Site icon Vistara News

BBK Season 10: ಮೈಕಲ್‌, ಇಶಾನಿ ನಡೆಗೆ ಪ್ರೇಕ್ಷಕರು ಬೇಸರ; ಪ್ರೇಯಸಿಗೋಸ್ಕರ ತನಗೆ ತಾನೇ ಮೋಸ!

michael ajay Eshani bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK Season 10) ಐದನೇ ವಾರ ಮೈಕಲ್‌ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ, ಸ್ವತಃ ಮೈಕಲ್‌ ಅವರೇ ತಮ್ಮ ತಪ್ಪನ್ನು ಕೂಡ ಒಪ್ಪಿಕೊಂಡಿದ್ದಾರೆ. `ಗಂಧದ ಗುಡಿ’ ತಂಡಕ್ಕೆ ಇಶಾನಿ, ‘ವಜ್ರಕಾಯ’ ತಂಡಕ್ಕೆ ಮೈಕಲ್ ಅಜಯ್ ಅವರು ಉಸ್ತುವಾರಿ ಆಗಿದ್ದರು. ತನ್ನ ಟೀಂ ಗೆಲ್ಲಬೇಕು ಎಂದು ಸುಳ್ಳು ಫಲಿತಾಂಶ ನೀಡಿದ ಇಶಾನಿ, ಎದುರಾಳಿ ತಂಡದವರಿಗೆ ಹೇಗೆ ಆಟ ಆಡಬೇಕು ಎಂದು ಸಲಹೆ ಕೊಟ್ಟು ತನ್ನ ಟೀಂಗೆ ಮೋಸ ಮಾಡಿದ ಮೈಕಲ್‌. ಇವರಿಬ್ಬರ ಈ ನಡೆಗೆ ಪ್ರೇಕ್ಷಕರು ಛೀಮಾರಿ ಹಾಕಿದ್ದಾರೆ.

ಟಾಸ್ಕ್‌ ಏನು?

ಎರಡು ಜೋಡಿ ಬಕೆಟ್‌ ಸಿಕ್ಕಿಸಿರುವ ಹಗ್ಗದ ತುದಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಸರದಿಯಲ್ಲಿ ನಿಲ್ಲಬೇಕು. ಬಿಗ್‌ ಬಾಸ್‌ ಆಗಾಗ ಸಂಖ್ಯೆಯನ್ನು ಘೋಷಿಸುತ್ತಾರೆ. ಆಗ ಸ್ಪರ್ಧಿಗಳು ಓಡಿ ಬಂದು ಹಿಂಬದಿಯ ಸಹಾಯದಿಂದ ಬಲೂನ್‌ ಒತ್ತಿ ಒಡೆದು ಒಳಗಿರುವ ನೀರು ಬಕೆಟ್‌ಗೆ ಬರುವಂತೆ ಮಾಡಬೇಕು. ಬಕೆಟ್‌ನಲ್ಲಿ ಅತಿ ಹೆಚ್ಚು ನೀರು ಇರುವ ತಂಡ ಗೆಲ್ಲುತ್ತದೆ. ಈ ವೇಳೆ ವಿನಯ್‌ ಹಾಗೂ ಕಾರ್ತಿಕ್‌ ನಡುವೆ ಹಲವು ವಾದಗಳು ನಡೆದವು.

ಎರಡೂ ತಂಡಗಳು ಹಲವು ನಿಯಮಗಳನ್ನು ಬ್ರೇಕ್‌ ಕೂಡ ಮಾಡಿದವು. ವಿನಯ್‌ ಕೂಡ ಕಾರ್ತಿ ಅವರನ್ನು ತಳ್ಳಿದರೆ, ತನಿಷಾ ಕೂಡ ಕೈಯಲ್ಲಿ ಬಲೂನ್‌ ಒಡೆದರು. ಹೀಗೆ ನಿಯಮಗಳನ್ನು ಉಲ್ಲಂಘನೆ ಮಾಡಿದರು. ಬಳಿಕ ಇಶಾನಿ ತಮ್ಮ ಟೀಂ ಮಾಡಿರುವ ತಪ್ಪನ್ನು ಒಪ್ಪಿಲ್ಲ. ಮೈಕಲ್‌ ಅವರನ್ನು ಕನ್ವಿನ್ಸ್‌ ಮಾಡಲು ಹರಸಾಹಸ ಪಟ್ಟರು. ಆಮೇಲೆ ಮೈಕಲ್ ಅವರು ಎರಡೂ ತಂಡಗಳ ತಪ್ಪನ್ನು ಲೆಕ್ಕ ಹಾಕಿ ‘ಗಂಧದ ಗುಡಿ’ ಟೀಂ ಹೆಚ್ಚು ಪಾಯಿಂಟ್ಸ್ ಪಡೆದಿದೆ ಎಂದು ಹೇಳಿದ್ದರು. ಆದರೂ ಇಶಾನಿ ಕೇಳಲಿಲ್ಲ.

