Site icon Vistara News

BBK SEASON 10: ಸಂಗೀತಾ ಮೆಂಟಲಿ ತುಂಬಾ ಹಿಂಸೆ ಕೊಡ್ತಾರೆ; ಕಣ್ಣೀರಿಟ್ಟ ನಮ್ರತಾ!

Namratha Gowda and sangeetha

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಸ್ಪರ್ಧಿಗಳು ಲಕ್ಷುರಿ ಬಜೆಟ್‌ವನ್ನು ಕಳೆದುಕೊಂಡಿದ್ದಾರೆ. ಜತೆಗೆ ಈ ವಿಚಾರವಾಗಿ ನಮ್ರತಾ ಹಾಗೂ ಸಂಗೀತಾ ಮಧ್ಯೆ ಜಗಳವೂ ಆದವು. ‘ಸಂಗೀತಾ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದಾಳೆ. ತುಂಬಾನೇ ನೆಗೆಟಿವಿಟಿ ಸ್ಪ್ರೆಡ್ ಮಾಡುತ್ತಿದ್ದಾರೆ ಎಂದು ನಮ್ರತಾ ಕಣ್ಣೀರಿಟ್ಟರು. ಈ ವಾರ ಸ್ಪರ್ಧಿಗಳು ಗೊಂದಲ ಹಾಗೂ ಲೆಕ್ಕಾಚಾರದಲ್ಲಿ ಆದ ತಪ್ಪಿನಿಂದ ಈ ವಾರ ಮನೆ ಲಕ್ಷುರಿ ಬಜೆಟ್‌ ಕಳೆದುಕೊಂಡಿದ್ದಾರೆ.

ಈ ಸೀಸನ್‌ನಲ್ಲಿ ಲಕ್ಷುರಿ ಬಜೆಟ್‌ ಪಡೆದಿರೋದಕ್ಕಿಂತ ಕಳ್ಕೊಂಡಿರುವುದೇ ಹೆಚ್ಚು. ವಿದ್ಯಾರ್ಥಿಗಳಾಗಿ ಹೆಚ್ಚು ಸ್ಟಾರ್ ಪಡೆದಿದ್ದ, ಶಿಕ್ಷಕರಾಗಿ ಕಡಿಮೆ ದೂರು ಪಡೆದಿದ್ದ – ನಮ್ರತಾ, ಸಂಗೀತಾ ಶೃಂಗೇರಿ, ಮೈಕಲ್, ಡ್ರೋನ್ ಪ್ರತಾಪ್, ವಿನಯ್, ಪವಿ ಪೂವಪ್ಪ, ಸಿರಿ, ತನಿಷಾ ಕುಪ್ಪಂಡ, ಅವಿನಾಶ್ ಶೆಟ್ಟಿ, ವರ್ತೂರು ಸಂತೋಷ್ – ಈ ವಾರ ಲಕ್ಷುರಿ ಬಜೆಟ್‌ ಪಡೆಯಲು ಅರ್ಹರಾಗಿದ್ದರು. ಬಿಗ್‌ ಬಾಸ್‌ 10 ಸಾವಿರ ಪಾಯಿಂಟ್ಸ್‌ ಫಿಕ್ಸ್‌ ಮಾಡಿದ್ದರು. ಬೋರ್ಡ್​ ಮೇಲೆ ಲೆಕ್ಕ ಬರೆಯಲು ಹೋದ ನಮ್ರತಾ ಹಾಗೂ ಮೈಕಲ್ ವಿರುದ್ಧ ಸಂಗೀತಾ ತಿರುಗಿ ಬಿದ್ದರು. ಹೀಗಾಗಿ ಲಕ್ಷುರಿ ಬಜೆಟ್‌ ಬರೆಯುವಾಗ ಪಾಯಿಂಟ್ಸ್‌ಗೂ ಮೀರಿ ವಸ್ತುಗಳನ್ನು ಬರೆದ ಕಾರಣ ಈ ವಾರದ ಲಕ್ಷರಿ ಬಜೆಟ್‌ ಮನೆಯವರು ಕಳೆದುಕೊಂಡರು.

ಬ್ರೌನ್ ರೈಸ್ ಯಾಕೆ ಬೇಕಿತ್ತು?

ಈ ಬಾರಿಯ ಲಕ್ಷುರಿ ಬಜೆಟ್​ನಲ್ಲಿ ಚಿಕನ್, ಪನೀರ್ ಹಾಗೂ ಬ್ರೌನ್ ರೈಸ್ ಬರೆಯಲಾಗಿತ್ತು. ಬ್ರೌನ್ ರೈಸ್ ಬರೆದ ಕಾರಣ ಲಕ್ಷುರಿ ಬಜೆಟ್‌ ಮಿಸ್‌ ಆಯ್ತು ಎನ್ನುವುದು ಸಂಗೀತಾ ಅವರ ವಾದ. ಒಟ್ಟು ಮೊತ್ತವನ್ನ ಮೈಕಲ್‌ ಲೆಕ್ಕ ಹಾಕುತ್ತಿದ್ದರು. ಈ ಎಲ್ಲಾ ಸಾಮಗ್ರಿಗಳ ಒಟ್ಟು ಮೊತ್ತ 11 ಸಾವಿರದ ಮೇಲಾಯಿತು. ಪನ್ನೀರ್‌ 2 ಪ್ಯಾಕೆಟ್ ಮಾಡೋಷ್ಟರಲ್ಲಿ ಟೈಮ್‌ ಆಗಿ ಹೋಗಿತ್ತು. ಇದಾದ ಬಳಿಕ ಸಿರಿ ಕೂಡ `ಒಂದು ಐಟಮ್‌ ಮೈನಸ್‌ ಮಾಡಬೇಕಿತ್ತು’ ಎಂದರು.` ಬ್ರೌನ್ ರೈಸ್‌ – 5 ಕೆಜಿ ಮೈನಸ್‌ ಮಾಡಿದ್ದರೆ ಈಸಿಯಾಗಿ ಆಗಿರೋದು’ ಎಂದು ಕಾರ್ತಿಕ್‌ ಹೇಳಿದರು. , ವಿನಯ್ ‘’ಈ ಮನೆಗೆ ಬಂದು ನಾನು ಕಲಿತಿರೋದು ಏನು ಅಂದ್ರೆ, ಯಾವುದು ನಮಗೆ ಸಿಗಲ್ವೋ.. ಅದರ ಬಗ್ಗೆ ಆಸೆ ಬಿಟ್ಟುಬಿಡಬೇಕು. ಚಿಕನ್ ಬಿಟ್ಟೆ, ಕಾಫಿ ಬಿಟ್ಟೆ, ಲಕ್ಷುರಿ ಅಂತೂ ಮರೆತುಬಿಟ್ಟಿದ್ದೀನಿ’’ ಎಂದರು.

