Site icon Vistara News

ಯಾವಳ್ ಬಕೆಟ್ ಹಿಡಿಯೋದು? ಗರಂ ಆದ ನಮ್ರತಾ; ಕಾರ್ತಿಕ್ ಗಂಡಸ್ತನದ ಬಗ್ಗೆ ನಿಂದಿಸಿದ ಮನೆಮಂದಿ!

namratha gowda sangeetha and Karthik bbk 10

ಬೆಂಗಳೂರು: ಬಿಗ್‌ಬಾಸ್‌ ಮನೆಯ (BBK Season 10) ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ದಿನಕಳೆದಂತೆ ಸ್ನೇಹಗಳು, ಸಂಬಂಧಗಳೆಲ್ಲ ಮೆಲ್ಲಗೆ ಹಿನ್ನೆಲೆಗೆ ಸರಿದು ಸ್ಪರ್ಧಿಗಳ ಅಸಲಿ ಬಣ್ಣ ಹೊರಬರುತ್ತಿದೆ. ಹೊಸ ಹೊಸ ರೀತಿಯ ಟಾಸ್ಕ್‌ಗಳ ಮೂಲಕ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಶಾಕ್ ಕೊಡುತ್ತಲೇ ಇದ್ದಾರೆ. ಹಾಗಾದರೆ ಬಿಗ್‌ಬಾಸ್‌ ಮನೆಯಲ್ಲಿ ಇಂದು ಏನು ನಡೆಯುತ್ತಿದೆ? ಜಿಯೋ ಸಿನಿಮಾ, ಕಲರ್ಸ್‌ ಕನ್ನಡ ಬಿಡುಗಡೆ ಮಾಡಿರುವ ಬೆಳಗಿನ ವಿಡಿಯೊದಲ್ಲಿ ಹೊಸದೊಂದು ಟ್ವಿಸ್ಟ್‌ ಬಹಿರಂಗಗೊಂಡಿದೆ. ಈ ಟ್ವಿಸ್ಟ್ ಅಷ್ಟೇ ಶಾಕಿಂಗ್ ಕೂಡ ಆಗಿದೆ.

ಸಂಗೀತಾ ಮತ್ತು ಕಾರ್ತಿಕ್‌ ಒದೊಂದು ಚೇರ್‌ನಲ್ಲಿ ಕೂತಿದ್ದಾರೆ. ಮನೆಯ ಉಳಿದ ಸ್ಪರ್ಧಿಗಳೆಲ್ಲ ಅವರ ಎದುರಿಗೆ ಬಂದು ಅವರನ್ನು ಹೀನಾಮಾನವಾಗಿ ಬೈಯುತ್ತಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ, ಅವರು ಹಿಂದೆ ಆಡಿದ ಮಾತುಗಳ ಬಗ್ಗೆಯೆಲ್ಲ ಹೇಳಿ ಕೆಣಕುತ್ತಿದ್ದಾರೆ. ಆದರೂ ಸಂಗೀತಾ ಮತ್ತು ಕಾರ್ತಿಕ್ ಇಬ್ಬರೂ ತಲೆಬಗ್ಗಿಸಿ, ಒಂದೂ ಮಾತಾಡದೆ ಕೂತಿದ್ದಾರೆ. ತಲೆತಗ್ಗಿಸಿ ಕೂತಿದ್ದ ಕಾರ್ತಿಕ್ ಬಳಿಗೆ ಬಂದು ವಿನಯ್, ‘ಫ್ರೆಂಡಾ ನೀನು? ಒಬ್ಬ ಒಂಟಿ ಮನುಷ್ಯನಾಗೇ ಉಳಿಯೋದು ನಿನ್ ಜೀವನದಲ್ಲಿ’ ಎಂದು ಗುಡುಗಿದ್ದಾರೆ. ಸಂಗೀತಾ ಎದುರಿಗೆ ನಿಂತ ನಮ್ರತಾ, ‘ಯಾವೊಳು ಬಕೆಟ್ ಹಿಡಿಯೋದು? (ಕಾರ್ತಿಕ್ ತೋರಿಸಿ) ಅಲ್ಲಿ ಕೂತಿದಾನಲ್ಲಾ ಅವ್ನು ಬಕೆಟ್ ಹಿಡಿಯೋದು’ ಎಂದು ಕಿರುಚಿದ್ದಾರೆ.

