Site icon Vistara News

BBK SEASON 10: ಹಾಕಿದ್ದ ಬೀಗ ತೆರೆದು ಕ್ಯಾಪ್ಟನ್ ಕೋಣೆಯೊಳಗೆ ಬಲಗಾಲಿಟ್ಟ ನಮ್ರತಾ!

Nam Namratha Gowda Became New Captain

ಬೆಂಗಳೂರು: ‘ಬಿಗ್ ಬಾಸ್‌ ಕನ್ನಡ 10’ (BBK SEASON 10) ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ವರ್ತೂರು ಸಂತೋಷ್‌ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಆದರೆ ಅವರು ನ್ಯಾಯವಾಗಿ ಆಡಿಲ್ಲ ಎಂಬ ಕಾರಣಕ್ಕೆ ವರ್ತೂರ್‌ ಅವರಿಗೆ ಸಿಕ್ಕಿದ ಇಮ್ಯೂನಿಟಿಯನ್ನು ಸುದೀಪ್‌ ಅವರು ವಾಪಸ್​ ಪಡೆದು, ಕ್ಯಾಪ್ಟನ್‌ ರೂಮ್‌ ಬಾಗಿಲಿಗೆ ಬೀಗ ಜಡಿದಿದ್ದರು. ಆದರೀಗ ಕ್ಯಾಪ್ಟನ್‌ ರೂಮ್‌ ಓಪನ್‌ ಆಗಿದೆ.ಎರಡು ವಾರಗಳ ಬಳಿಕ ಇದೀಗ ಕ್ಯಾಪ್ಟನ್ ಕೋಣೆಯ ಬಾಗಿಲು ತೆರೆಯಲಾಗಿದೆ. ನಮ್ರತಾ ಗೌಡ ಈ ವಾರ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಅವರ ಕನಸು ಇದೀಗ ನನಸಾಗಿದೆ.

ಯಾವಾಗಲೂ ನಮ್ರತಾ ಅವರು ಕ್ಯಾಪ್ಟನ್‌ ಆಗಿಲ್ಲ ಎಂಬ ವಿಚಾರಕ್ಕೆ ಅಳುತ್ತಿದ್ದರು. ʻನಾವು ಎಷ್ಟೇ ಚೆನ್ನಾಗಿ ಆಡಿದರೂ ಕ್ಯಾಪ್ಟನ್ ರೇಸ್‌ಗೆ ಬರೋಕೆ ಸಾಧ್ಯವಿಲ್ಲ. ನನಗೆ ಹೋಪ್ಸ್‌ ಇಲ್ಲ. ಪಾಯಿಂಟ್ಸ್ ಕೊಡಿ ಅಂತ ಕೇಳೋಕೆ ನನಗೆ ಬರಲ್ಲ. ಕನ್ವಿನ್ಸ್ ಮಾಡೋಕೂ ಬರಲ್ಲ. ಎಷ್ಟೇ ಎರ್ಫರ್ಟ್‌ ಹಾಕಿದ್ದರೂ ಅಷ್ಟೇʼʼಎಂದು ಬೇಸರದ ಮಾತುಗಳನ್ನು ಹೇಳುತ್ತಿದ್ದರು. ಅತ್ತ ತನಿಷಾ ಹಾಗೂ ನಮ್ರತಾ ಕೂಡ ಕ್ಯಾಪ್ಟನ್ಸಿ ರೇಸ್‌ಗೆ ನಮ್ರತಾ ಅವರು ಬರುವುದಿಲ್ಲ ಅಂದುಕೊಂಡಿದ್ದರು. ಆದರೆ ಡ್ರೋನ್‌ ಪ್ರತಾಪ್‌ ಅವರ ತ್ಯಾಗ ಹಾಗೂ ಹೆಚ್ಚು ಪಾಯಿಂಟ್ಸ್ ಕೊಟ್ಟು ಕ್ಯಾಪ್ಟನ್ಸಿಗೆ ಸಂಗೀತಾ ಅವಕಾಶ ಮಾಡಿಕೊಟ್ಟರು.

