Site icon Vistara News

Bigg Boss 17: ಅಂಕಿತಾ ಲೋಖಂಡೆ ಹಿಂದಿಕ್ಕಿ ವೋಟಿಂಗ್ ರಿಸಲ್ಟ್‌ನಲ್ಲಿ ಮುಂದೆ ಬಂದ್ರಾ ಮುನಾವರ್ ಫಾರುಕಿ?

Munawar Faruqi ahead of Ankita Lokhande in the voting results

ಮುಂಬೈ: ಬಿಗ್ ಬಾಸ್ ಕನ್ನಡ (BBK SEASON 10) ಗ್ರ್ಯಾಂಡ್ ಫಿನಾಲೆ ದಿನವೇ, ಅಂದರೆ ಜನವರಿ 28ರಂದೇ ಹಿಂದಿ ಬಿಗ್ ಬಾಸ್ 17ರ (Bigg Boss 17) ಆವೃತ್ತಿಯ ಗ್ರ್ಯಾಂಡ್ ಫಿನಾಲೆ (Gran finale) ನಡೆಯಲಿದೆ. ಹಾಗಾಗಿ, ಈ ವಾರಾಂತ್ಯದಲ್ಲಿ ಕಿರುತೆರೆ ವೀಕ್ಷಕರಿಗೆ, ಬಿಗ್ ಬಾಸ್ ಅಭಿಮಾನಿಗಳಿಗೆ ಎರಡೆರಡು ಧಮಾಕ್ ದೊರೆಯಲಿದೆ. ಗ್ರ್ಯಾಂಡ್‌ ಫಿನಾಲೆಗೆ ಐವರು ಸ್ಪರ್ಧಿಗಳು ಕಣದಲ್ಲಿದ್ದಾರೆ(Bigg Boss Kannada). ನಟಿ ಅಂಕಿತಾ ಲೋಖಂಡೆ, ಅರುಣ್ ಮಾಶೆಟ್ಟೆ, ಅಭಿಷೇಕ್ ಕುಮಾರ್, ಮುನಾವರ್ ಫಾರುಕಿ ಮತ್ತು ಮನ್ನಾರಾ ಚೋಪ್ರಾ ಫೈನಲಿಸ್ಟ್‌ಗಳಾಗಿದ್ದಾರೆ. ಈಗಾಗಲೇ ಕಾಮಿಡಿಯನ್, ಲಾಕಪ್ ಶೋನ ವಿಜೇತ ಮುನ್ನಾವರ್ ಫಾರೂಕಿ ಬಗ್ಗೆ ಒಳ್ಳೆ ಒಪಿನಿಯನ್ ಕ್ರಿಯೆಟ್ ಆಗಿದ್ದು, ವೋಟಿಂಗ್ ರಿಸಲ್ಟ್ ಕೂಡ ಅವರ ಪರವಾಗಿದೆ ಎನ್ನಲಾಗುತ್ತಿದೆ. ಮೊದಲ ರನ್ನರ್ ಅಪ್ ಸ್ಥಾನಕ್ಕಾಗಿ ಅಭಿಷೇಕ್ ಕುಮಾರ್ ಮತ್ತು ಅಂಕಿತಾ ಲೋಖಂಡೆ ನಡುವೆ ತೀವ್ರ ಗುದ್ದಾಟ ನಡೆಯುತ್ತಿದೆ ಎನ್ನಲಾಗುತ್ತಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಿಸುವ ಗ್ರ್ಯಾಂಡ್ ಫಿನಾಲೆ 2024ರ ಜನವರಿ 28, ಭಾನುವಾರರಂದು ನಡೆಯಲಿದೆ. ಗ್ರ್ಯಾಂಡ್ ಫಿನಾಲೆ ಸಂಚಿಕೆಯು ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ ಮತ್ತು ಕಲರ್ಸ್ ಟಿವಿ ಪ್ರಕಾರ ಮಧ್ಯರಾತ್ರಿಯ ಹೊತ್ತಿಗೆ ವಿಜೇತರನ್ನು ಘೋಷಿಸಲಾಗುತ್ತದೆ.ಬಿಗ್ ಬಾಸ್ 17ರ ಅಂತಿಮ ಸಂಚಿಕೆಯನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಕಲರ್ಸ್ ಟಿವಿಯಲ್ಲಿ ನೇರ ಪ್ರಸಾರ ಕೂಡ ಇರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಚಾನೆಲ್ ಪೋಸ್ಟ್ ಮಾಡಿದ ಇತ್ತೀಚಿನ ಪ್ರೋಮೋ ಪ್ರಕಾರ, ಹಾಸ್ಯನಟ ಭಾರತಿ ಸಿಂಗ್ ಅವರ ಪತಿ ಹರ್ಷ್ ಲಿಂಬಾಚಿಯಾ ಮತ್ತು ಸಾಮಾಜಿಕ ಮಾಧ್ಯಮದ ಇನ್‌ಫ್ಲುಯೆನ್ಸರ್ ಓರ್ಹಾನ್ ಅವತ್ರಮಣಿ, ಅಕಾ ಓರಿ, ಗ್ರಾಂಡ್ ಫಿನಾಲೆಯಲ್ಲಿ ಇರಲಿದ್ದಾರೆ. ಒರ್ರಿ ಈ ಹಿಂದೆ ಬಿಗ್ ಬಾಸ್ 17 ರಲ್ಲಿ ವಿಶೇಷ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.ಬಿಗ್ ಬಾಸ್ 17ರ ಸಂಚಿಕೆಯಲ್ಲಿ ಒಟ್ಟು 21 ಸ್ಪರ್ಧಿಗಳಿದ್ದರು. ಈಗ ಗ್ರ್ಯಾಂಡ್ ಫಿನಾಲೆಗೆ ಐವರು ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಅಂಕಿತಾ ಲೋಕಂಡೆ, ಮುನಾವರ್ ಫಾರೂಖಿ, ಮನ್ನಾರಾ ಛೋಪ್ರಾ, ಅಭಿಷೇಕ್ ಕುಮಾರ್, ಅರುಣ್ ಮಾಶೆಟ್ಟಿ ಅವರಿದ್ದಾರೆ.

