Site icon Vistara News

BBK SEASON 10: ತನಿಷಾ ಪರ ಆಡಿ ಬೆಸ್ಟಿ ವಿನಯ್‌ರನ್ನು ಹೊರಗಟ್ಟಿದ ನಮ್ರತಾ!

Namratha Gowda Plays For Tanisha Vinay Out Of Captaincy

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10 (BBK SEASON 10) ಈಗಾಗಲೇ 50 ದಿನಗಳನ್ನು ಪೂರೈಸಿದೆ. ಸಾಕಷ್ಟು ಬದಲಾವಣೆಗಳು ಮನೆಯಲ್ಲಿ ಆಗಿವೆ. ನಮ್ರತಾ ಹಾಗೂ ತನಿಷಾ ನಡುವೆ ಮೊದಲಿನಿಂದಲೂ ಒಬ್ಬರಿಗೊಬ್ಬರು ಆಗಿ ಬರುತ್ತಿರಲಿಲ್ಲ. ಆದರೆ ಈ ವಾರ ತನಿಷಾ ಪರವಾಗಿ ನಮ್ರತಾ ಕ್ಯಾಪ್ಟನ್ಸಿ ಟಾಸ್ಕ್‌ ಆಡಿದರು. ಬೆಸ್ಟಿ ಆಗಿದ್ದ ವಿನಯ್‌ ಅವರನ್ನು ನಮ್ರತಾ ಆಟದಿಂದ ಹೊರಕ್ಕೆ ಇಟ್ಟಿರುವುದು ಪ್ರೆಕ್ಷಕರಿಗೂ ಆಶ್ಚರ್ಯ ತಂದಿದೆ.

ವಿಕ್ರಾಂತ್‌ ಟೀಂ ವಾರದ ಟಾಸ್ಕ್‌ನಲ್ಲಿ ವಿನಯ್‌ ಆಯ್ತು. ಮೈಕಲ್, ವಿನಯ್, ಸಂಗೀತಾ, ಅವಿನಾಶ್ ಶೆಟ್ಟಿ, ತನಿಷಾ, ಸ್ನೇಹಿತ್‌ ಹಾಗೂ ಕಾರ್ತಿಕ್ ಸೇರಿದಂತೆ ಕ್ಯಾಪ್ಟನ್ಸಿ ಓಟದಲ್ಲಿ ಇಳಿದರು. ತನಿಷಾ ಇನ್ನು ಮನೆಗೆ ಬಂದಿಲ್ಲದ ಕಾರಣ 6 ಸ್ಪರ್ಧಿಗಳ ಪೈಕಿ ಯಾರಾದರೂ ಒಬ್ಬರು ತನಿಷಾ ಪರವಾಗಿ ಆಡಬೇಕಿತ್ತು. ಆಗ ತನಿಷಾ ಪರವಾಗಿ ಅಡಲು ನಮ್ರತಾ ಮುಂದೆ ಬಂದರು. ಇದಕ್ಕೆ ಪ್ರತಾಪ್‌ ಕೂಡ ಒಪ್ಪಿಗೆ ಸೂಚಿಸಿದರು. ಆಗ ಸಂಗೀತಾ ಅವರು ಪ್ರತಾಪ್‌ ಅವರಿಗೆ ʻʻನಮ್ರತಾ ಅವರನ್ನೇ ಕ್ಯಾಪ್ಟನ್ಸಿಯಿಂದ ತೆಗೆದು, ನಮ್ರತಾ ಅವರನ್ನೇ ಆಡಿಸಲು ಕಳುಹಿಸುತ್ತಿದ್ದಾರೆ’’ ಎಂದು ಡ್ರೋನ್ ಪ್ರತಾಪ್ ಬಗ್ಗೆ ಸಂಗೀತಾ ನಗುತ್ತಾ ಹೇಳಿದರು. ಮೈಕಲ್‌ ಕೂಡ ಪ್ರತಾಪ್‌ಗೆ ʻʻರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿದೆʼʼಎಂದರು.

ಸರಣಿ ಟಾಸ್ಕ್‌ಗಳನ್ನು ಬಿಗ್‌ ಬಾಸ್‌ ನೀಡಿದ್ದರು. ಮೊದಲಿಗೆ ಚೆಂಡು ಹಾಗೂ ಹಗ್ಗದ ಕೋಲಿನ ಟಾಸ್ಕ್‌ನಲ್ಲಿ ಮೈಕಲ್‌ ಹೊರ ಬಿದ್ದರು. ಎರಡನೇ ಟಾಸ್ಕ್‌ನಲ್ಲಿ ಸ್ನೇಹಿತ್‌ ವಿನ್‌ ಆದರು. ಹೀಗಾಗಿ ಅವಿನಾಶ್ ಶೆಟ್ಟಿ ಅವರನ್ನ ಕ್ಯಾಪ್ಟನ್ಸಿ ರೇಸ್‌ನಿಂದ ಸ್ನೇಹಿತ್ ಹೊರಕಳುಹಿಸಿದರು. ಮೂರನೇ ಟಾಸ್ಕ್‌ನಲ್ಲಿ ವಿನಯ್‌ ವಿನ್‌ ಆಗಿದ್ದು, ಸಂಗೀತಾ ಅವರನ್ನ ರೇಸ್‌ನಿಂದ ಹೊರಕ್ಕೆ ಹಾಕಿದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಸ್ಪಲ್ಪ ಇರುಸು ಮುರುಸಾಯ್ತು.

ಇದಕ್ಕೂ ಮುಂಚೆ ಸಂಗೀತಾ ಹಾಗೂ ವಿನಯ್‌ ನಡುವೆ ಮಾತುಕತೆ ಆಗಿತ್ತು. ಕ್ಯಾಪ್ಟನ್ಸಿ ಟಾಸ್ಕ್‌ ಫೈನಲ್‌ನಲ್ಲಿ ನಾವಿಬ್ಬರೂ (ವಿನಯ್‌-ಸಂಗೀತಾ) ಜತೆಗೆ ಆಡಬೇಕು ಎಂದು ವಿನಯ್‌ ಅವರು ಸಂಗೀತಾ ಬಳಿ ಚರ್ಚಿಸಿದ್ದರು. ಆದರೆ ವಿನಯ್‌ ಅವರು ಸಂಗೀತಾ ಅವರನ್ನೇ ಆಟದಿಂದ ಹೊರಗೆ ಇಟ್ಟರು. ಇದು ಸಂಗೀತಾ ಅವರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಕಾರ್ತಿಕ್‌ ಹಾಗೂ ಸಿರಿ ಮುಂದೆ ಈ ವಿಚಾರವಾಗಿ ಬೇಸರ ಹೊರಹಾಕಿದರು.

ಇದನ್ನೂ ಓದಿ: BBK SEASON 10: ಹೇಗೆ ಮೆರೆಸಿದ್ರೋ ಹಾಗೇ ತಲ್‌ತಲೆ ಮೇಲೆ ಹೊಡೆದರು; ಬಿಕ್ಕಿ ಬಿಕ್ಕಿ ಅತ್ತ ಪ್ರತಾಪ್‌!

ಕ್ಯಾಪ್ಟನ್ಸಿ ರೇಸ್‌ನಲ್ಲಿ ನಮ್ರತಾ ಗೌಡ, ಸ್ನೇಹಿತ್ ಗೌಡ ಹಾಗೂ ವಿನಯ್‌ ಗೌಡ ಮಾತ್ರ ಉಳಿದಿದ್ದರು. ಕ್ಲಿಪ್ ಟಾಸ್ಕ್‌ನಲ್ಲಿ ನಮ್ರತಾ ಜಯ ಸಾಧಿಸಿದರು. ಈ ವೇಳೆ ಸ್ನೇಹಿತ್ ಹಾಗೂ ವಿನಯ್ ಪೈಕಿ ಒಬ್ಬರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಔಟ್ ಮಾಡುವ ಅವಕಾಶ ನಮ್ರತಾಗೆ ಸಿಕ್ತು. ಆಗ ನಮ್ರತಾ ತಮ್ಮ ಕ್ಲೋಸ್‌ ಫ್ರೆಂಡ್‌ ವಿನಯ್ ಅವರನ್ನೇ ಔಟ್‌ ಮಾಡಿಬಿಟ್ಟರು. ಇದು ವಿನಯ್‌ಗೂ ಅರಗಿಸಿಕೊಳ್ಳು ಆಗಿಲ್ಲ.

