEASON 10: ಈ ಟಕ್ಕು ಟಕ್ಕು ಅಂದ್ರೇನು ಮೈಕಲ್? ನೆಟ್ಟಿಗರ ಪ್ರಶ್ನೆ; ಕ್ಯಾಪ್ಟನ್‌ ರೂಲ್ಸ್‌ ಬ್ರೇಕ್‌!

michael ajay direct nominate bhagyashree bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಈ ವಾರ ಭಾಗ್ಯಶ್ರೀ ಅವರನ್ನು ಕ್ಯಾಪ್ಟನ್‌ ಮೈಕಲ್‌ ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಕಳೆದ ಬಾರಿ ಪ್ರತಾಪ್‌ ಅವರು ಭಾಗ್ಯಶ್ರೀ ಅವರನ್ನು ನಾಮಿನೇಶನ್‌ನಿಂದ ಪಾರು ಮಾಡಿದ್ದರು. ಆದರೆ ಈ ವಾರ ನೇರವಾಗಿ ನಾಮಿನೇಟ್‌ ಆಗಿದ್ದಾರೆ. ಮಾತ್ರವಲ್ಲ ಮೈಕಲ್‌ ಹೇಳಿದ ಕಾರಣಕ್ಕೆ ಭಾಗ್ಯಶ್ರೀ ಅವರ ಬೇಸರ ವ್ಯಕ್ತಪಡಿಸಿದ್ದಾರೆ. ಮೈಕಲ್‌ ಅವರು ಭಾಗ್ಯಶ್ರೀ ಅವರು ಹರಡುವ ಗಾಸಿಪ್‌ಗಳು, ಗೇಮ್‌ನಲ್ಲಿ ಪರ್ಫಾಮೆನ್ಸ್ ನೋಡಿ ನೇರವಾಗಿ ನಾಮಿನೇಟ್‌ ಮಾಡಿರುವುದಾಗಿ ಹೇಳಿದರು.

ಮೈಕಲ್‌ ಹೇಳಿದ್ದೇನು?

‘ನಾನು ನೇರವಾಗಿ ನಾಮಿನೇಟ್ ಮಾಡುವ ಸದಸ್ಯರು ಭಾಗ್ಯಶ್ರೀ ಮೇಡಂ. ಯಾಕೆಂದರೆ, ಅವರು ಮಾತಾಡುವ ಮಾತುಗಳು, ಹರಡುವ ಗಾಸಿಪ್‌ಗಳು, ಗೇಮ್‌ನಲ್ಲಿ ಪರ್ಫಾಮೆನ್ಸ್ ಇವೆಲ್ಲವೂ ಮನೆಯೊಳಗಿನ ವಾತಾವರಣವನ್ನು ಡೌನ್ ಮಾಡುತ್ತಿವೆ. ಆ ಕಾರಣಕ್ಕಾಗಿ ಅವರನ್ನು ನಾನು ನಾಮಿನೇಟ್ ಮಾಡುತ್ತಿದ್ದೇನೆ’ ಎಂದು ಮೈಕೆಲ್ ಹೇಳಿದರು. ಭಾಗ್ಯಶ್ರೀ ಅವರು ಮೈಕಲ್‌ ಜತೆ ಈ ಬಗ್ಗೆ ಚರ್ಚಿಸಿದರು. ಭಾಗ್ಯಶ್ರೀ ಅವರು ಮೈಕಲ್‌ ಜತೆ ಮಾತನಾಡಿ ʻʻನೀವು ಅಲ್ಲಿ ಈಸಿಯಾಗಿ ನಿಂತುಕೊಂಡು ಮನೆಯವರ ಮುಂದೆ ಇವರು ಮಾಡೋ ಗಾಸಿಪ್‌ ಮನೆಯನ್ನು ಡೌನ್‌ ಮಾಡುತ್ತಿದೆ ಅಂದರೆ, ಯಾರ ಜತೆ ಮಾಡಿದ್ದೀನಿ?ʼʼಎಂದು ಪ್ರಶ್ನೆ ಇಟ್ಟರು.

