ಬೆಂಗಳೂರು: ಬಿಗ್ ಬಾಸ್ ಸೀಸನ್ 10 (BBK Season 10)ಕ್ಕೆ ಬಾಸ್ ಸೀಸನ್ 4ರ ವಿಜೇತ ಒಳ್ಳೆ ಹುಡುಗ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳು ಕೂಡ ಲಾರ್ಡ್ ಪ್ರಥಮ್ ರೂಲ್ಸ್‌ಗೆ ಬೆಚ್ಚಿಬಿದ್ದಿದ್ದಾರೆ. ಪ್ರಥಮ್ ರೂಲ್ಸ್ ಜತೆ ಸಂಗೀತಾ ಹಾಗೂ ಕಾರ್ತಿಕ್ ಮಹೇಶ್ ಅವರ ಕಾಲೂ ಎಳೆದಿದ್ದಾರೆ. ಇದೆಲ್ಲದರ ಜತೆ ಪ್ರಥಮ್‌ಗೆ ಇಷ್ಟವಾಗುವ ಸ್ಪರ್ಧಿ ಯಾರೆಂಬುದನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಿದರು. ಅದೆ ಬೇರೆ ಯಾರೂ ಅಲ್ಲ, ರ‍್ಯಾಪರ್ ಇಶಾನಿ. ಆದರೆ ರ‍್ಯಾಪರ್ ಇಶಾನಿ ಇದೀಗ ಸುದ್ದಿಯಲ್ಲಿರುವುದು ಬೇರೆ ವಿಚಾರಕ್ಕೆ. ಮೈಕೆಲ್‌ಗೂ, ಇಶಾನಿ ಮೇಲೆ ಲೈಟ್ ಆಗಿ ಮನಸ್ಸಾಗಿ ಎನಿಸುತ್ತಿದೆ. ಪೂರಕವೆಂಬಂತೆ ಕಳೆದ ಸಂಚಿಕೆಯಲ್ಲಿ ನಮ್ರತಾ ಹಾಗೂ ಸ್ನೇಹಿತ್ ಅವರು ಇವರಿಬ್ಬರನ್ನು ಚುಡಾಯಿಸಿದ್ದರು.
ಈಗಾಗಲೇ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಏನೋ ಇದೆ ಎಂಬ ಗುಸು ಗುಸು ಶುರುವಾಗಿದೆ. ಸಂಗೀತಾಗೆ ಕಾರ್ತಿಕ್ ಬೆಂಬಲವಾಗಿ ನಿಂತು ಅದೆಷ್ಟೋ ಬಾರಿ ಕಾಳಜಿ ತೋರಿಸಿದ್ದಾರೆ. ಆದರೆ ಪದೇಪದೆ ಈ ಜೋಡಿ ಕ್ಯಾಮೆರಾ ಮುಂದೆ ಹೇಳೋದು ಮಾತ್ರ ತಾವು ಬೆಸ್ಟ್ ಫ್ರೆಂಡ್ ಎಂದು. ಇದೀಗ ಮತ್ತೊಂದು ಜೋಡಿ ಸಿಕ್ಕಿ ಬಿದ್ದಿದೆ. ಮೈಕೆಲ್‌ಗೂ, ಇಶಾನಿ ಮೇಲೆ ಲೈಟ್ ಆಗಿ ಮನಸ್ಸಾಗಿ ಎನಿಸುತ್ತಿದೆ. ಇಶಾನಿ ಅವರು ನಮ್ರತಾ ಜತೆ ಇರುವುದು ಜಾಸ್ತಿ. ದುಬೈ ಹಾಗೂ ಯುಎಸ್‌ನಲ್ಲಿ ಲವ್ ಆಗಿತ್ತು. ಎರಡು ಬ್ರೇಕಪ್ ಆಗಿದೆ ಎಂತಲೂ ಇಶಾನಿ ಅವರು ನಮ್ರತಾ ಜತೆ ಶೇರ್ ಮಾಡಿದ್ದರು.
