Site icon Vistara News

BBK SEASON 10: ಸಂಗೀತಾ ವರ್ತನೆ ತುಂಬ ಕೀಳು ಎಂದ ಮೈಕಲ್‌; ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ!

Michael Ajay direct attack on Sangeetha Sringeri

ಬೆಂಗಳೂರು: ಬಿಗ್‌ ಬಾಸ್‌ ಸೀಸಬ್‌ 10ರ (BBK SEASON 10: ) ಹನ್ನಂದನೇ ವಾರ ಬಿಗ್‌ ಬಾಸ್‌ ʻಕೊಳೆ ಒಳ್ಳೇದಲ್ಲ’ ಟಾಸ್ಕ್‌ ನೀಡಿದ್ದಾರೆ. ಇದರಲ್ಲಿ ತನಿಷಾ ಹಾಗೂ ಸಂಗೀತಾ ಮಾಲೀಕರು. ಎರಡು ತಂಡಗಳೂ ಆಗಿವೆ. ಆದರೆ ಸಂಗೀತಾ ಅವರು ತಮ್ಮದೇ ತಂಡದಿಂದ ಟೀಕೆಗೆ ಗುರಿಯಾಗಿದ್ದಾರೆ. ಮೈಕಲ್‌ ಅವರು ಸಂಗೀತಾ ಅವರ ಟೀಂ. ಅವರ ಕಟು ಮಾತುಗಳಿಂದ ಸಂಗೀತಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಂಗೀತಾ ವಿರುದ್ಧ ಮೈಕಲ್ ತಿರುಗಿ ಬಿದ್ದಿದ್ದಾರೆ. ಸಂಗೀತಾ ಈ ಮನೆಯ ನೆಗೆಟಿವ್‌ ಎನರ್ಜಿ ಎಂದೂ ಮೈಕಲ್‌ ನೇರವಾಗಿ ಎಲ್ಲ ಸದಸ್ಯರ ಮುಂದೆ ಹೇಳಿದ್ದಾರೆ.

