Site icon Vistara News

BBK Season 10: ಮಗನಿಗೆ ಬುದ್ಧಿ ಹೇಳಿ ಎಂದ ನಮ್ರತಾ; ರೊಮ್ಯಾನ್ಸ್‌ ನೋಡಿದ್ರೆ ತಾಯಿ ಎಂಜಾಯ್‌ ಮಾಡ್ತಾರಂತೆ!

namratha gowda snehith gowda bbk 10

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK Season 10) ಮೊದಲನೇ ವಾರದಿಂದಲೂ ಸ್ನೇಹಿತ್‌ ಹುಡುಗಿಯರ ಜತೆ ಫ್ಲರ್ಟ್‌ ಮಾಡುವ ಪ್ರಯತ್ನಗಳು ಮಾಡುತ್ತಿರುವುದು ಗೊತ್ತೇ ಇದೆ. ಮೊದಲಿಗೆ ಸಂಗೀತಾ ಜತೆ ಕ್ಲೋಸ್‌ ಆಗಲು ನೋಡಿದ ಸ್ನೇಹಿತ್‌ಗೆ ಕಾರ್ತಿಕ್‌ ಕಾರಣಗಳಿಂದ ವಿಫಲವಾಯ್ತು. ಮತ್ತೆ ಇಶಾನಿಗೂ ಟ್ರೈ ಮಾಡಿದ್ದರೂ ಮೈಕಲ್‌ ಜತೆ ಇಶಾನಿ ಕ್ಲೋಸ್‌ ಆದ ಕಾರಣ ಅಲ್ಲಿಯೂ ಅವರಿಗೆ ಹಿನ್ನಡೆ ಆಯ್ತು. ನಮ್ರತಾಗೂ ಮೊದಲ ದಿನದಂದಲೂ ಕಾಳು ಹಾಕುತ್ತಲೇ ಇರುವ ಸ್ನೇಹಿತ್‌ ಇದೀಗ ಕಳೆದ ಒಂದು ವಾರದಿಂದ ಟಾಸ್ಕ್‌ ವಿಚಾರವಾಗಿ ನಮ್ರತಾ ಜತೆ ಸ್ವಲ್ಪ ಸಲುಗೆಯಿಂದ ಇದ್ದಾರೆ. ಆದರೆ ನಮ್ರತಾ ಮಾತ್ರ ಸ್ನೇಹಿತ್‌ ಬಲೆಗೆ ಬೀಳುತ್ತಿಲ್ಲ. ಕಳೆದ ಸಂಚಿಕೆಯಲ್ಲಿ ಸ್ನೇಹಿತ್‌ ಅವರ ಈ ನಡೆಗೆ ನಮ್ರತಾ ಸಾಕಾಗಿ ‘ನಿಮ್ಮ ಮಗನಿಗೆ ಬುದ್ಧಿ ಹೇಳಿ’ ಎಂದು ಕ್ಯಾಮೆರಾ ನೋಡುತ್ತಾ ಹೇಳಿದರು.

ಈ ಹಿಂದೆ ಇಶಾನಿ ಮೇಲೆ ಕ್ರಶ್‌ ಇತ್ತು ಮೈಕಲ್‌ನಿಂದಾಗಿ ದೂರ ಸರಿದೆ ಎಂದು ಸ್ನೇಹಿತ್‌ ಹೇಳಿಕೊಂಡಿದ್ದರು. ಇಶಾನಿ ಕೂಡ ತನಗೂ ಸ್ನೇಹಿತ್‌ ಜತೆ ಕ್ರಶ್‌ ಇತ್ತು ಎಂಬುದಾಗಿ ಹೇಳಿದ್ದರು. ನಮ್ರತಾ ಅವರೇ ಇಶಾನಿಗೆ ಮೈಕಲ್‌ ಜತೆ ಟ್ರೈ ಮಾಡು ಎಂದಾಗ, ಮೈಕಲ್‌ ಬಹರಂಗವಾಗಿಯೇ ಇಶಾನಿ ತನ್ನ ಗರ್ಲ್‌ ಫ್ರೆಂಡ್‌ ಎಂದು ಒಪ್ಪಿಕೊಂಡರು. ಆದರೆ ಸ್ನೇಹಿತ್‌ ಇದೀಗ ನಮ್ರತಾಗೆ ಟ್ರೈ ಮಾಡ್ತಾ ಇದ್ದಾರೆ. ಇನ್ನೊಂದು ಕಡೆ ನಮ್ರತಾ ಜತೆ ಸ್ನೇಹಿತ್ ಅವರು ಡೇಟ್ ಪ್ಲ್ಯಾನ್ ಮಾಡುತ್ತಿದ್ದಾರೆ. ಇದೆಲ್ಲವೂ ತಮಾಷೆ ಎಂಬುದಂತೂ ಸತ್ಯ.

