Site icon Vistara News

BBK SEASON 10: ಅಹಂಕಾರ ಪ್ರದರ್ಶಿಸುತ್ತಿರುವ ಮೈಕಲ್‌; ಈ ವಾರ ಔಟ್‌ ಆಗೋದು ಪಕ್ಕಾ ಅಂದ್ರು ನೆಟ್ಟಿಗರು!

Michel ajay Behaved Arrogantly

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಈ ವಾರ ಪಾಠಶಾಲೆ ತರಗತಿಯಿಂದ ತರಗತಿಗೆ ಸೀರಿಯಸ್ ಆಗುತ್ತ ನಡೆದಿದೆ. ಮೊದಲ ದಿನಕ್ಕೆ ಹೋಲಿಸಿದರೆ ನಿನ್ನೆಯ ತರಗತಿಗಳು ಸಾಕಷ್ಟು ಸೀರಿಯಸ್ ಆಗಿದ್ದವು. ವಿನಯ್‌ ಅವರು ಮನೆಯ ಎಲ್ಲ ಸ್ಪರ್ಧಿಗಳಿಗೆ ಹೋಲಿಸಿದರೆ ಬಹಳ ಅಗ್ರೆಸಿವ್‌ ಆಗಿ ಆಡುತ್ತಾರೆ ಎಂಬುದು ಗೊತ್ತಿರುವ ವಿಚಾರ. ಆದರೆ ಕಳದ ವೀಕೆಂಡ್‌ ಪಂಚಾಯಿತಿಯಲ್ಲಿ ಸುದೀಪ್‌ ಅವರು ಕ್ಲಾಸ್‌ ತೆಗೆದುಕೊಂಡ ಮೇಲೆ ವಿನಯ್‌ ಅವರು ಸ್ವಲ್ಪ ಕೂಲ್‌ ಆಗಿದ್ದಾರೆ. ಆದರೆ ಈ ವಾರ ಅಗ್ರೆಸಿವ್‌ ಆಗಿ ವರ್ತಿಸಿದ್ದರೆಂದರೆ ಅವರು ಮೈಕಲ್‌ ಮಾತ್ರ.

ಸಂಗೀತಾ ಬಹುಗಂಭೀರವಾಗಿ ಅಧ್ಯಾತ್ಮದ ಪಾಠವನ್ನು ಹೇಳಿಕೊಟ್ಟಿದ್ದರು. ತುಂಬ ಗಹನವಾಗಿಯೂ ಇದ್ದ ಅವರ ತರಗತಿ ಪ್ರೀತಿಯನ್ನು ಹರಡುವ ಸಂದೇಶದೊಂದಿಗೆ ಕೊನೆಗೊಂಡಿತ್ತು. ಇಷ್ಟೆಲ್ಲ ಇದ್ದರೂ ಈ ವಾರ ಪೂರ್ತಿ ಮೈಕಲ್‌ ಮಾತ್ರ ಕೋಪದಿಂದಲೇ ವರ್ತಿಸುತ್ತಿದ್ದರು. ಮೈಕಲ್‌ ಅವರ ಕನ್ನಡಕ್ಕೆ ಕನ್ನಡಿಗರು ಕೂಡ ಮನಸೋತಿದ್ದರು. ಸ್ಕೂಲ್‌ ಟಾಸ್ಕ್‌ನಲ್ಲಿಯೂ ಕೂಡ ಕನ್ನಡ ಟೀಚರ್‌ ಆದ ಮೈಕಲ್‌ಗೆ ಮೆಚ್ಚುಗೆಗಳು ವ್ಯಕ್ತವಾಗಿತ್ತು. ಆದರೆ ಬರ ಬರುತ್ತ ಮೈಕಲ್‌ ನಡವಳಿಕೆಯಲ್ಲಿ ತುಂಬ ವ್ಯತ್ಯಾಸವಾಗಿತ್ತು.

ಮೈಕಲ್‌ ಆಡುವಾಗ ಸರಿಯಾಗಿ ಸ್ಪಂದಿಸದೆ ಅಸಹಕಾರ ತೋರಿದರು. ಅವರ ಉತ್ತರಗಳು ತುಸು ಅಹಂಕಾರದಿಂದಲೂ ಕೂಡಿದ್ದವು. ಟಾಸ್ಕ್ ನಡೆಯುವ ಸಮಯದಲ್ಲಿ ಮನೆಯ ಸದಸ್ಯರ ಬಗ್ಗೆ ಅಭಿಪ್ರಾಯಗಳನ್ನು ಹೇಳುವ ಸಮಯದಲ್ಲಿ ಸಂಗೀತಾ, ಡ್ರೋನ್ ಪ್ರತಾಪ್ ಅವರುಗಳ ಬಗ್ಗೆ ತುಂಬ ಕಠಿಣ ಪದ ಪ್ರಯೋಗ ಮಾಡಿದ್ದರು.

ಇದನ್ನೂ ಓದಿ: BBK SEASON 10: ಸಿರಿ ಏನಾದ್ರೂ ಫೈನಲ್‌ಗೆ ಬಂದು ಬಿಟ್ರೆ? ನಮ್ರತಾ, ತುಕಾಲಿಗೆ ಫುಲ್‌ ಟೆನ್ಷನ್‌ !