ಬಳಿಕ ಇಶಾನಿ ಅವರೇ ಸ್ವತಃ ಒಂದು ಬಲೂನ್‌ ತೆಗೆದುಕೊಂಡು ವಜ್ರಕಾಯ ಬಕೆಟ್‌ಗೆ ಒಡೆದು ಹಾಕಿದರು. ಇದಾದ ಬಳಿಕ ಕ್ಯಾಮೆರಾ ಮುಂದೆ ಟೈ ಆಗಿದೆ ಎಂದು ಅನೌನ್ಸ್‌ ಮಾಡಿದರು. ಮೈಕಲ್‌ ಆಗಲೂ ಕೂಡ ಈ ನಿರ್ಧಾರವನ್ನು ಒಪ್ಪಲಿಲ್ಲ. ಇಶಾನಿಗೆ ಮೈಕಲ್‌ ಮಾತನಾಡಿ ʻʻನಂಗೆ ಗೊತ್ತು ಈ ಸ್ಕೋರ್‌ ತಪ್ಪು ಎಂದು. ನನಗೆ ಈ ಡಿಸಿಶನ್‌ ಇಷ್ಟ ಆಗಿಲ್ಲ. ನಾನು ಇಲ್ಲಿ ಒಬ್ಬನೇ ಬಂದೆ, ನಿನ್ನ ಇಷ್ಟ ಪಟ್ಟೆ ಹೌದು. ಆದರೆ ನನ್ನ ಎಥಿಕ್‌, ಮಾರಲ್ ಬಿಟ್ಟುಕೊಡಲು ರೆಡಿ ಇಲ್ಲ. ನಾನು ನನ್ನ ಟೀಂಗೆ ಮೋಸ ಮಾಡಿಲ್ಲ. ನನಗೆ ನಾನೇ ಮೋಸ ಮಾಡಿಕೊಂಡಿದ್ದೀನೆʼʼಎಂದು ಪಶ್ಚಾತ್ತಾಪಪಟ್ಟರು ಮೈಕಲ್‌. ಬಳಿಕ ಇಶಾನಿ ʻ ಇನ್ನು ಮುಂದೆ ನನ್ನ ಫೇವರ್‌ ಆಗಿರಬೇಡʼʼಎಂದರು.

ಇದನ್ನೂ ಓದಿ: BBK Season 10: ಶತ್ರುವಿನ ಶತ್ರು ಮಿತ್ರ ಅಂತೆ! ವಿನಯ್ ಪಾಲಿಗೆ ಪ್ರತಾಪ್ ಹಾಗೇನಾ?

ಬಿಗ್‌ ಬಾಸ್‌ಗೂ ಅಸಮಾಧಾನ

ʻʻಬಿಗ್‌ ಬಾಸ್‌ ನೀಡುವ ಟಾಸ್ಕ್‌ಗಳಲ್ಲಿ ಉಸ್ತುವಾರಿಗಳನ್ನು ನೇಮಿಸುವುದು ಆಟ ಆರೋಗ್ಯಕರವಾಗಿ, ನಿರ್ಮಲವಾಗಿ ನಡೆಯಬೇಕು ಎಂದು. ಆದರೆ ಉಸ್ತುವಾರಿಯನ್ನು ಅರ್ಥ ಮಾಡಿಕೊಳ್ಳದೆಯೋ, ಅಥವಾ ಅತಿಯಾಗಿ ಅರ್ಥಮಾಡಿಕೊಂಡು ಇಶಾನಿ, ಮತ್ತು ಮೈಕಲ್‌ ಅವರು ಆಟದ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ. ಬೇಜವಾಬ್ದಾರಿತನವನ್ನು ಮೆರೆದು ಒಂದೇ ಆಟಕ್ಕೆ ಮೂರು ನಿರ್ಧಾರಗಳನ್ನು ಘೋಷಿಸಿದ್ದಾರೆ. ಆದರೂ ಉಸ್ತುವಾರಿ ಅವರಿಗೆ ಮರ್ಯಾದೆ ನೀಡಿ, ಡ್ರಾ ಎಂದು ಘೋಷಿಸಲಾಗಿದೆʼʼಎಂದರು. ಇದರಿಂದಾಗಿ ವಿಶೇಷ ಅಧಿಕಾರವನ್ನು ಸ್ಪರ್ಧಿಗಳು ಕಳೆದುಕೊಂಡರು.

ಎದುರಾಳಿ ತಂಡದವರಿಗೆ ಹೇಗೆ ಆಟ ಆಡಬೇಕು ಎಂದು ಸಲಹೆ ಕೊಟ್ಟು ತನ್ನ ಟೀಂಗೆ ಮೈಕಲ್‌ ಮೋಸ ಮಾಡಿದ್ದಾರೆ. ಇವರಿಬ್ಬರ ಈ ನಡೆಗೆ ಪ್ರೇಕ್ಷಕರು ಛೀಮಾರಿ ಹಾಕಿದ್ದಾರೆ. ಮೈಕಲ್‌ ಈಗಾಗಲೇ ಬಿಗ್‌ ಬಾಸ್‌ ಮನೆಯಲ್ಲಿ ಇಶಾನಿ ತನ್ನ ಗರ್ಲ್‌ ಫ್ರೆಂಡ್‌ ಎಂದು ಹೇಳಿಕೊಂಡಿದ್ದಾರೆ. ಇದೀಗ ಪ್ರೇಯಸಿಗೋಸ್ಕರ ತನಗೆ ತಾನೇ ಮೋಸ ಮಾಡಿಕೊಂಡಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version