Site icon Vistara News

BBK SEASON 10: ಮೈಕಲ್‌ ಅಚ್ಚ ಕನ್ನಡಕ್ಕೆ ಸಿಕ್ತು ಕಿಚ್ಚನ ಚಪ್ಪಾಳೆ!

michael ajay

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಮೈಕಲ್‌ ಪ್ರಬಲ ಸ್ಪರ್ಧಿ ಎಂದರೆ ತಪ್ಪಿಲ್ಲ. ಕ್ಯಾಪ್ಟನ್‌ ಕೂಡ ಆಗಿದ್ದ ಮೈಕಲ್‌, ಕಳೆದ ವಾರ ಇಶಾನಿ ವಿಚಾರವಾಗಿ ತಂಡಕ್ಕೆ ಮೋಸ ಮಾಡಿದರ ಬಗ್ಗೆ ಕಿಚ್ಚ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದರು. ಹಾಗೇ ಮೈಕಲ್‌ಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಅವರು ಕನ್ನಡಿಗನಾದರೂ ಅವರು ಹುಟ್ಟಿ ಬೆಳೆದಿದ್ದು ನೈಜೀರಿಯಾದಲ್ಲಿ. ಕಳೆದ ವಾರ ಸುದೀಪ್‌ ಹತ್ತಿರ ಚೆನ್ನಾಗಿ ಬೈಸಿಕೊಂಡಿರುವ ಮೈಕಲ್‌ ಇದೀಗ ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದಾರೆ. ಅದು ಕೂಡ ಅವರ ಕನ್ನಡಕ್ಕಾಗಿ.

ಬಿಗ್‌ಬಾಸ್‌ನಲ್ಲಿ ಬಹುತೇಕರು ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಾರೆ. ಅವರೆಲ್ಲರನ್ನೂ ಈ ವಾರದ ಕಿಚ್ಚನ ವಾರದ ಪಂಚಾಯ್ತಿಯಲ್ಲಿ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಮೈಕಲ್‌ ಕನ್ನಡವನ್ನೇ ಬಂಡವಾಳವನ್ನಾಗಿಸಿಕೊಂಡು, ಇಂಗ್ಲಿಷ್‌ ಮಾತನಾಡುವ ಇತರೆ ಸ್ಪರ್ಧಿಗಳಿಗೆ ಕನ್ನಡವನ್ನೇ ಹೆಚ್ಚು ಬಳಸುವಂತೆ ತಾಕೀತು ಮಾಡಿದ್ದಾರೆ. ಅತಿಯಾಗಿ ಇಂಗ್ಲೀಷ್‌ ಪಡದ ಮಾತನಾಡುತ್ತಿರುವ ಮಧ್ಯೆ ,ಮೈಕಲ್‌ ಕನ್ನಡ ಕಲಿಕೆಗೆ ಸುದೀಪ್‌ ಫಿದಾ ಆಗಿದ್ದಾರೆ. ‘ನನಗೆ ಅವಕಾಶ ಕೊಟ್ಟರೆ ನಿಮಗೆಲ್ಲರಿಗೂ ಒಂದು ಡಿಫರೆಂಟ್​ ಕನ್ನಡ ಸಿಗುತ್ತದೆ’ ಎಂದು ಮೊದಲು ಬಿಗ್‌ ಬಾಸ್‌ಗೆ ಬಂದಾಗ ಮೈಕಲ್‌ ಅವರು ಹೇಳಿದ್ದರು. ಕಳೆದ ಸಂಚಿಕೆಯಲ್ಲಿ ಸಂಗೀತಾ ಹಾಗೂ ಮೈಕಲ್‌ ಮಧ್ಯೆ ದೊಡ್ಡ ವಾರ್‌ ಆಯ್ತು. ಪ್ಲಕ್ ಇಟ್ ಪುಷ್ಪವತಿ ಟಾಸ್ಕ್‌ನಲ್ಲಿ ಸಂಗೀತಾ ನಡೆದುಕೊಂಡ ರೀತಿ ಕಂಡು ಮೈಕಲ್ ಸಿಟ್ಟಾಗಿ, ‘’ಸಂಗೀತಾ ಅವಕಾಶವಾದಿ, ಸಮಯ ಸಾಧಕಿ’’ ಎಂದು ಹೇಳಿದ್ದಾರೆ. ಈ ಸಮಯಸಾಧಕಿ ಪದವನ್ನು ಮೈಕಲ್‌ ಅವರು ಕಲಿತುಕೊಂಡು ಬಳಕೆ ಮಾಡಿದ್ದಾರೆ. ಇದೇ ಸುದೀಪ್‌ ಅವರು ವೇದಿಕೆಯಲ್ಲಿ ಪ್ರಸ್ತಾಪಿಸಿದರು.

ಇದನ್ನೂ ಓದಿ: BBK SEASON 10: ಪ್ರತಾಪ್‌ಗೆ ಹೆಚ್ಚು ವೋಟ್‌; ವಿನಯ್‌ಗೆ ಮುಖಭಂಗ! ಯಾರಿಗೆ ಹೆಚ್ಚು ಮತ?

ಇನ್ನು ಸುದೀಪ್‌ ಕೂಡ ಈ ಬಗ್ಗೆ ಖುಷಿ ಪಟ್ಟಾಗ, ಮೈಕೆಲ್​ ಅಜಯ್​ ಅವರು ಕನ್ನಡದಲ್ಲಿಯೇ ‘ಧನ್ಯವಾದಗಳು ಸರ್​’ ಎಂದರು. ಹಾಗೇ ಪ್ರೇಕ್ಷಕರೊಬ್ಬರು ಮೈಕಲ್‌ಗೆ ಇಶಾನಿ ಬಗ್ಗೆ ಪ್ರಸ್ತಾಪಿಸಿದರು. ಅವರನ್ನು ಮರೆತಿಲ್ಲ. ಹೊರಗಡೆ ಹೋದ ಮೇಲೆ ಮತ್ತೆ ಭೇಟಿಯಾಗುತ್ತೇನೆ ಎಂದರು ಮೈಕಲ್‌. ಇಶಾನಿ ಹೊರಗೆ ಹೋದ ಬಳಿಕ ಮೈಕೆಲ್​ ಹೆಚ್ಚು ಚುರುಕಾಗಿದ್ದಾರೆ. ಈ ವಾರ ಮೈಕಲ್‌ ಅವರ ಕನ್ನಡ ವಿಚಾರಕ್ಕೆ ಹಾಗೂ ಟಾಸ್ಕ್‌ ನಿಭಾಯಿಸುವ ರೀತಿಗೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ಈ ಮುಂಚೆ ಎದುರಾಳಿ ತಂಡದವರಿಗೆ ಹೇಗೆ ಆಟ ಆಡಬೇಕು ಎಂದು ಸಲಹೆ ಕೊಟ್ಟು ತನ್ನ ಟೀಂಗೆ ಮೈಕಲ್‌ ಮೋಸ ಮಾಡಿದ್ದರು. ಇವರಿಬ್ಬರ ಈ ನಡೆಗೆ ಪ್ರೇಕ್ಷಕರು ಛೀಮಾರಿ ಹಾಕಿದ್ದರು. ಪ್ರೇಯಸಿಗೋಸ್ಕರ ತನಗೆ ತಾನೇ ಮೋಸ ಮಾಡಿಕೊಂಡಿದ್ದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version