Site icon Vistara News

BBK SEASON 10:  ಕಾರ್ತಿಕ್​ಗೆ ಹೊರಗೆ ಹುಡುಗಿ ಇದ್ದಾಳೆ; ಸ್ನೇಹಿತ್ ಮುಂದೆ ಕಣ್ಣೀರು ಸುರಿಸಿದ ನಮ್ರತಾ!

Namratha Gowda Karthik Mahesh

ಬೆಂಗಳೂರು: `ಬಿಗ್‌ಬಾಸ್‌’ (BBK SEASON 10) ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಇಡೀ ಮನೆ ತುಂಬಿ ನಳನಳಿಸುತ್ತಿದೆ. ಎಲ್ಲರೂ ತಮ್ಮ ಸ್ನೇಹಿತರ ಮಾತುಗಳನ್ನು, ಅವರ ಟಿಪ್ಸ್‌ಗಳನ್ನು ಕೊಡುವುದರಲ್ಲಿ ಮಗ್ನರಾಗಿದ್ದರು. ಜತೆಗೆ ಹೊರಗಿನ ಕೆಲ ವಿಚಾರಗಳ ಬಗ್ಗೆ ‘ಬಿಗ್ ಬಾಸ್‌’ ಮನೆಯಲ್ಲಿ ಚರ್ಚೆ ಆಗಿದೆ. ಕಾರ್ತಿಕ್ ಹಾಗೂ ನಮ್ರತಾ ತಮಾಷೆಗೆ ಫ್ಲರ್ಟ್‌ ಮಾಡುತ್ತಿರುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿರುವುದನ್ನ ನಮ್ರತಾಗೆ ಸ್ನೇಹಿತ್‌ ತಿಳಿಸಿದ್ದಾರೆ. ಈ ವಿಚಾರ ಕೇಳಿ ನಮ್ರತಾ ಕಣ್ಣೀರಿಟ್ಟರು.

ಕೆಲವು ದಿನಗಳಿಂದ ಕಾರ್ತಿಕ್‌ ಹಾಗೂ ನಮ್ರತಾ ಕ್ಲೋಸ್‌ ಆಗಿದ್ದಾರೆ. ಸ್ನೇಹಿತ್‌ ಇದ್ದಾಗ ನಮ್ರತಾ ಅವರು ಸ್ನೇಹಿತ್‌ ಜತೆ ಕ್ಲೋಸ್‌ ಆಗಿದ್ದರು. ಆದರೀಗ ಸ್ನೇಹಿತ್‌ ಮತ್ತೆ ಮನೆಯೊಳಗೆ ಬಂದಾಗ ನಮ್ರತಾ ಅವರಿಗೆ ಕಿವಿಮಾತು ಹೇಳಿದ್ದಾರೆ.‘ನೀವು ಮಾಡೋದೆಲ್ಲ ಹೊರಗೆ ಕೆಟ್ಟದಾಗಿ ಕಾಣುತ್ತಿದೆ. ನಿಮ್ಮ ಪರವಾಗಿ ನಾನು ಫೈಟ್ ಮಾಡುತ್ತಾ ಇದ್ದೀನಿ’ ಎಂದಿದ್ದಾರೆ ಸ್ನೇಹಿತ್. ಈ ವೇಳೆ ನಮ್ರತಾ ಕೂಡ ಕಾರ್ತಿಕ್‌ಗೆ ಹೊರಗಡೆ ಹುಡುಗಿ ಇದ್ದಾರೆ. ನಾನು ಅಂತಹ ಫೂಲಾ? ಎಂದು ಮಾತನಾಡುವಾಗ ಕಾರ್ತಿಕ್‌ ಅವರ ಹುಡುಗಿ ಬಗ್ಗೆ ಬಾಯ್ಬಿಟ್ಟಿದ್ದಾರೆ.

“ಹೊರಗಡೆ ಹೋದ್ಮೇಲೆ ಒಂದಷ್ಟು ಪ್ರಾಬ್ಲಂಗಳಾದವು. ಈ ಸೀಸನ್‌ನಲ್ಲಿ ನಾನು ತುಂಬ ಟ್ರೋಲ್‌ ಆದ ವ್ಯಕ್ತಿʼʼಎಂದು ಸ್ನೇಹಿತ್‌ ನಮ್ರತಾ ಜತೆ ಮಾತನಾಡಲು ಶುರು ಮಾಡಿದರು. ಅತ್ತ ನಮ್ರತಾ ಕೂಡ ಒಂದು ಕ್ಷಣ ಗಾಬರಿಯಾದರು. ʻʻಜನ ತುಂಬಾ ಪ್ರೀತಿ ಕೊಡ್ತಾ ಇದ್ದಾರೆ. ನಿಮ್ಮ ಬಳಿಯೂ ಒಂದಷ್ಟು ವಿಷಯ ಮಾತಾಡಬೇಕು. ಆದರೆ, ಮಾತಾಡೋಕೆ ಇದು ಜಾಗವಲ್ಲ. ಹೊರಗಡೆ ಮಾತನಾಡೋಣʼʼಎಂದು ಸ್ನೇಹಿತ್‌ ಅವರು ನಮ್ರತಾಗೆ ಹೇಳಿದರು. ಆಗ ನಮ್ರತಾ ಕೂಡ ʻʻನೀವಲ್ಲ.. ಬಂದೋರೆಲ್ಲಾ ಕೆಟ್ಟದಾಗಿ ಕಾಣ್ತಿದೆ ಅಂತಿದ್ದಾರೆ. ನನ್ನಲ್ಲಿ ಅ ತರಹದ ಉದ್ದೇಶ ಇಲ್ಲವೇ ಇಲ್ಲ. ಕ್ಯಾರೆಕ್ಟರ್‌ ಹೇಗೆ ಜಡ್ಜ್‌ ಮಾಡ್ತೀರಾ?ʼʼಎಂದು ಪ್ರಶ್ನೆ ಇಟ್ಟರು. ʻʻಕಾರ್ತಿಕ್‌ ಮತ್ತು ನನ್ನ ಮಧ್ಯೆ ಏನೋ ನಡೆಯುತ್ತಿದೆ ಅಂದುಕೊಂಡಿದ್ದಾರೆ. ಅಷ್ಟೇ ನನಗೆ ಗೊತ್ತಿರೋದುʼʼಎನದರು ನಮ್ರತಾ.

