Site icon Vistara News

BBK SEASON 10: ಪ್ರೀತ್ಸೇ ನನ್ನ ಪ್ರೀತ್ಸೇ ಎಂದು ಕಾಡಿದ ಸ್ನೇಹಿತ್‌; ನಮ್ರತಾಗೆ ಪ್ರಾಣ ಸಂಕಟ!

Namratha Gowda and Snehit Gowda bigg boss kannda

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರಲ್ಲಿ (BBK SEASON 10) ಮೈಕಲ್‌- ಇಶಾನಿ ಹಾಗೂ ಸಂಗೀತಾ-ಕಾರ್ತಿಕ್‌ ನಡುವೆ ಆತ್ಮೀಯತೆ ಬೆಳೆದಿರುವುದು ಗೊತ್ತೇ ಇದೆ. ಇದೀಗ ಸ್ನೇಹಿತ್‌ ಗೌಡ ಹಾಗೂ ನಮ್ರತಾ ಸ್ನೇಹ ಎಲ್ಲಿಗೆ ಹೋಗಿ ಮುಟ್ಟಲಿದೆಯೋ ಎಂದು ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ. ಈಗಾಗಲೇ ಪರೋಕ್ಷವಾಗಿ ನಮ್ರತಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದಾರೆ ಸ್ನೇಹಿತ್. ನಮ್ರತಾ ಗೌಡ ಸಮಯ ಕೊಡಿ ಅಂದಾಗಿತ್ತು. ಆದರೀಗ ಕಳೆದ ಸಂಚಿಕೆಯಲ್ಲಿ ಈ ವಿಚಾರವಾಗಿ ನಮ್ರತಾ ತುಂಬಾ ಕಿರಿಕಿರಿ ಅನುಭವಿಸಿದ್ದಾರೆ.

ಸ್ನೇಹಿತ್ ಗೌಡ ಅವರು ನಮ್ರತಾ ಗೌಡ ಜತೆ ಆಪ್ತತೆ ಬೆಳೆಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಲೇ ಇದ್ದಾರೆ. ಈ ಬಗ್ಗೆ ಕೆಲವೊಮ್ಮೆ ನಮ್ರತಾ ಗೌಡ ನೇರವಾಗಿ ಹೇಳಿದ್ದಿದೆ. ಈಗ ಅವರು ಕಣ್ಣೀರು ಹಾಕುವ ಹಂತಕ್ಕೆ ಹೋಗಿ ತಲುಪಿದೆ.

‘ಸ್ಮೈಲ್ ಮಾಡ್ಕೊಂಡು ಎಲ್ಲದನ್ನೂ ಚಿಲ್ಲಾಗಿ ತೆಗೆದುಕೊಳ್ಳುತ್ತಿದ್ದೀನಿ ಎಂದ ಮಾತ್ರಕ್ಕೆ ಎಲ್ಲವೂ ಸರಿ ಇದೆ ಎಂದಲ್ಲ’ ಎಂದಿದ್ದಾರೆ ನಮ್ರತಾ ಗೌಡ. ‘ನಿಮಗೆ ಬೇಕಾದಾಗ ನೀವು ಮಾತು ನಿಲ್ಲಿಸಬಹುದು. ನಿಮಗೆ ಬೇಕಾದ ನೀವು ಬ್ಲೇಮ್ ಮಾಡಬಹುದು. ಮೊದಲ ದಿನದಿಂದಲೂ ಇದನ್ನೂ ಮಾಡುತ್ತಿದ್ದೀರಿ’ ಎಂದು ಬೇಸರ ಹೊರಹಾಕಿದರು ನಮ್ರತಾ ಗೌಡ.

‘ನಾವು ಒಬ್ಬರಿಗೊಬ್ಬರು ಹರ್ಟ್ ಮಾಡಿಕೊಳ್ಳುತ್ತಿದ್ದೇವೆ. ಕಾರ್ತಿಕ್ ಹಾಗೂ ಸಂಗೀತಾ ಸಂಬಂಧದ ರೀತಿ ಟಾಕ್ಸಿಕ್ ಆಗುವ ಮೊದಲು ನಾವು ಇದನ್ನು ಸ್ಟಾಪ್ ಮಾಡಬೇಕು. ನಿಮಗೆ ನಿಜಕ್ಕೂ ಏನು ಬೇಕು’ ಎಂದು ನಮ್ರತಾ ಗೌಡ ಪ್ರಶ್ನೆ ಮಾಡಿದ್ದಾರೆ. ‘ನಿಮಗೆ ಯಾವಾಗಾದರೂ ಒನ್ ಸೈಡ್ ಲವ್ ಇತ್ತ’ ಎಂದು ಸ್ನೇಹಿತ್ ಮರು ಪ್ರಶ್ನೆ ಹಾಕಿದ್ದಾರೆ. ಈ ರೀತಿ ಕೇಳುತ್ತಿದ್ದಂತೆ ನಮ್ರತಾ ಇರಿಟೇಶನ್‌ಗೆ ಒಳಗಾದರು. ʻʻನೀವು ನನ್ನನ್ನು ಲೈಕ್ ಮಾಡ್ತೀರಿ ಅನ್ನೋದು ಗೊತ್ತು. ನನಗೆ ಓಪನ್​ ಆಗೋಕೆ ಸಾಕಷ್ಟು ಸಮಯ ಬೇಕು. ಒಂದು ತಿಂಗಳಲ್ಲಿ ಇದೆಲ್ಲ ಆಗಬೇಕು ಅಂದರೆ ಆಗಲ್ಲ. ನಾನು ಅಮ್ಮನ ಮಿಸ್ ಮಾಡುಕೊಳ್ಳುತ್ತಿದ್ದೇನೆ. ನನಗೆ ಎಲ್ಲರೂ ಫೇಕ್ ಎನಿಸುತ್ತಾರೆ. ನಾನು ಯಾರನ್ನೂ ನಂಬಲ್ಲ’ ಎಂದು ನೇರವಾಗಿ ಹೇಳಿದ್ದಾರೆ ನಮ್ರತಾ.

