Site icon Vistara News

BBK SEASON 10: ಸ್ನೇಹಿತ್‌ ಕಚಡಾ, ಪುಟಗೋಸಿ ಫ್ರೆಂಡ್‌; ಕಣ್ಣೀರಿಟ್ಟ ನಮ್ರತಾ!

Namratha Gowda sad towards Snehith Gowda In Bigg Boss Kannada

ಬೆಂಗಳೂರು; ಸ್ನೇಹಿತ್‌ ಅವರು ಈ ವಾರ ತಮ್ಮಲ್ಲಿ ಇದ್ದ ಅಧಿಕಾರವನ್ನು (BBK SEASON 10) ʻಬಯಾಸ್ಡ್‌ʼ ಆಗಿ ಆಟ ಆಡಿ ಸಂಗೀತಾ ಟೀಂ ಕೆಂಗಣ್ಣಿಗೆ ಗುರಿಯಾದರು. ತಾವು ‘ಫೀಲಿಂಗ್ಸ್’ ಇಟ್ಟಿರುವ ನಮ್ರತಾರನ್ನ ಸ್ನೇಹಿತ್‌ ಸೇಫ್ ಮಾಡಿದರು. ಅಗ್ರೆಸಿವ್‌ ಆಟದ ಮಧ್ಯೆಯೂ ಕೂಡ ಸ್ನೇಹಿತ್‌ ಅವರು ನಮ್ರತಾ ಪರವಾಗಿಯೇ ಇದ್ದರು. ಆದರೆ ಕೊನೆಗೆ ತಮ್ಮ ವಿನಯ್‌ ಮತ್ತು ನಮ್ರತಾ ಅವರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಇಟ್ಟಿದ್ದಾರೆ. ಕ್ಯಾಪ್ಟನ್‌ ಆಗಬೇಕು ಎಂದು ಕನಸು ಹೊತ್ತಿದ್ದ ನಮ್ರತಾ ಪಾಲಿಗೆ ಮಣ್ಣು ಎರಚಿದ್ದಾರೆ. ಸ್ನೇಹಿತ್‌ ಅವರ ಈ ನಿರ್ಧಾರಕ್ಕೆ ನಮ್ರತಾ ಕೆಂಡವಾಗಿದ್ದು ಕಣ್ಣೀರು ಹಾಕಿದ್ದಾರೆ.

ಬಿಗ್‌ ಬಾಸ್‌ ಈ ವಾರ ಸ್ನೇಹಿತ್‌ ಅವರಿಗೆ ದುಪ್ಪಟ್ಟು ವಿಶೇಷ ಅಧಿಕಾರವನ್ನು ನೀಡಿದ್ದರು. ನಾಮಿನೇಟ್‌ ಮಾಡುವ ಹಾಗೂ ಮನೆಯ ಕ್ಯಾಪ್ಟನ್ಸಿ ಟಾಸ್ಕ್​ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವ, ಹೀಗೆ ಹಲವು ಜವಾಬ್ದಾರಿಯನ್ನು ನೀಡಿದ್ದರು. ಮೊದಲಿಗೆ ಸಂಗೀತಾ ಹಾಗೂ ಕಾರ್ತಿಕ್​ರನ್ನು ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ಆಚೆ ಇಟ್ಟರು, ಬಳಿಕ ತಮ್ಮದೇ ಗೆಳೆಯರಾದ ವಿನಯ್ ಹಾಗೂ ನಮ್ರತಾರನ್ನು ತೆಗೆದರು. ಇದು ನಮ್ರತಾಗೆ ತೀವ್ರ ಬೇಸರ ಮೂಡಿಸಿತು. 

ಯಾರೆಲ್ಲ ಹೊರಗೆ ಇಟ್ಟರು ಸ್ನೇಹಿತ್‌?

ಮೊದಲಿಗೆ ಸಂಗೀತಾ ಹಾಗೂ ಕಾರ್ತಿಕ್​ರನ್ನು ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ಆಚೆ ಇಟ್ಟರು, ಬಳಿಕ ತಮ್ಮದೇ ಗೆಳೆಯರಾದ ವಿನಯ್ ಹಾಗೂ ನಮ್ರತಾರನ್ನು ತೆಗೆದರು. ಇದು ನಮ್ರತಾಗೆ ತೀವ್ರ ಬೇಸರ ಮೂಡಿಸಿತು. ಬಳಿಕ ತನಿಷಾ, ಡ್ರೋಣ್​ ಪ್ರತಾಪ್‌, ತುಕಾಲಿ ಸಂತು, ಪವಿ ಅವರುಗಳನ್ನು ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ಹೊರತೆಗೆದರು. ಸಿರಿ, ಅವಿನಾಶ್, ಮೈಕಲ್, ವರ್ತೂರು ಸಂತೋಷ್​ ನಡುವೆ ಟಾಸ್ಕ್​ ನಡೆಯಿತು. 