ಇದನ್ನೂ ಓದಿ: BBK SEASON 10: ಈ ವಾರ ಉತ್ತಮ ತುಕಾಲಿ, ಜೈಲು ಸೇರಿದ ಪವಿ ಪೂವಪ್ಪ!

ವಿನಯ್‌ ಕೂಡ ಇಲ್ಲಿಗೆ ಸುಮ್ಮನಾಗಿಲ್ಲ. ಲಕ್ಷುರಿ ಬಜೆಟ್ ಮಿಸ್ ಆಗೋಕೆ ತನಿಷಾ ಕಾರಣ ಎಂದು ವಿನಯ್ ಆರೋಪಿಸಿದರು. ಸಂಗೀತಾಗಾಗಿ ಪನ್ನೀರ್‌ ಕನ್ಸಿಡರ್‌ ಮಾಡಬೇಕು ಎಂದು ತನಿಷಾ ಹೇಳಿದ್ದರು. ಪನ್ನೀರ್‌ ಇಂದಲೇ ಲಕ್ಷುರಿ ಬಜೆಟ್ ಮಿಸ್‌ ಆಗಿದ್ದು ಎಂದು ವಾದ ಮಾಡಿದ್ದಾರೆ.

ಸಂಗೀತಾ ಮೆಂಟಲಿ ತುಂಬಾ ಹಿಂಸೆ ಕೊಡ್ತಾರೆ

ಇದಾದ ಬಳಿಕ ಸಂಗೀತಾ ಹಾಗೂ ನಮ್ರತಾ ಮಧ್ಯೆ ವಾಗ್ವಾದ ನಡೆದಿದೆ. ʻʻಮನೆಯಲ್ಲಿ ಎಲ್ಲರಿಗೂ ಬೇಕಿತ್ತು. ನಿಮ್ಮ ಲಿಸ್ಟ್‌ನಿಂದ ನಾವು ಪನ್ನೀರ್‌ ಸೇರಿಸಿದ್ವಿ. ಅದನ್ನ ನಾವು ಯಾರಿಗೂ ಕೇಳಲಿಲ್ಲ. ನಿಮಗಾಗಿ ಪನ್ನೀರ್‌ ಸೇರಿಸಿದ್ದು. ಮನೆಗೆ ಅಕ್ಕಿ ಕಮ್ಮಿ ಇರೋದ್ರಿಂದ, ಹಿಟ್ಟು ಕಡಿಮೆ ಇರೋದ್ರಿಂದ ಬ್ರೌನ್ ರೈಸ್ ಸೇರಿಸಿದ್ದು. ಇದು ಎಲ್ಲರ ನಿರ್ಧಾರʼʼ. ಎಂದು ನಮ್ರತಾ ಹೇಳಿದರು. ʻʻಕಳೆದ ವಾರ ನಾನು ಇರಲಿಲ್ಲ. ನನಗೆ ಆ ವಿಷ್ಯ ಗೊತ್ತಿಲ್ಲ. ಎಲ್ಲರೂ ಎಂದು ಹೇಳಬೇಡಿ. ಬ್ರೌನ್ ರೈಸ್‌ ಇಷ್ಟು ವಾರಗಳ ಕಾಲ ಪ್ರಯಾರಿಟಿ ಮಾಡಿರಲಿಲ್ಲʼʼ ಎಂದು ಸಂಗೀತಾ ಉತ್ತರ ನೀಡಿದರು.

ಇದಾದ ಬಳಿಕ ʻʻಸಂಗೀತಾ ಮೆಂಟಲಿ ತುಂಬಾ ಹಿಂಸೆ ಕೊಡ್ತಾರೆ. ನನ್ನ ಮನೆಗೆ ತಗೊಂಡು ಹೋಗೋಕೆ ಬರೆದಿದ್ದೇನಾ? ಒಬ್ಬರಿಗೆ ಮಾತ್ರ ಪನ್ನೀರ್ ಬೇಕಾಗಿತ್ತು. ಅದನ್ನ ನಾನು ಕ್ಯಾನ್ಸಲ್ ಮಾಡಬಹುದಿತ್ತು. ಆದರೆ ನಾನು ಮಾಡಲಿಲ್ಲ. ಯೋಚನೆ ಮಾಡದೆ ಪ್ರಶ್ನೆ ಮಾಡ್ತಾರೆ’’ ಎಂದು ನಮ್ರತಾ ಕಣ್ಣೀರಿಟ್ಟರು. ಇದಾದ ಬಳಿಕ ಇಬ್ಬರು ಒಬ್ಬರಿಗೊಬ್ಬರು ಕ್ಷಮೆ ಕೇಳಿಕೊಂಡರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version