ಬೆಂಗಳೂರು: ಬಿಗ್ ಬಾಸ್ ಸೀಸನ್ ಸೀಸನ್ 10ರ (BBK SEASON 10) ಹನ್ನರಡನೇ ವಾರ ಮನೆಯಲ್ಲಿ ಸ್ಪರ್ಧಿಗಳ ಕುಟುಂಬ ಸೇರಿತ್ತು. ಬಿಗ್ ಬಾಸ್ ಮನೆಯ ಸದಸ್ಯರು ಮನೆಯ ಚಟುವಟಿಕೆಗಳಲ್ಲಿ ನಿರತರಾಗಿರುವಾಗ, ಸದಸ್ಯರು ಕುಟುಂಬದವರು ಮನೆಯೊಳಗೆ ಬರುವ ಸೂಚನೆ ಸಿಕ್ಕಿದೆ. ಇದನ್ನು ಮೊದಲು ಊಹಿಸಿದ್ದು ಮನೆಯ ಕ್ಯಾಪ್ಟನ್ ನಮ್ರತಾ ಅವರು. ‘ಮನೆಯವ್ರು ಬರ್ತಿದಾರೆ’ ಎಂದು ಕುಣಿದಾಡಿದ್ದಾರೆ. ನಮ್ರತಾ ಅವರು ಅಮ್ಮನನ್ನು ನೋಡುತ್ತಿದ್ದಂತೆ ಹಗ್ ಮಾಡಿ ಖುಷಿ ಹೊರಹಾಕಿದರು. ತಾಯಿ ಜತೆ ನಿಂತು ಅವರು ತಮ್ಮ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ.
ನಮ್ರತಾ ಅವರ ತಾಯಿ ಮಗಳಿಗೆ ಪ್ರಿಯವಾದ ಊಟವನ್ನು ತಂದಿದ್ದರು. ಬಿಗ್ ಬಾಸ್ ಮನೆಯಲ್ಲಿ ಪಾಸ್ (Pause) ಎಂದಾಗ ಸ್ಟ್ಯಾಚ್ಯೂ ತರ ನಿಲ್ಲಬೇಕು. ಪ್ಲೇ ಎಂದಾಗ ಅವರು ಸಾಮಾನ್ಯವಾಗಿ ಇರಬಹುದು. ಪ್ಲೇ ಎಂದಾಗ ನಮ್ರತಾ ಅವರು ಅಮ್ಮನನ್ನು ಬಿಗಿದಪ್ಪಿಕೊಂಡರು. ತಮ್ಮ ಕಷ್ಟದ ದಿನಗಳನ್ನು ಮನೆಯಲ್ಲಿ ಹಂಚಿಕೊಂಡರು.
ನಮ್ರತಾ ಮಾತನಾಡಿ ʻʻಅಮ್ಮನ ಹೊಟ್ಟೆಯಲ್ಲಿ ನಾನಿದ್ದಾಗ ತುಂಬ ದಪ್ಪ ಇದ್ದೆ. ಡಾಕ್ಟರ್ ಮಗು ಬೇಕೋ ತಾಯಿ ಬೇಕೋ ಎಂದಾಗ ಹೆಂಡತಿ ಬೇಕು ಎಂದಿದ್ದರು ಅಪ್ಪ. ಆಮೇಲೆ ಹೇಗೋ ಬದುಕಿದೆ. ಇದಾದ ಬಳಿಕ ನನಗೆ ಐದು ತಿಂಗಳು ಇದ್ದಾಗ ಅಜ್ಜಿಗೆ ಅಪಘಾತ ಆಗಿ ತಲೆಗೆ ಪೆಟ್ಟುಬಿತ್ತು. ಆಗ ಮನೆಯವರೆಲ್ಲರ ಹೆಣ್ಣು ಮಗುವಿನ ಕಾಲ್ಗುಣದಿಂದ ಈ ರೀತಿ ಆಯ್ತು ಎಂದಿದ್ದರು. ನನ್ನ ಅಪ್ಪ ಅಮ್ಮ ನನ್ನನ್ನು ಕಷ್ಟ ಪಟ್ಟು ಬೆಳೆಸಿದ್ದಾರೆ. ಇದೆಲ್ಲ ಸರಿ ಹೋಗುವ ಹೊತ್ತಿಗೆ ಬಾಲ ನಟಿಯಾಗಿ ಕೆಲಸ ಶುರು ಮಾಡಿದೆ. ಅಲ್ಲಿಂದ ದುಡಿಯೋಕೆ ಆರಂಭಿಸಿದೆ’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು ನಮ್ರತಾ.
ಎಲ್ಲವೂ ಸರಿ ಇದೆ ಎಂದಾಗ ಅಮ್ಮನ ಫ್ಯಾಮಿಲಿಯಿಂದ ಕೆಲವು ಮಾತುಗಳು ಕೇಳಿ ಬಂದವು. ಇವಳು ನಟಿ. ಅವಳು ಇರುವ ರೀತಿ ಸರಿ ಇರಲ್ಲ. ನಟಿಯರು ಬೇರೆ ರೀತಿಯಲ್ಲೇ ದುಡಿಯುತ್ತಾರೆ ಎನ್ನಲು ಪ್ರಾರಂಭಿಸಿದರು. ಅಲ್ಲಿಂದ ನನ್ನ ಅಮ್ಮನಿಗೆ ಮತ್ತೊಂದು ಸಮಸ್ಯೆ ಉಂಟಾಯಿತುʼʼಎಂದರು.
ಇದನ್ನೂ ಓದಿ; BBK SEASON 10: ಯಾರೂ ಕಂಡಿರದ ತುಕಾಲಿ ಗುಣಗಳ ಬಗ್ಗೆ ರಿವೀಲ್ ಮಾಡಿದ ಪತ್ನಿ ಮಾನಸಾ!
ಇಂದಿನ ಸಂಚಿಕೆಯಲ್ಲಿ ಕಾರ್ತಿಕ್, ಸಂಗೀತಾ, ಸಿರಿ, ವಿನಯ್ ಅವರ ಫ್ಯಾಮಿಲಿ ಬರಲಿದೆ. ಮನೆಯವರನ್ನು ನೋಡಿ ಸದಸ್ಯರ ರಿಯಾಕ್ಷನ್ ಹೇಗಿರಲಿದೆ ಎನ್ನುವುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.