ಸ್ನೇಹಿತ್ ಅವರಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಾರ್ತಿಕ್ ಗಂಡಸುತನದ ಬಗ್ಗೆಯೂ ಮಾತಾಡಿದ್ದಾರೆ.
‘ಏನೋ ಗಂಡಸುತನ ಏನ್ ಮಾಡಿದೀಯಾ ಈ ಮನೆಗೆ ಬಂದು? ಮನೇಗ್ ಹೋಗಿ, ಸ್ಲೋ ಮೋಷನ್‌ನಲ್ಲಿ ನಿನ್ನ ಹೊರಗಾಕಿದ್ ನೋಡು… ಆಗ ಗೊತ್ತಾಗತ್ತೆ. ಇಲ್ಯಾವಳೋ ಕ್ರಶ್ ಅಂತೆ. ಇದ್ಯಾವ್ದೋ ಕ್ರಶ್ ಇಟ್ಕೊಂಡು ಓಡಾಡ್ತೀಯಾ? ಅಲ್ಲೇನ್ ನನ್ ಕಾಲ್ ನೋಡ್ತೀಯಾ? ನಿನ್ ಪೊಸಿಷನ್ ಇರೋದೂ ಅಲ್ಲೇ’ ಎಂದು ಸಿನಿಮೀಯ ಶೈಲಿಯಲ್ಲಿ ಕಾರ್ತಿಕ್‌ ಅವರನ್ನು ಹೀನಾಮಾನವಾಗಿ ನಿಂದಿಸಿದ್ದಾರೆ.

ಇದನ್ನೂ ಓದಿ: BBK Season 10: ಡ್ರೋನ್‌ ಪ್ರತಾಪ್‌ಗೆ ಸತತ ಗೆಲುವು; ಸ್ಟ್ರಾಟಜಿಗೆ ಫ್ಯಾನ್ಸ್‌ ಫಿದಾ!

ಸಣ್ಣದೊಂದು ಅಡ್ಡಮಾತು ಬಂದರೂ ಸಿಟ್ಟಿಗೆದ್ದು ಕಿರುಚಾಡುವ ಕಾರ್ತಿಕ್, ಒಂದೇ ಒಂದು ತಪ್ಪು ಮಾತಿಗೆ ಸಿಡಿದೇಳುವ ಸಂಗೀತಾ ಇಬ್ಬರೂ ಈ ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನೆ ಕೂತಿದ್ದಾರೆ!
ಹಾಗಾದ್ರೆ ಏನಾಗ್ತಿದೆ ಬಿಗ್‌ಬಾಸ್‌ ಮನೆಯಲ್ಲಿ? ಸಂಗೀತಾ-ಕಾರ್ತಿಕ್ ನಡುವೆ ಏನು ನಡೆದಿದೆ? ಇದೇನು ಹೊಸ ಟಾಸ್ಕಾ? ಪನಿಷ್‌ಮೆಂಟಾ? ಅಥವಾ ಮಾತಿಗೆ ಮಾತು ಬೆಳೆದು ನಡೆದ ಬಿಸಿ ಸಂಭಾಷಣೆಯಾ?
ಎಲ್ಲವನ್ನೂ ತಿಳಿದುಕೊಳ್ಳಲು ಇಂದಿನ ಸಂಚಿಕೆಯನ್ನು ನೋಡಿದರೆ ತಿಳಿಯಲಿದೆ.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version