ಡ್ರೋನ್‌ ಪ್ರತಾಪ್‌ ತ್ಯಾಗ ಹೈಲೈಟ್‌

ಈ ವಾರ ಟಾಸ್ಕ್‌ ಅನುಸಾರ ಯಾರ ಬಳಿ ಹೆಚ್ಚು ಪಾಯಿಂಟ್ಸ್‌ ಇರಲಿದೆಯೋ ಅವರು ಕ್ಯಾಪ್ಟನ್‌ ರೇಸ್‌ಗೆ ಇಳಿಯಬೇಕಿತ್ತು. ಕಳೆದ ಬಾರಿ ಡ್ರೋನ್‌ ಪ್ರತಾಪ್‌ ಅವರು ನಮ್ರತಾ ಅವರನ್ನ ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗಿಟ್ಟಿದ್ದರು. ಆಗ ಬೇಸರ ಮಾಡಿಕೊಂಡು ನಮ್ರತಾ ಕಣ್ಣೀರು ಸುರಿಸಿದ್ದರು. ಆದರೆ ಇದೀಗ ಡ್ರೋನ್‌ ಪ್ರತಾಪ್‌ ಅವರು ತಮಗೆ ಪಾಯಿಂಟ್ಸ್ ಬೇಡ ಎಂದು ಹೇಳಿ.. ನಮ್ರತಾಗೆ ಹೆಚ್ಚಿನ ಪಾಯಿಂಟ್ಸ್ ಸಿಗುವಂತೆ ಮಾಡಿ.. ನಮ್ರತಾರನ್ನ ಕ್ಯಾಪ್ಟನ್ಸಿ ರೇಸ್‌ಗೆ ಡ್ರೋನ್ ಪ್ರತಾಪ್ ಇಳಿಸಿದರು. ಇದರ ಜತೆಗೆ ನಮ್ರತಾ ಕೂಡ ಟಾಸ್ಕ್‌ಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: BBK SEASON 10: ಕಿರುಚುತ್ತೇನೆ, ಏನೀವಾಗ? ತನಿಷಾ ಮೇಲೆ ನಮ್ರತಾ ಗರಂ!

ಕೋಲಿನಿಂದ ಚೆಂಡನ್ನು ಹಿಡಿದು ನಿಲ್ಲುವ ಟಾಸ್ಕ್‌, ‘ಕೊಳೆ ಒಳ್ಳೇದಲ್ಲ’ ಟಾಸ್ಕ್‌ ಹಾಗೇ ‘ಚಿತ್ರ ವಿಚಿತ್ರ’ ಟಾಸ್ಕ್‌ನಲ್ಲಿ ನಮ್ರತಾ ಚಿತ್ರಗಳನ್ನ ಚೆನ್ನಾಗಿಯೇ ಬಿಡಿಸಿದ್ದರು. ಕ್ಯಾಪ್ಟನ್ ರೇಸ್‌ಗೆ ಇಳಿದ್ಮೇಲೆ ಚೆಂಡುಗಳನ್ನ ವೇಗವಾಗಿ ಹಾಕಿ ನಮ್ರತಾ ಎರಡನೇ ಸ್ಥಾನ ಪಡೆದಿದ್ದರು. ಆನಂತರ ಎಲ್ಲರ ವೋಟ್‌ ಪಡೆದು ನಮ್ರತಾ ಕ್ಯಾಪ್ಟನ್ ಆಗಿ ಆಯ್ಕೆ ಆದರು.

ತುಂಬಾ ಹೀರೋ ಆಗೋಕೆ ಟ್ರೈ ಮಾಡ್ತಿದ್ದೀಯಾ?

ಡ್ರೋನ್‌ ಪ್ರತಾಪ್‌ ಹಾಗೂ ಸಂಗೀತಾ ಚರ್ಚಿಸುತ್ತಿದ್ದಾಗಲೂ, ಪ್ರತಾಪ್‌ ಅವರು ಸಂಗೀತಾ ಬಳಿ ʻʻನನಗೆ ಕೊಡುವ ಪಾಯಿಂಟ್ಸ್‌ನ ನಮ್ರತಾಗೆ ಕೊಟ್ಟುಬಿಡಿ.ನಮ್ಮ ತಂಡದವರು ಒಬ್ಬರು ಹೋಗಲಿ ಕ್ಯಾಪ್ಟನ್ಸಿ ರೇಸ್‌ಗೆ.ʼʼಎಂದಿದ್ದರು. ಆದರೆ ಸಂಗೀತಾ ಮಾತ್ರ ಈ ಬಗ್ಗೆ ಆಕ್ಷೇಪ ಎತ್ತಿದ್ದರು. ʻʻಹಾಗೆಲ್ಲಾ ಮಾಡಬೇಡ. ನಿನಗೆ ಏನು ಸಿಗುತ್ತೆ ಹೇಳು? ನಾನೂ ಕ್ಯಾಪ್ಟನ್ಸಿ ಆಡುವಾಗ.. ನನ್ನನ್ನ ಹೊರಗಿಟ್ಟಿದ್ದರು. ಅವಾಗ ಈ ಮೈಂಡ್‌ಸೆಟ್ ಇತ್ತಾ? ತುಂಬಾ ಹೀರೋ ಆಗೋಕೆ ಟ್ರೈ ಮಾಡ್ತಿದ್ದೀಯಾ.ʼʼಎಂದು ಹೇಳಿದರು. ಹೀಗಾಗಿ ದನಸಿ ಖರೀದಿ ವೇಳೆ ಸ್ಪರ್ಧಿಗಳು ತಮ್ಮ ಬಳಿ ಇರುವ ಪಾಯಿಂಟ್‌ಗಳನ್ನು ಬಳಸಿ ಮನೆಗೆ ಅವಶ್ಯಕತೆ ಇರುವ ಪ್ರಮಾಣದಲ್ಲಿ ದಿನಸಿ ಖರೀದಿಸಲು ‘ಬಿಗ್ ಬಾಸ್‌’ ಅವಕಾಶ ಮಾಡಿಕೊಟ್ಟರು.