ಇದನ್ನೂ ಓದಿ: Bigg Boss 17: ಕನ್ನಡ ಬಿಗ್ ಬಾಸ್‌ ಜತೆಗೆ ಹಿಂದಿ ಬಿಗ್‌ ಬಾಸ್ ಗ್ರ್ಯಾಂಡ್ ಫಿನಾಲೆ!

ಅವನೀತ್ ಕೌರ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮುನಾವರ್ ಫಾರುಕಿಯ ಬೆಂಬಲಕ್ಕೆ ಬಂದಿದ್ದಾರೆ. ಇತರ ನಾಲ್ಕು ಫೈನಲಿಸ್ಟ್‌ಗಳಿಗಿಂತ ಮುನ್ನಾವರ್ ಫಾರೂಕಿ ಐದು ಪಟ್ಟು ಹೆಚ್ಚಿನ ಮತ ಪಡೆದಿದ್ದಾರೆ. ಹೀಗಾಗಿ ಅವರು ಬಿಗ್ ಬಾಸ್ 17 ಅನ್ನು ಸುಲಭವಾಗಿ ಗೆಲ್ಲುತ್ತಾರೆ ಎಂದು ವರದಿಯಾಗಿದೆ. ಅಭಿಷೇಕ್ ಕುಮಾರ್ ಅವರು ಅಂಕಿತಾ ಲೋಖಂಡೆ ಅವರನ್ನು ಸೋಲಿಸಿ BB 17ರ ಮೊದಲ ರನ್ನರ್ ಅಪ್ ಆಗುವ ಸಾಧ್ಯತೆಯಿದೆ.

Exit mobile version