ಹಿಂದೆ ಪರೋಕ್ಷವಾಗಿ ಸ್ನೇಹಿತ್‌ ನಮ್ರತಾ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರು. ʻʻನಿಮ್ಮ ಅಪ್ಪ-ಅಮ್ಮ ನಿಮ್ಮನ್ನು ಕರೆದುಕೊಂಡು ಹೋದ್ರೆ ಸಾಕಾಗಿದೆ. ನೀವು ಒಳ್ಳೆಯವರುʼʼ ಎಂದು ನಮ್ರತಾ ಅವರು ಸ್ನೇಹಿತ್‌ಗೆ ಹೇಳಿದ್ದರು. ʻʻನಿಮ್ಮ ಮೇಲೆ ನನಗೆ ಫೀಲಿಂಗ್ಸ್ ಇದೆ, ಆದರೆ ನೀವು ನನ್ನ ಬಗ್ಗೆ ಯೋಚನೆ ಮಾಡಬೇಕು ಅಂತಿಲ್ಲ. ನೀವು ನಿಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡ್ತಿದ್ದೀರಾ? ಟೈಮ್ ತಗೋಳಿʼʼ ಎಂದಿದ್ದರು ಸ್ನೇಹಿತ್‌. ಈ ಬಗ್ಗೆ ನಮ್ರತಾ ಗೌಡ ಕೂಡ ʻʻಮನೆಯ ಹೊರಗಡೆ ಆಗಿದ್ರೆ ನಾನು ಯೋಚನೆ ಮಾಡ್ತಿದ್ದೆ, ಆದರೆ ಈ ಮನೆಯಲ್ಲಿ ಲವ್ ಆಗತ್ತೆ ಅಂತ ಅನಿಸಲ್ಲ. ನಾನು ನನ್ನನ್ನು ಇಷ್ಟಪಡ್ತೀನಿ, ಬೇರೆಯವರನ್ನು ಲೈಕ್ ಮಾಡಿ ಮದುವೆ ಆಗೋಕೆ ಟೈಮ್ ಬೇಕುʼʼ ಎಂದಿದ್ದರು.

ಇದನ್ನೂ ಓದಿ: BBK SEASON 10: ಸಂಗೀತಾ ಇನ್‌ಸ್ಟಾ ಫಾಲೋವರ್ಸ್‌ ಏಕಾಏಕಿ ಕುಸಿತ; ಕಾರಣವಾದ್ರೂ ಏನು?

ಮೊದಲಿಗೆ ಸಂಗೀತಾ ಜತೆ ಕ್ಲೋಸ್‌ ಆಗಲು ನೋಡಿದ ಸ್ನೇಹಿತ್‌ಗೆ ಕಾರ್ತಿಕ್‌ ಕಾರಣಗಳಿಂದ ವಿಫಲವಾಯ್ತು. ಮತ್ತೆ ಇಶಾನಿಗೂ ಟ್ರೈ ಮಾಡಿದ್ದರೂ ಮೈಕಲ್‌ ಜತೆ ಇಶಾನಿ ಕ್ಲೋಸ್‌ ಆದ ಕಾರಣ ಅಲ್ಲಿಯೂ ಅವರಿಗೆ ಹಿನ್ನಡೆ ಆಯ್ತು. ನಮ್ರತಾಗೂ ಮೊದಲ ದಿನದಂದಲೂ ಕಾಳು ಹಾಕುತ್ತಲೇ ಇರುವ ಸ್ನೇಹಿತ್‌ ಟಾಸ್ಕ್‌ ವಿಚಾರವಾಗಿ ನಮ್ರತಾ ಜತೆ ಸ್ವಲ್ಪ ಸಲುಗೆಯಿಂದ ಕೂಡ ಇದ್ದಿದ್ದರು.

ಆರಂಭದಲ್ಲಿ ಇಶಾನಿ ಕಂಡರೆ ಸ್ನೇಹಿತ್‌ಗೆ ಕ್ರಶ್ ಆಗಿತ್ತು. ಮೈಕಲ್ ಜತೆ ಇಶಾನಿ ಆತ್ಮೀಯತೆ ಬೆಳೆಯಿತು. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಇಶಾನಿ-ಮೈಕಲ್ ಲವ್ ಮಾಡಿ ಬ್ರೇಕಪ್ ಮಾಡಿಕೊಂಡಿದ್ದಾರೆ. ಸಂಗೀತಾ ಕೂಡ ಕಾರ್ತಿಕ್‌ ಅವರಿಂದ ದೂರ ಆಗಲು ನೋಡುತ್ತಿದ್ದಾರೆ. ತನಿಷಾ ಹಾಗೂ ಸಂತೋಷ್ ಮಧ್ಯೆ ಏನೋ ಇದೆ ಎಂದು ಸ್ಪರ್ಧಿಗಳೇ ಕಾಲು ಎಳೆಯುತ್ತಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version