ಬೆಂಗಳೂರು: ಈ ವಾರ ವಿಭಿನ್ನವಾಗಿ ಬಿಗ್ ಬಾಸ್ ಮನೆಯಲ್ಲಿ (BBK SEASON 10) ನಾಮಿನೇಶನ್ ಆಗಿದೆ. ಒಂಬತ್ತನೇ ವಾರಕ್ಕೆ ಕಾಲಿಟ್ಟಿದ್ದು, ಒಟ್ಟು ಈ ವಾರ ಆರು ಸ್ಪರ್ಧಿಗಳು ನಾಮಿನೇಟ್ ಆದರು. ಈ ವಾರ ಪವಿ ಪೂವಪ್ಪ, ಸಿರಿ, ವಿನಯ್, ಸಂಗೀತಾ, ಮೈಕಲ್ ಹಾಗೂ ಡ್ರೋನ್ ಪ್ರತಾಪ್ ನಾಮಿನೇಟ್ ಆಗಿದ್ದಾರೆ. ಈ ಆರು ಮಂದಿಯ ಪೈಕಿ ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್ನ ಹೊಸ ಮೆಂಬರ್ ಪವಿ ಪೂವಪ್ಪ ರ ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಿದೆ. ಸ್ನೇಹಿತ್ ಹೊರ ಹೋದ ಬಳಿಕ ‘ಪಾಪರೆಡ್ಡಿಪಾಳ್ಯ’ ಟೀಂ ಸಣ್ಣದಾಯ್ತು. ಇದಾದ ಬಳಿಕ ನಮ್ರತಾ ಗ್ರೂಪಿಸಮ್ ಬಿಟ್ಟು ಆಟ ಆಡುತ್ತಾರೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ ಆದದ್ದೇ ಬೇರೆ. ಈ ವಾರ ಕೂಡ ನಮ್ರತಾ ಹಳೆಯ ಚಾಳಿ ಮುಂದುವರಿಸಿದ್ದಾರೆ.
ಬಿಗ್ ಬಾಸ್ ರೂಲ್ಸ್ ಏನು?
ಕಳೆದ ವಾರ ಸ್ನೇಹಿತ್ ಎಲಿಮಿನೇಟ್ ಆದರು. ಈ ವೇಳೆ ನಮ್ರತಾಗೆ ಸ್ನೇಹಿತ್ ವಿಶೇಷ ಅಧಿಕಾರವನ್ನು ನೀಡಿದ್ದರು. ಇದರ ಅನುಸಾರ, ನಮ್ರತಾ ಈ ವಾರದ ನಾಮಿನೇಶನ್ ನಡೆಸಿಕೊಡಬೇಕು ಎಂದು ಬಿಗ್ ಬಾಸ್ ಹೇಳಿದರು. ಈ ನಾಮಿನೇಶನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಧಿಕಾರ ವಿನಯ್, ಪವಿ ಪೂವಪ್ಪ, ತನಿಷಾ, ಅವಿನಾಶ್ ಶೆಟ್ಟಿ ಹಾಗೂ ಮೈಕಲ್ಗೆ ಇರಲಿಲ್ಲ. ಆ ಅಧಿಕಾರವನ್ನೇ ಬಳಸಿಕೊಂಡು 6 ಜನರನ್ನ ನಮ್ರತಾ ನಾಮಿನೇಟ್ ಮಾಡಿದ್ದರು. ಆದರೆ, ನಮ್ರತಾ ನಾಮಿನೇಶನ್ಗೆ ಹಾಕಿದ 6 ಜನರ ಪೈಕಿ ಕೊನೆಯಲ್ಲಿ ಉಳಿದವರು ಇಬ್ಬರು ಮಾತ್ರ.
ನಮ್ರತಾ 6 ಮಂದಿಯನ್ನು ನಾಮಿನೇಟ್ ಮಾಡಿದ ಬಳಿಕ, ‘’ಪ್ರತಿ ಬಾರಿ ಬಝರ್ ಆದಾಗ, ನಾಮಿನೇಷನ್ ಅಧಿಕಾರ ಹೊಂದಿರುವವರ ಪೈಕಿ ಒಬ್ಬರು ಒಳಗೆ ಬಂದು ಇಬ್ಬರ ಭಾವಚಿತ್ರವನ್ನು ನಾಮಿನೇಟ್ ಆಗದಿರುವ ಸ್ಪರ್ಧಿಗಳ ಜತೆ ಬದಲಿಸಿ ಸೂಕ್ತ ಕಾರಣ ಕೊಡಬೇಕು. ಕೊನೆಯಲ್ಲಿ ಯಾವ 6 ಜನರ ಭಾವಚಿತ್ರ ಇರುತ್ತದೆಯೋ ಅವರು ನಾಮಿನೇಟ್ ಆದಂತೆ’’ ಎಂದು ಬಿಗ್ ಬಾಸ್ ಘೋಷಿಸಿದರು.
ಎದುರಾಳಿ ತಂಡವನ್ನೇ ನಮ್ರತಾ ಟಾರ್ಗೆಟ್ ಮಾಡಿದ್ದರು. ಆದರೆ, ನಮ್ರತಾ ಪ್ಲಾನ್ ಎಲ್ಲಾ ತಲೆಕೆಳಗಾಗುವಂತೆ ಮಾಡಿದ್ದು ಕಾರ್ತಿಕ್, ಸಂಗೀತಾ ಮತ್ತು ಡ್ರೋನ್ ಪ್ರತಾಪ್. ಅವಿನಾಶ್ ಶೆಟ್ಟಿ, ಸಂಗೀತಾ, ತನಿಷಾ, ಸಿರಿ, ಕಾರ್ತಿಕ್ ಹಾಗೂ ವರ್ತೂರು ಸಂತೋಷ್ರನ್ನ ನಮ್ರತಾ ನಾಮಿನೇಟ್ ಮಾಡಿದ್ದರು. ಆದರೆ, ಅಂತಿಮವಾಗಿ ನಾಮಿನೇಟ್ ಆದವರು ಪವಿ ಪೂವಪ್ಪ, ಸಿರಿ, ವಿನಯ್, ಸಂಗೀತಾ, ಮೈಕಲ್ ಹಾಗೂ ಡ್ರೋನ್ ಪ್ರತಾಪ್.
ಇದನ್ನೂ ಓದಿ: BBK SEASON 10: ಬಿಗ್ಬಾಸ್ ಮನೆಯಿಂದ ಹೊರಬಂದ ಸ್ನೇಹಿತ್ ತಂದೆ-ತಾಯಿ ಬಳಿ ಕ್ಷಮೆ ಕೋರಿದ್ದೇಕೆ?
ನಾಮಿನೇಶನ್ ಪ್ರಕ್ರಿಯೆ ಮುಗಿದ ಬಳಿಕ ತುಕಾಲಿ ಸಂತೋಷ್ ಬಳಿ ನಮ್ರತಾ ಮಾತನಾಡಿದ್ದಾರೆ. ‘ಪ್ಲಾನ್ ವಿಫಲವಾಯಿತು. ಇಲ್ಲದಿದ್ದರೆ ಗೇಮ್ ಸಂಪೂರ್ಣವಾಗಿ ನಮ್ಮ ಕಡೆ ತಿರುಗುತ್ತಿತ್ತು’ ಎಂದಿದ್ದಾರೆ ನಮ್ರತಾ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತಿದೆ. ಈಗ ವೈಯಕ್ತಿಕ ಆಟ ಆಡಬೇಕಿದೆ.
ಬಿಗ್ಬಾಸ್ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