ಮೈಕಲ್‌ ಈ ಬಗ್ಗೆ ಮಾತನಾಡಿ ʻʻನಾನು ಯಾವಗಲೂ ನಿಮ್ಮನ್ನು ನೋಟಿಸ್‌ ಮಾಡಿದ್ದೀನಿ. ಎಂಟೈರ್‌ ಸೆಂಟೆನ್ಸ್‌ನಲ್ಲಿ ಒಂದು ವರ್ಡ್‌ ಮಾತ್ರ ಕ್ಯಾಚ್‌ ಮಾಡಿ, ಅದನ್ನೇ ಟಕ್ ಟಕ್ ಟಕ್ ಎಂದು ಹೊಡೆಯುತ್ತೀರಾ ಎಂದರು. ಭಾಗ್ಯಶ್ರೀ ಮಾತನಾಡಿ ʻʻಗಾಸಿಪ್ ಅಂದ್ರೆ ಏನು ಹೇಳಿ? ನೀವು ಯಾರ ಹತ್ರನಾದರೂ ಕೇಳಿ. ಯಾರ ಜತೆಗಾದ್ರೂ ಇನ್ನೊಬ್ಬರ ಬಗ್ಗೆ ಹೇಳಿದ್ದೀನಾ ಅಂತ ಎಂದರು. ಮೈಕಲ್‌ ಮತ್ತೆ ಮಾತನಾಡಿ ʻʻಇವಾಗ ನಾನು ಎಷ್ಟೇ ಹೇಳಿದರೂ ನಿಮಗೆ ಅರ್ಥ ಆಗಲ್ಲ. ನಾನು ಇಷ್ಟು ಓಪನ್‌ ಆಗಿ ಹೇಳಿದ್ದೀನಿ. ತುಂಬಾ ಜನ ನಿಮ್ಮ ಹಿಂದೆ ಮಾತಾಡ್ತಾರೆ. ಅದು ನೀವು ನೋಡುವಾಗ ನಿಮಗೆ ಗೊತ್ತಾಗತ್ತೆ ಎಂದರು.

ಇದನ್ನೂ ಓದಿ: BBK SEASON 10: ಎಕ್ಕ, ರಾಜ, ರಾಣಿ ನನ್ನ ಕೈಯೊಳಗೆ ಅಂದ್ರು ಸ್ಪರ್ಧಿಗಳು; ಎಲ್ಲರದ್ದೂ ಹೊಸ ವರಸೆ!

ರೂಲ್ಸ್‌ ಬ್ರೇಕ್‌ ಮಾಡಿದ ಮೈಕಲ್‌-ಕಾರ್ತಿಕ್‌

ಸ್ಪರ್ಧಿಗಳಿಗೆ ದಿನಸಿ ಬೇಕಾದಲ್ಲಿ ಬಿಗ್‌ ಬಾಸ್‌ ಶಾರ್ಟ್ಸ್ ಹಾಕಿಕೊಳ್ಳುವ ಟಾಸ್ಕ್ ನೀಡಿದ್ದರು. ಅದರಲ್ಲಿ ಮೊದಲಿಗೆ ಕಾರ್ತಿಕ್‌ ಹಾಗೂ ಮೈಕಲ್‌ ಭಾಗಿಯಾದರು. ಕೈಯನ್ನು ಬಳಸಿಕೊಳ್ಳದೇ ಶಾರ್ಟ್ಸ್ ಹಾಕಿಕೊಳ್ಳಬೇಕಿತ್ತು. ಆದರೆ ಅತಿ ಬುದ್ಧಿವಂತಿಕೆಯಿಂದ ಮೊದಲಿಗೆ ಮೈಕಲ್‌ ಅಲ್ಲಿದ್ದ ಮೇಜು ಬಳಸಿ ಶಾರ್ಟ್ಸ್ ಹಾಕಿಕೊಂಡರು. ಬಳಿಕ ಕಾರ್ತಿಕ್‌ ಕೂಡ ಅದನ್ನೇ ಫಾಲೋ ಮಾಡಿದರು. ಬಿಗ್‌ ಬಾಸ್‌ ಈ ರೀತಿಯ ಟಾಸ್ಕ್‌ ನಿಭಾಯಿಸಿದಕ್ಕೆ ಎರಡು ಬಾಸ್ಕೆಟ್‌ ಅನ್ನು ಲೆಸ್‌ ಮಾಡಿದರು. ಮನೆಮಂದಿ ಎರಡು ಬಾಸ್ಕೆಟ್‌ಗಳನ್ನು ಕಳೆದುಕೊಂಡರು.

ಮೊದಲಿಗೆ ಕಾರ್ತಿಕ್‌ ಅವರ ಒಂದು ಹಂತದ ಆಟ ಪೂರ್ಣಗೊಂಡಿತ್ತು. ಮೈಕಲ್‌ ತರ ನೀವು ಮಾಡಿ ಎಂದು ನಮ್ರತಾ ಸಲಹೆ ನೀಡಿದ್ದರು. ಕಾರ್ತಿಕ್ ಅದೇ ರೀತಿ ಮಾಡಿದರು. ಅವರಿಂದ ಕೂಡ ಎರಡು ಬಾಸ್ಕೆಟ್ ದಿನಸಿ ಹೋಯಿತು. ಕೋಪದಿಂದ ನಮ್ರತಾ ಅವರಿಗೆ ಕಾರ್ತಿಕ್‌ ಪರೋಕ್ಷವಾಗಿ ಬೈದಿದ್ದಾರೆ. ವರ್ತೂರು ಸಂತೋಷ್‌, ಪ್ರತಾಪ್, ಸ್ನೇಹಿತ್, ವಿನಯ್, ಸಂಗೀತಾ ಆಡಿ ದಿನಸಿಯನ್ನು ಉಳಿಸಿಕೊಂಡರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version