Site icon Vistara News

Munawar Faruqui: ʻಬಿಗ್‌ ಬಾಸ್‌ ವಿನ್ನರ್‌ʼ ಮುನಾವರ್‌ನನ್ನು ಮುತ್ತಿಕೊಂಡ ಫ್ಯಾನ್ಸ್‌; ನೆಲಕ್ಕೆ ಬೀಳೊದೊಂದು ಬಾಕಿ!

Munawar Faruqui Falls Gets mobbed

ಬೆಂಗಳೂರು: ಹಿಂದಿಯ ಬಿಗ್ ಬಾಸ್ 17ನೇ (Bigg Boss 17)ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್‌ ಅಪ್‌ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದಾರೆ. ಮುನಾವರ್ ಫಾರೂಖಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜ. 30ರಂದು ಮುನಾವರ್ ಫಾರೂಖಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅಬ್ದು ರೋಜಿಕ್ ಜತೆ ಮುನಾವರ್‌ ಊಟಕ್ಕೆ ತೆರಳಿದ್ದರು. ಮುನಾವರ್ ಅವರು ರೆಸ್ಟೋರೆಂಟ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅವರನ್ನು ಗುಂಪುಗೂಡಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗಿದೆ.

ಅಭಿಮಾನಿಗಳು ಮುನಾವರ್ ಅವರನ್ನು ಕಂಡೊಡನೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಮುನಾವರ್ ತಂಡ ಪರಿಸ್ಥಿತಿಯನ್ನು ನಿಯಂತ್ರಿಸಲು ಎಷ್ಟೇ ಪ್ರಯತ್ನಿಸಿದರೂ, ಅಭಿಮಾನಿಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಮುನಾವರ್‌ ಕೂಡ ಈ ಗುಂಪಿನಲ್ಲಿ  ನೆಲಕ್ಕೆ ಬೀಳುವವರಾಗಿದ್ದರು.

ಇನ್ನು ಕೆಲವರು ಮುನಾವರ್‌ ಗೆದ್ದ ಬಳಿಕ ಇದು ಫಿಕ್ಸಿಂಗ್‌ ಎಂದು ಆರೋಪ ಕೂಡ ಮಾಡಿದ್ದರು. ಈ ಬಗ್ಗೆ ಮುನಾವರ್‌ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ʻನಾನು ಫಿಕ್ಸಿಂಗ್​ ವಿನ್ನರ್​ ಆಗಿದ್ದಿದ್ದರೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ ನನಗೆ ಸುಲಭವಾಗಿ ಸಿಗುತ್ತಿತ್ತು. ಇಡೀ ಸೀಸನ್​ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್​ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್​ ಅಲ್ಲ ಎಂಬುದು ಆಗ ಗೊತ್ತಾಗುತ್ತದೆʼʼಎಂದಿದ್ದರು.

ಇದನ್ನೂ ಓದಿ: Munawar Faruqui | ವಿಎಚ್‌ಪಿ ಮನವಿ ಬೆನ್ನಲ್ಲೇ ಕಮಿಡಿಯನ್‌ ಮುನಾವರ್‌ ಫಾರೂಕಿ ಶೋ ದೆಹಲಿಯಲ್ಲೂ ರದ್ದು!

ಬಿಗ್ ಬಾಸ್ 17 ಗೆದ್ದಿರುವ ಮುನಾವರ್ ಫರೂಖಿ ಅವರಿಗೆ ಟ್ರೋಫಿ ದೊರೆತಿದ್ದು, ಜತೆಗೆ 50 ಲಕ್ಷ ರೂ. ಬಹುಮಾನ ಕೊಡ ನೀಡಲಾಗಿದೆ. ಇಷ್ಟೇ ಅಲ್ಲದೇ, ಐಷಾರಾಮಿ ಕಾರ್ ಕೂಡ ಬಹುಮಾನ ರೂಪವಾಗಿ ಬಂದಿದೆ. ಅಭಿಷೇಕ್ ಕುಮಾರ್ ಮೊದಲ ರನ್ನರ್ ಅಪ್ ಆದರೆ ನಟಿ ಅಂಕಿತಾ ಲೋಖಂಡೆ ಮತ್ತು ಅರುಣ್ ಮಾಶೆಟ್ಟಿ ಅವರು ಕ್ರಮವಾಗಿ ಎರಡು ಮತ್ತು ಮೂರನೇ ರನ್ನರ್ ಅಪ್ ಆದರು. ಮೂರು ತಿಂಗಳ ಕಾಲ ನಡೆದ ಈ ಶೋ ಜನವರಿ 28, ಭಾನುವಾರ ರಾತ್ರಿ ಅಂತ್ಯಗೊಂಡಿತು.

Exit mobile version