ಇದನ್ನೂ ಓದಿ: BBK SEASON 10: ಪವಿ, ಅವಿನಾಶ್‌ ಉತ್ತಮ, ಕಾರ್ತಿಕ್‌ ಕಳಪೆ; ಮನೆಯ ಕ್ಯಾಪ್ಟನ್‌ ಯಾರು?

ಮನವೊಲಿಸಲು ವಿಫಲವಾದ್ರಾ ನಮ್ರತಾ?

ಬಿಗ್‌ ಬಾಸ್‌ ಈ ವಿಶೇಷ ಅದಿಕಾರ ಕೊಡುವ ಮುಂಚೆ ಸ್ಪರ್ಧಿಗಳು ಸ್ನೇಹಿತ್‌ ಅವರನ್ನು ಮನವೊಲಿಸಬೇಕಿತ್ತು. ವಿನಯ್‌ ಅವರು ಸ್ನೇಹಿತ್‌ ಜತೆ ಮಾತನಾಡಿ ʻʻ’ನನ್ನ ಸ್ಟ್ರೆಂಥ್ ಏನು, ವೀಕ್‌ನೆಸ್‌ ಏನು ಎನ್ನುವುದು ನಿಮಗೆ ಗೊತ್ತು. ನನ್ನ ಅಗ್ರೆಸಿವ್‌ನೆಸ್‌ ನನ್ನ ವೀಕ್‌ನೆಸ್‌ ಅಲ್ಲ. ನನ್ನ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗೆ ಇಡಬೇಡಿ ಎಂದು ಮನವಿ ಮಾಡೋಕೆ ನಾನು ಬರಲಿಲ್ಲ. ನಿಮಗೆ ಏನು ಡಿಸೈಡ್ ಮಾಡಬೇಕು ಅನ್ಸುತ್ತೋ, ಡಿಸೈಡ್ ಮಾಡಿ.. ನನ್ನನ್ನ ಹೊರಗಿಡಬೇಕು ಅಂದರೆ ಇಡಿ. ಅದರಿಂದ ನಮ್ಮಿಬ್ಬರ ಸಂಬಂಧ ಹಾಳಾಗಲ್ಲ’’ ಎಂದು ಸ್ನೇಹಿತ್‌ಗೆ ವಿನಯ್ ಹೇಳಿದರು. ನಮ್ರತಾ ಕೂಡ ಸ್ನೇಹಿತ್‌ ಜತೆ ಮಾತನಾಡಿ ʻʻನಾನು ಕನ್ವಿನ್ಸ್ ಮಾಡುವುದಕ್ಕೆ ಬರಲಿಲ್ಲ. ತುಂಬಾ ಯೋಚನೆ ಮಾಡಿ ನಿರ್ಧಾರಗಳನ್ನ ತಗೊಳ್ಳಿʼʼಎಂದರು.

ಸ್ನೇಹಿತ್‌ ನಿರ್ಧಾರವೇ ಬೇರೆಯಾಯ್ತು!

ಆದರೆ ಸ್ನೇಹಿತ್‌ ಮಾತ್ರ ವಿನಯ್‌ ಹಾಗೂ ನಮ್ರತಾ ಬಗ್ಗೆ ಕಾರಣಗಳನ್ನು ಕೊಟ್ಟಿದ್ದೇ ಬೇರೆಯಾಗಿತ್ತು. ʻʻಪವಿ ಈ ವಾರ ಟಾಸ್ಕ್‌ನಲ್ಲಿ ಚೆನ್ನಾಗಿ ಪರ್ಫಾಮ್ ಮಾಡಿದ್ದಾರೆ. ಹೋಲಿಕೆ ಮಾಡಿದರೆ, ನಮ್ರತಾ ಪರ್ಫಾಮೆನ್ಸ್ ಅಷ್ಟು ಇರಲಿಲ್ಲ. ಪವಿ ಅವರು 2 ಗಂಟೆ ಕೂತು ನೀರು ಎರಚಿಸಿಕೊಂಡಿದ್ದಾರೆ. ನಮ್ರತಾ ಪರ್ಫಾಮೆನ್ಸ್ ಆ ಲೆವೆಲ್‌ಗೆ ಇರಲಿಲ್ಲ. ಇದು ಟಫ್‌ ಡಿಸಿಷನ್‌’’ ಎಂದರು ಸ್ನೇಹಿತ್. ‘ವಿನಯ್ ಮತ್ತು ನಮ್ರತಾ ಇಬ್ಬರೂ ಉಸ್ತುವಾರಿಯಾದ ನನ್ನ ಮಾತುಗಳನ್ನು ಮೀರಿದ್ದಾರೆ’ ಎಂದೂ ಹೇಲಿದರು, ಇದು ನಮ್ರತಾಗೆ ಬೇಸರ ತರಿಸಿತು.

