ಬೆಂಗಳೂರು: ಹಿಂದಿಯ ಬಿಗ್ ಬಾಸ್ 17ನೇ (Bigg Boss 17)ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್ ಅಪ್ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದರು. ಫೆ. 7ರಂದು ಮುನಾವರ್ ಅವರು ಸ್ಟೈಲ್ ಆಗಿ ಪಾರ್ಟಿಗೆ ಆಗಮಿಸಿದ್ದರು. ಮ್ಯಾಚಿಂಗ್ ಸ್ನೀಕರ್ಗಳ ಜತೆ ಆಫ್-ವೈಟ್ ಕೋ-ಆರ್ಡ್ ಸೆಟ್ನಲ್ಲಿ ಮಿಂಚಿದ್ದರು. ವಿಶೇಷ ಅಂದರೆ ಮುನಾವರ್ ಅವರು ನಟಿ ಸುಶ್ಮಿತಾ ಸೇನ್ ಅವರ ಪುತ್ರಿ ರೆನಿ ಸೇನ್ (Renee Sen) ಅವರೊಂದಿಗೆ ಪಾರ್ಟಿಗೆ ಆಗಮಿಸಿದರು. ಇಬ್ಬರೂ ಒಂದೇ ಕಾರಿನಲ್ಲಿ ಬಂದು ಇಳಿದು ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಇದೀಗ ಈ ಜೋಡಿ ಕಂಡು ನೆಟ್ಟಿಗರು ಕಮೆಂಟ್ ಮೂಲಕ ಇಬ್ಬರ ನಡುವೆ ʻಏನೋ ಸಮ್ಥಿಂಗ್ ಸಮ್ಥಿಂಗ್ ಇದೆʼʼಎಂದು ಕಮೆಂಟ್ ಮಾಡಲು ಶುರು ಮಾಡಿದ್ದಾರೆ.
ಸುಶ್ಮಿತಾ ಸೇನ್ ಅವರ ಪುತ್ರಿ ರೆನಿ ಸೇನ್ ಪೀಚ್ ಸ್ಟ್ರಾಪಿ ಕ್ರಾಪ್ ಟಾಪ್ ಮತ್ತು ನೀಲಿ ಡೆನಿಮ್ ಧರಿಸಿದ್ದರು. ಮುನಾವರ್ ಮತ್ತು ರೆನೀ ಒಟ್ಟಿಗೆ ಆಗಮಿಸಿದಾಗ, ಪಾಪರಾಜಿಗಳಿಗೆ (ಫೋಟೊಗ್ರಾಫರ್ಗಳಿಗೆ) ಒಟ್ಟಿಗೆ ಪೋಸ್ ನೀಡಲಿಲ್ಲ. ಇದೀಗ ಈ ವಿಡಿಯೊಗಳು ವೈರಲ್ ಆಗಿವೆ. ನೆಟ್ಟಿಗರು ಕಮೆಂಟ್ನಲ್ಲಿ ʻಇವರಿಬ್ಬರ ನುಡವೆ ಏನೋ ನಡೀತಾ ಇದೆʼ ಎಂದು ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಮತ್ತೊಬ್ಬರು, “ಸುಶ್ಮಿತಾ ಸೇನ್ ಅವರ ಮಗಳು ಏಕೆ ಮುನಾವರ್ ಜತೆ ಇದ್ದಾಳೆ?” ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಅದು ರೆನೀ? ಸುಶ್ಮಿತಾ ಸೇನ್ ಅವರ ಮಗಳು ಅಲ್ಲವೇʼʼ ಎಂದು ಸರ್ಪ್ರೈಸ್ ಆಗಿದ್ದಾರೆ. ರೆನೀ 2021ರ ʻಸಟ್ಟಾಬಾಜಿʼ (Suttabaazi) ಎಂಬ ಕಿರುಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಸುಶ್ಮಿತಾ ಅವರ ವೆಬ್ ಸಿರೀಸ್ ʻತಾಲಿʼಯಲ್ಲಿ ಮಹಾಮೃತ್ಯುಂಜಯ್ ಮಂತ್ರಕ್ಕೆ (Mahamrityunjai mantra) ಧ್ವನಿಯನ್ನು ನೀಡಿದ್ದಾರೆ.
ಇದನ್ನೂ ಓದಿ: Bigg Boss 17: ಮುನಾವರ್ ಫಾರೂಖಿ ಹಿಂದಿ ಬಿಗ್ ಬಾಸ್ 17ನೇ ಆವೃತ್ತಿಯ ವಿನ್ನರ್
ಬಿಗ್ ಬಾಸ್ 17 ಗೆದ್ದಿರುವ ಮುನಾವರ್ ಫಾರೂಖಿ ಅವರಿಗೆ ಟ್ರೋಫಿ ದೊರೆತಿದ್ದು, ಜತೆಗೆ 50 ಲಕ್ಷ ರೂ. ಬಹುಮಾನ ಕೊಡ ನೀಡಲಾಗಿದೆ. ಇಷ್ಟೇ ಅಲ್ಲದೇ, ಐಷಾರಾಮಿ ಕಾರ್ ಕೂಡ ಬಹುಮಾನ ರೂಪವಾಗಿ ಬಂದಿದೆ. ಅಭಿಷೇಕ್ ಕುಮಾರ್ ಮೊದಲ ರನ್ನರ್ ಅಪ್ ಆದರೆ, ನಟಿ ಅಂಕಿತಾ ಲೋಖಂಡೆ ಮತ್ತು ಅರುಣ್ ಮಾಶೆಟ್ಟಿ ಅವರು ಕ್ರಮವಾಗಿ ಎರಡು ಮತ್ತು ಮೂರನೇ ರನ್ನರ್ ಅಪ್ ಆದರು. ಮೂರು ತಿಂಗಳ ಕಾಲ ನಡೆದ ಈ ಶೋ ಜನವರಿ 28, ಭಾನುವಾರ ರಾತ್ರಿ ಅಂತ್ಯಗೊಂಡಿತು.