ನಮ್ರತಾ ಅವರು ವಿನಯ್‌ ಬಗ್ಗೆ ಕಾರಣ ಕೊಟ್ಟು ʻʻಕ್ಯಾಪ್ಟನ್ಸಿ ಅಥವಾ ಮನೆ ವಿಚಾರ ಬಂದಾಗ ಸ್ವಲ್ಪ ಕೋಪದಲ್ಲಿ ವಿನಯ್ ಅವರು ಅಗ್ರೆಸ್ಸಿವ್‌ ಆಗಿ ನಿರ್ಧಾರಗಳನ್ನ ತಗೊಳ್ತಾರೆ. ಮಾತಾಡಬೇಕಾದರೆ ಎರಡು ಬಾರಿ ಯೋಚನೆ ಮಾಡಲ್ಲ. ಯಾರಿಗಾದರೂ ಹರ್ಟ್ ಆಗುತ್ತಾ, ಇಲ್ವಾ ಯೋಚನೆ ಮಾಡಲ್ಲ. ಸ್ನೇಹಿತ್ ಸ್ವಲ್ಪ ಯೋಚನೆ ಮಾಡಿ ಮಾತಾಡ್ತಾರೆ. ಅದಕ್ಕಾಗಿ ನಾನು ವಿನಯ್ ಅವರನ್ನ ಕ್ಯಾಪ್ಟನ್ಸಿ ಓಟದಿಂದ ಹೊರಗಿಡುತ್ತಿದ್ದೇನೆ’’ ಎಂದು ನಮ್ರತಾ ಹೇಳಿದರು.

ನಮ್ರತಾ ಅವರ ನಿರ್ಧಾರ ಕೂಡ ಮನೆಯವರಿಗೆ ಆಶ್ವರ್ಯ ತಂದಿತು. ವಿನಯ್‌ ಕೂಡ ನಮ್ರತಾಗೆ ರೈಟ್‌ ಡಿಸಿಷನ್‌ ಅಂದರು. ಸಂಗೀತಾ ಕೂಡ ನಮ್ರತಾಗೆ ʻʻಈ ನಿರ್ಧಾರದಿಂದ ನೀವು ಹೀರೋ ಆದ್ರಿ. ವಿನಯ್ ಹಿಂದೆಯೇ ಇರ್ತೀರಾ.. ಇನ್‌ಫ್ಲುಯೆನ್ಸ್ ಆಗಿದ್ದೀರಾ ಅಂತೆಲ್ಲ ಮಾತುಗಳು ಬಂದಿದ್ದವು. ಅದಕ್ಕೆ ನೀವು ಇವತ್ತು ಉತ್ತರ ಕೊಟ್ಟಿದ್ದೀರಾ’’ ಎಂದರು.

ಈ ವಾರ ನಮ್ರತಾ ಆಟಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ., ಇಷ್ಟು ದಿನ ವಿನಯ್‌ ಅವರ ಚಮಚ ಎಂದು ಕರೆಸಿಕೊಳ್ಳುತ್ತಿದ್ದ ನಮ್ರತಾ ಈ ಬಾರಿ ತಾವೊಬ್ಬರೇ ನಿಂತು ಆಡಿದ್ದಾರೆ. ಟಾಸ್ಕ್‌ಗಳಲ್ಲಿ ಪರ್ಫಾಮ್ ಮಾಡಲು ನಮ್ರತಾ, ಡ್ರೋನ್ ಪ್ರತಾಪ್ ತಂಡ ಸೇರಿದರು. ಈಗ ತನಿಷಾ ಪರವಾಗಿ ನಮ್ರತಾ ಆಡಿ ಫ್ರೆಂಡ್‌ ವಿನಯ್ ಅವರನ್ನೇ ಕ್ಯಾಪ್ಟನ್ಸಿ ರೇಸ್‌ನಿಂದ ನಮ್ರತಾ ಹೊರಗಟ್ಟಿದ್ದಾರೆ. ಈ ವಾರ ನಮ್ರತಾ ವೋಟ್‌ ವಿಚಾರವಾಗಿಯೂ ಕುಗ್ಗಿ ಹೋಗಿದ್ದರು. ಆದರೀಗ ತಮ್ನನ್ನು ತಾವು ಪ್ರೂವ್‌ ಮಾಡಿಕೊಂಡಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version