ಸಿಂಪಥಿಯಲ್ಲಿದ್ದು ಬದುಕುವವ

ವರ್ತೂರು ಸಂತೋಷ್‌ ಮೇಷ್ಟ್ರಾಗಿರುವ ತರಗತಿಯಲ್ಲಿ ಒಬ್ಬರನ್ನೊಬ್ಬರು ಎಲಿಮಿನೇಟ್ ಮಾಡುವ ಚಟುವಟಿಕೆಯೂ ನಡೆದಿತ್ತು. ಸಂಗೀತಾ ಮತ್ತು ಪ್ರತಾಪ್‌ ಇಬ್ಬರೂ ಮೈಕಲ್‌ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಹೇಳಿದ್ದಾರೆ. ‘ಮೈಕಲ್‌ ಸಣ್ಣ ಸಣ್ಣ ವಿಷಯಕ್ಕೂ ನನಗೆ ಚುಚ್ಚಿ ಮಾತಾಡುತ್ತಿದ್ದಾರೆ’ ಎಂದು ಸಂಗೀತಾ ಆರೋಪಿಸಿದ್ದರೆ, “ನನ್ನ ವಿರುದ್ಧ ಎಲ್ಲರ ಮನಸ್ಸಿನಲ್ಲಿಯೂ ತಪ್ಪು ಭಾವನೆ ಮೂಡಿಸುತ್ತಿದ್ದಾರೆ’ ಎಂದು ಪ್ರತಾಪ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮೈಕಲ್, ‘ಐ ಡೋಂಟ್ ಲೈಕ್ ಯು’ ಎಂದು ನೇರವಾಗಿ ಹೇಳಿದ್ದರು. ‘ಪ್ರತಾಪ್‌ ಅವರಿಗೆ ಸ್ವಂತ ಪರ್ಸನಾಲಿಟಿ ಇಲ್ಲ. ಸಿಂಪಥಿಯಲ್ಲಿದ್ದು ಬದುಕುವವನ ಬಳಿ ಮಾತಾಡಲು ನನಗೆ ಏನೂ ಇಲ್ಲ’ ಎಂದೂ ಉತ್ತರಿಸಿದ್ದರು.

ಇದನ್ನೂ ಓದಿ: BBK SEASON 10: ಬಿಗ್‌ಬಾಸ್‌ ಮನೆಯ ಪಾಠಶಾಲೆಯಲ್ಲಿ ಮೈಕಲ್ ಕನ್ನಡ ಮೇಷ್ಟ್ರು!

ಮನೇಲಿ ಮೊದಲು ಅಡುಗೆ ಆಗುತ್ತಾ? ಪಾತ್ರೆ ಕ್ಲೀನಿಂಗ್ ಆಗುತ್ತಾ?

ತೀರ ಸಣ್ಣ ವಿಷಯಕ್ಕೆ ಕಾರ್ತಿಕ್ ಜತೆ ಉದ್ದೇಶಪೂರ್ವಕವಾಗಿ ಜಗಳವಾಡಿದರು ಮೈಕಲ್‌. ಕಾರ್ತಿಕ್‌ ಅವರು ಮೊದಲು ಅಡುಗೆ ಮಾಡಲು ಬಂದರು. ಆದರೆ ಮೈಕಲ್‌ ಅವರು ಬೇಕು ಎಂತಲೇ ಪಾತ್ರೆಗಳನ್ನು ತೊಳೆಯುತ್ತಿದ್ದರು. ಧೈರ್ಯ ಇದ್ದರೆ ಮಾತನಾಡು ಎಂದೆಲ್ಲ ಹೇಳಿ, ಬೇಕು ಎಂತಲೆ ಜಗಳ ಮಾಡಿದರು. ಇವೆಲ್ಲವೂ ವಿನಯ್​ರ ಕಳೆದ ವಾರದ ವರ್ತನೆಯನ್ನು ನೆನಪಿಸುವಂತಿತ್ತು. ಕೊನೆಯಲ್ಲಿ ಟಾಸ್ಕ್​ ಬಗ್ಗೆ ಅಭಿಪ್ರಾಯ ತಿಳಿಸಿ, ಯಾರದ್ದಾದರೂ ಮನಸ್ಸು ನೋಯಿಸಿದರೆ ಕ್ಷಮೆ ಕೇಳುವ ಅವಕಾಶವನ್ನು ಎಲ್ಲ ಸ್ಪರ್ಧಿಗಳಿಗೂ ಬಿಗ್​ಬಾಸ್ ನೀಡಿದಾಗ ಮಾತನಾಡಿದ ಮೈಕಲ್, ಅಲ್ಲಿಯೂ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಬಗ್ಗೆ ಕಠಿಣ ಪದಗಳನ್ನು ಬಳಸಿ ಮಾತನಾಡಿದ್ದಲ್ಲದೆ, ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಆ ಬಗ್ಗೆ ನಾನು ಕೇರ್ ಮಾಡಲ್ಲ, ‘ಐ ಡೋಂಟ್ ಗಿವ್ ಎ ಡ್ಯಾಮ್’ ಎಂದು ಅಹಂಕಾರ ಪ್ರದರ್ಶಿಸಿದರು. ಇದೀಗ ವೀಕ್ಷಕರು ಕಮೆಂಟ್‌ನಲ್ಲಿ ಈ ವಾರ ಮೈಕಲ್‌ ಮನೆಯಿಂದ ಹೊರಹೋಗುವುದು ಗ್ಯಾರಂಟಿ ಎನ್ನುತ್ತಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version