ಇದನ್ನೂ ಓದಿ: BBK SEASON 10: ನೀನು ʻಕಳಪೆʼ ಪಟ್ಟಕ್ಕೆ ಅರ್ಹ ಎಂದ ವಿನಯ್‌; ಜೈಲು ಸೇರಿದ ಕಾರ್ತಿಕ್‌!

‘ಕಚಡಾ’, ಪುಟಗೋಸಿ ಯಾವ ಫ್ರೆಂಡ್‌ ಇವನು?

ಕ್ಯಾಪ್ಟನ್‌ ರೇಸ್‌ನಿಂದ ಸ್ನೇಹಿತ್‌ ತಮ್ಮನ್ನ ಹೊರಗಿಡುವಾಗ ಕೊಟ್ಟ ಕಾರಣ ‘ಕಚಡಾ’ ಎಂದಿದ್ದಾರೆ ನಮ್ರತಾ. ‘’ಪುಟಗೋಸಿ ಯಾವ ಫ್ರೆಂಡ್‌ ಇವನು?’’ ಎಂದು ಸ್ನೇಹಿತ್ ಬಗ್ಗೆ ನಮ್ರತಾ ಬೈಯ್ದುಕೊಂಡಿದ್ದಾರೆ. ತಮ್ಮಷ್ಟಕ್ಕೆ ತಾವು ನಮ್ರತಾ ಅವರು ಬೇಸರಗೊಂಡು ʻʻಇಲ್ಲಿ ಯಾರನ್ನು ನಂಬಿ ಆಡಬಾರದುʼʼಎಂದು ಹೇಳಿಕೊಂಡರು.

ʻʻನನ್ನ ಗೇಮ್‌ ನೀನು ಆಡಿಕೊಂಡು ಹೋಗ್ತಾ ಇರಬೇಕು.ನನಗೂ ಫೋಟೊ ಬೇಕಿತ್ತು. ಮೈಂಡ್‌ನಿಂದ ಆಡಬೇಕು. ಮನಸ್ಸಿನಿಂದ ಅಲ್ಲ. ನಾನು ಸ್ನೇಹಿತ್‌ಗೆ ಫೋಟೊ ಸಿಗಲಿ ಎಂದು ಕಳೆದ ವಾರ ಕೊಟ್ಟೆ. ನನಗ್ಯಾರೂ ಫೋಟೊ ಕೊಡಿಸುವವರು ಇಲ್ಲʼʼಎಂದು ಕಣ್ಣೀರಿಟ್ಟರು. ಕೊನೆಗೆ ಕ್ಯಾಪ್ಟನ್ಸಿ ಓಟದಲ್ಲಿ ವರ್ತೂರು ಸಂತೋಷ್, ಮೈಕಲ್, ಅವಿನಾಶ್ ಶೆಟ್ಟಿ ಹಾಗೂ ಸಿರಿ ಇದ್ದರು. ಈ ನಾಲ್ವರಲ್ಲಿ ಕ್ಯಾಪ್ಟನ್ ಆಗಿ ವರ್ತೂರು ಸಂತೋಷ್ ಆಯ್ಕೆಯಾದರು.

ಸ್ನೇಹಿತ್‌ ಜತೆಗೂ ಕೊನೆಗೆ ನಮ್ರತಾ ಮಾತನಾಡಿ ʻʻನೀವು ಅನ್‌ಬಯಾಸ್ಡ್‌ ಆಗಬೇಕು ಎಂದು ನನ್ನನ್ನು ಆಚೆ ಇಟ್ರಿ. ನಿಮಗೆ ಗೊತ್ತಿತ್ತು ನನಗಿದು ಎಷ್ಟು ಮುಖ್ಯ. ನೀವು ನನ್ನ ಗೌರವ, ನಂಬಿಕೆಯನ್ನ ಕಳೆದುಕೊಂಡಿದ್ದೀರಾ. ನನಗೆ ಫೋಟೊ ಬೇಕಿತ್ತು. ಅಮ್ಮನ ಫೋಟೋ ಬೇಕಿತ್ತು. ಅಧಿಕಾರಕ್ಕಲ್ಲ. ನಿಮ್ಮಿಬ್ಬರಿಗೂ ಫೋಟೊ ಸಿಕ್ಕಿತ್ತು. ನನಗೆ ಸಿಕ್ಕಿಲ್ಲ. ಅಮ್ಮನನ್ನ ನೋಡಬೇಕಿತ್ತು.ʼʼಎಂದು ಕಣ್ಣೀರಿಟ್ಟರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version