ಡ್ರೋನ್‌ ಪ್ರತಾಪ್‌ ಐಡಿಯಾ

ನಮ್ರತಾ ಅವರ ಪಾಯಿಂಟ್ಸ್‌ ಉಪಯೋಗಿಸಿದೆ, ಡ್ರೋನ್‌ ಅವರು ನನ್ನ ಕಡೆಯಿಂದ 2100 ಕೊಟ್ಟುಬಿಡ್ತೀನಿ. ಸಿರಿ ಅವರದ್ದೂ ಸೇರಿ 2900 ಆಗುತ್ತೆ. ಮಿಕ್ಕ ಅಮೌಂಟ್ ಸಂಗೀತಾ ಕೊಡಲಿ. ಆಗ ತನಿಷಾ ಅವರದ್ದು ಕಡಿಮೆ ಆಗುತ್ತೆ. ಉಳಿದಿದ್ದರಲ್ಲಿ ಸಂಗೀತಾ ನಮ್ರತಾಗೆ ಸ್ವಲ್ಪ ಕೊಡಲಿ ಎಂದರು. ಪ್ಪಿಕೊಂಡ ಸಂಗೀತಾ, ಮನೆಯ ದಿನಸಿಗಾಗಿ ಉಳಿದ ಮೊತ್ತವನ್ನು ಕೊಡುವುದಾಗಿಯೂ ತಿಳಿಸಿದರು.

ದಿನಸಿ ಖರೀದಿಗೆ ಸಿರಿ, ಡ್ರೋನ್ ಪ್ರತಾಪ್ ಶೇರ್ ಮಾಡಿದರು. ಹೀಗಾಗಿ, ದಿನಸಿ ಖರೀದಿಯ ಬಳಿಕ ನಮ್ರತಾಗೆ ಸಂಗೀತಾ ತಮ್ಮಲ್ಲಿ ಇದ್ದ ಎಕ್ಸ್ಟ್ರಾ ಪಾಯಿಂಟ್ಸ್ ಕೊಟ್ಟರು. ನಮ್ರತಾ ಬಳಿ ಇದ್ದ ಪಾಯಿಂಟ್ಸ್‌ 4650ಗೆ ಏರಿತು. ಪರಿಣಾಮ, ‘’ನೀವು ಕ್ಯಾಪ್ಟನ್ಸಿಗೆ ಎಂಟ್ರಿಯಾದ್ರಿ’’ ಎಂದು ನಮ್ರತಾಗೆ ಸಂಗೀತಾ ಹೇಳಿದರು. ನಮ್ರತಾ ಖುಷಿ ಪಟ್ಟರು. ಸಂಗೀತಾಗೆ ನಮ್ರತಾ ಧನ್ಯವಾದ ತಿಳಿಸಿದರು.

ಬಲೂನ್‌ ಟಾಸ್ಕ್‌ನಲ್ಲಿ ತನಿಷಾ ವಿರುದ್ಧ ಗೆದ್ದ ಸಂಗೀತಾ ಬರೋಬ್ಬರಿ 10 ಸಾವಿರ ಪಾಯಿಂಟ್ಸ್ ಗಿಟ್ಟಿಸಿಕೊಂಡರು. ನಮ್ರತಾ ಕೂಡ ವಿನಯ್‌ ಅವರ ಬಳಿ ಸುಳ್ಳು ಹೇಳಿ ಪಾಯಿಂಟ್ಸ್‌ ತಿಳಿದುಕೊಂಡರು. ವಿನಯ್ (5250), ಕಾರ್ತಿಕ್ (5300) ಹಾಗೂ ಮೈಕಲ್ (4500) ಬಳಿ ಇರುವ ಪಾಯಿಂಟ್ಸ್ ಮೊತ್ತ ಕೂಡ ನಮ್ರತಾಗೆ ತಿಳಿಯಿತು.