ಇದನ್ನೂ ಓದಿ: BBK SEASON 10:  ಮಿಡ್‌ ವೀಕ್ ಎಲಿಮಿನೇಷನ್; ʻಬೆಂಕಿʼ ತನಿಷಾ ಕುಪ್ಪಂಡ ಔಟ್‌

ಸ್ನೇಹಿತ್‌ ಕೂಡ ಈ ಬಗ್ಗೆ ʻʻನಾನು ಇನ್ನೂ ನಿಮಗಾಗಿ ಫೈಟ್ ಮಾಡ್ತಿದ್ದೇನೆ. ಏನೇ ಆಗಿರಬಹುದು. ನೀವಿನ್ನೂ ನನ್ನ ಸ್ನೇಹಿತೆ. ಒಂಟಿಯಾಗಿ ಆಟಾಡು ಅಂತ ನಿಮ್ಮ ಅಮ್ಮ ಬರೆದಿದ್ದರು. ನೀವು ಹಾಗೇ ಆಡಿ.ʼʼಎಂದರು. ಇದಾದ ಬಳಿಕ ನಮ್ರತಾ ಕಣ್ಣೀರಿಟ್ಟರು. ʻʻನನ್ನನ್ನ ಮನೆಗೆ ಕರ್ಕೊಂಡ್ ಹೋಗಿ. ಇಲ್ಲಿರೋದು ನನಗೆ ಇಷ್ಟ ಆಗ್ತಿಲ್ಲ. ಏನು ಆಗ್ತಾ ಇದೆ ಅಂತ ನನಗೆ ಗೊತ್ತಿಲ್ಲ. ನಾನು ಇಲ್ಲಿ ಯಾರಿಗೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್‌ ಜತೆ ನಾನು ನಿಮ್ಮಷ್ಟೂ ಅಟ್ಯಾಚ್ಡ್ ಆಗಿಲ್ಲ. ಕಾರ್ತಿಕ್‌ ನನ್ನ ಕೈಹಿಡಿದುಕೊಳ್ಳುತ್ತಾರೆ ಅಷ್ಟೇ. ಅದು ಪ್ರಾಂಕ್ ಅಷ್ಟೇ. ನನಗೆ ನನ್ನ ಕ್ಯಾರೆಕ್ಟರ್‌ನ ರಿಸ್ಕ್ ಮಾಡಿಕೊಳ್ಳಲು ಇಷ್ಟವಿಲ್ಲ. ನನಗೆ ಇಲ್ಲಿರೋಕೆ ಇಷ್ಟವಿಲ್ಲ. ಕಾರ್ತಿಕ್‌ ಜಸ್ಟ್ ಫ್ರೆಂಡ್ ಅಷ್ಟೇ. ಅವನು ನನಗೆ ಅನ್‌ಕಮ್ಫರ್ಟಬಲ್ ಫೀಲ್ ಮಾಡಿಲ್ಲ. ನಾವು ಪ್ರಾಂಕ್ ಮಾಡಿದ್ವಿ ಅಷ್ಟೇ. ಕಾರ್ತಿಕ್‌ಗೆ ಹೊರಗಡೆ ಹುಡುಗಿ ಇದ್ದಾರೆ. ನಾನು ಅಂತಹ ಫೂಲಾ?ʼʼಎಂದು ಮಾತನಾಡಿದ್ದಾರೆ.

ಸ್ನೇಹಿತ್ ಮಾತ್ರ ಅಲ್ಲದೆ ಮೈಕಲ್ ಕೂಡ ನಮ್ರತಾಗೆ ಈ ವಿಚಾರದಲ್ಲಿ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಅವರು ಮತ್ತಷ್ಟು ಟೆನ್ಷನ್ ಆದರು. ಇಶಾನಿ ಕೂಡ ನಮ್ರತಾಗೆ ಈ ಬಗ್ಗೆಯೇ ಮಾತನಾಡಿದ್ದಾರೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version