ಒಂದು ವೇಳೆ ಮೈಕೆಲ್ ಮೇಲೆ ಲವ್ವಾದರೆ ಹೇಗೆ? ಎಂದು ನಮ್ರತಾ ಇಶಾನಿಗೆ ಪ್ರಶ್ನೆ ಇಟ್ಟಿದ್ದಾರೆ. ಸಹಜವಾಗಿ ಲವ್ವಾದರೆ ಆಗಲಿ ಎಂದೇ ಇಶಾನಿ ಹೇಳಿದ್ದಾರೆ. ಮೈಕೆಲ್ ಮತ್ತು ಇಶಾನಿಯ ಆತ್ಮೀಯತೆ ಜಾಸ್ತಿಯಾಗಿದೆ. ಇಶಾನಿಗೆ ಮೈಕೆಲ್ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಿದೆ. ಮೈಕೆಲ್ ಬಳಿ ಕುಳಿತುಕೊಂಡು ನಿನ್ನ ಬಗ್ಗೆ ಹೇಳು ಎಂದೇ ಕೇಳುತ್ತಿದ್ದಾಳೆ. ಮೈಕೆಲ್ ಕೂಡ ಫುಲ್ ಖುಷಿಯಾಗಿದ್ದು, ತನ್ನ ಬಗ್ಗೆ ಎಲ್ಲ ಗೊತ್ತಲ್ವಾ ನಿಮಗೆ? ಎಂದಿದ್ದಾರೆ. ಹೀಗೆ ಪರಸ್ಪರ ಜೋಡಿ ಮಾತನಾಡಿಕೊಳ್ಳುತ್ತಿರುವಾಗ ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ ನಮ್ರತಾ ಹಾಗೂ ಸ್ನೇಹಿತ್ ಪೀಟಿಲು ಕುಯ್ದಂತೆ ಇಬ್ಬರನ್ನು ಡಿಸ್ಟರ್ಬ್ ಮಾಡಿದ್ದಾರೆ.
ಇದನ್ನೂ ಓದಿ: BBK Season 10: ತುಕಾಲಿ ಸಂತೋಷ್ ತಮಾಷೆ, ಗೌರೀಶ್ ಧ್ವನಿ, ಸಿರಿ ಪರ್ಫಾರ್ಮೆನ್ಸ್ ಬಗ್ಗೆ ಪ್ರಥಮ್ ಕ್ಲಾಸ್!
ಪ್ರಥಮ್‌ರಿಂದ ಭೇಷ್ ಎನಿಸಿಕೊಂಡ ಇಶಾನಿ
ಲಾರ್ಡ್ ಪ್ರಥಮ್ ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಬೆಂಡೆತ್ತಿದ್ದರು. ಸ್ಪರ್ಧಿಗಳಿಗೆ ಶಿಸ್ತಿನ ಪಾಠ ಮಾಡಿದರು. ಪ್ರಥಮ್ ಆಕ್ಕೆ ಸ್ಪರ್ಧಿಗಳು ಅಲ್ಲಾಡಿ ಹೋದರು. ಆದರೆ ಪ್ರಥಮ್ ಹೊಗಳಿದ್ದು ಮಾತ್ರ ಇಶಾನಿಯನ್ನು. ʻʻಇಶಾನಿಯಲ್ಲಿ ನನ್ನನ್ನು ನಾನು ನೋಡುತ್ತಿದ್ದೇನೆ. ಚೆನ್ನಾಗಿ ಆಟವಾಡುತ್ತಿದ್ದೀರಾʼʼ ಎಂದು ಹೊಗಳಿದ್ದಾರೆ. ಕೊನೆಗೆ ಸಮರ್ಥರು ಹಾಗೂ ಅಸಮರ್ಥರಿಗೆ ಟಾಸ್ಕ್ ಅನ್ನು ಸಹ ಮಾಡಿಸಿದ ಪ್ರಥಮ್, ಎಲ್ಲರಿಗೂ ಶುಭಾಶಯ ತಿಳಿಸಿ ಮನೆಯಿಂದ ಹೊರನಡೆದರು.