ಸ್ನೇಹಿತ್ ಗಾರ್ಡನ್ ಏರಿಯಾದಲ್ಲಿ ವರ್ಕೌಟ್ ಮಾಡುತ್ತಿದ್ದರು. ನಮ್ರತಾ ಅವರು ಅಲ್ಲಿಗೆ ಬಂದರು. ಅದೇ ಸಮಯಕ್ಕೆ ಸೂರ್ಯ ಕೂಡ ಮೋಡದ ಮರೆಯಿಂದ ಬಂದ. ‘ನೋಡಿ ನಿಮ್ಮನ್ನು ನೋಡುತ್ತಿದ್ದಂತೆ ಸೂರ್ಯ ಕೂಡ ಕಾಣಿಸಿದ’ ಎಂದು ನಮ್ರತಾಗೆ ಹೇಳಿದರು ಸ್ನೇಹಿತ್. ಈ ಮಾತನ್ನು ನಮ್ರತಾ ಬಳಿ ಕೇಳೋಕೆ ಸಾಧ್ಯವಾಗಿಲ್ಲ. ನಮ್ರತಾ ಮಾತನಾಡಿ ʻʻನನ್ನ ಜಾಗದಲ್ಲಿ ಬೇರೆ ಹುಡುಗಿ ಇದ್ದಿದ್ದರೆ ವರ್ಕೌಟ್‌ ಆಗಿರೋದುʼʼಎಂದರು. ಸ್ನೇಹಿತ್‌ ಆಗ ʻʻನಮ್ಮ ವರ್ಕೌಟ್‌ ಮಾಡ್ತಾ ಇರಬೇಕು. ವರ್ಕೌಟ್‌ ಆಗೋದು ಬಿಡೋದು ದೇವರಿಗೆ ಬಿಟ್ಟು ಬಿಡಬೇಕು. ನಿಮ್ಮ ಐಡಿಯಲ್ ಟೈಪ್ ಏನೇ ಆಗಿರಲಿ. ಈ ಮನೆಯಲ್ಲಿ ಐಡಿಯಲ್ ನಾನೇʼʼಎಂದರು.

ಇದನ್ನೂ ಓದಿ: BBK Season 10: ಡ್ರೋನ್‌ ಪ್ರತಾಪ್‌ಗೆ ಸತತ ಗೆಲುವು; ಸ್ಟ್ರಾಟಜಿಗೆ ಫ್ಯಾನ್ಸ್‌ ಫಿದಾ!

ಇತ್ತ ನಮ್ರತಾ ಕೂಡ ʻʻಸ್ನೇಹಿತ್‌ ಅವರು ಅಪ್ಪ ಅಮ್ಮ ಇದನ್ನು ನೋಡ್ತಾ ಇದ್ದರೆ, ದಯವಿಟ್ಟು ಮಗನಿಗೆ ಬುದ್ಧಿ ಹೇಳಿʼʼಎಂದರು. ಆಗ ಸ್ನೇಹಿತ್‌ ಮಾತನಾಡಿ ʻʻನಮ್ಮ ಅಮ್ಮ ಇದನ್ನು ತುಂಬ ಎಂಜಾಯ್‌ ಮಾಡ್ತಾ ಇರ್ತಾರೆ. ನನ್ನ ಅಮ್ಮನಿಗೆ ನಾನು ರೊಮ್ಯಾನ್ಸ್ ಮಾಡೋದು ಇಷ್ಟ. ನನ್ನ ಪ್ರಕಾರ ಒಂದು ಮಹಿಳೆಯನ್ನು ಗೌರವಿಸೋದು ರೊಮ್ಯಾನ್ಸ್. ಅವರು ಖಂಡಿತ ಎಂಜಾಯ್‌ ಮಾಡುತ್ತಿರುತ್ತಾರೆ” ಎಂದರು. ಈ ಮಾತು ಕೇಳಿ ನಮ್ರತಾ ಶಾಕ್‌ ಆದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version