ಆಟಗಾರರ ಪೈಕಿ ನಮ್ರತಾ ಬಳಿ 9330 ಪಾಯಿಂಟ್ಸ್, ವಿನಯ್ ಬಳಿ 5350 ಪಾಯಿಂಟ್ಸ್, ಕಾರ್ತಿಕ್ ಬಳಿ 5300 ಪಾಯಿಂಟ್ಸ್ ಇತ್ತು. ಹೀಗಾಗಿ ಈ ಮೂವರೂ ಕ್ಯಾಪ್ಟನ್ ರೇಸ್‌ಗೆ ಇಳಿದರು. ಸಂಗೀತಾ ಬಳಿ 15850 ಪಾಯಿಂಟ್ಸ್ ಇದ್ದಿದ್ರಿಂದ ಕ್ಯಾಪ್ಟನ್ ರೇಸ್‌ಗೆ ಬಂದರು.ಈ ನಾಲ್ವರ ಪೈಕಿ ಕ್ಯಾಪ್ಟನ್ಸಿ ಅರ್ಹತಾ ಟಾಸ್ಕ್‌ನಲ್ಲಿ ಅತೀ ಹೆಚ್ಚು ಅಂಕಗಳಿರುವ ಚೆಂಡುಗಳನ್ನು ಹಾಕಿದ ನಮ್ರತಾ ಮತ್ತು ವಿನಯ್‌ ಕ್ಯಾಪ್ಟನ್ಸಿ ಅಭ್ಯರ್ಥಿಗಳಾಗಿ ಆಯ್ಕೆಯಾದರು.

ಇದನ್ನೂ ಓದಿ: BBK SEASON 10: ಕಾಪಿ ಹೊಡೆಯೋದ್ರಲ್ಲೂ ಫೇಲಾದ್ರಾ ಮನೆಮಂದಿ?

ಒಮ್ಮತದ ವೋಟ್‌!

ಬಳಿಕ ಬಿಗ್​ಬಾಸ್ ಆದೇಶದಂತೆ ಮನೆಯ ಸ್ಪರ್ಧಿಗಳು ಒಟ್ಟಿಗೆ ಸೇರಿ ವಿನಯ್ ಹಾಗೂ ನಮ್ರತಾರಲ್ಲಿ ಒಬ್ಬರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಬೇಕಾಯ್ತು. ವಿನಯ್, ತಾನು ಈಗಾಗಲೇ ಒಮ್ಮೆ ಕ್ಯಾಪ್ಟನ್ ಆಗಿದ್ದೇನೆ, ನಾನು ಅಗ್ರೆಸಿವ್, ಮುಂದೆಯೂ ಅಗ್ರೆಸಿವ್ ಆಗಿಯೇ ಆಡಲಿದ್ದೇನೆ, ಆದರೆ ನನಗೆ ಕ್ಯಾಪ್ಟನ್​ಗೆ ಮತ ಹಾಕುವ ಅವಕಾಶ ಸಿಕ್ಕರೆ ನಾನು ನಮ್ರತಾಗೆ ಮತ ಹಾಕುತ್ತಿದ್ದೆ ಎಂದರು.

ʻʻಕ್ಯಾಪ್ಟನ್ಸಿ ಅಧಿಕಾರಕ್ಕಾಗಿ ನಾನು ಆಡಲಿಲ್ಲ. ನನಗೆ ನನ್ನ ಅಪ್ಪ- ಅಮ್ಮನ ಫೋಟೋ ಬೇಕು. ತುಂಬಾ ಕ್ಲೋಸ್‌ ಕಾಂಪಿಟೇಶನ್‌ನಲ್ಲಿ ನಾನು ಕ್ಯಾಪ್ಟನ್‌ ಆಗೋದ್ರಿಂದ ಮಿಸ್ ಆಗಿದ್ದೀನಿ. ಮಹಿಳೆ ಕ್ಯಾಪ್ಟನ್ ಬರಲಿ’’ ಎಂದು ನಮ್ರತಾ ಕೇಳಿಕೊಂಡರು. ನಮ್ರತಾ ಪರವಾಗಿ ವರ್ತೂರು ಸಂತೋಷ್, ತುಕಾಲಿ ಸಂತು, ಡ್ರೋನ್ ಪ್ರತಾಪ್, ಕಾರ್ತಿಕ್, ತನಿಷಾ, ಮೈಕಲ್, ಸಂಗೀತಾ, ಸಿರಿ ಮತ ಹಾಕಿದರು. ಬಳಿಕ ನಮ್ರತಾ ಮನೆಯ ಕ್ಯಾಪ್ಟನ್‌ ಆದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version