ಕಲರ್ಸ್‌ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೊದಲ್ಲಿ ಮೈಕಲ್‌ ಅವರ ಕೂಗಾಟ ಅನಾವರಣಗೊಂಡಿದೆ. ಮೈಕಲ್‌ ಮಾತನಾಡಿ ʻʻನಮ್ಮ ತಂಡದ ಮಾಲೀಕರು ಸಂಗೀತಾ ಅವರು ಗೆದ್ದ ಹಣದಲ್ಲಿ ಶೇರ್‌ ಮಾಡಲು ರೆಡಿಯೇ ಇಲ್ಲ. ಭಿಕ್ಷಕರು ತರ ಕೊಡ್ತೇನೆ, ನೀವು ಇಸ್ಕೊಳ್ಳಿ ಎಂಬ ವರ್ತನೆಯನ್ನು ಸಂಗೀತಾ ಅವರು ತೋರಿದರು. ಸಂಗೀತಾ ಅವರ ಕೀಳು ಮಟ್ಟದ ವರ್ತನೆ ಎಲ್ಲರಿಗೂ ಗೊತ್ತಾಗಬೇಕು. ಸಂಗೀತಾ ಅವರು ಈ ಮನೆಯಲ್ಲಿ ದೊಡ್ಡ ನೆಗೆಟಿವ್‌ ಎನರ್ಜಿ. ನನಗೆ ಮಾತನಾಡುವ ಹಕ್ಕು ಇದೆʼʼಎಂದು ಸಂಗೀತಾ ವಿರುದ್ಧ ಕೂಗಿದ್ದಾರೆ. ಇತ್ತ ಸಂಗೀತ ಕೂಡ ಮೈಕಲ್‌ಗೆ ʻʻಮೈಕಲ್‌ ನಿಮಗೆ ಮೊದಲು ನಾಚಿಕೆ ಆಗಬೇಕು. ಎಲ್ಲರಿಗಿಂತ ಹೆಚ್ಚು ಹಣವನ್ನು ಪಡೆದಿದ್ದು ನೀವು. ಹಣವನ್ನು ಜಾಸ್ತಿ ಪಡೆದು ಈ ರೀತಿ ಮಾತನಾಡುತ್ತಿದ್ದೀರಾ. ನನಗೆ ನೆಗೆಟಿವ್‌ ಎಂದು ಕರೆಯುವ ಅಧಿಕಾರ ನಿಮಗೆ ಇಲ್ಲʼʼಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಸಂಗೀತಾ ಕಂಡರೆ ಮೈಕಲ್​ಗೆ ಸ್ವಲ್ಪವೂ ಇಷ್ಟವಿಲ್ಲ. ಸದಾ ಒಂದಿಲ್ಲೊಂದು ವಿಚಾರಕ್ಕೆ ಇಬ್ಬರೂ ಜಗಳ ಆಡುತ್ತಲೇ ಇರುತ್ತಾರೆ.ಸಂಗೀತಾ ವಿರುದ್ಧ ಮೈಕಲ್ ತಿರುಗಿ ಬಿದ್ದಿದ್ದಾರೆ. ಪರಿಸ್ಥಿತಿ ಹೀಗೆ ಆಗಬಹುದು ಎಂಬುದು ವಿನಯ್ ಅವರು ಮೊದಲೇ ಊಹಿಸಿದ್ದರು.ಇವರಿಬ್ಬರ ಜಗಳ ಎಲ್ಲಿಗೆ ಹೋಗಿ ಮುಟ್ಟಲಿದೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: BBK SEASON 10: ವಿನಯ್‌- ಅವಿನಾಶ್‌ ಕಾಳಗ; ಕಾರ್ತಿಕ್‌ಗೆ ಬೆನ್ನು ನೋವು; ಆಟದಿಂದ ಹೊರಗುಳಿದ ʻಆನೆʼ!

ಟಾಸ್ಕ್‌ ಏನು?

‘ಕೊಳೆ ಒಳ್ಳೇದಲ್ಲ’ ಎಂಬ ಟಾಸ್ಕ್ ಬಿಗ್‌ ಬಾಸ್‌ ನೀಡಿದ್ದರು. ಪ್ರತಿ ತಂಡದ ಆಟಗಾರರು ಎದುರಾಳಿ ತಂಡದ ಆಟಗಾರರಿಂದ ತಮಗೆ ಮೀಸಲಾಗಿರುವ ಬಟ್ಟೆಗಳನ್ನು ರಕ್ಷಿಸಿ, ಶುಭ್ರಗೊಳಿಸಬೇಕಿತ್ತು. ಪ್ರತಿ ತಂಡದಲ್ಲಿ ಇಬ್ಬರು ಬಟ್ಟೆ ಒಗೆದರೆ, ಇಬ್ಬರು ತಮ್ಮ ತಂಡದ ಬಟ್ಟೆಗಳನ್ನು ರಕ್ಷಿಸಿ, ಎದುರಾಳಿ ತಂಡದ ಬಟ್ಟೆಗಳಿಗೆ ಬಣ್ಣ ಎರಚಬೇಕಿತ್ತು. ಮೂರು ಸುತ್ತಿನಲ್ಲಿ ಈ ಟಾಸ್ಕ್‌ ನಡೆಯಲಿದ್ದು, ಪ್ರತಿ ಸುತ್ತಿನಲ್ಲಿ ಅತೀ ಹೆಚ್ಚು ಬಟ್ಟೆಗಳನ್ನು ಶುಭ್ರಗೊಳಿಸುವ ತಂಡ ಈ ಟಾಸ್ಕ್ ಗೆದ್ದಂತೆ ಎಂದು ಬಿಗ್ ಬಾಸ್‌ ಘೋಷಿಸಿದ್ದರು. 

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version